)
ವ್ಯಕ್ತಿಯ ವ್ಯಕ್ತಿತ್ವವನ್ನು ರಾಶಿ ಮತ್ತು ಜನ್ಮ ದಿನಾಂಕದ ಪ್ರಕಾರ ತಿಳಿಯಬಹುದಾಗಿದೆ. ವ್ಯಕ್ತಿಯ ವ್ಯಕ್ತಿತ್ವ ಮತ್ತು ಭವಿಷ್ಯದ ಬಗ್ಗೆ ಅವರು ವಾರದ ಯಾವ ದಿನ ಜನಿಸಿದ್ದಾರೆ ಎನ್ನುವ ಮೂಲಕವೂ ತಿಳಿದುಕೊಳ್ಳಬಹುದು.
ಸೋಮವಾರ: ಸೋಮವಾರ ಶಿವ ಮತ್ತು ಚಂದ್ರನಿಗೆ ಸಂಬಂಧಿಸಿದ್ದಾಗಿದೆ. ಚಂದ್ರನು ಮನಸ್ಸಿನ ಅಂಶವಾಗಿದ್ದು, ಈ ದಿನದಂದು ಜನಿಸಿದ ಜನರ ಮೇಲೆ ಅದರ ಪರಿಣಾಮ ಕಂಡುಬರುತ್ತದೆ. ಈ ಜನರು ಹರ್ಷಚಿತ್ತದಿಂದ ಇರುತ್ತಾರೆ. ಶೀತ ಮತ್ತು ಕೆಮ್ಮಿನ ಸಮಸ್ಯೆ ಇವರನ್ನು ಆಗಾಗ ಬಾಧಿಸುತ್ತದೆ.
ಮಂಗಳವಾರ: ಮಂಗಳವಾರ ಹನುಮಾನ್ ಮತ್ತು ಮಂಗಳ ಗ್ರಹಕ್ಕೆ ಸಂಬಂಧಿಸಿದೆ. ಮಂಗಳವಾರ ಜನಿಸಿದ ಜನರಿಗೆ ಹನುಮಾನ್ ದೇವರ ವಿಶೇಷ ಆಶೀರ್ವಾದವಿದೆ. ಮಂಗಳ ಗ್ರಹದ ಪ್ರಭಾವದಿಂದಾಗಿ, ಅವರಿಗೆ ಅತಿಯಾಗಿ ಕೋಪ ಬರುವುದು. ಕೆಲವೊಮ್ಮೆ ಇವರನ್ನು ನಿಯಂತ್ರಿಸುವುದು ಕಷ್ಟವಾಗುವುದು. ಒಳ್ಳೆಯ ವಿಷಯವೆಂದರೆ ಈ ಜನರು ಶುದ್ಧ ಮನಸ್ಸನ್ನು ಹೊಂದಿರುತ್ತಾರೆ.
ಬುಧವಾರ: ಬುಧವಾರ ಗಣೇಶ ಮತ್ತು ಬುಧ ಗ್ರಹಕ್ಕೆ ಸಂಬಂಧಿಸಿದೆ. ಬುಧದ ಪ್ರಭಾವದಿಂದಾಗಿ, ಇವರು ಬುದ್ಧಿವಂತರು, ತೀಕ್ಷ್ಣವಾದ ಸ್ಮರಣೆಯನ್ನು ಹೊಂದಿರುತ್ತಾರೆ. ಮಾತನಾಡುವುದರಲ್ಲಿ ನಿಪುಣರು. ಇವರು ವ್ಯಾಪಾರ ಮಾಡಿದರೆ, ತುಂಬಾ ಯಶಸ್ವಿಯಾಗುತ್ತಾರೆ. ಇವರು ಅದೃಷ್ಟವಂತರು. ಅತಿ ಚಿಕ್ಕ ವಯಸ್ಸಿನಲ್ಲಿಯೇ ಶ್ರೀಮಂತರಾಗುತ್ತಾರೆ. ಅವರು ಸಂತೋಷದ ಜೀವನವನ್ನು ನಡೆಸುತ್ತಾರೆ.
ಗುರುವಾರ: ಗುರುವಾರ ಜನಿಸಿದವರಿಗೆ ಗುರು ಮತ್ತು ವಿಷ್ಣು ದೇವರು ಆಶೀರ್ವಾದ ಮಾಡುತ್ತಾರೆ. ಇವರು ಜನ್ಮದಿಂದಲೇ ಅದೃಷ್ಟವಂತರು. ಗುರುವಿನ ಕೃಪೆಯಿಂದ ಅದೃಷ್ಟ ಇವರ ಜೊತೆಗೆ ಇರುವುದು. ಇವರು ಸಂತೋಷ, ಸಂಪತ್ತು ಮತ್ತು ಸಂತೋಷದ ದಾಂಪತ್ಯ ಜೀವನವನ್ನು ಅನುಭವಿಸುತ್ತಾರೆ.
ಶುಕ್ರವಾರ: ಶುಕ್ರವಾರ ಜನಿಸಿದವರನ್ನು ತುಂಬಾ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿ ದೇವಿಯ ದಯೆ ಇವರ ಮೇಲೆ ಹೆಚ್ಚೇ ಇರುತ್ತದೆ. ಶುಕ್ರನ ಕೃಪೆಯಿಂದ ಇವರು ಆಕರ್ಷಕ ಮತ್ತು ಸುಂದರವಾಗಿರುತ್ತಾರೆ. ಅಪಾರ ಸಂಪತ್ತಿನ ಮಾಲೀಕರಾಗುತ್ತಾರೆ.
ಶನಿವಾರ: ಶನಿವಾರ ಶನಿ ದೇವರು ಮತ್ತು ಶನಿ ಗ್ರಹಕ್ಕೆ ಸಂಬಂಧಿಸಿದೆ. ಶನಿವಾರ ಜನಿಸಿದವರು ಅತ್ಯಂತ ಪ್ರಾಮಾಣಿಕರು, ಕಠಿಣ ಪರಿಶ್ರಮಿಗಳು ಮತ್ತು ನ್ಯಾಯ ಪ್ರಿಯರು. ಇವರು ಜೀವನದಲ್ಲಿ ಪ್ರತಿಯೊಂದಕ್ಕೂ ಹೋರಾಡಬೇಕಾಗುತ್ತದೆ. ಆದರೆ ಜೀವನದ ಎರಡನೇ ಹಂತದಲ್ಲಿ ಸಂಪತ್ತು ಮತ್ತು ಗೌರವ ಎರಡನ್ನೂ ಪಡೆಯುತ್ತಾರೆ.
ಭಾನುವಾರ: ಭಾನುವಾರ ಸೂರ್ಯ ದೇವರು ಮತ್ತು ಸೂರ್ಯ ಗ್ರಹದ ದಿನ. ಭಾನುವಾರ ಹುಟ್ಟಿದವರು ಅತಿಯಾದ ಆತ್ಮವಿಶ್ವಾಸ ಉಳ್ಳವರಾಗಿರುತ್ತಾರೆ. ಉನ್ನತ ಸ್ಥಾನಗಳನ್ನು ಪಡೆಯುತ್ತಾರೆ. ಅವರು ಖ್ಯಾತಿಯನ್ನು ಪಡೆಯುತ್ತಾರೆ. ರಾಜಕೀಯ ಮತ್ತು ಆಡಳಿತದಲ್ಲಿ ಉತ್ತಮ ಹೆಸರನ್ನು ಗಳಿಸುತ್ತಾರೆ.
( ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ, ಜೀ ನ್ಯೂಸ್ ಕನ್ನಡ ಇದನ್ನು ಅನುಮೊದಿಸುವುದಿಲ್ಲ.)