)
ಮನೆಯ ಪ್ರತಿಯೊಂದು ಭಾಗಕ್ಕೂ ತನ್ನದೇ ಆದ ಪ್ರಾಮುಖ್ಯತೆ ಇದೆ. ಅದರಲ್ಲಿಯೂ ಅಡುಗೆಮನೆ ವಿಶೇಷವಾಗಿರುತ್ತದೆ. ಅಡುಗೆಮನೆಯಲ್ಲಿ ಬೇಯಿಸಿದ ಆಹಾರವು ನಮಗೆ ಶಕ್ತಿಯನ್ನು ನೀಡುತ್ತದೆ. ನಮ್ಮ ಜೀವನವು ಅದರೊಂದಿಗೆ ಮುಂದುವರಿಯುತ್ತದೆ. ತಾಯಿ ಅನ್ನಪೂರ್ಣೆ ಅಡುಗೆಮನೆಯಲ್ಲಿ ವಾಸಿಸುತ್ತಾಳೆ ಎನ್ನುವುದು ನಂಬಿಕೆ. ಅಡುಗೆಮನೆಯಲ್ಲಿ ಕೆಲವು ಅಶುದ್ಧ ಅಥವಾ ಅಶುಭ ವಸ್ತುಗಳನ್ನು ಇಡುವುದರಿಂದ ತಾಯಿ ಅನ್ನಪೂರ್ಣೆಯ ಕೋಪಕ್ಕೆ ಕಾರಣವಾಗುತ್ತದೆ. ಇದರಿಂದ ಆಕೆಯ ಆಶೀರ್ವಾದ ಮನೆ ಮತ್ತು ಅಮ್ನೇ ಮಂದಿಯ ಮೇಲಿನಿಂದ ದೂರವಾಗುತ್ತದೆ. ಇದು ಬಡತನಕ್ಕೆ ಕಾರಣವಾಗುತ್ತದೆ.
ಈ ವಸ್ತುಗಳನ್ನು ಅಡುಗೆಮನೆಯಲ್ಲಿ ಇಡಬಾರದು :
ಯಾವುದೇ ಅಶುದ್ಧ ವಸ್ತುವನ್ನು ಅಡುಗೆಮನೆಯಲ್ಲಿ ಎಂದಿಗೂ ಇಡಬಾರದು. ಇದು ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಬದಲಿಗೆ, ಅಡುಗೆಮನೆಯನ್ನು ಯಾವಾಗಲೂ ಸ್ವಚ್ಛವಾಗಿಡಬೇಕು. ಇದರಿಂದ ಮನೆ ಮಂದಿ ಆರೋಗ್ಯವಾಗಿ ಇರಬಹುದು. ಸಂತೋಷ ಸಮೃದ್ಧಿ ಮನೆಯಲ್ಲಿ ತುಂಬಿ ತುಳುಕುತ್ತದೆ. ಮನೆಯಲ್ಲಿ ಸಕಾರಾತ್ಮಕತೆ ಇದ್ದರೆ ಸಂಪತ್ತಿನ ದೇವತೆ ಲಕ್ಷ್ಮೀ ಕೂಡಾ ಆ ಮನೆಯಲ್ಲಿ ನೆಲೆಯಾಗುತ್ತಾಳೆ.
ಮುರಿದ ಪಾತ್ರೆಗಳು : ಮನೆಯಲ್ಲಿ ಕಡಿಮೆ ಪಾತ್ರೆಗಳಿದ್ದರೂ ಪರವಾಗಿಲ್ಲ ಆದರೆ ಅವು ಉತ್ತಮ ಸ್ಥಿತಿಯಲ್ಲಿರಬೇಕು ಎನ್ನುವುದು ಮುಖ್ಯ. ಮುರಿದ ಪಾತ್ರೆಗಳು ಮನೆಯಲ್ಲಿ ಬಡತನ ಮತ್ತು ನಕಾರಾತ್ಮಕತೆಯನ್ನು ತರುತ್ತವೆ. ಮುರಿದ ಪಾತ್ರೆಗಳು ಇರುವ ಮನೆಯಲ್ಲಿ ಎಂದಿಗೂ ಸಮೃದ್ಧಿ ಇರುವುದಿಲ್ಲ. ಲಕ್ಷ್ಮೀ ಆ ಮನೆಯಲ್ಲಿ ವಾಸಿಸುವುದಿಲ್ಲ.
ಪೊರಕೆ : ಅನೇಕ ಮನೆಗಳಲ್ಲಿ, ಪೊರಕೆ ಮತ್ತು ಕಸದ ಬುಟ್ಟಿಯನ್ನು ಅಡುಗೆಮನೆಯಲ್ಲಿಯೇ ಇಡಲಾಗುತ್ತದೆ. ಅಂಥಹ ತಪ್ಪನ್ನು ಮಾಡಲೇಬೇಡಿ. ಕಸದ ಬುಟ್ಟಿ ಮತ್ತು ಪೊರಕೆಯನ್ನು ಅಡುಗೆಮನೆಯ ಹೊರಗೆ ಪ್ರತ್ಯೇಕ ಸ್ಥಳದಲ್ಲಿ ಇರಿಸಬೇಕು. ಅಡುಗೆಮನೆಯಲ್ಲಿ ಕೆಲಸ ಮಾಡುವಾಗ ಹೊರಬರುವ ಕಸವನ್ನು ಹೊರಗಿನ ಕಸದ ಬುಟ್ಟಿಗೆ ಎಸೆಯಿರಿ. ಅಡುಗೆಮನೆಯನ್ನು ಯಾವಾಗಲೂ ಸ್ವಚ್ಛವಾಗಿಡಿ. ಅಡುಗೆಮನೆಯಲ್ಲಿ ಕೊಳಕು ಬಟ್ಟೆಗಳನ್ನು ಇಡಬೇಡಿ.
ಹಳಸು ಆಹಾರ ಪದಾರ್ಥಗಳು : ಹಳಸು ಆಹಾರವನ್ನು ಅಡುಗೆಮನೆಯಲ್ಲಿ ಎಂದಿಗೂ ಉಳಿಯಲು ಬಿಡಬೇಡಿ. ಅವಧಿ ಮೀರಿದ ದಿನಸಿ ಸಾಮಾನುಗಳನ್ನು ಅಡುಗೆ ಮನೆಯಿಂದ ಹಿರಗೆ ಹಾಕಿ. ಕಾಲಕಾಲಕ್ಕೆ ಅಡುಗೆಮನೆಯ ವಸ್ತುಗಳನ್ನು ಪರಿಶೀಲಿಸುತ್ತಿರಿ ಮತ್ತು ಹಾಳಾದ ವಸ್ತುಗಳನ್ನು ಹೊರಗೆ ಎಸೆಯುತ್ತಿರಿ. ಇಲ್ಲದಿದ್ದರೆ, ರೋಗಗಳು ಮನೆಯಲ್ಲಿ ಶಾಶ್ವತವಾಗಿ ನೆಲೆಗೊಳ್ಳುತ್ತವೆ.