)
Mahalaya Amavasya 2025 : ನವರಾತ್ರಿ ಹಬ್ಬ ಕೆಲವೇ ದಿನಗಳಲ್ಲಿ ಶುರುವಾಗಲಿದೆ. ಅನೇಕ ಗ್ರಹಗಳ ಸಂಚಾರದ ಕಾರಣದಿಂದ ಕೆಲವು ರಾಶಿಯವರಿಗೆ ಅದೃಷ್ಟ ಒಲಿಯಲಿದೆ. ಶಾರದೀಯ ನವರಾತ್ರಿ ಎಂದೂ ಸಹ ಈ ಹಬ್ಬವನ್ನು ಕರೆಯುತ್ತಾರೆ. ಈ ಹಬ್ಬವು ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಯುದ್ಧ ಸಂಕೇತವಾಗಿದೆ. ತಾಯಿ ದುರ್ಗೆಯನ್ನು ಶಕ್ತಿ ಮತ್ತು ಬುದ್ಧಿವಂತಿಕೆಯ ದೇವತೆಯಾಗಿ ಪೂಜಿಸಲಾಗುತ್ತದೆ.
ಸೆಪ್ಟೆಂಬರ್ 21 ರಂದು ಮಹಾಲಯ ಅಮಾವಾಸ್ಯೆ ಆಚರಿಸಲಾಗುತ್ತಿದೆ. ಈ ದಿನ ಪಿತೃಗಳಿಗೆ ಮೀಸಲಿಡಲಾಗಿದೆ. ಮಹಾಲಯ ಅಮವಾಸ್ಯೆಯ ಮರುದಿನದಿಂದೇ ನವರಾತ್ರಿ ಆರಂಭವಾಗುತ್ತದೆ. ನವರಾತ್ರಿಯಲ್ಲಿ ನವದುರ್ಗೆಯರನ್ನು ಪೂಜಿಸಲಾಗುವುದು.
ವೃಷಭ ರಾಶಿ: ಆರ್ಥಿಕ ಲಾಭವನ್ನು ಪಡೆಯುವಿರಿ. ಉದ್ಯೋಗದಲ್ಲಿ ಪ್ರಗತಿ ಕಾಣುವಿರಿ. ವೃತ್ತಿಯಲ್ಲಿ ಬಡ್ತಿ ಸಿಗುವುದು. ವ್ಯಾಪಾರದಲ್ಲಿ ಲಾಭ ಗಳಿಸುವಿರಿ. ಬಹಳ ದಿನಗಳಿಂದ ಬಾಕಿ ಉಳಿದಿದ್ದ ಕೆಲಗಳು ಪೂರ್ಣಗೊಳ್ಳುತ್ತವೆ. ಆತ್ಮವಿಶ್ವಾಸವನ್ನು ಹೆಚ್ಚಾಗಲಿದೆ.
ಸಿಂಹ ರಾಶಿ: ಗೌರವ ಹಾಗೂ ಪ್ರತಿಷ್ಠೆ ಹೆಚ್ಚಾಗಲಿವೆ. ಆಕಸ್ಮಿಕ ಧನ ಲಾಭ ಆಗುವುದು. ಕುಟುಂಬದ ಜೊತೆಗೆ ಸಂತೋಷದ ಕ್ಷಣಗಳನ್ನು ಕಳೆಯುವಿರಿ. ಸುಖ ಸಂತೋಷ ಮನೆಯಲ್ಲಿ ನೆಲೆಸುತ್ತದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಸಾಕಷ್ಟು ಲಾಭವನ್ನು ಪಡೆಯುವಿರಿ.
ಕನ್ಯಾ ರಾಶಿ: ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ ಕಾಣಬಹುದು. ಉದ್ಯೋಗದಲ್ಲಿರುವವರಿಗೆ ಅನೇಕ ಹೊಸ ಅವಕಾಶಗಳು ಹುಡುಕಿ ಬರಲಿವೆ. ಹಳೆಯ ಸಮಸ್ಯೆಗಳಿಂದ ಮುಕ್ತರಾಗುತ್ತೀರಿ. ಸಂಪತ್ತಿನಲ್ಲಿ ವೃದ್ಧಿಯಾಗಲಿದೆ.
ತುಲಾ ರಾಶಿ: ತುಂಬಾ ಅದ್ಭುತ ಸಮಯ ನಿಮ್ಮದಾಗಲಿದೆ. ನಿಮ್ಮ ಪ್ರಾಮಾಣಿಕತೆಗೆ ಬೆಲೆ ಸಿಗುವ ಸಂದರ್ಭ. ಜೀವನದಲ್ಲಿ ಸಂತೋಷದ ದಿನಗಳು ಬರಲಿವೆ. ಕೆಲಸದ ಸ್ಥಳದಲ್ಲಿ ವಿಶೇಷ ಯಶಸ್ಸು ಮತ್ತು ಪ್ರಗತಿ ನಿಮ್ಮ ಪಾಲಾಗಲಿದೆ. ಹೊಸ ಆದಾಯದ ಮೂಲ ಸಿಗಲಿದೆ.
ಧನಸ್ಸು ರಾಶಿ: ಹೊಸ ಕಾರು, ಮನೆ ಅಥವಾ ಆಸ್ತಿ ಖರೀದಿ ಯೋಗವಿದೆ. ವೃತ್ತಿಜೀವನದಲ್ಲಿ ಪ್ರಗತಿ ಕಾಣುವಿರಿ. ಯಶಸ್ಸು ನಿಮ್ಮನ್ನೇ ಹುಡುಕಿಕೊಂಡು ಬರುತ್ತದೆ. ಶತ್ರುಗಳನ್ನು ಸೋಲಿಸಿ, ಗೆಲುವಿನ ಶಿಖರ ಏರುವಿರಿ. ಇದು ನಿಮ್ಮ ಜೀವನದ ಗೋಲ್ಡನ್ ಟೈಮ್.
ಸೂಚನೆ: ಈ ಲೇಖನವು ಧಾರ್ಮಿಕ ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ಖಚಿತಪಡಿಸುವುದಿಲ್ಲ.