ಅಪ್ಪಿತಪ್ಪಿಯೂ ಕನ್ನಡಿಯನ್ನು ಈ ದಿಕ್ಕಿನಲ್ಲಿಟ್ಟು ಮುಖ ನೋಡಬೇಡಿ.. ದುರಾದೃಷ್ಟ ನಿಮ್ಮ ಬೆನ್ನು ಬಿಡದು.!

Vastu Tips for Mirror: ವಾಸ್ತು ಶಾಸ್ತ್ರದಲ್ಲಿ ಕನ್ನಡಿಯನ್ನು ಇಡುವ ಸ್ಥಳದ ಕುರಿತು ವಿವರಿಸಲಾಗಿದೆ. ಸರಿಯಾದ ಸ್ಥಳದಲ್ಲಿ ಕನ್ನಡಿಯನ್ನು ಇರಿಸದಿದ್ದರೆ, ಹಣದ ಸಮಸ್ಯೆ ಎದುರಿಸಬೇಕಾಗಬಹುದು.  

Written by - Chetana Devarmani | Last Updated : Oct 7, 2025, 01:46 PM IST
  • ಕನ್ನಡಿ ಇಡಬಾರದ ದಿಕ್ಕು
  • ವಾಸ್ತು ಪ್ರಕಾರ ಕನ್ನಡಿ ಇಡಬೇಕಾದ ದಿಕ್ಕು
  • ಕನ್ನಡಿ ಇಡಬಾರದ ದಿಕ್ಕು
ಅಪ್ಪಿತಪ್ಪಿಯೂ ಕನ್ನಡಿಯನ್ನು ಈ ದಿಕ್ಕಿನಲ್ಲಿಟ್ಟು ಮುಖ ನೋಡಬೇಡಿ.. ದುರಾದೃಷ್ಟ ನಿಮ್ಮ ಬೆನ್ನು ಬಿಡದು.!

Vastu Tips for Mirror: ವಾಸ್ತು ಪ್ರಕಾರ ಮನೆಯಲ್ಲಿ ವಸ್ತುಗಳನ್ನು ಇಡದಿದ್ದರೆ ಒಬ್ಬ ವ್ಯಕ್ತಿಯು ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ವಸ್ತುಗಳನ್ನು ಇಡುವುದು ಅವಶ್ಯಕ.

Add Zee News as a Preferred Source

ವಾಸ್ತು ಶಾಸ್ತ್ರದಲ್ಲಿ ಮನೆಯ ಯಾವ ದಿಕ್ಕಿನಲ್ಲಿ ಕನ್ನಡಿಯನ್ನು ಇಡಬೇಕು ಎಂಬ ಬಗ್ಗೆ ವಿವರಿಸಲಾಗಿದೆ. ಸರಿಯಾದ ಸ್ಥಳದಲ್ಲಿ ಸರಿಯಾದ ದಿಕ್ಕಿನಲ್ಲಿ ಕನ್ನಡಿಯನ್ನು ಇರಿಸದಿದ್ದರೆ ಅದು ವಾಸ್ತು ದೋಷಕ್ಕೆ ಕಾರಣವಾಗುವುದು. ದುರಾದೃಷ್ಟ ನಿಮ್ಮ ಬೆನ್ನು ಬಿಡದು.
 
ಕನ್ನಡಿ ಖರೀದಿಸುವಾಗ ಅದರಲ್ಲಿ ಮುಖವು ಸ್ಪಷ್ಟವಾಗಿ ಗೋಚರಿಸುವಂತಿರಬೇಕು. ಮಸುಕಾದ ಕನ್ನಡಿ ಕೆಟ್ಟ ಸೂಚನೆ ನೀಡುತ್ತದೆ. ಅಂತಹ ಕನ್ನಡಿಯು ಮನೆಯಲ್ಲಿ ರೋಗವನ್ನು ಹೆಚ್ಚಿಸುತ್ತದೆ. ಮನೆಯಲ್ಲಿ ಎಂದಿಗೂ ಚೌಕಾಕಾರದ ಅಥವಾ ಆಯತವಾದ ಕನ್ನಡಿ ಇಡಬೇಕು. ವೃತ್ತಾಕಾರದ ಅಥವಾ ತ್ರಿಕೋನ ಕನ್ನಡಿಯನ್ನು ಇಡಬೇಡಿ.

ಮಲಗುವ ಕೋಣೆಯಲ್ಲಿ ಕನ್ನಡಿ ಹಾಕಲೇ ಬಾರದು. ಅನೇಕ ಜನರು ತಮ್ಮ ಮಲಗುವ ಕೋಣೆ ವಾರ್ಡ್ರೋಬ್‌ಗಳ ಬದಿಯಲ್ಲಿ ಕನ್ನಡಿಯನ್ನು ಇಡುತ್ತಾರೆ. ಇದು ವಾಸ್ತುವಿಗೆ ಧಕ್ಕೆ ತರುತ್ತದೆ. ಇದರಿಂದ ಅನಾರೋಗ್ಯವು ಹೆಚ್ಚಾಗುತ್ತದೆ. ಆಯಸ್ಸು ಕಡಿಮೆಯಾಗಲು ಪ್ರಾರಂಭಿಸುತ್ತದೆ. 

ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನ ಗೋಡೆ ಮೇಲೆ ಕನ್ನಡಿ ಇರಬಾರದು. ಈ ಸ್ಥಾನದಲ್ಲಿ ಕನ್ನಡಿ ಇದ್ದರೆ ಅಪೆಂಡಿಕ್ಸ್ ಲಿವರ್ ಸಮಸ್ಯೆ ಹೆಚ್ಚಾಗುತ್ತದೆ. ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗುತ್ತದೆ.

ಕನ್ನಡಿಯನ್ನು ಎಂದಿಗೂ ಮುಖ್ಯ ಬಾಗಿಲಲ್ಲಿ ಇಡಬಾರದು, ಧನಾತ್ಮಕ ಶಕ್ತಿಯು ಮನೆಗೆ ಬರುವುದಿಲ್ಲ. ಅದೇ ರೀತಿ ಸ್ನಾನಗೃಹದಲ್ಲಿ ದಕ್ಷಿಣ ಮತ್ತು ಪಶ್ಚಿಮ ಗೋಡೆಯ ಮೇಲೆ ಕನ್ನಡಿ ಇರಬಾರದು.

ಮನೆಯ ಉತ್ತರ ಮತ್ತು ಪೂರ್ವ ಗೋಡೆಯ ಮೇಲೆ ಕನ್ನಡಿ ಇರಿಸಿ. ಇದರಿಂದ ವ್ಯವಹಾರದಲ್ಲಿ ಉತ್ತಮ ಲಾಭ ಕಾಣುವಿರಿ. ಉತ್ತರ ದಿಕ್ಕಿನಲ್ಲಿ ಕನ್ನಡಿಯನ್ನು ಇರಿಸುವುದು ಉತ್ತಮ. ಮಗುವಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ, ಕನ್ನಡಿಯನ್ನು ಈಶಾನ್ಯ ಮೂಲೆಯಲ್ಲಿ ಇಡಬೇಕು. 

ಸೂಚನೆ: ಈ ಲೇಖನವು ಧಾರ್ಮಿಕ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.

ಇದನ್ನೂ ಓದಿ: 2026 ರಲ್ಲಿ ಭೂಮಿಗೆ ಬರಲಿವೆ ಏಲಿಯನ್ಸ್!! ನಿಜವಾಗಲಿದೆಯೇ ಬಾಬಾ ವಂಗಾ ಭವಿಷ್ಯ..?

ಇದನ್ನೂ ಓದಿ: ನಕಾರಾತ್ಮಕ ಶಕ್ತಿ ದೂರ, ಆರ್ಥಿಕ ಸಮಸ್ಯೆ ಪರಿಹಾರ.. ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಲು ದಾಸವಾಳ ಗಿಡವನ್ನು ಈ ದಿಕ್ಕಿನಲ್ಲಿ ನೆಡಿ!

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News