ನಿಮ್ಮ ಬ್ಯಾಗ್‌ನಲ್ಲಿರುವ ಈ ವಸ್ತುಗಳೇ ನಿಮ್ಮ ಪ್ರಗತಿಗೆ ಮುಳ್ಳಾಗುವುದು !ವೃತ್ತಿ ಜೀವನದ ಓಟದಲ್ಲಿ ಹಿಂದಕ್ಕೆ ಬೀಳಲು ಕಾರಣವಾಗಬಹುದು !

ನೀವು ಕಷ್ಟಪಟ್ಟು ಕೆಲಸ ಮಾಡುತ್ತಿದ್ದರೂ ನಿಮ್ಮ ವೃತ್ತಿಜೀವನದಲ್ಲಿ ಬಡ್ತಿಗಾಗಿ ಹಂಬಲಿಸುತ್ತಿದ್ದರೆ, ನಿಮ್ಮ ಆಫೀಸ್ ಬ್ಯಾಗ್ ಅನ್ನು ಪರಿಶೀಲಿಸಬೇಕು. ನಕಾರಾತ್ಮಕತೆಯನ್ನು ಉಂಟುಮಾಡುವ 3 ವಸ್ತುಗಳು ನಿಮ್ಮ ಬ್ಯಾಗ್ ನಲ್ಲಿ ಇರುವುದೇ ಇದಕ್ಕೆ ಕಾರಣವಾಗಿರಬಹುದು.  

Written by - Ranjitha R K | Last Updated : Jun 19, 2025, 06:50 PM IST
  • ಪ್ರತಿಯೊಬ್ಬರೂ ವೃತ್ತಿಜೀವನದಲ್ಲಿ ಮುಂದುವರಿಯಲು ತಮ್ಮದೇ ಆದ ಮಟ್ಟದಲ್ಲಿ ಶ್ರಮಿಸುತ್ತಾರೆ.
  • ಅನೇಕ ಜನರು ತಮ್ಮ ಜೀವನದುದ್ದಕ್ಕೂ ಬಡ್ತಿಗಾಗಿ ಕಾಯುತ್ತಲೇ ಇರುತ್ತಾರೆ
  • ಜ್ಯೋತಿಷ್ಯ ನಿಯಮಗಳನ್ನು ಸರಿಯಾಗಿ ಪಾಲಿಸದೇ ಇರುವುದೇ ಅವರ ಈ ಸಮಸ್ಯೆಗೆ ಕಾರಣವಾಗಿರಬಹುದು.
ನಿಮ್ಮ ಬ್ಯಾಗ್‌ನಲ್ಲಿರುವ ಈ ವಸ್ತುಗಳೇ ನಿಮ್ಮ ಪ್ರಗತಿಗೆ ಮುಳ್ಳಾಗುವುದು !ವೃತ್ತಿ ಜೀವನದ ಓಟದಲ್ಲಿ ಹಿಂದಕ್ಕೆ ಬೀಳಲು ಕಾರಣವಾಗಬಹುದು !

ಪ್ರತಿಯೊಬ್ಬರೂ ವೃತ್ತಿಜೀವನದಲ್ಲಿ ಮುಂದುವರಿಯಲು ತಮ್ಮದೇ ಆದ ಮಟ್ಟದಲ್ಲಿ ಶ್ರಮಿಸುತ್ತಾರೆ. ಮೇಲಾಧಿಕಾರಿಗಳಿಂದ ಪ್ರಶಂಸೆ ಪಡೆಯುವುದು  ಬೇಗನೆ ಬಡ್ತಿ ಹೊಂದುವುದು ಪ್ರತಿಯೊಬ್ಬನ ಮನದ ಆಸೆಯಾಗಿರುತ್ತದೆ. ಆದರೆ ಎಲ್ಲರ ಈ ಆಸೆ ಈಡೇರುವುದಿಲ್ಲ. ಅನೇಕ ಜನರು ತಮ್ಮ ಜೀವನದುದ್ದಕ್ಕೂ ಬಡ್ತಿಗಾಗಿ ಕಾಯುತ್ತಲೇ ಇರುತ್ತಾರೆ.ಕೆಲವೊಮೆ ವ್ಯಕ್ತಿಯ ಪರಿಶ್ರಮದಲ್ಲಿ ಯಾವುದೇ ರೀತಿಯ ಕೊರತೆ ಇರುವುದಿಲ್ಲ. ಆದರೂ ನಿರೀಕ್ಷಿಸಿದ ಯಶಸ್ಸು ಸಿಗುವುದಿಲ್ಲ.ಆದರೆ ಜ್ಯೋತಿಷ್ಯ ನಿಯಮಗಳನ್ನು ಸರಿಯಾಗಿ ಪಾಲಿಸದೇ ಇರುವುದೇ ಅವರ ಈ ಸಮಸ್ಯೆಗೆ ಕಾರಣವಾಗಿರಬಹುದು. 

Add Zee News as a Preferred Source

ಆಫೀಸ್ ಬ್ಯಾಗ್‌ನಲ್ಲಿ ಕೆಲವೊಂದು ವಸ್ತುಗಳನ್ನು ಇಟ್ಟುಕೊಂಡಿದ್ದರೆ ಅದು ನಮ್ಮ ಪ್ರಗತಿಗೆ ಮುಳ್ಳಾಗುತ್ತದೆ. ಹಾಗಾಗಿ ನಮ್ಮ ವೃತ್ತಿ ಜೀವನದಲ್ಲಿ ಬಹಳ ಬೇಗನೆ ಪ್ರಗತಿ ಸಾಧಿಸಬೇಕು ಎಂದಾದರೆ ಕೆಳಗಿನ ಮೂರು ವಸ್ತುಗಳನ್ನು ಯಾವುದೇ ಕಾರಣಕ್ಕೂ ಬ್ಯಾಗ್ ನಲ್ಲಿ ಇಟ್ಟುಕೊಳ್ಳಬಾರದು.  

ಇದನ್ನೂ ಓದಿ : ಹೊಸ ಪೊರಕೆ ಖರೀದಿಸಿದ ನಂತರ ಹಳೆಯ ಪೊರಕೆಯನ್ನು ಎಸೆಯಬೇಡಿ..! ಇದೇ ನಿಮ್ಮ ಕಷ್ಟಕ್ಕೆ ಕಾರಣ.. ಹೇಗೆ ಗೊತ್ತೆ..?

ವೈಯಕ್ತಿಕ ನೈರ್ಮಲ್ಯ ಉತ್ಪನ್ನಗಳು : 
ಜ್ಯೋತಿಷ್ಯದ ಪ್ರಕಾರ, ಯಾವುದೇ ರೀತಿಯ ವೈಯಕ್ತಿಕ ನೈರ್ಮಲ್ಯ ಉತ್ಪನ್ನಗಳನ್ನು ಆಫೀಸ್ ಬ್ಯಾಗ್‌ನಲ್ಲಿ ಇಟ್ಟುಕೊಳ್ಳಬಾರದು. ಬಾಚಣಿಗೆ, ಹಲ್ಲುಜ್ಜುವ ಬ್ರಷ್ ಅಥವಾ ಇತರ ವೈಯಕ್ತಿಕ ವಸ್ತುಗಳನ್ನು ಆಫೀಸ್ ಬ್ಯಾಗ್‌ನಲ್ಲಿ ಇಟ್ಟುಕೊಳ್ಳುವ ಹವ್ಯಾಸವನ್ನು ಹೊಂದಿದ್ದರೆ, ಅದನ್ನು ತಕ್ಷಣ ಬದಲಾಯಿಸಿಕೊಳ್ಳಿ. ಇದು ನಿಮಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ಅಂಥಹ ವಸ್ತುಗಳಿಂದ ಹೊರಸೂಸುವ ಶಕ್ತಿಯು ನಿಮ್ಮ ಕಾರ್ಯಗಳು ಮತ್ತು ನಡವಳಿಕೆಯ ಮೇಲೆ ಪರಿಣಾಮ ಬೀರುತ್ತದೆ. ಇದು ನಿಮ್ಮ ವೃತ್ತಿಜೀವನದ ಮೇಲೆ ಪರಿಣಾಮ ಬೀರುತ್ತದೆ. 

ಚಾಕು ಮತ್ತು ನೈಲ್ ಕಟ್ಟರ್ : 
ಕೆಲವು ಹುಡುಗಿಯರು, ತಮ್ಮ ಆಫೀಸ್ ಬ್ಯಾಗ್‌ನಲ್ಲಿ ಸಣ್ಣ ಚಾಕು ಅಥವಾ ನೈಲ್ ಕಟ್ಟರ್ ಅನ್ನು ತೆಗೆದುಕೊಂಡು ಹೋಗುತ್ತಾರೆ. ವಾಸ್ತು ನಿಯಮಗಳ ದೃಷ್ಟಿಕೋನದಿಂದ, ಹೀಗೆ ಮಾಡುವುದು ತಪ್ಪು ಎಂದು ಹೇಳಲಾಗುತ್ತದೆ. ಬ್ಯಾಗ್‌ನಲ್ಲಿ ಇರಿಸಲಾಗಿರುವ ಈ ವಸ್ತುಗಳು ನಕಾರಾತ್ಮಕತೆಯನ್ನು ಉಂಟು ಮಾಡುತ್ತದೆ. ಇದು ಸಂಬಂಧಗಳ ಅಂತ್ಯಕ್ಕೆ ಕಾರಣವಾಗುತ್ತವೆ. ಅಲ್ಲದೆ ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ವಾದ ವಿವಾದಕ್ಕೂ ಕಾರಣವಾಗುತ್ತದೆ. ಇದರಿಂದಾಗಿ ನಿಮ್ಮ ಪ್ರಗತಿ ನಿಲ್ಲುತ್ತದೆ. 

ಇದನ್ನೂ ಓದಿ :  ಮಹಾವಿಷ್ಣು ಪ್ರತಿರೂಪದಂತಿರುವ ಈ ವಿಶೇಷ ವಸ್ತುವನ್ನು ದೇವರ ಕೋಣೆಯಲ್ಲಿಟ್ಟರೆ ಸಾಕು... ಆ ಮನೆಯಲ್ಲಿ ಶುಕ್ರದೆಸೆ ತುಂಬಿ ಸಂಪತ್ತು ಉಕ್ಕಿಬರುವುದು

ಕೊಳಕು ಬಟ್ಟೆಗಳು :
ಜ್ಯೋತಿಷ್ಯದ ಪ್ರಕಾರ, ಅಪ್ಪಿ ತಪ್ಪಿಯೂ ಆಫೀಸ್ ಬ್ಯಾಗಿನಲ್ಲಿ ಕೊಳಕು ಬಟ್ಟೆಗಳನ್ನು ಇಟ್ಟುಕೊಳ್ಳಬಾರದು. ಈ ಅಭ್ಯಾಸವು ನಿಮಗೆ ಹಾನಿ ಮಾಡಬಹುದು. ಈ ಕೊಳಕು ಬಟ್ಟೆಗಳು ನಕಾರಾತ್ಮಕ ಶಕ್ತಿಯನ್ನು ಹೊರಸೂಸುತ್ತವೆ. ಇದು ನಿಮ್ಮಲ್ಲಿ ಕಿರಿಕಿರಿ, ಕೋಪ ಮತ್ತು ಆಯಾಸವನ್ನು ತರುತ್ತದೆ. ಇದರಿಂದಾಗಿ, ಕಚೇರಿಯಲ್ಲಿ ಕೆಲಸ ಮಾಡಲು ಇಷ್ಟವಾಗುವುದಿಲ್ಲ. ಹಾಗಾಗಿ ನೀವು ಪದೇ ಪದೇ ರಜೆ ಹಾಕುತ್ತಾ ಇರುತ್ತೀರಿ. ಇದರಿಂದಾಗಿ ವೃತ್ತಿಜೀವನದ ಓಟದಲ್ಲಿಯೂ ನೀವು ಹಿಂದೆ ಬೀಳುತ್ತೀರಿ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

(ಸೂಚನೆ : ಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢೀಕರಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News