ನವದೆಹಲಿ: ಸನಾತನ ಧರ್ಮದಲ್ಲಿ ಋಷಿಗಳು ಮತ್ತು ಸಂತರಿಗೆ ಅತ್ಯಂತ ಉನ್ನತ ಸ್ಥಾನವನ್ನು ನೀಡಲಾಗಿದೆ. ನಿಮ್ಮಲ್ಲಿ ಹೆಚ್ಚಿನವರು ಅವರನ್ನು ನೋಡಿರುತ್ತೀರಿ. ಸಂತರು ಮತ್ತು ಋಷಿಗಳು ಏಕೆ ಕೇಸರಿ ಬಟ್ಟೆಯನ್ನು ಧರಿಸುತ್ತಾರೆ? ನಿಮ್ಮ ಮನಸ್ಸಿನಲ್ಲಿ ಯಾವತ್ತಾದರೂ ಈ ಆಲೋಚನೆ ಮೂಡಿದೆಯೇ? ಇಂದು ನಾವು ಇದರ ಹಿಂದಿನ ಕಾರಣವನ್ನು ನಿಮಗೆ ತಿಳಿಸುತ್ತೇವೆ.


COMMERCIAL BREAK
SCROLL TO CONTINUE READING

ಸಾಧುಗಳ ಕೇಸರಿ ಅಥವಾ ಕಿತ್ತಳೆ ಬಟ್ಟೆಯ ಬಗ್ಗೆ ಮಾತನಾಡುವ ಮೊದಲು, ಈ ಬಣ್ಣದ ಬಗ್ಗೆ ಜ್ಯೋತಿಷ್ಯ ತಜ್ಞರು ಏನು ಹೇಳಿದ್ದಾರೆಂದು ತಿಳಿಯುವುದು ಮುಖ್ಯ. ಕಿತ್ತಳೆ ಅಥವಾ ಕೇಸರಿ ಬಣ್ಣವು ತ್ಯಜಿಸುವಿಕೆಯ ಸಂಕೇತವಾಗಿದೆ ಎಂದು ಹೇಳಲಾಗುತ್ತದೆ. ಕಿತ್ತಳೆ ಅಥವಾ ಕೇಸರಿ ಬಣ್ಣವನ್ನು ಜೀವನದಲ್ಲಿ ಹೊಸ ಬೆಳಕು ಎಂದು ನೋಡಲಾಗುತ್ತದೆ. ಸೂರ್ಯನ ಕಿರಣಗಳು ಕೂಡ ಕೇಸರಿ ಬಣ್ಣದ್ದಾಗಿದ್ದು, ಜೀವನದಲ್ಲಿ ಹೊಸ ಉದಯವನ್ನು ತರುತ್ತವೆ ಎಂದು ನಂಬಲಾಗಿದೆ.


ಇದನ್ನೂ ಓದಿ: Vastu Tips : ಬೆಳಿಗ್ಗೆ ಎದ್ದ ತಕ್ಷಣ ಯಾವತ್ತೂ ನೋಡಬೇಡಿ ಈ ವಸ್ತುಗಳನ್ನು!


ಕೇಸರಿ ಬಣ್ಣದ ಬಟ್ಟೆ ಏಕೆ ಧರಿಸಲಾಗುತ್ತದೆ?


ನಮ್ಮ ದೇಹದಲ್ಲಿ 7 ಚಕ್ರಗಳನ್ನು ಉಲ್ಲೇಖಿಸಲಾಗಿದೆ. ಈ ಪೈಕಿ ಆಜ್ಞಾ ಚಕ್ರದ ಬಣ್ಣವನ್ನು ಕೇಸರಿ ಎಂದು ವಿವರಿಸಲಾಗಿದೆ. ಅಜ್ಞಾ ಚಕ್ರವನ್ನು ಜ್ಞಾನದ ಸಾಧನೆಯ ಸೂಚಕವೆಂದು ಪರಿಗಣಿಸಲಾಗುತ್ತದೆ ಮತ್ತು ಆಧ್ಯಾತ್ಮಿಕ ಹಾದಿಯಲ್ಲಿ ನಡೆಯುವ ಜನರು ಅತ್ಯುನ್ನತ ಚಕ್ರವನ್ನು ಪಡೆಯಲು ಕೇಸರಿ ಅಥವಾ ಕಿತ್ತಳೆ ಬಣ್ಣದ ಬಟ್ಟೆಗಳನ್ನು ಧರಿಸುತ್ತಾರೆ.


ಕೇಸರಿ ಬಟ್ಟೆ ಧರಿಸುವ ಬಗ್ಗೆ ಸಮಾಜದಲ್ಲಿ ಮತ್ತೊಂದು ರೀತಿ ವಾದವೂ ಇದೆ. ಇಂತಹ ಬಟ್ಟೆಗಳನ್ನು ನೋಡಿದ ನಂತರ ಸಮಾಜದ ಜನರು ಅವರ(ಋಷಿಗಳು ಮತ್ತು ಸಂತರು) ಜೊತೆ ಹೇಗೆ ವಿಭಿನ್ನವಾಗಿ ವರ್ತಿಸುತ್ತಾರೆ ಮತ್ತು ಅವರು ಹೇಗೆ ಸಂಸಾದರ ಜಂಜಾಟದಿಂದ ದೂರವಿರುತ್ತಾರೆ ಅನ್ನೋದು. ಕೇಸರಿ ಬಣ್ಣದ ಬಟ್ಟೆಗಳನ್ನು ನೋಡುವ ಮೂಲಕ ಸಾಧು-ಸಂತರ ಜೊತೆಗೆ ಜನರು ಹೇಗೆ ವರ್ತಿಸಬೇಕು ಮತ್ತು ಅವರೊಂದಿಗೆ ಹೇಗೆ ಮಾತನಾಡಬೇಕು ಎಂಬುದನ್ನು ಅರ್ಥಮಾಡಿಕೊಳ್ಳುತ್ತಾರಂತೆ.


ಇದನ್ನೂ ಓದಿSankranti 2023: ಈ ಬಾರಿಯ ಮಕರ ಸಂಕ್ರಾಂತಿಯಂದು ಒಂದಲ್ಲ 3 ಶುಭಯೋಗಗಳ ನಿರ್ಮಾಣ, ಏನಿದರ ವಿಶೇಷತೆ?


ಕೇಸರಿ ಜ್ಞಾನದ ಸೂಚಕ


ಕೇಸರಿ ಬಣ್ಣವನ್ನು ಪಡೆದ ನಂತರ ಸೆಳವಿನ ಕಪ್ಪು ಭಾಗವೂ ಶುದ್ಧವಾಗುತ್ತದೆ ಎಂದು ಹೇಳಲಾಗುತ್ತದೆ. ಹೆಚ್ಚಿನ ಹಣ್ಣುಗಳು ಹಣ್ಣಾದಾಗ ಅವುಗಳ ಬಣ್ಣ ಕಿತ್ತಳೆ, ಕೇಸರಿ ಅಥವಾ ಹಳದಿ ಬಣ್ಣಕ್ಕೆ ತಿರುಗುವ ರೀತಿಯಲ್ಲಿ ಕಿತ್ತಳೆ ಬಣ್ಣವು ಕಂಡುಬರುತ್ತದೆ. ಅಂದರೆ ಈ ಬಣ್ಣವು ಪ್ರಬುದ್ಧತೆಯನ್ನು ತೋರಿಸುತ್ತದೆ. ಈ ಬಣ್ಣವನ್ನು ಜ್ಞಾನದ ಸೂಚಕವೆಂದು ಪರಿಗಣಿಸಲಾಗುತ್ತದೆ ಮತ್ತು ಈ ಬಣ್ಣದ ಬಟ್ಟೆಗಳನ್ನು ಧರಿಸುವ ವ್ಯಕ್ತಿಯು ತನ್ನದೇಯಾದ ದೃಷ್ಟಿಕೋನದಿಂದ ಜಗತ್ತನ್ನು ನೋಡಲು ಪ್ರಾರಂಭಿಸಿದ್ದಾನೆ ಎಂಬುದನ್ನು ಸೂಚಿಸುತ್ತದೆ ಎಂದು ಹೇಳಲಾಗಿದೆ. ಹೀಗಾಗಿಯೇ ಭಾರತದಲ್ಲಿ ಕೇಸರಿ ಬಣ್ಣದ ಬಟ್ಟೆಗಳನ್ನು ಧರಿಸುವ ಜನರಿಗೆ ಜನರು ವಿಶೇಷವಾದ ಗೌರವ ಮತ್ತು ಸ್ಥಾನ ನೀಡಿದ್ದಾರೆ.


(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.