)
Krishna Janmashtami 2025 date : ಪ್ರತಿ ವರ್ಷ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಜನ್ಮಾಷ್ಟಮಿ ಹಬ್ಬವನ್ನು ಬಹಳ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಶ್ರೀಕೃಷ್ಣನು ರೋಹಿಣಿ ನಕ್ಷತ್ರದಲ್ಲಿ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ರಾತ್ರಿ 12 ಗಂಟೆಗೆ ಜನಿಸಿದನೆಂದು ನಂಬಲಾಗಿದೆ.
ಹೌದು.. ಈ ಬಾರಿ ಈ ಪವಿತ್ರ ಹಬ್ಬವನ್ನು ಆಗಸ್ಟ್ 16 ರಂದು ಆಚರಿಸಲಾಗುತ್ತದೆ. ಈ ದಿನವು ಶ್ರೀಕೃಷ್ಣನ ಬಾಲರೂಪವನ್ನು ಭಕ್ತಿಯಿಂದ ಸ್ಮರಿಸಲು ಮತ್ತು ಪೂಜಿಸಲು ಒಂದು ಅವಕಾಶ. ಅಂದು ಭಕ್ತರು ಉಪವಾಸ ವೃತ, ವಿಶೇಷ ಪೂಜೆ, ಭಜನೆ ಇತ್ಯಾದಿಗಳನ್ನು ಆಚರಿಸುವ ಮೂಲಕ ಭಗವಂತನ ಕೃಪೆಗೆ ಪಾತ್ರಾಗುತ್ತಾರೆ.
Krishna Janmashtami 2025 puja time : ಕೃಷ್ಣ ಜನ್ಮಾಷ್ಟಮಿಯ ಅಷ್ಟಮಿ ತಿಥಿ ಆಗಸ್ಟ್ 15 ರಂದು ರಾತ್ರಿ 11:49 ಕ್ಕೆ ಪ್ರಾರಂಭವಾಗಿ ಆಗಸ್ಟ್ 16 ರಂದು ರಾತ್ರಿ 9:34 ಕ್ಕೆ ಕೊನೆಗೊಳ್ಳುತ್ತದೆ. ಜನ್ಮಾಷ್ಟಮಿಯ ಪೂಜಾ ಸಮಯ ಆಗಸ್ಟ್ 16 ರಂದು ಮಧ್ಯಾಹ್ನ 12:04 ಕ್ಕೆ ಪ್ರಾರಂಭವಾಗಿ 12:47 ಕ್ಕೆ ಕೊನೆಗೊಳ್ಳುತ್ತದೆ. ಇದರ ಒಟ್ಟು ಅವಧಿ 43 ನಿಮಿಷಗಳು. ಈ ವರ್ಷ, ರೋಹಿಣಿ ನಕ್ಷತ್ರ ಆಗಸ್ಟ್ 17 ರಂದು ಬೆಳಿಗ್ಗೆ 4:38 ಕ್ಕೆ ಪ್ರಾರಂಭವಾಗಿ ಆಗಸ್ಟ್ 18 ರಂದು ಬೆಳಿಗ್ಗೆ 3:17 ಕ್ಕೆ ಕೊನೆಗೊಳ್ಳುತ್ತದೆ.
ಜನ್ಮಾಷ್ಟಮಿ ಪೂಜೆಯು ಸೂರ್ಯೋದಯಕ್ಕೆ ಮೊದಲು ಸ್ನಾನ ಮಾಡುವುದರೊಂದಿಗೆ ಪ್ರಾರಂಭವಾಗುತ್ತದೆ. ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ, ಶ್ರೀಕೃಷ್ಣನ ವಿಗ್ರಹ ಅಥವಾ ಫೋಟೋವನ್ನು ಗಂಗಾ ಜಲ ಮತ್ತು ಹಾಲಿನಿಂದ ಅಭಿಷೇಕಿಸಲಾಗುತ್ತದೆ, ಹೊಸ ಬಟ್ಟೆ ತೊಡಿಸಿ, ಹೂವುಗಳಿಂದ ಅಲಂಕರಿಸಿ ಬಾಲ ಕೃಷ್ಣನಿಗೆ ಹಣ್ಣುಗಳು, ಸಿಹಿತಿಂಡಿಗಳು ಮತ್ತು ಕಬ್ಬನ್ನು ಅರ್ಪಿಸಲಾಗುತ್ತದೆ. ವಿಶೇಷವಾಗಿ ಮಧ್ಯರಾತ್ರಿಯಲ್ಲಿ, ಕೃಷ್ಣನ ಜನನದ ಸಮಯದಲ್ಲಿ, ಅವನ ಪೂಜೆ ಮತ್ತು ಆರತಿಯನ್ನು ಮಾಡಲಾಗುತ್ತದೆ.