ವಿರಾಟ್‌ ಕೊಹ್ಲಿ ಭೇಟಿ ಕೊಟ್ಟ ಸಿಂಹಾಚಲಂ ದೇವಾಲಯದ ಶಕ್ತಿ, ಇಲ್ಲಿನ ಮಹಾಭಕ್ತಿ ಎಂತಹದ್ದು ಗೊತ್ತಾ..?

ಸಿಂಹಾಚಲಂನಲ್ಲಿರುವ ಶ್ರೀ ವರಾಹ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಟೀಮ್‌ ಇಂಡಿಯಾದ ಸ್ಟಾರ್‌ ವಿರಾಟ್‌ ಕೊಹ್ಲಿ ಭೇಟಿ ನೀಡಿದ್ದರು. ಇಷ್ಟಕ್ಕೂ ಈ ದೇವಾಲಯದ ಮಹತ್ವ ಗೊತ್ತಾ?.   

Written by - Bhimappa | Last Updated : Dec 8, 2025, 04:33 PM IST
  • ಸರಣಿ ಗೆದ್ದ ಮೇಲೆ ದೇವಾಲಯಕ್ಕೆ ಭೇಟಿ ಕೊಟ್ಟಿದ್ದ ವಿರಾಟ್‌ ಕೊಹ್ಲಿ
  • ಈ ದೇವಾಲಯ ಕುರಿತು ಪುರಾಣಗಳು ಏನೇನು ಹೇಳುತ್ತಾವೆ ಗೊತ್ತಾ.?
  • ವಿಷ್ಣವು ನರಸಿಂಹನ ಅವತಾರ ಎತ್ತದ ಪವಿತ್ರವಾದ ಕ್ಷೇತ್ರವೇ ಇದು
ವಿರಾಟ್‌ ಕೊಹ್ಲಿ ಭೇಟಿ ಕೊಟ್ಟ ಸಿಂಹಾಚಲಂ ದೇವಾಲಯದ ಶಕ್ತಿ, ಇಲ್ಲಿನ ಮಹಾಭಕ್ತಿ ಎಂತಹದ್ದು ಗೊತ್ತಾ..?

ಟೀಮ್‌ ಇಂಡಿಯಾ, ಆಫ್ರಿಕಾ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಜಯಭೇರಿ ಬಾರಿಸಿದ ಮೇಲೆ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ಅವರು ವಿಶಾಖಪಟ್ಟಣಂ ಸಿಂಹಾಚಲಂನಲ್ಲಿರುವ ದೇವಾಲಯಕ್ಕೆ ಭೇಟಿ ನೀಡಿದ್ದರು. ಇದು ವಿಷ್ಣು ದೇವಾಲಯ ಆಗಿದ್ದು ಶ್ರೀ ವರಾಹ ಲಕ್ಷ್ಮಿ ನರಸಿಂಹ ಸ್ವಾಮಿಯನ್ನು ದೇವಸ್ಥಾನದಲ್ಲಿ ಪೂಜೆ ಮಾಡಲಾಗುತ್ತದೆ. ಹಾಗಾದರೆ ಈ ಪ್ರತಿಷ್ಠಿತ ದೇವಾಲಯದ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.    

Add Zee News as a Preferred Source

ವಿರಾಟ್‌ ಕೊಹ್ಲಿ ಅವರು ಭೇಟಿ ನೀಡಿದ್ದ ಸಿಂಹಾಚಲಂನಲ್ಲಿರುವ ಶ್ರೀ ವರಾಹ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನ 32 ಪವಿತ್ರ ನರಸಿಂಹ ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ವಿಷ್ಣುವಿನ ನಾಲ್ಕನೇ ಅವತಾರವಾದ ನರಸಿಂಹನ ಸ್ವಾಮಿಯ ದೈವದ ಸ್ಥಾನವಾಗಿದೆ. ಈ ದೇವಾಸ್ಥಾನದ ಮೂಲ ಕೆದಕುತ್ತ ಹೋದರೆ ಇದು ಸತ್ಯಯುಗಕ್ಕೆ ಕರೆದುಕೊಂಡು ಹೋಗುತ್ತದೆ. ಈ ಹಿಂದೆ ಸತ್ಯಯುಗದಲ್ಲಿ ಹಿರಣ್ಯಕಶ್ಯಪ ಇವರ ಮಗ ವಿಷ್ಣುವಿನ ಮಹಾಭಕ್ತ ಪ್ರಹ್ಲಾದ ಮತ್ತು ನರಸಿಂಹ ಅವತಾರ ತೆರೆದುಕೊಳ್ಳುತ್ತದೆ. 

ಮಹಾ ಭಕ್ತನಾದ ಪ್ರಹ್ಲಾದನು ಹೆಜ್ಜೆ ಹೆಜ್ಜೆಗೂ ವಿಷ್ಣವಿನ ನಾಮಸ್ಮರಣೆ ಮಾಡುತ್ತಿರುತ್ತಾರೆ. ಆದರೆ ಇದು ತಂದೆ ಹಿರಣ್ಯಕಶ್ಯಪಗೆ ಬೆಂಕಿಯಂತಹ ಕೋಪ ತರಿಸುತ್ತದೆ. ಹಲವಾರು ಶಿಕ್ಷೆಗಳ ಬಳಿಕ ಸ್ವಂತ ಮಗನ ಜೀವ ತೆಗೆಯಲು ಹಿರಣ್ಯಕಶ್ಯಪ ಮುಂದಾಗುತ್ತಾನೆ. ಈ ವೇಳೆ ಭಕ್ತಿನ ಮೆಚ್ಚಿ ವಿಷ್ಣುನೇ ನರಸಿಂಹನ ಅವತಾರ ತಾಳಿ ಪ್ರಹ್ಲಾದನನ್ನು ರಕ್ಷಿಸುತ್ತಾನೆ. ಹಿರಣ್ಯಕಶ್ಯಪನನ್ನ ಸೋಲಿಸಿದರೂ ನರಸಿಂಹನ ಕೋಪವನ್ನು ಜ್ವಾಲಾಮುಖಿಯಂತೆ ಸ್ಫೋಟವಾಗುತ್ತಿರುತ್ತದೆ. ಇದನ್ನೆಲ್ಲ ಗಮನಿಸುವ ಪ್ರಹ್ಲಾದ, ಲಕ್ಷ್ಮಿ ದೇವಿಯ ಸಹಾಯ ಕೇಳುತ್ತಾನೆ. 

ಆಗ ದೇವಿಯು ಸಹಾಯ ಮಾಡುತ್ತಾಳೆ. ರಕ್ಷಣೆಗೆ ಬಂದ ವಿಷ್ಣುವು ವರಾಹ ಮತ್ತು ನರಸಿಂಹ ಈ ಇಬ್ಬರ ರೂಪದಲ್ಲಿ ಅವತಾರ ಎತ್ತಿರುತ್ತಾನೆ. ಇದೆಲ್ಲಾವನ್ನು ಸೇರಿ ವರಾಹ ಲಕ್ಷ್ಮಿ ನರಸಿಂಹ ದೇವಾಲಯ ಎಂದು ಆ ಸ್ಥಳ ಪ್ರಖ್ಯಾತಿಯಾಗಿದೆ. ಆ ಸ್ಥಳಕ್ಕೆ ಸಿಂಹಾಚಲಂ ಎಂದು ಕರೆಯುವುದಕ್ಕೂ ಕಥೆಗಳಿದ್ದು ಇದು ಸಿಂಹಗಳ ಬೆಟ್ಟವಾಗಿದ್ದರೂ ಪ್ರಹ್ಲಾದನು ಸ್ವತಹ ಇಲ್ಲಿ ದೇವರನ್ನು ಸ್ಥಾಪಿಸಿದ್ದನು ಎಂಬುದನ್ನು ಈಗಲೂ ಭಕ್ತರು ನಂಬುತ್ತಾರೆ. ಸ್ಕಂದ ಪುರಾಣ ಹಾಗೂ ವರಾಹ ಪುರಾಣದಂತಹ  ಗ್ರಂಥಗಳಲ್ಲಿ, ಈ ಪವಿತ್ರ ಸ್ಥಳದ ಬಗ್ಗೆ ಉಲ್ಲೇಖಗಳಿವೆ. ಇದನ್ನು ಭೂಮಿಯ ಮೇಲಿನ ಪವಿತ್ರ ಸ್ಥಳಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. 

ವಾಸ್ತುಶಿಲ್ಪದ ವೈಭವ

ದೇವಾಲಯದ ವಾಸ್ತುಶಿಲ್ಪ ಕಳಿಂಗ ಮತ್ತು ಚಾಲುಕ್ಯ ಶೈಲಿಗಳ ಅದ್ಭುತ ಸಮ್ಮಿಲನವಾಗಿದೆ. ದ್ರಾವಿಡ ಪ್ರಭಾವದ ಸುಳಿವುಗಳನ್ನು ಇಲ್ಲಿ ನಾವು ಕಾಣಬಹುದು. ದೇವಾಲಯದ ಹೊರ ಗೋಡೆಯ ಸಂಪೂರ್ಣವಾಗಿ ದೇವಾನು-ದೇವತೆಗಳ ಚಿತ್ರ, ಪುರಾಣದ ವಿವಿಧ ದೃಶ್ಯಗಳನ್ನು ಮನಮೋಹಕವಾಗಿವೆ. ದೇವಾಲಯಕ್ಕೆ ನೀವು ಭೇಟಿ ನೀಡಿದಾಗ ಐದು ಹಂತದ ಗೋಪುರಗಳನ್ನು ವೀಕ್ಷಣೆ ಮಾಡಬಹುದು. ಗರ್ಭಗೃಹದ ಒಳಗೆ ವರ್ಷವಿಡೀ, ಮುಖ್ಯ ದೇವತೆಯನ್ನು ಶ್ರೀಗಂಧದ ಲೇಪದಿಂದ ಮುಚ್ಚಲಾಗುತ್ತದೆ.

ಈ ದೇವಾಲಯದ ನಿತ್ಯದ ಆಚರಣೆಗಳು ಮತ್ತು ಪೂಜೆಗಳು 

ಸುಪ್ರಭಾತ- ಬೆಳಗ್ಗೆ ವೇದ ಮಂತ್ರಗಳ ಪಠಣೆ 
ನಿತ್ಯ ಅರ್ಚನೆ- ಹೂವುಗಳು, ಧೂಪ ಮತ್ತು ಮಂತ್ರಗಳಿಂದ ಪೂಜೆ
ಹರತಿ ಸೇವೆ- ಬೆಳಿಗ್ಗೆ ಮತ್ತು ಸಂಜೆ ವಿಧ್ಯುಕ್ತ ದೀಪ ಅರ್ಪಣೆ

ಇದನ್ನೂ ಓದಿ: T20ಯಲ್ಲಿ ಈ ರೆಕಾರ್ಡ್‌ ಮುಂದುವರೆಯುತ್ತಾ.. ದಕ್ಷಿಣ ಆಫ್ರಿಕಾ ಜೊತೆ ಭಾರತದ ಮಹತ್ವದ ಸಾಧನೆ ಏನ್‌ ಗೊತ್ತಾ?

ದೇವಾಲಯದಲ್ಲಿ ವಿವಿಧ ಹಬ್ಬಗಳನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ಅಂದು ದೇವರಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಲಾಗುತ್ತದೆ. ಇವುಗಳಲ್ಲಿ ಬಹಳ ಮುಖ್ಯವಾದದ್ದು ಎಂದರೆ ಚಂದನೋತ್ಸವ. ಇದನ್ನು ಏಪ್ರಿಲ್-ಮೇ ತಿಂಗಳಲ್ಲಿ ಆಚರಣೆ ಮಾಡಲಾಗುತ್ತದೆ. ದೇವರನ್ನು ಮುಚ್ಚಲು ಬಳಸುವ ಶ್ರೀಗಂಧದ ಲೇಪವನ್ನು ತೆಗೆದುಹಾಕುವ ಸಮಯವಾಗಿದೆ. ಕಷ್ಟ ಎಂದು ಬರುವ ಎಷ್ಟೋ ಕುಟುಂಬಗಳ ಸಮಸ್ಯೆಗಳು, ಇಲ್ಲಿ ದೇವರ ಅನುಗ್ರಹದಿಂದ ಎಲ್ಲವೂ ಸರಿ ಹೊಂದುತ್ತವೆ ಎಂಬ ಬಲವಾದ ನಂಬಿಕೆಗಳು ಇವೆ.

ಇದನ್ನೂ ಓದಿ: ಇಂಡಿಯಾಗೆ ಗುಡ್‌ ಬೈ ಹೇಳಿ ಪ್ಲೈಟ್‌ ಏರಿದ ವಿರಾಟ್‌ ಕೊಹ್ಲಿ.. ಮತ್ತೆ ಭಾರತಕ್ಕೆ ಬರೋದು ಯಾವಾಗ?

About the Author

Bhimappa

ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

...Read More

Trending News