)
Gajakesari Rajayoga: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಂದು ರಾಶಿ ಅಥವಾ ನಕ್ಷತ್ರದಲ್ಲಿ ಒಂದಕ್ಕಿಂತ ಹೆಚ್ಚು ಗ್ರಹಗಳು ಸಂಯೋಜನೆಗೊಂಡಾಗ ಶುಭ-ಅಶುಭ ಯೋಗಗಳು ನಿರ್ಮಾಣವಾಗುತ್ತವೆ. ಇದೀಗ, ಸೆ.22ರಂದು ನವರಾತ್ರಿ ಆರಂಭವಾಗಿದ್ದು, ಈ ಬಾರಿಯ ನವರಾತ್ರಿಯು ಗುರು-ಚಂದ್ರರ ಸಂಯೋಗದಿಂದ ರೂಪುಗೊಳ್ಳುವ ಅತ್ಯಂತ ಶಕ್ತಿಶಾಲಿ ಯೋಗಗಳಲ್ಲಿ ಒಂದಾದ ಗಜಕೇಸರಿ ಯೋಗದಿಂದ ಆರಂಭವಾಗಿದೆ. ನವರಾತ್ರಿಯಲ್ಲಿ ಗಜಕೇಸರಿ ರಾಜಯೋಗವು ಕೆಲವು ರಾಶಿಯವರ ಅದೃಷ್ಟವನ್ನೇ ಬದಲಾಯಿಸಲಿದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
ನವರಾತ್ರಿಯಲ್ಲಿ ಈ ಐದು ರಾಶಿಯವರಿಗೆ ಗಜಕೇಸರಿ ಯೋಗ:
ಮೇಷ ರಾಶಿ:
ಗಜಕೇಸರಿ ಒಗವು ಈ ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ಹೊಸ ಹೊಸ ಅವಕಾಶಗಳನ್ನು ತರಲಿದೆ. ವ್ಯವಹಾರದಲ್ಲಿ ಗಮನಾರ್ಹ ಯಶಸ್ಸನ್ನು ಸಾಧಿಸುವಿರಿ. ದೀರ್ಘ ಸಮಯದಿಂದ ಬಾಕಿ ಉಳಿದಿದ್ದ ಕೆಲಸಗಳು ಸರಾಗವಾಗಿ ಪೂರ್ಣಗೊಳ್ಳಲಿವೆ.
ವೃಷಭ ರಾಶಿ:
ನವರಾತ್ರಿಯಲ್ಲಿ ಗಜಕೇಸರಿ ಯೋಗವು ಈ ರಾಶಿಯವರ ಬದುಕಿನಲ್ಲಿ ಸುಖ-ಸಮೃದ್ಧಿಯನ್ನು ಹೆಚ್ಚಿಸಲಿದೆ. ಸೃಜನಶೀಲ ಕ್ಷೇತ್ರದಲ್ಲಿರುವವರಿಗೆ ಭಾರೀ ಪ್ರಯೋಜನವಗಲಿದ್ದು, ಹೆಚ್ಚಿನ ಲಾಭವನ್ನು ಕಾಣುವಿರಿ. ಆರ್ಥಿಕ ದೃಷ್ಟಿಕೋನದಿಂದ ಸಕಾರಾತ್ಮಕ ಸಮಯ ಇದಾಗಿದೆ.
ಮಿಥುನ ರಾಶಿ:
ಗಜಕೇಸರಿ ಯೋಗದಿಂದ ಆರಂಭವಾಗಿರುವ ನವರಾತ್ರಿಯು ಈ ರಾಶಿಯವರ ಜೀವನದಲ್ಲಿ ಹಠಾತ್ ಧನಲಾಭವನ್ನು ತರಲಿದೆ. ದೀರ್ಘ ಕಾಲದಿಂದ ಯೋಜಿಸುತ್ತಿದ್ದ ಪ್ರವಾಸಕ್ಕೆ ಸಮಯ ಕೂಡಿಬರಲಿದೆ. ಅನಿರೀಕ್ಷಿತ ಮೂಲಕ ಆದಾಯ ಮೂಲಗಳು ಹೆಚ್ಚಾಗಲಿದ್ದು ಮನೆಯಲ್ಲಿ ಸಂತೋಷದ ವಾತಾವರಣವಿರುತ್ತದೆ. ಆರೋಗ್ಯ ಸಮಸ್ಯೆಗಳಿಂದಲೂ ಪರಿಹಾರ ದೊರೆಯಲಿದೆ.
ಕಟಕ ರಾಶಿ:
ಈ ರಾಶಿಯವರಿಗೆ ಗಜಕೇಸರಿ ಯೋಗವು ವೈಯಕ್ತಿಕ ಮತ್ತು ವೃತ್ತಿ ಬದುಕಿನಲ್ಲಿ ಹಠಾತ್ ಧನಲಾಭವನ್ನು ನೀಡಲಿದೆ. ಇದರಿಂದ ಜೀವನದಲ್ಲಿ ಎದುರಾಗಿದ್ದ ಆರ್ಥಿಕ ಸಂಕಷ್ಟದಿಂದ ಪರಿಹಾರವನ್ನು ಕಾಣಬಹುದು. ಉನ್ನತ ಶಿಕ್ಷಣಕ್ಕೆ ವಿದೇಶಕ್ಕೆ ಹೋಗಲು ಬಯಸುವವರಿಗೆ ಶುಭ ಸಮಯ ಇದಾಗಿದೆ.
ಸಿಂಹ ರಾಶಿ:
ನವರಾತ್ರಿಯಲ್ಲಿ ನಿರ್ಮಾಣವಾಗಿರುವ ಶುಭ ಗಜಕೇಸರಿ ಯೋಗವು ಈ ರಾಶಿಯ ಅವಿವಾಹಿತರಿಗೆ ವಿವಾಹ ಯೋಗವನ್ನು ನೀಡಲಿದೆ. ವ್ಯವಹಾರದಲ್ಲಿ ಯಶಸ್ಸನ್ನು, ವ್ಯಾಪಾರದಲ್ಲಿ ಸ್ಥಿರ ಆದಾಯವನ್ನು ಗಳಿಸುವಿರಿ. ಭವಿಷ್ಯಕ್ಕಾಗಿ ಉಳಿತಾಯ ಮಾಡುವುದನ್ನು ಪರಿಗಣಿಸಿ.
ಕನ್ಯಾ ರಾಶಿ:
ಗಜಕೇಸರಿ ಯೋಗದಿಂದ ಈ ರಾಶಿಯವರು ವ್ಯವಹಾರದಲ್ಲಿ ಭಾರೀ ಯಶಸ್ಸನ್ನು ಕಾಣುತ್ತಾರೆ. ವಿದೇಶ ವ್ಯವಹಾರದಿಂದ ಹಣಕಾಸಿನ ಹರಿವು ಹೆಚ್ಚಾಗಲಿದೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಲು ಬಯಸುವವರು ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದರಿಂದ ಯಶಸ್ಸು ದೊರೆಯಲಿದೆ. ಹಿಂದೆ ಮಾಡಿರುವ ಹೂಡಿಕೆಗಳಿಂದ ಅಪಾರ ಧನ-ಸಂಪತ್ತನ್ನು ಪಡೆಯುವಿರಿ.
ತುಲಾ ರಾಶಿ:
ಈ ನವರಾತ್ರಿಯು ತುಲಾ ರಾಶಿಯ ಜನರಿಗೆ ದೀರ್ಘ ಸಮಯದ ಕನಸನ್ನು ನನಸಾಗಿಸಲಿದೆ. ವೃತ್ತಿಪರರು ಉನ್ನತ ಹುದ್ದೆಯನ್ನು ಅಲಂಕರಿಸುವ ನಿರೀಕ್ಷೆಯಿದ್ದು, ವೇತನ ಹೆಚ್ಚಳವು ನಿಮ್ಮ ಹಣಕಾಸಿನ ಸಮಸ್ಯೆಗಳನ್ನು ಬಗೆಹರಿಸಲಿದೆ. ಮನೆಯಲ್ಲಿ ಮಂಗಳ ಕಾರ್ಯಗಳು ಜರುಗುವ ಸಂಭವವಿದೆ.
ವೃಶ್ಚಿಕ ರಾಶಿ:
ನವರಾತ್ರಿಯಲ್ಲಿ ಗಜಕೇಸರಿ ಯೋಗವು ಈ ರಾಶಿಯವರಿಗೆ ಪ್ರಮುಖ ಕೆಲಸಗಳಲ್ಲಿ ಪ್ರಗತಿಯನ್ನು ನೀಡಲಿದೆ. ಬಾಕಿ ಉಳಿದಿರುವ ಕೆಲಸಗಳು ಸರಾಗವಾಗಿ ಪೂರ್ಣಗೊಳ್ಳಲಿವೆ. ವ್ಯವಹಾರಗಳಲ್ಲಿ ಯಶಸ್ಸನ್ನು ಕಾಣುವಿರಿ. ಉದ್ಯೋಗಸ್ಥರು ಹರ್ಷಚಿತ್ತತೆಯಿಂದ ಕೆಲಸ ಮಾಡುವಿರಿ. ಇದರಿಂದ, ಸಕಾರಾತ್ಮಕ ಫಲಗಳು ಕೂಡ ಹೆಚ್ಚಾಗಲಿವೆ. ಹೂಡಿಕೆಯಿಂದ ಧನಲಾಭವನ್ನು ನಿರೀಕ್ಷಿಸಬಹುದು.
ಧನು ರಾಶಿ:
ಗಜಕೇಸರಿ ಯೋಗವು ಈ ರಾಶಿಯವರಿಗೆ ಅನಿರೀಕ್ಷಿತ ಆರ್ಥಿಕ ಲಾಭವನ್ನು ನೀಡಲಿದೆ. ಆದಾಗ್ಯೂ, ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಯೋಚಿಸಿ ಮಾತನಾಡುವುದನ್ನು ಪರಿಗಣಿಸಿ. ವ್ಯವಹಾರದಲ್ಲಿ ಸವಾಲುಗಳು ಹೆಚ್ಚಾಗಬಹುದು.
ಮಕರ ರಾಶಿ:
ನಿಮ್ಮ ಹಿಂದಿನ ತಪ್ಪುಗಳನ್ನು ಸರಿಪಡಿಸಲು ಇದು ಅತ್ಯುತ್ತಮ ಸಮಯವಾಗಿದೆ. ಕುಟುಂಬ ಜೀವನವು ಸಾಮರಸ್ಯದಿಂದ ಕೂಡಿರಲಿದ್ದು, ಮನೆಯಲ್ಲಿ ಶಾಂತಿ-ನೆಮ್ಮದಿ ನೆಲೆಸಲಿದೆ. ಹೂಡಿಕೆಯಿಂದ ಸಂಪತ್ತು ಹೆಚ್ಚಾಗಲಿದೆ.
ಕುಂಭ ರಾಶಿ:
ಗಜಕೇಸರಿ ಯೋಗವು ಈ ರಾಶಿಯವರಿಗೆ ವ್ಯಾಪಾರ-ವ್ಯವಹಾರದಲ್ಲಿ ಅಭೂತಪೂರ್ವ ಯಶಸ್ಸನ್ನು ನೀಡಲಿದೆ. ಗುರು ಬಲಶಾಲಿ ಆಗಿರುವುದರಿಂದ ಇನ್ನೂ ಮದುವೆಯಾಗದವರಿಗೆ ವಿವಾಹ ಯೋಗ ಕೂಡಿಬರಲಿದೆ. ದಂಪತಿಗಳು ಮಕ್ಕಳ ಸುಖವನ್ನು ಕಾಣುವರು. ಹಠಾತ್ ಧನಲಾಭದಿಂದ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ.
ಮೀನ ರಾಶಿ:
ನವರಾತ್ರಿಯಲ್ಲಿ ಗಜಕೇಸರಿ ಯೋಗದಿಂದ ಜೀವನದಲ್ಲಿ ಧನಾತ್ಮಕತೆಯನ್ನು ಹೆಚ್ಚಿಸಲಿದೆ. ವೃತ್ತಿಪರ ಬೆಳವಣಿಗೆಗೆ ಅನುಕೂಲಕರವಾದ ಸಮಯ ಇದಾಗಿದೆ. ಆದಾಗ್ಯೂ, ಜಂಟಿ ವ್ಯವಹಾರಗಳಲ್ಲಿ ಕೈ ಹಾಕುವುದನ್ನಿ ತಪ್ಪಿಸಿ, ಇಲ್ಲವೇ ಭಾರೀ ನಷ್ಟ ಉಂಟಾಗಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.