)
ಜಾತಕದ ಗ್ರಹಗಳ ಆಧಾರದ ಮೇಲೆ ಶುಭ ಬಣ್ಣವನ್ನು ಬಳಸುವುದರಿಂದ, ಆಯಾ ರಾಶಿಯವರಿಗೆ ಬಹಳಷ್ಟು ಪ್ರಯೋಜನಗಳಾಗುವುದು. ಇದು ಮುಚ್ಚಿದ ಅದೃಷ್ಟದ ಬಾಗಿಲುಗಳನ್ನು ತೆರೆಯುತ್ತದೆ. ಸಂತೋಷ ಮತ್ತು ಸಮೃದ್ಧಿ ಹೆಚ್ಚುತ್ತದೆ. ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ಸಾಧಿಸಲು ಬಣ್ಣಗಳೇ ಕಾರಣವಾಗುತ್ತದೆ.
ಕೆಂಪು ಮತ್ತು ಕೇಸರಿ ಬಣ್ಣ :
ಜ್ಯೋತಿಷ್ಯದ ಪ್ರಕಾರ, ಮೇಷ, ಸಿಂಹ ಮತ್ತು ಧನು ರಾಶಿಯವರು ಕೆಂಪು, ಕೇಸರಿ ಮತ್ತು ಚಿನ್ನದ ಬಣ್ಣವನ್ನು ಬಳಸುವುದು ತುಂಬಾ ಶುಭ. ಮಂಗಳ ಮತ್ತು ಸೂರ್ಯ ಈ ರಾಶಿಯವರ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತಾರೆ. ಕೆಂಪು ಮತ್ತು ಕೇಸರಿ ಬಣ್ಣವು ಈ ಗ್ರಹಗಳಿಗೆ ಸಂಬಂಧಿಸಿದೆ. ಹಾಗಾಗಿ ಇವರಿಗೆ ಕೆಂಪು ಶುಭ.
ವಿಶೇಷವಾಗಿ ಉದ್ಯೋಗ ಸಂದರ್ಶನ, ಸ್ಪರ್ಧಾತ್ಮಕ ಪರೀಕ್ಷೆ, ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮಾತುಕತೆಗಳಿಗೆ ಹೋಗುವಾಗ, ಮೇಷ, ಸಿಂಹ ಮತ್ತು ಧನು ರಾಶಿಯ ಜನರು ಕೆಂಪು, ಕೇಸರಿ ಅಥವಾ ಚಿನ್ನದ ಬಣ್ಣದ ಬಟ್ಟೆಗಳನ್ನು ಧರಿಸಬೇಕು ಅಥವಾ ತಮ್ಮೊಂದಿಗೆ ಈ ಬಣ್ಣದ ಕರವಸ್ತ್ರವನ್ನು ಇಟ್ಟುಕೊಳ್ಳಬೇಕು.
ಬಿಳಿ,ತಿಳಿ ಹಸಿರು ಮತ್ತು ರಾಯಲ್ ಬ್ಲೂ :
ಕನ್ಯಾ ಮತ್ತು ಮಕರ ರಾಶಿಯವರಿಗೆ ಹಸಿರು ಮತ್ತು ನೀಲಿ ಬಣ್ಣಗಳು ಶುಭ. ವಿಶೇಷವಾಗಿ ವೃಷಭ ರಾಶಿಯವರು ಪ್ರಕಾಶಮಾನವಾದ ಬಿಳಿ ಬಣ್ಣವನ್ನು ಬಳಸಬೇಕು. ಅವರು ಮನೆಯಲ್ಲಿ ಪ್ರಕಾಶಮಾನವಾದ ಬಿಳಿ ಬಟ್ಟೆ, ಟವೆಲ್, ಬೆಡ್ಶೀಟ್ಗಳು ಇತ್ಯಾದಿಗಳನ್ನು ಬಳಸಬೇಕು. ಇದು ಶುಕ್ರ ಗ್ರಹವನ್ನು ಬಲಪಡಿಸುತ್ತದೆ ಮತ್ತು ಅವರಿಗೆ ಬಹಳಷ್ಟು ಸಂಪತ್ತು ಮತ್ತು ಸಮೃದ್ಧಿಯನ್ನು ಕರುಣಿಸುತ್ತದೆ. ತಿಳಿ ಹಸಿರು ಮತ್ತು ನೀಲಿ ಬಣ್ಣಗಳು ಕ್ರಮವಾಗಿ ಬುಧ ಮತ್ತು ಶನಿಯನ್ನು ಪ್ರತಿನಿಧಿಸುತ್ತವೆ.
ಆಕಾಶ ನೀಲಿ, ಸಿಲ್ವರ್ ಮತ್ತು ಕಪ್ಪು ಬಣ್ಣ :
ಮಿಥುನ ಮತ್ತು ಕುಂಭ ರಾಶಿಯವರು ಬುಧ ಮತ್ತು ಶನಿಯ ಸಂಯೋಜಿತ ಪರಿಣಾಮವನ್ನು ಹೊಂದಿರುತ್ತಾರೆ. ಆದ್ದರಿಂದ, ಇವರು ವಿಶೇಷ ಸಂದರ್ಭಗಳಲ್ಲಿ ಆಕಾಶ ನೀಲಿ, ಬೂದು ಮತ್ತು ಬೆಳ್ಳಿ ಬಣ್ಣದ ಬಟ್ಟೆಯನ್ನು ಧರಿಸಬೇಕು. ಇದು ಅವರನ್ನು ಮಾನಸಿಕವಾಗಿ ಸದೃಢವಾಗಿಸುತ್ತದೆ. ಜೊತೆಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.
ಬಿಳಿ, ತಿಳಿ ಗುಲಾಬಿ ಮತ್ತು ಹಳದಿ ಬಣ್ಣ :
ಕರ್ಕ, ವೃಶ್ಚಿಕ ಮತ್ತು ಮೀನ ರಾಶಿಯವರು ಬಿಳಿ, ತಿಳಿ ಗುಲಾಬಿ ಮತ್ತು ಹಳದಿ ಬಣ್ಣಗಳನ್ನು ಧರಿಸುವುದು ಒಳ್ಳೆಯದು. ಯಾಕೆಂದರೆ ಈ ರಾಶಿಯವರಿಗೆ ಚಂದ್ರ, ಗುರು ಮತ್ತು ಮಂಗಳ ಅವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಇದು ಅವರಿಗೆ ಮಾನಸಿಕ ಶಾಂತಿಯನ್ನು ನೀಡುವುದರೊಂದಿಗೆ ಅದೃಷ್ಟ ಸದಾ ಇವರ ಕಡೆಗೆ ಇರುವಂತೆ ಮಾಡುತ್ತದೆ.
ಶುಭ ಬಣ್ಣಗಳನ್ನು ಹೇಗೆ ಬಳಸುವುದು?:
ಶುಭ ಬಣ್ಣಗಳನ್ನು ಬಳಸಲು, ಆ ಬಣ್ಣದ ಬಟ್ಟೆ, ಕರವಸ್ತ್ರ, ಪೆನ್ನುಗಳು, ಡೈರಿಗಳು ಅಥವಾ ಬ್ಯಾಗ್ ಗಳನ್ನು ಬಳಸಬಹುದು. ಯಾವಾಗಲೂ ಆ ನಿರ್ದಿಷ್ಟ ಬಣ್ಣದ ಕರವಸ್ತ್ರವನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಬಹುದು.
(ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.)