ಶುಕ್ರದೆಸೆಯೊಂದಿಗೆ ಈ ರಾಶಿಯವರ ಹೊಸ ವರ್ಷ ಆರಂಭ !ಒಲಿಯುವುದು ಸ್ವಂತ ಮನೆ, ವಾಹನ ಖರೀದಿ, ಉನ್ನತ ಸ್ಥಾನಮಾನ ಭಾಗ್ಯ

ಪ್ರೀತಿ ಮತ್ತು ಸಂತೋಷದ ಗ್ರಹವಾದ ಶುಕ್ರನು ತನ್ನದೇ ಆದ ಪೂರ್ವಾಷಾಢ ನಕ್ಷತ್ರದಲ್ಲಿ ಸಾಗಲಿದ್ದು, ನಾಲ್ಕು ರಾಶಿಯವರ ಮೇಲೆ ಶುಭ ಮತ್ತು ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. 

Written by - Ranjitha R K | Last Updated : Dec 12, 2025, 01:28 PM IST
  • ಪೂರ್ವಾಷಾಢ ನಕ್ಷತ್ರಕ್ಕೆ ಶುಕ್ರನ ಪ್ರವೇಶ
  • ಈ ರಾಶಿಯವರಿಗೆ ಶುಕ್ರ ದೆಸೆ ಆರಂಭ
  • ಬೆಳಗುವುದು ನಾಲ್ಕು ರಾಶಿಯವರ ಭಾಗ್ಯ
ಶುಕ್ರದೆಸೆಯೊಂದಿಗೆ ಈ ರಾಶಿಯವರ ಹೊಸ ವರ್ಷ ಆರಂಭ !ಒಲಿಯುವುದು ಸ್ವಂತ ಮನೆ, ವಾಹನ ಖರೀದಿ, ಉನ್ನತ ಸ್ಥಾನಮಾನ  ಭಾಗ್ಯ

ಪ್ರೀತಿ ಮತ್ತು ಸಂತೋಷದ ಗ್ರಹವಾದ ಶುಕ್ರನು ತನ್ನದೇ ಆದ ಪೂರ್ವಾಷಾಢ ನಕ್ಷತ್ರದಲ್ಲಿ ಸಾಗಲಿದ್ದು, ನಾಲ್ಕು ರಾಶಿಯವರ ಮೇಲೆ ಶುಭ ಮತ್ತು ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. 

Add Zee News as a Preferred Source

ವೃಷಭ ರಾಶಿ : ಶುಕ್ರನು ತನ್ನದೇ ಆದ ಪೂರ್ವಾಷಾಢ ನಕ್ಷತ್ರದಲ್ಲಿ ಸಾಗುವುದರಿಂದ ವೃಷಭ ರಾಶಿಯವರಿಗೆ ವಿಶೇಷ ಲಾಭಗಳಾಗುವುದು.   ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ಸೌಂದರ್ಯ ವೃದ್ಧಿಯಾಗಬಹುದು. ಪ್ರೇಮ ಸಂಬಂಧಗಳು ಹಿಂದೆಂದಿಗಿಂತಲೂ ಹೆಚ್ಚು ಆಳ ಮತ್ತು ಉತ್ತಮವಾಗಿರುವುದು. ಜಮೀನು ಖರೀದಿಸುವ ಯೋಗ ಕೂಡಿ ಬರುವುದು.  

ಇದನ್ನೂ ಓದಿ : ಮಂಗಳನ ರಾಶಿಯಲ್ಲಿ ಗ್ರಹಗಳ ಮಹಾಯುತಿ: ತ್ರಿಗ್ರಾಹಿ ಯೋಗದಿಂದ ಈ ಜನರ ಬದುಕಿನಲ್ಲಿ ಭಾಗ್ಯೋದಯ.. ಅಪಾರ ಧನ ಲಾಭ

ತುಲಾ ರಾಶಿ : ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಪ್ರೀತಿ ಹೆಚ್ಚಾಗುತ್ತದೆ. ವ್ಯವಹಾರದಲ್ಲಿ ಲಾಭವಾಗುವುದು. ಭಾವನಾತ್ಮಕವಾಗಿ, ವ್ಯಕ್ತಿಗಳು ಸಮತೋಲನವನ್ನು ಕಂಡುಕೊಳ್ಳುತ್ತಾರೆ. ಮಾನಸಿಕ ಶಾಂತಿ ಹೆಚ್ಚಾಗುತ್ತದೆ. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ.

ಮಕರ  ರಾಶಿ : ಮಕರ ರಾಶಿಯವರಿಗೆ ಶುಕ್ರನ ಸಂಚಾರವು ಹೊಸ ಭರವಸೆಗಳನ್ನು ಮತ್ತು ಹೊಸ ಯಶಸ್ಸನ್ನು ತರುತ್ತದೆ. ಉನ್ನತ ಶಿಕ್ಷಣಕ್ಕಾಗಿ ವಿದೇಶ ಪ್ರವಾಸ ಮಾಡುವ ಬಯಕೆ ಈಡೇರಬಹುದು. ಹೊಸ ವೃತ್ತಿ ಅವಕಾಶಗಳು ಹೊರಹೊಮ್ಮುತ್ತವೆ. 

ಇದನ್ನೂ ಓದಿ : ಯೋಗ್ಯ ಸಂತಾನ ಪಡೆಯುವ ಉತ್ತಮ ಮಾರ್ಗವೇನು? ಯಾವ ದಿನಗಳು ಗರ್ಭಧಾರಣೆಗೆ ಉತ್ತಮ?

ಮೀನ ರಾಶಿ : ಶುಕ್ರನ ಸಂಚಾರವು ಗಮನಾರ್ಹ ಮತ್ತು ಸಕಾರಾತ್ಮಕ ಬದಲಾವಣೆಗಳನ್ನು ತರಬಹುದು. ಪ್ರೇಮ ಸಂಬಂಧಗಳು ಆಳವಾಗುತ್ತವೆ ಮತ್ತು ಆಕರ್ಷಣೆ ಹೆಚ್ಚಾಗುತ್ತದೆ. ಅವಿವಾಹಿತ ವ್ಯಕ್ತಿಗಳು ಹೊಸ ಸಂಬಂಧಗಳನ್ನು ಪ್ರವೇಶಿಸಬಹುದು. ಹಣ ಗಳಿಸಲು ಹಲವು ಮಾರ್ಗಗಗಳು ತೆರೆದುಕೊಳ್ಳುವುದು.

ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಬರೆಯಲಾಗಿದೆ, ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ .
 

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News