ಷಡ್ಗ್ರಹಿ ಯೋಗದಿಂದ ಈ ರಾಶಿಯವರಿಗೆ ಗಂಡಾಂತರ; ದೇಶದ ಮೇಲೆ ಇದರ ಪರಿಣಾಮವೇನು ಗೊತ್ತಾ?

Shadgrahi yog 2025: ಪ್ರಪಂಚದಲ್ಲಿ ಪ್ರಸ್ತುತ ಪ್ರಕ್ಷುಬ್ಧತೆ ಮತ್ತು ವಿಷಕಾರಿ ವಾತಾವರಣವಿದ್ದರೂ ರಾಜಕೀಯ ಕ್ಷೇತ್ರದಲ್ಲಿ ಭಾರತದ ಖ್ಯಾತಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ​ಷಡ್ಗ್ರಹಿ ಯೋಗದಿಂದ ಎಲ್ಲಾ ರಾಶಿಯವರ ಮೇಲೂ ಪರಿಣಾಮ ಉಂಟಾಗಲಿದೆ.

Written by - Puttaraj K Alur | Last Updated : Mar 30, 2025, 08:42 PM IST
  • ಮೀನ ರಾಶಿಗೆ ಶನಿದೇವನ ಪ್ರವೇಶದೊಂದಿಗೆ ಷಡ್ಗ್ರಹಿ ಯೋಗವು ರೂಪುಗೊಳ್ಳುತ್ತದೆ
  • ಈ ಷಡ್ಗ್ರಹಿ ಯೋಗವು ಮಾರ್ಚ್ 29ರಿಂದ ಏಪ್ರಿಲ್ 13ರವರೆಗೆ ಇರುತ್ತದೆ
  • ಗ್ರಹಗಳ ಹೊಸ ಸ್ಥಾನವು ವಿಶ್ವದಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಸೃಷ್ಟಿಸಲಿದೆ
ಷಡ್ಗ್ರಹಿ ಯೋಗದಿಂದ ಈ ರಾಶಿಯವರಿಗೆ ಗಂಡಾಂತರ; ದೇಶದ ಮೇಲೆ ಇದರ ಪರಿಣಾಮವೇನು ಗೊತ್ತಾ?

Shadgrahi Rajyog 2025: ಶನಿವಾರ (ಮಾರ್ಚ್ 29) ಶನಿದೇವ ತನ್ನ ರಾಶಿಯನ್ನು ಬದಲಾಯಿಸಿ ಮೀನ ರಾಶಿಗೆ ಹೋಗಿದ್ದಾನೆ. ಈಗಾಗಲೇ ಸೂರ್ಯ, ಚಂದ್ರ, ಬುಧ, ಶುಕ್ರ ಮತ್ತು ರಾಹು ಮೀನ ರಾಶಿಯಲ್ಲಿರುವರು. ಮೀನ ರಾಶಿಗೆ ಶನಿದೇವನ ಪ್ರವೇಶದೊಂದಿಗೆ ಷಡ್ಗ್ರಹಿ ಯೋಗವು ರೂಪುಗೊಳ್ಳುತ್ತದೆ. ಈ ಷಡ್ಗ್ರಹಿ ಯೋಗವು ಮಾರ್ಚ್ 29ರಿಂದ ಏಪ್ರಿಲ್ 13ರವರೆಗೆ ಇರುತ್ತದೆ.

Add Zee News as a Preferred Source

ಗ್ರಹಗಳ ಹೊಸ ಸ್ಥಾನವು ವಿಶ್ವದಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಸೃಷ್ಟಿಸಲಿದೆ. ಅಮೆರಿಕ, ರಷ್ಯಾ, ಫ್ರಾನ್ಸ್, ಜರ್ಮನಿ, ಇಸ್ರೇಲ್‌ನಂತಹ ವಿಶ್ವದ ಪ್ರಮುಖ ದೇಶಗಳು ದಂಗೆಯಂತಹ ಘಟನೆಗಳನ್ನು ಎದುರಿಸಲಿವೆ. ಇದಲ್ಲದೆ ಭಾರತದ ವಿರುದ್ಧ ಭಯೋತ್ಪಾದನೆ ಹರಡುವ ಉದ್ದೇಶವು ಹೆಚ್ಚಾಗಲಿದೆ. ಈ ಬಾರಿ ಸುನಾಮಿ, ನೀರಿನಲ್ಲಿ ಜ್ವಾಲಾಮುಖಿಯಂತಹ ದೊಡ್ಡ ನೈಸರ್ಗಿಕ ವಿಕೋಪ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ನೀರಿಗೆ ಸಂಬಂಧಿಸಿದ ಗಂಭೀರ ಕಾಯಿಲೆಯು ಜನರಿಗೆ ಸಂಕಷ್ಟವನ್ನು ಉಂಟು ಮಾಡುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಇಂದ್ರ ಯೋಗದಿಂದ ಈ ಮೂರು ರಾಶಿಗಳಿಗೆ ಅದೃಷ್ಟದ ಬಲ; ನವಗ್ರಹಗಳ ಪೂಜಾ ಫಲ ಸಿಗಲಿದೆ!!

ಭಾರತಕ್ಕೆ ಈ ಸಮಯ ಹೇಗಿರುತ್ತದೆ?: ಪ್ರಪಂಚದಲ್ಲಿ ಪ್ರಸ್ತುತ ಪ್ರಕ್ಷುಬ್ಧತೆ ಮತ್ತು ವಿಷಕಾರಿ ವಾತಾವರಣವಿದ್ದರೂ ರಾಜಕೀಯ ಕ್ಷೇತ್ರದಲ್ಲಿ ಭಾರತದ ಖ್ಯಾತಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಯುದ್ಧದಲ್ಲಿ ಭಾಗಿಯಾಗಿರುವ ರಾಷ್ಟ್ರಗಳು ಭಾರತದೊಂದಿಗೆ ಸ್ನೇಹಪರವಾಗಿರಲಿವೆ. ಈ ಬಾರಿ ಪ್ರಪಂಚದ ಯುದ್ಧೋಚಿತ ವಾತಾವರಣದ ಮಧ್ಯೆ ಭಾರತ ಶಾಂತಿಯ ಕೊಂಡಿಯಾಗಬಹುದು. ಭಾರತಕ್ಕೆ ಹಾನಿ ಮಾಡುವ ಪಾಕಿಸ್ತಾನದ ಉದ್ದೇಶ ಬದಲಾಗುವುದಿಲ್ಲ. ಗಡಿಯಲ್ಲಿ ಮಿಲಿಟರಿ ದಾಳಿ ನಡೆಸುವ ಮೂಲಕ ಯುದ್ಧದ ವಾತಾವರಣ ಸೃಷ್ಟಿಸಲು ಅದು ಪ್ರಯತ್ನಿಸುತ್ತದೆ ಎಂದು ಹೇಳಲಾಗಿದೆ.  

ಮೀನ ರಾಶಿಯವರಿಗೆ ಸಂಕಷ್ಟ: ಮೀನ ರಾಶಿಯಲ್ಲಿ ಸೂರ್ಯ, ಚಂದ್ರ, ಬುಧ, ಶುಕ್ರ ಮತ್ತು ರಾಹು ಜೊತೆಗೆ ಶನಿ ಈ ಗ್ರಹಗಳ ಸಂಯೋಜನೆಯು ಮೀನ ರಾಶಿಯವರಿಗೆ ತುಂಬಾ ಸಂಕಷ್ಟವನ್ನು ತಂದೊಡ್ಡಲಿವೆ. ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯದಲ್ಲವೆಂದು ಹೇಳಲಾಗಿದೆ. ನಿಮ್ಮ ಜೀವನದಲ್ಲಿ ಗೊಂದಲಗಳು ಹೆಚ್ಚಾಗಬಹುದು. ಮಾನಸಿಕ ಒತ್ತಡ ಇರಲಿದ್ದು, ಮೈಗ್ರೇನ್ ತಲೆನೋವಿನಂತಹ ಸಮಸ್ಯೆಗಳು ಹಠಾತ್ ಉದ್ಭವಿಸುತ್ತವೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ತುಳಸಿ ಗಿಡವನ್ನ ಈ ದಿಕ್ಕಿನಲ್ಲಿಟ್ಟು ಪೂಜಿಸಿದರೇ ಮಾತ್ರ ಒಲಿಯುವಳು ಸಂಪತ್‌ಲಕ್ಷ್ಮಿ! ಇಲ್ಲದಿದ್ದರೇ ದಾರಿದ್ರ್ಯ ವಕ್ಕರಿಸಿ ಬಡತನ ಕಾಡುವುದು..

ಮೀನ ರಾಶಿಯಲ್ಲಿ ಶನಿದೇವನ ಆಗಮನವು ದೊಡ್ಡ ಬದಲಾವಣೆಯನ್ನ ತರಲಿದೆ. ಮೀನ ರಾಶಿಯಲ್ಲಿ ರಾಹುವಿನ ಉಪಸ್ಥಿತಿಯು ಅತ್ಯಂತ ನಕಾರಾತ್ಮಕ ಅಂಶವೆಂದು ಹೇಳಲಾಗುತ್ತದೆ. ಮೇ ತಿಂಗಳವರೆಗೆ ಮೀನ ರಾಶಿಯವರಿಗೆ ಈ ಸಮಯವು ತುಂಬಾ ಕಷ್ಟಕರವಾಗಿರುತ್ತದೆ.

ಇತರ ರಾಶಿಗಳ ಮೇಲೆ ಏನು ಪರಿಣಾಮ?: ಈ ಷಡ್ಗ್ರಹಿ ಯೋಗವು ಇತರ ಎಲ್ಲಾ ರಾಶಿಗಳಿಗೂ ಸಮಸ್ಯೆಗಳನ್ನು ಸೃಷ್ಟಿಸಲಿದೆ. ಆದ್ದರಿಂದ ಸಾಧ್ಯವಾದಷ್ಟು ನವಗ್ರಹ ಸ್ತೋತ್ರವನ್ನು ಪಠಿಸುವುದು ಪ್ರಯೋಜನಕಾರಿ. ಪರಿಹಾರಕ್ಕಾಗಿ ಮಂಗಳವಾರ ಮತ್ತು ಶನಿವಾರ ಸುಂದರಕಾಂಡವನ್ನು ಭಕ್ತಿಯಿಂದ ಪಠಿಸಬೇಕು. 

(ಗಮನಿಸಿರಿ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News