)
Nava Panchama Raja Yoga Prabhav on Zodiac Signs: ವಿಜಯದಶಮಿ ದಿನವೇ ವೃತ್ತಿ-ವ್ಯವಹಾರದ ಅಂಶನಾದ ಬುಧ, ಜ್ಞಾನ ಸಂಪತ್ತಿನ ಗ್ರಹವಾದ ಗುರು, ಐಶಾರಾಮಿ ಜೀವನದ ಅಂಶನಾಗಿರುವ ಶುಕ್ರರ ಸಂಯೋಗದಿಂದ ಅತ್ಯಂತ ಶಕ್ತಿಶಾಲಿ ನವಪಂಚಮ ರಾಜಯೋಗ ನಿರ್ಮಾಣವಾಗಿದೆ. ಬರೋಬ್ಬರಿ 62 ವರ್ಷಗಳ ಬಳಿಕ ದಸರಾ ದಿನವೇ ಅಪರೂಪದ ನವಪಂಚಮ ರಾಜಯೋಗ ರೂಪುಗೊಂಡಿದ್ದು ಇದರ ಪ್ರಭಾವದಿಂದಾಗಿ ಆರು ರಾಶಿಯವರ ಬದುಕಿನಲ್ಲಿ ಸಾಕ್ಷಾತ್ ಮಹಾಲಕ್ಷ್ಮಿಯ ಕೃಪೆ ಇರಲಿದ್ದು, ಕುಬೇರನ ಸಂಪತ್ತೇ ಕೈ ಸೇರಲಿದೆ. ಅವರ ಜೀವನದಲ್ಲಿ ರಾಜವೈಭೋಗದ ಜೀವನವನ್ನು ಅನುಭವಿಸುವರು ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
ಸಿಂಹ ರಾಶಿ:
ನವಪಂಚಮ ರಾಜಯೋಗವು ಈ ರಾಶಿಯವರಿಗೆ ಹಿಂದೆ ಮಾಡಿದ ಹೂಡಿಕೆಗಳಿಂದ ಅಧಿಕ ಲಾಭವನ್ನು ನೀಡಲಿದೆ. ಉದ್ಯೋಗದಲ್ಲಿ ಉನ್ನತ ಅಧಿಕಾರಿಗಳಿಂದ ಬೆಂಬಲ ದೊರೆಯಲಿದ್ದು, ನಿಮ್ಮ ಕಾರ್ಯಕ್ಷಮತೆಗೆ ಮನ್ನಣೆ ಸಿಗಲಿದೆ. ಅನಿರೀಕ್ಷಿತ ಆದಾಯದಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದ್ದು ಜೀವನದಲ್ಲಿ ಸಂತೋಷದ ಕ್ಷಣಗಳು ಹೆಚ್ಚಾಗಲಿವೆ.
ಕನ್ಯಾ ರಾಶಿ:
ದಸರಾ ಬೆನ್ನಲ್ಲೇ ರಚನೆಯಾಗಿರುವ ನವಪಂಚಮ ರಾಜಯೋಗವು ಈ ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ಸುವರ್ಣ ಸಮಯವನ್ನು ತರಲಿದೆ. ವ್ಯಾಪಾರದಲ್ಲಿ ಲಾಭದ ಅವಕಾಶಗಳು ಹೆಚ್ಚಾಗಲಿವೆ. ಉದ್ಯೋಗ ಬದಲಾಯಿಸಲು ಬಯಸುತ್ತಿರುವವರಿಗೆ ಉತ್ತಮ ಸಮಯ. ಸ್ವಂತ ವ್ಯವಹಾರದಲ್ಲಿರುವವರಿಗೆ ಬಂಪರ್ ಆದಾಯ ಹರಿದುಬರಲಿದೆ. ಭೂಮಿ, ವಾಹನ ಖರೀದಿಸುವಿರಿ.
ವೃಶ್ಚಿಕ ರಾಶಿ:
62ವರ್ಷಗಳ ಬಳಿಕ ವಿಜಯದಶಮಿ ದಿನ ನಿರ್ಮಾಣವಾಗಿರುವ ವಿಶೇಷ ನವಪಂಚಮ ರಾಜಯೋಗವು ಈ ರಾಶಿಯವರ ಬದುಕಿನಲ್ಲಿ ವೃತ್ತಿ-ವೈಯಕ್ತಿಕ ಬದುಕಿನಲ್ಲಿ ಎದುರಾಗಿದ್ದ ಅಡೆತಡೆಗಳನ್ನು ನಿವಾರಿಸಲಿದೆ. ವೃತ್ತಿ ಬದುಕಿನಲ್ಲಿ ಪ್ರಗತಿಯ ಹಾದಿ ತೆರೆಯಲಿದೆ. ಉನ್ನತ ಹುದ್ದೆ ದೊರೆಯಲಿದೆ. ಶತ್ರುಗಳ ವಿರುದ್ಧ ಜಯ ಸಾಧಿಸುವಿರಿ. ಸಾಲಭಾದೆಯಿಂದ ಪರಿಹಾರ ಪಡೆಯುವಿರಿ. ಕುಬೇರನ ಸಂಪತ್ತೇ ನಿಮ್ಮ ಕೈ ಸೇರಲಿದ್ದು, ವಿದೇಶಕ್ಕೆ ಹೋಗುವ ನಿಮ್ಮ ಕನಸು ನನಸಾಗಲಿದೆ. ಮಕ್ಕಳಿಂದ ಶುಭ ಸುದ್ದಿ ನಿರೀಕ್ಷಿಸಬಹುದು.
ಧನು ರಾಶಿ:
ನವಪಂಚಮ ರಾಜಯೋಗವು ಈ ರಾಶಿಯವರಿಗೆ ವೈಯಕ್ತಿಕ ಬದುಕು ಮತ್ತು ವೃತ್ತಿಪರ ಜೀವನದಲ್ಲಿದ್ದ ಸ್ಪರ್ಧೆಗಳಲ್ಲಿ ಯಶಸ್ಸನ್ನು ನೀಡಲಿದೆ. ಹೂಡಿಕೆಯಿಂದ ಲಾಭಾಂಶಗಳು ಅಧಿಕವಾಗಲಿದೆ. ಸಾಕ್ಷಾತ್ ಲಕ್ಷ್ಮಿ ದಯೆಯಿಂದ ಆದಾಯದ ಹರಿವು ಹೆಚ್ಚಾಗಲಿದ್ದು ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ. ಸಮಾಜದಲ್ಲಿ ಕೀರ್ತಿ, ಗೌರವ ಹೆಚ್ಚಾಗಲಿದ್ದು ಉನ್ನತ ಸ್ಥಾನವನ್ನು ಪಡೆಯುವಿರಿ.
ಮಕರ ರಾಶಿ:
ನವಪಂಚಮ ರಾಜಯೋಗದಿಂದ ಈ ರಾಶಿಯವರ ಲವ್ ಲೈಫ್ ಮತ್ತು ವೈವಾಹಿಕ ಜೀವನದಲ್ಲಿ ಸಂತೋಷ ಹೆಚ್ಚಾಗಲಿದೆ. ನಿಮ್ಮ ಪ್ರೇಮ ಸಂಬಂಧಕ್ಕೆ ಮನೆಯವರ ಸಮ್ಮತಿ ದೊರೆಯಲಿದೆ. ದಾಂಪತ್ಯದಲ್ಲಿ ಸುಖ-ಸಂತೋಷ, ಸಂಪತ್ತು ವೃದ್ಧಿಯಾಗಲಿದೆ. ಭೂಮಿ ಮೇಲಿನ ಹೂಡಿಕೆಯು ಲಾಭದಾಯಕವೆಂದು ಸಾಬೀತುಪಡಿಸಲಿದೆ. ಸ್ವಂತ ವ್ಯವಹಾರ ಮಾಡುವವರಿಗೆ ವ್ಯವಹಾರ ವಿಸ್ತರಣೆಗೆ ಅತ್ಯುತ್ತಮ ಸಮಯ ಇದಾಗಿದೆ.
ಮೀನ ರಾಶಿ:
ವಿಜಯದಶಮಿಯಂದು ನಿರ್ಮಾಣವಾಗಿರುವ ಶಕ್ತಿಶಾಲಿ ನವಪಂಚಮ ರಾಜಯೋಗವು ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆಗಳಿಂದ ಹೊರಬರಲು ಸಹಕಾರಿ ಆಗಲಿದೆ. ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ಜನರ ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ಕೌಟುಂಬಿಕ ಸುಖ-ಸೌಕರ್ಯಗಳು ಹೆಚ್ಚಾಗಲಿವೆ. ವೃತ್ತಿಪರರಿಗೆ ಬಡ್ತಿ, ವೇತನ ಹೆಚ್ಚಳ ಸಂಭವವಿದೆ. ವ್ಯವಹಾರದಲ್ಲಿ ಬಂಪರ್ ಆದಾಯವನ್ನು ಕಾಣುವಿರಿ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.