ಪ್ರತಿಯೊಬ್ಬರೂ ಆರಾಮ ಮತ್ತು ಐಷಾರಾಮಿ ಜೀವನವನ್ನು ನಡೆಸಲು ಸಂಪತ್ತು, ಸಮೃದ್ಧಿಯನ್ನು ಬಯಸುತ್ತಾರೆ. ವಾಸ್ತು ಶಾಸ್ತ್ರದಲ್ಲಿ ಹಣದ ಹರಿವನ್ನು ಹೆಚ್ಚಿಸಲು ಸಹಾಯ ಮಾಡುವ ಅನೇಕ ವಿಧಾನಗಳನ್ನು ವಿವರಿಸಲಾಗಿದೆ. ಈ ಸಲಹೆಗಳನ್ನು ಅನುಸರಿಸಿದರೆ ನಿಮ್ಮ ಪರ್ಸ್ ಎಂದಿಗೂ ಖಾಲಿಯಾಗುವುದಿಲ್ಲ. ಪರ್ಸ್ ಹಣದಿಂದ ತುಂಬಿ ತುಳುಕುತ್ತದೆ. ಎಂದಿಗೂ ಹಣದ ಕೊರತೆಯಾಗುವುದಿಲ್ಲ.
ನಿಮ್ಮ ಪರ್ಸ್‌ನಲ್ಲಿ ಹಣವನ್ನು ಇಟ್ಟುಕೊಳ್ಳುವ ನಿಯಮಗಳು :
- ನಿಮ್ಮ ಪರ್ಸ್ ಅನ್ನು ಯಾವಾಗಲೂ ಉತ್ತಮ ಸ್ಥಿತಿಯಲ್ಲಿಡಿ. ಹರಿದ, ಹಳೆಯ, ಬಣ್ಣ ಕಳೆದುಕೊಂಡ ಪರ್ಸ್ ಅನ್ನು ಎಂದಿಗೂ ಇಟ್ಟುಕೊಳ್ಳಬೇಡಿ.
- ನಿಮ್ಮ ಪರ್ಸ್‌ನಲ್ಲಿ ಯಾವಾಗಲೂ ಹಣವನ್ನು ಸಂಘಟಿತ ರೀತಿಯಲ್ಲಿ ಇರಿಸಿ. ನೋಟುಗಳನ್ನು ಹೇಗೆ ಬೇಕೋ ಹಾಗೆ ಮಡಿಚಿ ಇಡಬಾರದು.
- ನಿಮ್ಮ ಪರ್ಸ್ ಅಥವಾ ವ್ಯಾಲೆಟ್‌ನಲ್ಲಿ ನೋಟು ಮತ್ತು ನಾಣ್ಯಗಳನ್ನು ಪ್ರತ್ಯೇಕವಾಗಿ ಇರಿಸಿ. ನೋಟುಗಳು ಮತ್ತು ನಾಣ್ಯಗಳನ್ನು ಒಟ್ಟಿಗೆ ಇಡಬಾರದು.
- ಹಳೆಯ ಬಿಲ್‌ಗಳು, ಅನುಪಯುಕ್ತ ಸ್ಲಿಪ್‌ಗಳು ಅಥವಾ ಪೇಪರ್‌ಗಳು, ವಿಸಿಟಿಂಗ್ ಕಾರ್ಡ್‌ಗಳಂಥಹ ಅನಗತ್ಯ ವಸ್ತುಗಳನ್ನು ಪರ್ಸ್‌ನಲ್ಲಿ ಇಡಬಾರದು.
ಇದನ್ನೂ ಓದಿ: ಶನಿ ಸಾಡೇಸಾತಿಯಿಂದ ಕಷ್ಟ ಅನುಭವಿಸುತ್ತಿರುವ ಈ ಮೂರು ರಾಶಿಯವರ ಸಮಸ್ಯೆಗಳಿಗೆ ಈ ದಿನ ಸಿಗುವುದು ಮುಕ್ತಿ !
- ಶುದ್ಧತೆಯನ್ನು ಕಾಪಾಡಿಕೊಳ್ಳಲು, ಹಳದಿ ಕಾಗದದ ಮೇಲೆ ಕೆಂಪು ಶಾಯಿಯಿಂದ ಓಂ ಅಥವಾ ಸ್ವಸ್ತಿಕವನ್ನು ಬರೆಯಬೇಕು. ಈ ಕಾಗದವನ್ನು ಪಾರದರ್ಶಕ ಚೀಲದಲ್ಲಿ ಇರಿಸಬೇಕು. ಈ ಕಾಗದ ಹರಿದಿರಬಾರದು. ಒಂದು ವೇಳೆ ಹರಿದಿದ್ದರೆ ಆ ಕಾಗದವನ್ನು ನೀರನಲ್ಲಿ ಹರಿಯಲು ಬಿಟ್ಟು, ಹೊಸ ಪೇಪರ್ ನಲ್ಲಿ ಓಂ ಅಥವಾ ಸ್ವಸ್ತಿಕವನ್ನು ಬರೆಯಬೇಕು.
- ನಿಮ್ಮ ಪರ್ಸ್‌ನಲ್ಲಿ ಕುಟುಂಬದ ಫೋಟೋವನ್ನು ಇರಿಸುತ್ತಿದ್ದರೆ, ಅದು ಕೂಡಾ ಹರಿದಿರಬಾರದು. ಯಾವಾಗಲೂ ಉತ್ತಮ ಫೋಟೋವನ್ನು ಇಟ್ಟುಕೊಳ್ಳಿ.
- ಲಕ್ಷ್ಮಿ ಪೂಜೆಯ ಸಮಯದಲ್ಲಿ ಅರ್ಪಿಸಿದ ಕೆಲವು ಅಕ್ಕಿ ಕಾಳುಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ನಿಮ್ಮ ಪರ್ಸ್‌ನಲ್ಲಿ ಇರಿಸಿದರೆ ಪರ್ಸ್ ನಲ್ಲಿ ಹಣ ಖಾಲಿಯಾಗುವುದೇ ಇಲ್ಲ.
ಇದನ್ನೂ ಓದಿ: ಅಪ್ಪಿತಪ್ಪಿಯೂ ಕನ್ನಡಿಯನ್ನು ಈ ದಿಕ್ಕಿನಲ್ಲಿಟ್ಟು ಮುಖ ನೋಡಬೇಡಿ.. ದುರಾದೃಷ್ಟ ನಿಮ್ಮ ಬೆನ್ನು ಬಿಡದು.!
- ನಿಮ್ಮ ಪರ್ಸ್‌ನಲ್ಲಿ ತೆಳುವಾದ ಚೌಕಾಕಾರದ ಚಿನ್ನ ಅಥವಾ ಬೆಳ್ಳಿಯ ತುಂಡನ್ನು ಇಟ್ಟುಕೊಳ್ಳುವುದರಿಂದ ಶಾಶ್ವತ ಸಂಪತ್ತು ಉಳಿಯುವುದು ಖಚಿತ. ಗುರುವಾರದಂದು, ಈ ತುಂಡನ್ನು ನೀರಿನಿಂದ ತೊಳೆದು ನಿಮ್ಮ ಪರ್ಸ್‌ನಲ್ಲಿ ಇರಿಸಿ.
- ನಿಮ್ಮ ಪರ್ಸ್‌ನಲ್ಲಿ ಅರಿಶಿನ ಬಣ್ಣ ಬಳಿದ ಅರಳಿ ಮರದ ಒಣಗಿದ ಎಲೆ ಯನ್ನು ಇಟ್ಟುಕೊಳ್ಳುವುದು ಸಹ ಬಹಳ ಶುಭವೆಂದು ಪರಿಗಣಿಸಲಾಗಿದೆ. ಇದು ಸಂಪತ್ತನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
- ಈ ಎಲೆಯನ್ನು ಪರ್ಸ್‌ನಲ್ಲಿ ಪ್ರತ್ಯೇಕ ವಿಭಾಗದಲ್ಲಿ ಇರಿಸಬೇಕು. ಅದನ್ನು ನೋಟುಗಳೊಂದಿಗೆ ಇರಿಸಬೇಡಿ. .
- ನಿಮ್ಮ ಪರ್ಸ್‌ನಲ್ಲಿ ಚೂಪಾದ, ಹರಿತವಾದ ವಸ್ತುಗಳನ್ನು ಇಡಬಾರದು.









