)
ಬೆಂಗಳೂರು : ವಾಸ್ತು ಶಾಸ್ತ್ರದಲ್ಲಿ ಅನೇಕ ನಿಯಮಗಳನ್ನು ಹೇಳಲಾಗಿದೆ. ಈ ನಿಯಮಗಳನ್ನು ಸರಿಯಾಗಿ ಪಾಲಿಸಿದರೆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಯಾಗುವುದು. ಅದೇ ವಾಸ್ತು ನಿಯಮಗಳನ್ನು ನಿರ್ಲಕ್ಷಿಸುವುದರಿಂದ ಮನೆಯ ಸಂತೋಷ, ಶಾಂತಿ ಮತ್ತು ಸಮೃದ್ಧಿ ಕ್ಷೀಣಿಸುತ್ತಾ ಹೋಗುವುದು. ವಾಸ್ತು ಶಾಸ್ತ್ರದಲ್ಲಿ ದೇವರ ಕೋಣೆಯ ನಿಯಮಗಳನ್ನು ಕೂಡಾ ಹೇಳಲಾಗಿದೆ. ದೇವರ ಕೋಣೆಯಲ್ಲಿ ತಿಳಿದೋ ತಿಳಿಯದೆಯೋ ಮಾಡಿದ ತಪ್ಪುಗಳು ವಾಸ್ತು ದೋಷಕ್ಕೆ ಕಾರಣವಾಗುತ್ತವೆ.
ದೇವರ ಕೋಣೆ ವಾಸ್ತು :
ಮನೆಯಲ್ಲಿರುವ ದೇವರ ಕೋಣೆಯಲ್ಲಿ ವಾಸ್ತು ದೋಷಗಳಿದ್ದರೆ ಆ ಮನೆ ಎಂದಿಗೂ ಅಭಿವೃದ್ದಿಯಾಗುವುದಿಲ್ಲ.ತಪ್ಪು ದಿಕ್ಕಿನಲ್ಲಿ ನಿರ್ಮಿಸಲಾದ ದೇವರ ಕೋಣೆ, ದೇವರ ಕೋಣೆಯಲ್ಲಿ ಇರಿಸಲಾಗಿರುವ ವಿಗ್ರಹಗಳು, ವಸ್ತುಗಳು, ಪೂಜಾ ಕೋಣೆಯ ಸ್ಥಳ ಇವುಗಳನ್ನು ವಾಸ್ತು ನಿಯಮದಲ್ಲಿ ಹೇಳಲಾಗಿದೆ.
- ದಕ್ಷಿಣ ದಿಕ್ಕಿನಲ್ಲಿ ನಿರ್ಮಿಸಲಾದ ದೇವರ ಕೋಣೆ ಭಯಾನಕ ವಾಸ್ತು ದೋಷವನ್ನು ಉಂಟುಮಾಡುತ್ತದೆ. ಏಕೆಂದರೆ ದಕ್ಷಿಣ ದಿಕ್ಕು ಯಮರಾಜ ಮತ್ತು ಪೂರ್ವಜರ ದಿಕ್ಕು. ಹಾಗಾಗಿ ಈ ದಿಕ್ಕಿನಲ್ಲಿ ದೇವರ ಕೋಣೆ ಇರಲೇಬಾರದು. ಇದು ಮನೆ ಮತ್ತು ಕುಟುಂಬಕ್ಕೆ ತೊಂದರೆ ಉಂಟು ಮಾಡಬಹುದು.
- ದೇವಸ್ಥಾನದಲ್ಲಿ ಪೂರ್ವಜರ ಫೋಟೋಗಳನ್ನು ಎಂದಿಗೂ ಇಡಬಾರದು. ದೇವರ ಜೊತೆಗೆ ಪೂರ್ವಜರ ಫೋಟೋಗಳನ್ನು ಇಡುವುದರಿಂದ ದೊಡ್ಡ ವಾಸ್ತು ದೋಷ ಉಂಟಾಗುತ್ತದೆ. ಅದು ಬಡತನ ಮತ್ತು ದುಃಖ ಸೇರಿದಂತೆ ಅನೇಕ ತೊಂದರೆಗಳನ್ನು ತರುತ್ತದೆ.
- ದೇವರು ಮತ್ತು ದೇವತೆಗಳ ಮುರಿದ ಮೂರ್ತಿಗಳು ಮತ್ತು ಹರಿದ ಫೋಟೋಗಳನ್ನು ಇಟ್ಟುಕೊಳ್ಳುವುದೆಂದರೆ ನಿಮ್ಮ ಸ್ವಂತ ಕೈಗಳಿಂದ ದುರದೃಷ್ಟವನ್ನು ಆಹ್ವಾನಿಸಿದಂತೆ. ಗಾಜು ಅಥವಾ ಪ್ಲಾಸ್ಟಿಕ್ನಿಂದ ಮಾಡಿದ ವಿಗ್ರಹಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಡಿ. ದೇವರು ಮತ್ತು ದೇವತೆಗಳ ವಿಗ್ರಹಗಳನ್ನು ಜೇಡಿಮಣ್ಣು, ಚಿನ್ನ, ಬೆಳ್ಳಿ, ಹಿತ್ತಾಳೆ ಅಥವಾ ಅಷ್ಟಧಾತುಗಳಿಂದ ಮಾಡಿರಬೇಕು.
- ಮನೆಯಲ್ಲಿ ದೇವರ ಮಂಟಪವನ್ನು ನೆಲದ ಮೇಲೆ ಇಡಬಾರದು. ಮಂಟಪವನ್ನು ಯಾವಾಗಲೂ ಎತ್ತರದ ಸ್ಥಳದಲ್ಲಿಡಬೇಕು.
- ಶೌಚಾಲಯ ಅಥವಾ ಮಲಗುವ ಕೋಣೆಯ ಬಳಿ ದೇವರ ಕೋಣೆ ಇರಬಾರದು. ಈ ತಪ್ಪು ಇಡೀ ಕುಟುಂಬದ ಸಂತೋಷದ ಮೇಲೂ ಪರಿಣಾಮ ಬೀರುತ್ತದೆ.
- ಮನೆಯಲ್ಲಿ ದೇವರು ಮತ್ತು ದೇವತೆಗಳ ಉಗ್ರ ರೂಪದ ವಿಗ್ರಹಗಳು ಅಥವಾ ಫೋಟೋಗಳನ್ನು ಯಾವತ್ತೂ ಇಡಬೇಡಿ. ಸೌಮ್ಯ ಭಂಗಿಗಳಲ್ಲಿ ಇರುವ ದೇವರ ಫೋಟೋವನ್ನು ಮಾತ್ರ ದೇವರ ಕೋಣೆಯಲ್ಲಿ ಇಡಬೇಕು. ಶನಿದೇವರ ವಿಗ್ರಹವನ್ನು ಮನೆಯಲ್ಲಿ ಇಡಬಾರದು.
- ದೇವರ ಕೋಣೆ ಬಳಿ ಶೂ, ಚಪ್ಪಲಿಗಳು, ಪೊರಕೆ, ಕಸದ ಬುಟ್ಟಿ ಮುಂತಾದ ಅಶುದ್ಧ ವಸ್ತುಗಳನ್ನು ಇಡಬೇಡಿ.
- ದೇವಸ್ಥಾನದಲ್ಲಿ ಹರಿದ ಧಾರ್ಮಿಕ ಪುಸ್ತಕಗಳನ್ನು ಇಡಬೇಡಿ. ಬೆಂಕಿಕಡ್ಡಿ, ಕತ್ತರಿ ಮುಂತಾದ ಚೂಪಾದ ವಸ್ತುಗಳನ್ನು ಕೂಡ ದೇವಸ್ಥಾನದಲ್ಲಿ ಇಡಬಾರದು.
- ದೇವರ ಕೋಣೆಯಲ್ಲಿ ಎಂದಿಗೂ ಕೊಳಕು ಉಳಿಯಲು ಬಿಡಬೇಡಿ. ದೇವರ ಕೋಣೆ ಯಾವಾಗಲೂ ಸ್ವಚ್ಛ ಮತ್ತು ಶುದ್ಧವಾಗಿರುವಂತೆ ನೋಡಿಕೊಳ್ಳಿ.
(ಸೂಚನೆ :ಈ ಲೇಖನವನ್ನು ಸಾಮಾನ್ಯ ಮಾಹಿತಿ ಮಾತು ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ