)
shaligram near tulsi planta attract money : ತುಳಸಿ ಗಿಡವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ತುಳಸಿ ಗಿಡದ ಬಳಿ ಕೆಲವು ವಸ್ತುಗಳನ್ನು ಇಟ್ಟುಕೊಳ್ಳುವುದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.
ತುಳಸಿಗೆ ಹಿಂದೂ ಧರ್ಮದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಇದೆ. ತುಳಸಿ ಸಸ್ಯವನ್ನು ಅತ್ಯಂತ ಪವಿತ್ರ ಮತ್ತು ಪೂಜ್ಯವೆಂದು ಪರಿಗಣಿಸಲಾಗಿದೆ. ಆರ್ಥಿಕ ಲಾಭವನ್ನು ಗಳಿಸಲು ತುಳಸಿ ಗಿಡದ ಹತ್ತಿರ ಕೆಲವು ವಸ್ತುಳನ್ನು ಇಡಬೇಕು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತುಳಸಿ ಗಿಡದ ಬಳಿ ಯಾವಾಗಲೂ ಹಿತ್ತಾಳೆಯ ಪಾತ್ರೆ ಇಡಬೇಕು. ಇದು ಮನೆಯಲ್ಲಿ ಸಕಾರಾತ್ಮಕತೆಯನ್ನು ತರುತ್ತದೆ ಮತ್ತು ದುಷ್ಟ ಶಕ್ತಿಗಳನ್ನು ಓಡಿಸುತ್ತದೆ.
ಸಾಲಿಗ್ರಾಮವನ್ನು ತುಳಸಿ ಗಿಡದ ಬಳಿ ಅಥವಾ ತುಳಸಿ ಗಿಡದ ಕುಂಡಲದಲ್ಲಿ ಇಡಬೇಕು. ಇದು ಸಂಪತ್ತನ್ನು ವೃದ್ಧಿಸುತ್ತದೆ.
ತುಳಸಿ ಬಳಿ ಮಣ್ಣಿನ ದೀಪವನ್ನು ಹಚ್ಚುವುದು ಸಕಲ ಪಾಪಗಳನ್ನು ಪರಿಹರಿಸುತ್ತದೆ. ಜೀವನದಲ್ಲಿ ಬರುವ ಎಲ್ಲಾ ಅಡೆತಡೆಗಳನ್ನು ನಿವಾರಿಸುತ್ತದೆ.
ಕೆಂಪು ಬಟ್ಟೆಯನ್ನು ತುಳಸಿ ಮೇಲೆ ಹೊದಿಸಿ ಅಥವಾ ಅದರ ಬಳಿ ಇಡಿ. ಇದರಿಂದ ಅದೃಷ್ಟ ಒಲಿಯುತ್ತದೆ. ತುಳಸಿ ಒಂದು ಸಸ್ಯ ಮಾತ್ರವಲ್ಲದೆ ದೇವತೆಯೂ ಹೌದು.
ಸೂಚನೆ: ಈ ಲೇಖನವು ಧಾರ್ಮಿಕ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.