Lakshmi Favorite zodiac signs: ಲಕ್ಷ್ಮಿ ದೇವಿಯನ್ನು ಸಂಪತ್ತಿನ ಅಧಿದೇವತೆ ಎಂದು ಪರಿಗಣಿಸಲಾಗುತ್ತದೆ. ಯಾರ ಮೇಲೆ ಲಕ್ಷ್ಮಿ ದೇವಿ ದಯೆ ತೋರಿಸುತ್ತಾಳೋ ಅವರು ರಾತ್ರೋರಾತ್ರಿ ಶ್ರೀಮಂತರಾಗುತ್ತಾರೆ ಎಂದು ಹೇಳಲಾಗುತ್ತದೆ. ಲಕ್ಷ್ಮಿ ದೇವಿಗೆ ಈ 5 ರಾಶಿಗಳ ಜನರ ಮೇಲೆ ಅಪಾರ ಪ್ರೀತಿ ಇರುತ್ತದೆ. ಈ ರಾಶಿಯವರು ಶ್ರೀಮಂತರಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಇವರ ಮೇಲೆ ಲಕ್ಷ್ಮೀ ದೇವಿಯ ಕೃಪೆ ಸದಾ ಇರುತ್ತದೆ.
ವೃಷಭ ರಾಶಿ - ಈ ರಾಶಿಯ ಜನರಿಗೆ ಜೀವನದಲ್ಲಿ ಎಂದಿಗೂ ಹಣದ ಕೊರತೆ ಬರುವುದಿಲ್ಲ. ಸಂಪತ್ತನ್ನು ಸಂಗ್ರಹಿಸುವುದರಲ್ಲಿ ಪರಿಣಿತರು. ಲಕ್ಷ್ಮಿ ದೇವಿಯ ಆಶೀರ್ವಾದದಿಂದ ಅವರ ಸಂಪತ್ತು ಹೆಚ್ಚುತ್ತಲೇ ಇರುತ್ತದೆ.
ಕನ್ಯಾ ರಾಶಿ - ಇವರು ಕಠಿಣ ಪರಿಶ್ರಮಿಗಳು, ವಿಶ್ವಾಸಾರ್ಹರು. ತಮ್ಮ ಜೀವನದಲ್ಲಿ ಯಶಸ್ವಿಯಾಗುತ್ತಾರೆ. ಲಕ್ಷ್ಮಿ ದೇವಿಯ ಅನುಗ್ರಹದಿಂದ ಶ್ರೀಮಂತರಾಗಿರುತ್ತಾರೆ. ಜೀವನದಲ್ಲಿ ಎಂದಿಗೂ ಹಣದ ಕೊರತೆಯನ್ನು ಎದುರಿಸುವುದಿಲ್ಲ.
ತುಲಾ ರಾಶಿ - ಕಠಿಣ ಪರಿಶ್ರಮಿಗಳಾಗಿರುತ್ತಾರೆ. ನ್ಯಾಯಯುತರು, ಸೃಜನಶೀಲರು ಮತ್ತು ಕಲಾತ್ಮಕರು. ಈ ರಾಶಿಯವರ ಮೇಲೆ ಲಕ್ಷ್ಮಿ ವಿಶೇಷ ಆಶೀರ್ವಾದ ಇರುತ್ತದೆ. ಐಷಾರಾಮಿ ಜೀವನವನ್ನು ನಡೆಸುತ್ತಾರೆ.
ಕುಂಭ ರಾಶಿ - ಈ ರಾಶಿಯವರು ಸ್ವಾವಲಂಬಿಗಳು, ಕಠಿಣ ಪರಿಶ್ರಮಿಗಳು, ಸಾಮಾಜಿಕವಾಗಿ ಕಾಳಜಿ ವಹಿಸುವವರು ಮತ್ತು ಚಿಂತನಶೀಲರು. ಶಿಸ್ತುಬದ್ಧ ಜೀವನವನ್ನು ನಡೆಸಲು ಇಷ್ಟಪಡುತ್ತಾರೆ. ಹಣ ಉಳಿಸುವುದರಲ್ಲಿ ಬಹಳ ಪರಿಣಿತರು.
ಮೀನ ರಾಶಿ - ತಮ್ಮ ಜೀವನದಲ್ಲಿ ಸಂತೋಷ ಮತ್ತು ಶಾಂತಿಯನ್ನು ಬಯಸುತ್ತಾರೆ. ಈ ಗುಣಗಳಿಂದ ತಾಯಿ ಲಕ್ಷ್ಮಿ ವಿಶೇಷವಾಗಿ ಸಂತೋಷಪಡುತ್ತಾಳೆ. ಜೀವನದಲ್ಲಿ ಪ್ರತಿಯೊಂದು ಸಂತೋಷವನ್ನು ಪಡೆಯುತ್ತಾರೆ. ಅವರು ಬೇಗನೆ ಯಶಸ್ಸನ್ನು ಸಾಧಿಸುತ್ತಾರೆ.
ಸೂಚನೆ: ಈ ಲೇಖನವು ಧಾರ್ಮಿಕ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.
ಇದನ್ನೂ ಓದಿ: ಬುಧ ಮತ್ತು ಗುರುವಿನ ಹಿಮ್ಮುಖ ಚಲನೆಯಿಂದ ಈ ರಾಶಿಗಳಿಗೆ ಭಾರೀ ಲಾಭ..!
ಇದನ್ನೂ ಓದಿ: ಈ ಹಕ್ಕಿ ಮನೆಯ ಪಕ್ಕದಲ್ಲಿ ಗೂಡು ಕಟ್ಟಿದರೆ ಲಕ್ಷ್ಮೀ ಮನೆಗೆ ಪ್ರವೇಶಿಸುವ ಸಂಕೇತ !









