Gemology: ರತ್ನ ಶಾಸ್ತ್ರದಲ್ಲಿ 9 ರತ್ನಗಳನ್ನು ಉಲ್ಲೇಖಿಸಲಾಗಿದೆ.ಪ್ರತಿಯೊಂದು ರತ್ನವು ಒಂದೊದು ಗ್ರಹಕ್ಕೆ ಸಂಬಂಧಿಸಿದೆ.ಈ ರತ್ನಗಳನ್ನು ಧರಿಸಿದರೆ ನಿಮ್ಮ ಜಾತಕದಲ್ಲಿ ಗ್ರಹಗಳ ಸ್ಥಾನವು ಬಲಗೊಳ್ಳುತ್ತದೆ.ಇಂದು ನಾವು ನಿಮಗೆ ಅಮೂಲ್ಯ  ರತ್ನವಾದ ವಜ್ರದ ಬಗ್ಗೆ ಹೇಳಲಿದ್ದೇ ವೆ.ವಜ್ರದ ಸೌಂದರ್ಯ ಮತ್ತು ಹೊಳಪನ್ನು ಜನರು ತುಂಬಾ ಇಷ್ಟಪಡುತ್ತಾರೆ.ಆದರೆ ರತ್ನಶಾಸ್ತ್ರದ ಪ್ರಕಾರ,ಎಲ್ಲರೂ ವಜ್ರವನ್ನು ಧರಿಸುವಂತಿಲ್ಲ.ರಾಶಿಗನುಗುಣವಾಗಿ ಕೆಲವರಿಗೆ ವಜ್ರ ಶುಭವಾದರೆ ಇನ್ನು ಕೆಲವರಿಗೆ ಇದು ದುರಾದೃಷ್ಟವನ್ನು ತರುತ್ತದೆ. ವಜ್ರವನ್ನು ಧರಿಸುವುದರಿಂದ ಎಲ್ಲರಿಗೂ ಶುಭ ಫಲ ಸಿಗುವುದಿಲ್ಲ.ವಜ್ರವನ್ನು ಧರಿಸುವ ಮೊದಲು,ಕೆಲವು ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಅನುಸರಿಸಬೇಕು. 


COMMERCIAL BREAK
SCROLL TO CONTINUE READING

ವಜ್ರವು ಯಾರಿಗೆ ಶುಭ? :
ಜ್ಯೋತಿಷ್ಯದ ಪ್ರಕಾರ, ವಜ್ರವು ಶುಕ್ರ ಗ್ರಹವನ್ನು ಪ್ರತಿನಿಧಿಸುತ್ತದೆ.ವೃಷಭ, ಮಿಥುನ,ಕನ್ಯಾ, ತುಲಾ ಮತ್ತು ಕುಂಭ ರಾಶಿಯವರಿಗೆ ವಜ್ರವನ್ನು ಧರಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ.ಇದಲ್ಲದೆ, ನಿಮ್ಮ ಜಾತಕದಲ್ಲಿ ಶುಕ್ರ ಯೋಗಕಾರಕನಾಗಿದ್ದರೆ ವಜ್ರವು ನಿಮಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. 


ಇದನ್ನೂ ಓದಿ : Buddha Purnima 2024: ಬುದ್ಧ ಪೂರ್ಣಿಮೆಯಂದು ಮಹಾ ಯೋಗ ನಿರ್ಮಾಣ, ಈ ರಾಶಿಯವರಿಗೆ ಸಂಪತ್ತಿನ ಸುರಿಮಳೆ


ಯಾವ ರಾಶಿಯವರು ವಜ್ರವನ್ನು ಧರಿಸಬಾರದು? :
ಯಾವುದೇ ರತ್ನವನ್ನು ಧರಿಸುವ ಮೊದಲು,ಜಾತಕದಲ್ಲಿ ಇರುವ ಗ್ರಹಗಳ ಸ್ಥಾನವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.ಮೇಷ, ಮೀನ, ಕರ್ಕ ಮತ್ತು ವೃಶ್ಚಿಕ ರಾಶಿಯವರಿಗೆ ವಜ್ರವನ್ನು ಧರಿಸುವುದು ಮಂಗಳಕರವಲ್ಲ. 


ವಜ್ರವನ್ನು ಧರಿಸುವುದರಿಂದ ಆಗುವ ಲಾಭಗಳು :
- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಜ್ರವನ್ನು ಧರಿಸುವುದರಿಂದ ವ್ಯಕ್ತಿತ್ವ ವೃದ್ಧಿಯಾಗುತ್ತದೆ ಮತ್ತು ಆಕರ್ಷಣೆ ಹೆಚ್ಚಾಗುತ್ತದೆ. 
- ವೈವಾಹಿಕ ಜೀವನದ ಸುಖವನ್ನು ಹೆಚ್ಚಿಸಲು ವಜ್ರವನ್ನು ಧರಿಸಬೇಕು.  
-  ವಜ್ರ ಧರಿಸುವುದು ಮಾಧ್ಯಮ ಮತ್ತು ಫ್ಯಾಷನ್ ಡಿಸೈನಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಪ್ರಯೋಜನಕಾರಿ.
-  ವಜ್ರವನ್ನು ಧರಿಸುವುದರಿಂದ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ. 


ಇದನ್ನೂ ಓದಿ: Garuda Purana: ಗರುಡ ಪುರಾಣದ ಪ್ರಕಾರ ಸಾವು ಸಮೀಪಿಸಿದ ವ್ಯಕ್ತಿಗೆ ಈ ರೀತಿ ಅನುಭವವಾಗುತ್ತದೆ!


ವಜ್ರವನ್ನು ಹೇಗೆ ಧರಿಸುವುದು?: 
ನೀವು 0.50 ರಿಂದ 2 ಕ್ಯಾರೆಟ್ ವಜ್ರವನ್ನು ಧರಿಸಬಹುದು.ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಚಿನ್ನ ಅಥವಾ ಬೆಳ್ಳಿಯಲ್ಲಿ ಕಟ್ಟಿ ವಜ್ರವನ್ನು ಧರಿಸಬಹುದು. ಶುಕ್ಲ ಪಕ್ಷದ ಶುಕ್ರವಾರ ಸೂರ್ಯೋದಯದ ನಂತರ ವಜ್ರವನ್ನು ಧರಿಸಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews