)
ವೈದಿಕ ಜ್ಯೋತಿಷ್ಯದ ಪ್ರಕಾರ, ಸಂತೋಷ, ಸಮೃದ್ಧಿ ಮತ್ತು ಪ್ರೀತಿಗೆ ಕಾರಣವಾದ ಶುಕ್ರ ಮತ್ತು ಶಕ್ತಿ, ಧೈರ್ಯ ಮತ್ತು ಭೂಮಿಗೆ ಕಾರಣವಾದ ಮಂಗಳ, ಡಿಸೆಂಬರ್ 4, ಅಂದರೆ ನಾಳೆ ಬೆಳಿಗ್ಗೆ 8:34 ಕ್ಕೆ ಪ್ರಬಲವಾದ ಸಂಯೋಗವನ್ನು ರೂಪಿಸುತ್ತವೆ. ಶುಕ್ರ ಮತ್ತು ಮಂಗಳ ಗ್ರಹವು 18 ಡಿಗ್ರಿ ಕೋನದಲ್ಲಿ ಸ್ಥಾನ ಪಡೆದು "ಅಷ್ಟಾದಶ ಯೋಗ"ವನ್ನು ರೂಪಿಸುತ್ತದೆ. ಈ ಯೋಗವು ನಾಲ್ಕು ರಾಶಿಯವರ ಜೀವನದಲ್ಲಿ ಗಮನಾರ್ಹ ಆರ್ಥಿಕ ಪ್ರಯೋಜನವನ್ನು ಉಂಟು ಮಾಡುತ್ತದೆ. ವೃತ್ತಿಜೀವನದಲ್ಲಿಯೂ ಯಶಸ್ಸು ತಂದು ಕೊಡುವುದು.
ಮೇಷ ರಾಶಿ : ಮೇಷ ರಾಶಿಯವರಿಗೆ ಅಷ್ಟಾದಶ ಯೋಗವು ಅತ್ಯಂತ ಶುಭವಾಗಿರುವುದು. ಹೊಸ ಜವಾಬ್ದಾರಿಗಳು ಅಥವಾ ಕೆಲಸದಲ್ಲಿ ಹೊಸ ಸ್ಥಾನ ಸಿಗಬಹುದು. ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದು. ವ್ಯವಹಾರದಲ್ಲಿ ಲಾಭ ಮತ್ತು ಪ್ರೇಮ ಸಂಬಂಧಗಳಲ್ಲಿ ಗಾಢತೆ ಸಾಧ್ಯ. ಮನೆಯಲ್ಲಿ ಸಂತೋಷ ನೆಲೆಸುತ್ತದೆ ಮತ್ತು ಮಾನಸಿಕ ಶಾಂತಿ ಸಿಗುತ್ತದೆ.
ವೃಷಭ ರಾಶಿ : ವೃಷಭ ರಾಶಿಯವರಿಗೆ ಅಷ್ಟಾದಶ ಯೋಗದಿಂದ ಲಾಭವಾಗುವುದು. ದೇಹದಲ್ಲಿ ಹೊಸ ಶಕ್ತಿ ಹರಿಯುತ್ತದೆ. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಪ್ರೇಮ ಸಂಬಂಧಗಳು ಸುಧಾರಿಸುತ್ತವೆ. ವೃತ್ತಿಜೀವನದ ಯಶಸ್ಸು ತೆರೆದುಕೊಳ್ಳುತ್ತದೆ. ಭವಿಷ್ಯದ ಯೋಜನೆಗಳನ್ನು ಕಾರ್ಯಗತಗೊಳಿಸಲು ಇದು ಸರಿಯಾದ ಸಮಯ.
ತುಲಾ ರಾಶಿ : ತುಲಾ ರಾಶಿಯವರಿಗೆ ಶುಕ್ರ-ಮಂಗಳ ಸಂಯೋಗವು ಅತ್ಯಂತ ಶುಭಕರವಾಗಿರುವುದು. ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುತ್ತದೆ. ಬುದ್ಧಿವಂತಿಕೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯಗಳಿಂದ ವೃತ್ತಿಜೀವನದಲ್ಲಿ ಯಶಸ್ಸು ಸಿಗುವುದು. ಪ್ರಗತಿಗೆ ದಾರಿ ತೆರೆದುಕೊಳ್ಳುವುದು. ಕೆಲಸದಲ್ಲಿ ಬಡ್ತಿ ಮತ್ತು ನಿಮ್ಮ ಕೆಲಸಕ್ಕೆ ಪ್ರಶಂಸೆ ಸಾಧ್ಯ.
ಮಕರ ರಾಶಿ : ಮಕರ ರಾಶಿಯವರಿಗೆ ಈ ಸಮಯ ಪ್ರಯೋಜನಕಾರಿಯಾಗಿರುವುದು. ಆತ್ಮವಿಶ್ವಾಸ ಹೆಚ್ಚಾಗಬಹುದು. ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಈ ದಿನ ಶುಭವಾಗಿದೆ. ವೃತ್ತಿಜೀವನದಲ್ಲಿ ಹೊಸ ಎತ್ತರಕ್ಕೆ ಏರಲು ಸಹಾಯವಾಗುವುದು. ಹೆಚ್ಚಿನ ಜವಾಬ್ದಾರಿಗಳು ಹೊಸ ಅನುಭವಗಳನ್ನು ನೀಡಬಹುದು. ಸಾಮಾಜಿಕ ಗೌರವ ಹೆಚ್ಚಾಗುತ್ತದೆ. ಆದಾಯ ಹೆಚ್ಚಾಗಬಹುದು, ಇದು ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿನ ಸುಧಾರಣೆಗೆ ಕಾರಣವಾಗಬಹುದು.
(ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ. )