)
ಬೆಂಗಳೂರು : ಗುರು ಮಹಾದಶಾ ಅಥವಾ ಮಹಾದೆಸೆ ಬರೋಬ್ಬರಿ 16 ವರ್ಷಗಳ ಕಾಲ ನಡೆಯುತ್ತದೆ.ಈ ಸಮಯದಲ್ಲಿ ಯಾವ ಕೆಲಸಕ್ಕೆ ಕೈ ಹಾಕಿದರೂ ಅದು ಯಾವುದೇ ಅಡೆತಡೆಯಿಲ್ಲದೆ ನೆರವೇರುತ್ತದೆ.
ಜಾತಕದಲ್ಲಿ ಗುರುದೆಸೆ ಇದ್ದರೆ ಎಲ್ಲವೂ ಶುಭವೇ ಆಗುವುದು. ಗುರು ದೆಸೆ ಇದ್ದಾಗ ಆರ್ಥಿಕವಾಗಿ ಸದೃಢವಾಗುವುದು, ಉತ್ತಮ ಸಾಮಾಜಿಕ ಸ್ಥಾನಮಾನ ದೊರೆಯುವುದು.ಒಂದರ್ಥದಲ್ಲಿ ಜೀವನದ ಸುಂದರ ಕ್ಷಣಗಳನ್ನು ಕಳೆಯುವುದು ಈ ಅವಧಿಯಲ್ಲಿಯೇ.
ಗುರುವಿನ ಮಹಾದೆಸೆ ಬರೋಬ್ಬರಿ 16 ವರ್ಷಗಳವರೆಗೆ ಇರುತ್ತದೆ. ಇದು ನಿಮ್ಮ ಜೀವನದ ಸುವರ್ಣ ಯುಗವಾಗಿರುವುದು. ಗುರುದೆಸೆಯಿಂದಾಗಿ ಅಂತ್ಯವಿಲ್ಲದ ಆನಂದ, ಐಶ್ವರ್ಯ ಎಲ್ಲವೂ ಒಲಿದು ಬರುವುದು.
ಮೇಷ ರಾಶಿ : ಗುರು ಮಹಾದೆಸೆ ಇವರ ಪಾಲಿಗೆ ಸುವರ್ಣ ಯುಗ. ಏನೇ ಕೆಲಸ ಮಾಡಿದರೂ ಜಯ ನಿಮ್ಮದೇ. ಕೆಲಸ ಕಾರ್ಯಗಳಲ್ಲಿ ಸಣ್ಣ ಪುಟ್ಟ ಅಡೆ ತಡೆ ಎದುರಾಗಬಹುದು. ಆದರೆ ಯಶಸ್ಸು ಮಾತ್ರ ಪಕ್ಕಾ. ಲಕ್ಷ್ಮೀ ಕೃಪೆ ನಿಮ್ಮ ಮೇಲೆ ಸ್ವಲ್ಪ ಹೆಚ್ಚೇ ಇರುವುದು.
ಕಟಕ ರಾಶಿ : ಸ್ವಂತ ಮನೆ, ವಾಹನ, ಐಶಾರಾಮಿ ಜೀವನ ಹೀಗೆ ಎಲ್ಲಾ ಸುಖವೂ ನಿಮ್ಮ ಪಾಲಿಗೆ ಇರುತ್ತದೆ.ಸಂಸಾರ ಸುಖ ನಿಮಗೆ ಹೆಚ್ಚೇ ಇರುತ್ತದೆ. ನಿಮ್ಮ ಮನೆಯಲ್ಲಿ ನಿಮ್ಮ ಮಾತಿಗೆ ಹೆಚ್ಚಿನ ಪ್ರಾಶಸ್ತ್ಯ.
ಧನು ರಾಶಿ : ಇಲ್ಲಿಯವರೆಗೆ ಕಂಡ ಕಷ್ಟಗಳೆಲ್ಲಾ ಕಳೆದು ಹೋಗುವುದು.ಇನ್ನು ನಿಮ್ಮ ಮುಂದೆ ಇರುವುದು ನೆಮ್ಮದಿಯ ಬದುಕು. ಅಂದುಕೊಂಡ ಕೆಲಸ ಸಾಧಿಸುವ ಸಮಯ.
(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)