ನರಕ ಚತುರ್ದಶಿಯ ಮುನ್ನಾ ದಿನ ಧನತ್ರಯೋದಶಿಯನ್ನು ಆಚರಿಸಲಾಗುತ್ತದೆ. ಈ ಬಾರಿ ಅಕ್ಟೋಬರ್ 18 ರಂದು ಧನತ್ರಯೋದಶಿ ಆಚರಿಸಲಾಗುವುದು. ಈ ದಿನದಂದು ಕೆಲವು ವಸ್ತುಗಳನ್ನು ಖರೀದಿಸಬೇಕು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಚಿನ್ನ ಬೆಳ್ಳಿ ಖರೀದಿಸಿದರೆ ಲಕ್ಷ್ಮೀ ಒಲಿಯುತ್ತಾಳೆ ಎಂದು ಹೇಳಲಾಗುತ್ತದೆ. ಆದರೆ ಪ್ರಸ್ತುತ ಚಿನ್ನ, ಬೆಳ್ಳಿಯ ದರ ನೋಡಿದರೆ ಅದನ್ನು ಖರೀದಿಸುವುದು ಸಾಧ್ಯವಾಗದ ಮಾತು. ಹಾಗಾಗಿ ಚಿನ್ನ ಬೆಳ್ಳಿಯ ಹೊರತಾಗಿಯೂ ಕೆಲವು ವಸ್ತುಗಳನ್ನು ಖರೀದಿಸಿದರೆ ಮಹಾಲಕ್ಷ್ಮೀ ನಮ್ಮ ಭಾಗ್ಯ ಬೆಳಗುತ್ತಾಳೆ, ಬದುಕನ್ನು ಬಂಗಾರವಾಗಿಸುತ್ತಾಳೆ ಎನ್ನಲಾಗಿದೆ. ಕೇವಲ 10 ರೂಪಾಯಿ ಮೌಲ್ಯದ ಈ ವಸ್ತುವನ್ನು ಖರೀದಿಸಿದರೂ ಲಕ್ಷ್ಮೀ ದೇವಿ ತನ್ನ ಸಂಪೂರ್ಣ ಆಶೀರ್ವಾದವನ್ನು ಹರಿಸುತ್ತಾಳೆಯಂತೆ .
ಪೊರಕೆ :
ಪೊರಕೆಯನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಈ ಕಾರಣದಿಂದ ಧನತ್ರಯೋದಶಿಯ ದಿನ ಪೊರಕೆಯನ್ನು ಖರೀದಿಸಲಾಗುತ್ತದೆ. ಪೊರಕೆಯಂತೆಯೇ ಧನತ್ರಯೋದಶಿಯ ದಿನ ಉಪ್ಪನ್ನು ಖರೀದಿಸುವುದು ಕೂಡಾ ಮಂಗಳಕರ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ದಿನ ಉಪ್ಪನ್ನು ಖರೀದಿಸಬೇಕು. ಈ ದಿನದಂದು ಉಪ್ಪನ್ನು ಖರೀದಿಸಿದರೆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಯಾಗುತ್ತದೆ. ಜೀವನದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗುವುದಿಲ್ಲ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ : ದೇವರಿಗೆ ಅರ್ಪಿಸಿದ ಹೂವು ಯಾವ ಕಡೆ ಬಿದ್ದರೆ ಶುಭ.. ಇದು ಏನನ್ನು ಸೂಚಿಸುತ್ತದೆ?
ಉಪ್ಪಿನ ಪರಿಹಾರ ಮಾರ್ಗ :
ಧನತ್ರಯೋದಶಿಯ ದಿನದಂದು ಉಪ್ಪನ್ನು ಖರೀದಿಸುವುದು ಬಹಳ ಫಲಪ್ರದವೆಂದು ಹೇಳಲಾಗುತ್ತದೆ. ಈ ದಿನದಂದು ಖರೀದಿಸಿದ ಉಪ್ಪನ್ನು ಇಡೀ ದಿನ ಯಾವುದಾದರೂ ವಸ್ತುವಿನಲ್ಲಿ ಬಳಸುವುದರಿಂದ ವ್ಯಕ್ತಿಯ ಸಂಪತ್ತು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.
ಮನೆಯ ಪೂರ್ವ ಮತ್ತು ಉತ್ತರ ಮೂಲೆಯಲ್ಲಿ ಗಾಜಿನ ಪಾತ್ರೆಯಲ್ಲಿ ಸ್ವಲ್ಪ ಉಪ್ಪನ್ನು ಇಡುವುದರಿಂದ ಮನೆಯ ದಾರಿದ್ರ್ಯ ದೂರವಾಗುತ್ತದೆ. ಅಷ್ಟೇ ಅಲ್ಲ, ಹಣದ ಆಗಮನದ ಹೊಸ ದಾರಿಗಳು ತೆರೆದುಕೊಳ್ಳುತ್ತವೆ.
ಈ ದಿನ, ವಿಶೇಷವಾಗಿ ಮನೆಯನ್ನು ಉಪ್ಪು ಬೆರೆಸಿದ ನೀರಿನಿಂದ ಒರೆಸುವುದರಿಂದ ವಿಶೇಷ ಪ್ರಯೋಜನಗಳನ್ನು ನೀಡುತ್ತದೆ. ಇದರಿಂದ ಮನೆಯ ಋಣಾತ್ಮಕತೆ ದೂರವಾಗುತ್ತದೆ ಮತ್ತು ಧನಾತ್ಮಕ ಶಕ್ತಿ ನೆಲೆಸುತ್ತದೆ.
ಇದನ್ನೂ ಓದಿ : ದೀಪಾವಳಿಯಂದು ಈ ಅವತಾರದಲ್ಲಿರುವ ಲಕ್ಷ್ಮಿಯನ್ನ ಪೂಜೆಸಿದ್ರೆ ಕಷ್ಟಗಳು ಪರಿಹಾರಗೋದು ಖಚಿತ! ಮನೆಯಲ್ಲಿ ಸಂತೋಷ ತುಂಬಿ ತುಳುಕುತ್ತೆ..
ಪತಿ-ಪತ್ನಿಯರ ನಡುವಿನ ಸಂಬಂಧದಲ್ಲಿ ಬಿರುಕು ಮೂಡುತ್ತಿದ್ದರೆ, ಧನತ್ರಯೋದಶಿಯ ದಿನದಂದು ಮಲಗುವ ಕೋಣೆಯಲ್ಲಿ ಕಲ್ಲು ಉಪ್ಪನ್ನು ಇಟ್ಟು ಮಲಗಿಕೊಳ್ಳಿ. ಇದರಿಂದ ಪತಿ ಪತ್ನಿಯರ ನಡುವೆ ಪ್ರೀತಿ ಹೆಚ್ಚುತ್ತದೆ.
ಉಪ್ಪು ಶುಕ್ರ ಮತ್ತು ಚಂದ್ರನನ್ನು ಪ್ರತಿನಿಧಿಸುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಉಪ್ಪನ್ನು ಕಬ್ಬಿಣ ಅಥವಾ ಉಕ್ಕಿನ ಪಾತ್ರೆಯಲ್ಲಿ ಇಡಬೇಡಿ. ಹೀಗೆ ಮಾಡುವುದರಿಂದ, ಚಂದ್ರ ಮತ್ತು ಶನಿ ಒಟ್ಟಿಗೆ ಕುಟುಂಬ ಸದಸ್ಯರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಾರೆ. ಉಪ್ಪನ್ನು ಗಾಜಿನ ಡಬ್ಬದಲ್ಲಿ ಇಡಬೇಕು ಎಂದು ಹೇಳಲಾಗುತ್ತದೆ.
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)









