)
Budh Mahadasha 2025: ಹಿಂದೂ ಧರ್ಮದಲ್ಲಿ ಜ್ಯೋತಿಷ್ಯದ ಬಗ್ಗೆ ಅಪಾರ ನಂಬಿಕೆ ಇದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದೀಪಾವಳಿ ಹಬ್ಬವು ಪ್ರತಿಯೊಬ್ಬರ ಜೀವನದಲ್ಲೂ ಕೆಟ್ಟದ್ದನ್ನು ನಾಶಪಡಿಸಿ ಒಳ್ಳೆಯ ಕಾಲವನ್ನು ಆರಂಭಿಸುವ ಪರ್ವಕಾಲ. ಈ ವರ್ಷ ಅಕ್ಟೋಬರ್ 20ರಂದು ದೀಪಾವಳಿ ಆಚರಣೆ ಇರಲಿದೆ. ಇದರ ಬೆನ್ನಲ್ಲೇ ಅಕ್ಟೋಬರ್ 24ರಂದು ಬುಧ ರಾಶಿ ಪರಿವರ್ತನೆ ಹೊಂದಲಿದ್ದಾನೆ.
ಮಂಗಳನ ರಾಶಿಗೆ ಬುಧ ಪ್ರವೇಶ:
ವೈದಿಕ ಜ್ಯೋತಿಷ್ಯದಲ್ಲಿ ಬುದ್ದಿ, ತರ್ಕ, ವೃತ್ತಿ, ವ್ಯವಹಾರ, ಮಾತಿನ ಅಂಶ ಎನ್ನಲಾಗುವ ಬುಧ ಅಕ್ಟೋಬರ್ 24, 2025ರಂದು ಮಂಗಳನ ಅಧಿಪತ್ಯದ ರಾಶಿಯಾದ ವೃಶ್ಚಿಕ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ವೃಶ್ಚಿಕ ರಾಶಿಗೆ ಬುಧ ಪ್ರವೇಶಿಸುತ್ತಿದ್ದಂತೆ ದ್ವಾದಶ ರಾಶಿಗಳಲ್ಲಿ ನಾಲ್ಕು ರಾಶಿಯವರ ಬದುಕಿನಲ್ಲಿ ಬುಧ ಮಹಾದಶ, ಭುಕ್ತಿ ಆರಂಭವಾಗಲಿದ್ದು ಅವರ ಅದೃಷ್ಟ ವಜ್ರದಂತೆ ಹೊಳೆಯುತ್ತದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳ ಬಗ್ಗೆ ತಿಳಿಯೋಣ...
ದೀಪಾವಳಿ ನಂತರ ಯಾವರ ರಾಶಿಯವರಿಗೆ ಅದೃಷ್ಟ:
ಮಿಥುನ ರಾಶಿ:
ದೀಪಾವಳಿ ಬೆನ್ನಲ್ಲೇ ವೃಶ್ಚಿಕ ರಾಶಿಗೆ ಸಾಗಲಿರುವ ಬುಧ ಈ ರಾಶಿಯವರ ಜೀವನದಲ್ಲಿ ಸಂತೋಷದ ಹೊನಲನ್ನು ಹರಿಸಲಿದ್ದಾನೆ. ಈ ಸಂದರ್ಭದಲ್ಲಿ ಕೈ ಹಾಕಿದ ಕೆಲಸಗಳಲ್ಲಿ ಜಯ, ವ್ಯವಹಾರದಲ್ಲಿ ಭರ್ಜರಿ ಲಾಭವಾಗಲಿದೆ. ವಿದೇಶ ವ್ಯವಹಾರಗಳಲ್ಲಿ ಆದಾಯ ಹೆಚ್ಚಾಗಲಿದೆ. ಬಹುದಿನಗಳ ಕನಸು ನನಸಾಗುವ ಪರ್ವಕಾಲ.
ಸಿಂಹ ರಾಶಿ:
ದೀಪಾವಳಿ ನಂತರ ಈ ರಾಶಿಯ ಅವಿವಾಹಿತರಿಗೆ ಒಳ್ಳೆಯ ಸಂಬಂಧಗಳು ಹರಸಿ ಬರಲಿವೆ. ಆದಾಯದ ಹರಿವು ಹೆಚ್ಚಾಗುವುದರಿಂದ ಭವಿಷ್ಯಕ್ಕಾಗಿ ಉಳಿತಾಯಕ್ಕಾಗಿ ಯೋಚಿಸಬಹುದು. ಕುಟುಂಬಸ್ಥರನ್ನು ಧಾರ್ಮಿಕ ಸ್ಥಳಗಳಿಗೆ ಕರೆದೊಯ್ಯಲು ಯೋಚಿಸಬಹುದು. ಆರ್ಥಿಕ ಸ್ಥಿತಿ ಸುಧಾರಿಸುವುದರಿಂದ ಸಮಾಜದಲ್ಲಿ ನಿಮ್ಮ ಸ್ಥಾನಮಾನ, ಗೌರವ, ಕೀರ್ತಿ ಹೆಚ್ಚಾಗಲಿದೆ.
ಕುಂಭ ರಾಶಿ:
ದೀಪಾವಳಿ ನಂತರ ಬುಧ ಗೋಚಾರ ಫಲವಾಗಿ ಈ ರಾಶಿಯವರ ಅದೃಷ್ಟವೇ ಬದಲಾಗುತ್ತದೆ. ವ್ಯವಹಾರದಲ್ಲಿ ಎಂದೂ ಕಂಡಿರದಷ್ಟು ಲಾಭವನ್ನು ಗಳಿಸುವಿರಿ. ದೀರ್ಘ ಸಮಯದಿಂದ ನೆನೆಗುದಿಗೆ ಬಿದ್ದಿದ್ದ ಕೆಲಸದಲ್ಲಿ ವೇಗವನ್ನು ಪಡೆಯುವಿರಿ. ಭೂಮಿ ಖರೀದಿ ಬಗ್ಗೆ ಯೋಚಿಸುತ್ತಿರುವವರಿಗೆ ಇದು ಸಕಾಲವಾಗಿದೆ. ಕುಟುಂಬದಲ್ಲಿ ಮಂಗಳ ಕಾರ್ಯಗಳು ನಡೆಯುವ ಸಾಧ್ಯತೆ ಇದ್ದು, ಸಂತೋಷ ಹೆಚ್ಚಾಗಲಿದೆ.
ಮೀನ ರಾಶಿ:
ದೀಪಾವಳಿ ಬೆನ್ನಲ್ಲೇ ಬುಧ ರಾಶಿ ಪರಿವರ್ತನೆಯು ಈ ರಾಶಿಯವರಿಗೆ ಹಲವು ಆಯಾಮಗಳಲ್ಲಿ ಪ್ರಯೋಜನವನ್ನು ನೀಡಲಿದೆ. ವೃತ್ತಿ ಬದುಕಿನಲ್ಲಿ ಬಡ್ತಿ, ವೇತನ ಹೆಚ್ಚಳ ಸಾಧ್ಯತೆ ಇದೆ. ವ್ಯಾಪಾರ-ವ್ಯವಹಾರದಲ್ಲಿ ಬಂಪರ್ ಆದಾಯ ಹರಿದುಬರಲಿದೆ. ಮನೆಯಲ್ಲಿ ಮೂಡಿದ್ದ ಕಷ್ಟಕರ ಪರಿಸ್ಥಿತಿಗಳು ತಿಳಿಯಾಗಲಿದ್ದು ಸಂಪತ್ತಿನ ಸುಯೋಗವನ್ನು ಅನುಭವಿಸುವ ಸುವರ್ಣ ಸಮಯ ಇದಾಗಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.