)
Shanideva favourite flower: ಹಿಂದೂ ಧರ್ಮದಲ್ಲಿ, ಪ್ರತಿಯೊಬ್ಬ ದೇವತೆಯ ನೆಚ್ಚಿನ ಆಹಾರ, ನೆಚ್ಚಿನ ಹೂವು, ಬಣ್ಣ ಇತ್ಯಾದಿಗಳನ್ನು ಉಲ್ಲೇಖಿಸಲಾಗಿದೆ. ಎಲ್ಲಾ ದೇವತೆಗಳ ಪೂಜೆಯಲ್ಲಿ, ಅವರಿಗೆ ಇಷ್ಟವಾದ ವಸ್ತುಗಳನ್ನು ಅರ್ಪಿಸಲಾಗುತ್ತದೆ. ಇದು ಆ ದೇವರ ಕೃಪೆಗೆ ಪಾತ್ರವಾಗಲು ಸಹಾಯ ಮಾಡುತ್ತದೆ. ಪೂಜೆಯಲ್ಲಿ ಹೂವುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಹಿಂದೂ ಧರ್ಮದಲ್ಲಿ ಹೂವುಗಳಿಲ್ಲದೆ ಪೂಜೆ ಪೂರ್ಣಗೊಳ್ಳುವುದಿಲ್ಲ. ನ್ಯಾಯದ ದೇವರು ಶನಿ ದೇವರಿಗೆ ಸಂಬಂಧಿಸಿದಂತೆ, ಅವನನ್ನು ಮೆಚ್ಚಿಸುವುದು ತುಂಬಾ ಕಷ್ಟಕರವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯದಲ್ಲಿ, ಶನಿದೇವನನ್ನು ಮೆಚ್ಚಿಸಲು ಕೆಲವು ಕ್ರಮಗಳನ್ನು ಉಲ್ಲೇಖಿಸಲಾಗಿದೆ. ಈ ಕ್ರಮಗಳಲ್ಲಿ ಒಂದು ತುಂಬಾ ಸುಲಭವಾಗಿರುವಂಥದ್ದು.
ಶನಿ ದೇವರನ್ನು ಮೆಚ್ಚಿಸುವ ಒಂದು ಮಾರ್ಗವೆಂದರೆ ಶನಿವಾರದಂದು ಅವರ ನೆಚ್ಚಿನ ಹೂವನ್ನು ಅರ್ಪಿಸುವುದು. ಶನಿ ದೇವರಿಗೆ ಎಕ್ಕದ ಹೂವು ತುಂಬಾ ಇಷ್ಟ. ಎಕ್ಕದ ಹೂವನ್ನು ಅರ್ಪಿಸುವುದರಿಂದ ಶನಿ ದೇವರಿಗೆ ಸಂತೋಷವಾಗುತ್ತದೆ. ಶನಿವಾರ ದೇವಸ್ಥಾನಕ್ಕೆ ಹೋಗಿ ಶನಿ ದೇವರನ್ನು ಪೂಜಿಸಿ ಎಕ್ಕದ ಹೂವನ್ನು ಅರ್ಪಿಸಬೇಕು. ಇದರ ಹೊರತಾಗಿ, ಶಂಖ ಪುಷ್ಪ ಕೂಡಾ ಶನಿ ದೇವರ ನೆಚ್ಚಿನ ಹೂವು. ಶನಿವಾರ ಶನಿ ದೇವರಿಗೆ 5, 7 ಅಥವಾ 11 ಶಂಖ ಪುಷ್ಪಗಳನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ, ಸಾಡೇಸಾತಿ ಮತ್ತು ಧೈಯದಿಂದಾಗುವ ದುಷ್ಪರಿಣಾಮಗಳನ್ನು ಕಡಿಮೆ ಮಾಡಬಹುದು.
ನಿಮ್ಮ ಅದೃಷ್ಟ ಬೆಳಗಿಸುವನು ಶನಿದೇವ :
ಶನಿದೇವನು ಸಂತುಷ್ಟನಾದರೆ, ಭಿಕ್ಷುಕನನ್ನು ರಾಜನನ್ನಾಗಿ ಮಾಡುತ್ತಾನೆ. ಶನಿವಾರ ಈ ಹೂವುಗಳನ್ನು ಶನಿದೇವರಿಗೆ ಅರ್ಪಿಸುವುದರಿಂದ, ಶನಿದೇವರು ನಿಮ್ಮ ಜೀವನದಿಂದ ಸಮಸ್ಯೆಗಳನ್ನು ತೆಗೆದುಹಾಕುತ್ತಾನೆ. ಜೀವನದಲ್ಲಿ ಸಂಪತ್ತು ಮತ್ತು ಖ್ಯಾತಿಯ ಹೊನಲನ್ನು ಹಾರಿಸುತ್ತಾನೆ.
ಶನಿವಾರ ಈ ವಿಧಾನಗಳನ್ನು ಅನುಸರಿಸಿ :
- ಶನಿವಾರದಂದು ಅರಳಿ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪ ಹಚ್ಚಿ.
- ಶನಿ ದೇವರ ಕಾಲ್ಬೆರಳಿಗೆ ಸಾಸಿವೆ ಎಣ್ಣೆಯನ್ನು ಅರ್ಪಿಸಿ. ಶನಿ ದೇವರ ವಿಗ್ರಹದ ಮುಂದೆ ಎಂದಿಗೂ ನಿಲ್ಲಬಾರದು, ಅವರ ಕಣ್ಣುಗಳನ್ನು ನೋಡಬಾರದು ಎನ್ನುವುದನ್ನು ಮರೆಯಬೇಡಿ. ಯಾವಾಗಲೂ ಸ್ವಲ್ಪ ಓರೆಯಾಗಿ ನಿಂತು ಶನಿದೇವರನ್ನು ಪೂಜಿಸಿ.
- ಶನಿ ಚಾಲೀಸಾ ಓದಿ. ಇದು ಶನಿ ದೇವರನ್ನು ಬೇಗನೆ ಸಂತೋಷಪಡಿಸುತ್ತದೆ.
- ಬಡವರು ಮತ್ತು ಅಸಹಾಯಕರಿಗೆ ಸಹಾಯ ಮಾಡಿ.
(ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ .)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ