)
ದೀಪಾವಳಿಗೆ ಮುನ್ನ ಗುರುಗ್ರಹ ತನ್ನ ರಾಶಿಯನ್ನು ಬದಲಿಸಲಿದೆ. ಗುರು 12 ತಿಂಗಳಿಗೊಮ್ಮೆ ಅಂದರೆ ಒಂದು ವರ್ಷಕ್ಕೆಒಮ್ಮೆ ರಾಶಿಯನ್ನು ಬದಲಾಯಿಸುತ್ತಾನೆ. ಅದರಂತೆ, ಅಕ್ಟೋಬರ್ 18 ರಂದು ಮಿಥುನ ರಾಶಿಯಿಂದ ಕರ್ಕ ರಾಶಿಗೆ ಗುರು ಗ್ರಹದ ಸ್ಥಾನಪಲ್ಲಟವಾಗುತ್ತದೆ. ನಂತರ, ಡಿಸೆಂಬರ್ನಲ್ಲಿ ಗುರು ಮತ್ತೆ ಮಿಥುನ ರಾಶಿಗೆ ಮರಳುತ್ತಾನೆ. ವಾಸ್ತವವಾಗಿ, ಗುರುವು ಪ್ರಸ್ತುತ ಉಚ್ಚ ಸ್ಥಾನದಲ್ಲಿರುವುದರಿಂದ ಈ ಬಾರಿ ಗುರುವಿನ ಸ್ಥಾನದಲ್ಲಿ ಬದಲಾವಣೆಯಾಗುತ್ತದೆ.
ಗುರುವಿನ ಸ್ಥಾನ ಪಲ್ಲಟದಿಂದ ಈ ರಾಶಿಯವರಿಗೆ ಲಾಭ :
ಮಿಥುನ ರಾಶಿ : ಗುರುವಿನ ಸಂಚಾರವು ಮಿಥುನ ರಾಶಿಯವರಿಗೆ ಹೆಚ್ಚು ಪ್ರಯೋಜನಕಾರಿಯಾಗಲಿದೆ. ಈ ರಾಶಿಯಲ್ಲಿ ಜನಿಸಿದವರಿಗೆ ಉತ್ತಮ ಅವಕಾಶಗಳು ಒದಗಿ ಬರುತ್ತದೆ. ಹಣ ಗಳಿಸುವ ಅವಕಾಶಗಳು ಸಿಗುತ್ತವೆ. ಪ್ರಯಾಣವು ಸಹ ಪ್ರಯೋಜನಕಾರಿಯಾಗಿರಲಿದೆ.
ಕನ್ಯಾ ರಾಶಿ : ಕನ್ಯಾ ರಾಶಿಯವರಿಗೆ ಅದೃಷ್ಟ ಅನುಕೂಲಕರವಾಗಿರುತ್ತದೆ. ಇದು ನಿಮಗೆ ಉತ್ತಮ ಸಮಯವನ್ನು ನೀಡುತ್ತದೆ. ಆಸ್ತಿ ಮತ್ತು ಆದಾಯದಲ್ಲಿ ಲಾಭವಾಗುವ ಸಾಧ್ಯತೆಗಳಿವೆ. ದೀರ್ಘಕಾಲದಿಂದ ಹೂಡಿಕೆ ಮಾಡಿದ ಹಣವನ್ನು ಮರಳಿ ಪಡೆಯಬಹುದು. ಹೊಸ ವಾಹನ ಖರೀದಿ ಯೋಗ ಕೂಡಿ ಬರುವುದು. ಕೆಲಸದಲ್ಲಿ ಬಡ್ತಿಯ ಸಾಧ್ಯತೆಗಳೂ ಇವೆ.
ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯವರು ಅಂದುಕೊಂಡ ಕೆಲಸ ಸರಾಗವಾಗಿ ನೆರವೇರುವುದು. ಮೊದಲು ನಷ್ಟಗಳನ್ನು ಎದುರಿಸುತ್ತಿದ್ದ ಕ್ಷೇತ್ರದಲ್ಲಿಯೇ ಈಗ ಲಾಭವಾಗುವುದು. ಹಣಕಾಸಿನ ಸಮಸ್ಯೆ ನೀಗುವುದು.
ಮಕರ ರಾಶಿ : ಆರ್ಥಿಕ ಲಾಭದ ಅವಕಾಶದೊಂದಿಗೆ ಕೆಲಸ ಕಾರ್ಯಗಳಲ್ಲಿ ಪ್ರಗತಿಯಾಗುವುದು. ಹಣ ಗಳಿಸುವ ಮೂಲಗಳು ಹೆಚ್ಚಾಗುವುದು. ವೃತ್ತಿ ಬದುಕಿನಲ್ಲಿ ಉನ್ನತ ಸ್ಥಾನಕ್ಕೆ ಏರುವಿರಿ.
ಮೀನ ರಾಶಿ : ಮೀನ ರಾಶಿಯವರಿಗೆ ಇದು ಒಳ್ಳೆಯ ಸಮಯ. ಏಕೆಂದರೆ ಹಿಂದಿನ ಆರ್ಥಿಕ ಸಮಸ್ಯೆಗಳು ಬಗೆಹರಿಯುತ್ತವೆ. ಕೆಲಸದಲ್ಲಿ ಯಶಸ್ಸು ಸಾಧಿಸುವುದು ಸುಲಭವಾಗುವುದು. ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುವುದು.
( ಸೂಚನೆ : ಇಲ್ಲಿ ಒದಗಿಸಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಮೀಡಿಯಾ ಈ ಮಾಹಿತಿಯನ್ನು ದೃಢೀಕರಿಸುವುದಿಲ್ಲ. )