138 ದಿನಗಳ ಕಾಲ ಶನಿಯ ಹಿಮ್ಮುಖ ಚಲನೆ: ಈ ಐದು ರಾಶಿಯವರು ಅದೃಷ್ಟದ ಜೊತೆಗೆ ಶ್ರೀಮಂತರಾಗುತ್ತಾರೆ!

Shani Vakri 2025: ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ ಹಿಮ್ಮುಖ ಶನಿಯು ಶುಕ್ರವಾರ (ನವೆಂಬರ್ 28) ಬೆಳಗ್ಗೆ 9.20ಕ್ಕೆ ನೇರವಾಗಲಿದೆ. ಶನಿಯ ಈ ಹಿಮ್ಮುಖ ಚಲನೆಯು ಎಲ್ಲಾ ರಾಶಿಗಳ ಮೇಲೆ ಆಳ ಪರಿಣಾಮ ಬೀರಲಿದೆ. 

Written by - Puttaraj K Alur | Last Updated : Apr 12, 2025, 10:10 PM IST
  • ಶನಿಯು ಹಿಮ್ಮೆಟ್ಟುವ ಸಮಯದಲ್ಲಿ ಮೇಷ ರಾಶಿಯವರ ಎಲ್ಲಾ ಸಮಸ್ಯೆಗಳು ದೂರವಾಗಲಿವೆ
  • ಈ ಸಮಯದಲ್ಲಿ ಕನ್ಯಾ ರಾಶಿಯಲ್ಲಿ ಜನಿಸಿದ ಜನರ ಆರ್ಥಿಕ ಸಮಸ್ಯೆಗಳಿಂದ ದೂರವಾಗುತ್ತವೆ
  • ಧನು ರಾಶಿಯವರಿಗೆ ಈ ಸಮಯ ಕೆಲವು ತೊಂದರೆಗಳು & ಅಡೆತಡೆಗಳಿಂದ ಮುಕ್ತಿ ನೀಡಲಿದೆ
138 ದಿನಗಳ ಕಾಲ ಶನಿಯ ಹಿಮ್ಮುಖ ಚಲನೆ: ಈ ಐದು ರಾಶಿಯವರು ಅದೃಷ್ಟದ ಜೊತೆಗೆ ಶ್ರೀಮಂತರಾಗುತ್ತಾರೆ!

Shani Vakri 2025: ಕರ್ಮದ ಅಧಿಪತಿಯಾದ ಶನಿದೇವನು ಪ್ರಸ್ತುತ ಮೀನ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ. ಇದು ಭಾನುವಾರ (ಜುಲೈ 13) ಬೆಳಗ್ಗೆ 9.36ಕ್ಕೆ 138 ದಿನಗಳವರೆಗೆ ಹಿಮ್ಮುಖವಾಗಲಿದೆ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ ಹಿಮ್ಮುಖ ಶನಿಯು ಶುಕ್ರವಾರ (ನವೆಂಬರ್ 28) ಬೆಳಗ್ಗೆ 9.20ಕ್ಕೆ ನೇರವಾಗಲಿದೆ. ಶನಿಯ ಈ ಹಿಮ್ಮುಖ ಚಲನೆಯು ಎಲ್ಲಾ ರಾಶಿಗಳ ಮೇಲೆ ಆಳ ಪರಿಣಾಮ ಬೀರಲಿದೆ. ಕೆಲ ರಾಶಿಗಳ ಜನರು ಶ್ರೀಮಂತರಾಗುವುದು ಮಾತ್ರವಲ್ಲದೆ ಅಪಾರ ಸುಖ-ಸಂಪತ್ತು ಗಳಿಸುತ್ತಾರೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ...

Add Zee News as a Preferred Source

ಮೇಷ ರಾಶಿ: ಶನಿಯು ಹಿಮ್ಮೆಟ್ಟುವ ಸಮಯದಲ್ಲಿ ಮೇಷ ರಾಶಿಯವರ ಎಲ್ಲಾ ಸಮಸ್ಯೆಗಳು ದೂರವಾಗಲಿವೆ. ಕೆಲಸದಲ್ಲಿ ಒತ್ತಡ ಮತ್ತು ಸವಾಲುಗಳು ಇರುವುದಿಲ್ಲ. ವೃತ್ತಿಪರ ಜೀವನದಲ್ಲಿ ಕೆಲವು ಪ್ರಮುಖ ಬದಲಾವಣೆ ಕಂಡುಬರಲಿದೆ. ಹಳೆಯ ಸಮಸ್ಯೆಗಳನ್ನು ಪರಿಹರಿಸುವುದು ಸುಲಭವಾಗಲಿದೆ. ಕುಟುಂಬ ಜೀವನದಲ್ಲೂ ಮನಸ್ತಾಪ ಜಗಳ ಕಡಿಮೆಯಾಗಿ ಸುಖ-ಶಾಂತಿ ನೆಲೆಸಲಿದೆ. ಶನಿಯ ಹಿಮ್ಮೆಟ್ಟುವಿಕೆಯಿಂದ ಮಾನಸಿಕ ಮತ್ತು ದೈಹಿಕ ಆಯಾಸ ಕಡಿಮೆಯಾಗಲಿದೆ. ನಿಮ್ಮ ಆರೋಗ್ಯವೂ ಸುಧಾರಿಸಲಿದೆ.

ಇದನ್ನೂ ಓದಿ: ಮೀನ ರಾಶಿಯಲ್ಲಿ ರೂಪುಗೊಳ್ಳಲಿರುವ ಚತುರ್ಗ್ರಹಿ ಯೋಗ; ಏಪ್ರಿಲ್ 14ರ ಈ 3 ರಾಶಿಗಳಿಗೆ ಸುವರ್ಣ ದಿನಗಳು ಪ್ರಾರಂಭ!

ಕನ್ಯಾ ರಾಶಿ: ಕನ್ಯಾ ರಾಶಿಯಲ್ಲಿ ಜನಿಸಿದ ಜನರು ಈ ಸಮಯದಲ್ಲಿ ಆರ್ಥಿಕ ಸಮಸ್ಯೆಗಳಿಂದ ದೂರವಾಗುತ್ತಾರೆ. ಶನಿಗ್ರಹ ಹಿಮ್ಮುಖವಾಗಿರುವುದರಿಂದ ಹಣಕಾಸಿನ ವಿಷಯಗಳಲ್ಲಿ ಅಡೆತಡೆಗಳು ದೂರವಾಗಿ ವ್ಯವಾಹಾರದಲ್ಲಿ ಭರ್ಜರಿ ಲಾಭವಾಗಬಹುದು. ಹಳೆಯ ಹೂಡಿಕೆಗಳಿಂದ ದೊಡ್ಡಮಟ್ಟದ ಲಾಭ ಸಿಗಲಿದೆ. ಕೆಲವು ಕಾನೂನು ವಿವಾದಗಳು ಸಹ ದೂರವಾಗಲಿದೆ. ಅಲ್ಲದೆ ಕುಟುಂಬ ಜೀವನದಲ್ಲಿಯೂ ಭಿನ್ನಾಭಿಪ್ರಾಯಗಳು ಮತ್ತು ಉದ್ವಿಗ್ನತೆ ದೂರವಾಗಲಿವೆ.

ಧನು ರಾಶಿ: ಧನು ರಾಶಿಯವರಿಗೆ ಈ ಸಮಯ ಕೆಲವು ತೊಂದರೆಗಳು ಮತ್ತು ಅಡೆತಡೆಗಳಿಂದ ಮುಕ್ತಿ ನೀಡಲಿದೆ. ಶನಿಯು ಹಿಮ್ಮುಖವಾಗಿರುವುದರಿಂದ ನಿಮ್ಮ ವೃತ್ತಿಜೀವನದಲ್ಲಿ ಅತೃಪ್ತಿ ಮತ್ತು ಅಡೆತಡೆಗಳು ದೂರವಾಗಲಿವೆ. ಕೆಲಸದಲ್ಲಿ ಬದಲಾವಣೆ ಅಥವಾ ಬಡ್ತಿಯ ಸಾಧ್ಯತೆ ಇರುತ್ತದೆ. ಇದಲ್ಲದೆ ಕುಟುಂಬ ಮತ್ತು ವೈವಾಹಿಕ ಜೀವನದಲ್ಲಿ ಒತ್ತಡ ದೂರವಾಗಿದೆ. ಈ ಸಮಯದಲ್ಲಿ ನಿಮ್ಮ ಸಂಗಾತಿ ಮತ್ತು ಕುಟುಂಬದೊಂದಿಗೆ ಸಂವಹನ ನಡೆಸುವುದು ಬಹಳ ಮುಖ್ಯವಾಗಿರುತ್ತದೆ.

ಇದನ್ನೂ ಓದಿ: ನಿಮ್ಮ ಪ್ರೀತಿ ಪಾತ್ರರಿಗೆ ಹನುಮಾನ್‌ ಜಯಂತಿಯ ಶುಭಾಷಯಗಳನ್ನು ಈ ರೀತಿ ತಿಳಿಸಿ! ರಾಮಭಕ್ತನ ಕೃಪೆ ಸದಾ ಇರಲಿ..

ಮಕರ ರಾಶಿ: ಮಕರ ರಾಶಿಯವರಿಗೆ ಶನಿಯ ಹಿಮ್ಮೆಟ್ಟುವಿಕೆಯ ಸಮಯ ಸವಾಲುಗಳನ್ನು ಎದುರಿಸುವ ಶಕ್ತಿ ನೀಡಲಿದೆ. ಹಣಕಾಸಿನ ಸಮಸ್ಯೆಗಳು ಮತ್ತು ಹಳೆಯ ಬಾಕಿ ಇರುವ ಕೆಲಸಗಳು ನಿಮ್ಮ ಜೀವನದಲ್ಲಿ ತೊಂದರೆ ಉಂಟುಮಾಡುವುದಿಲ್ಲ. ಅಲ್ಲದೆ ಶನಿಯ ಹಿಮ್ಮುಖ ಚಲನೆಯಿಂದ ಆರೋಗ್ಯ ಸಂಬಂಧಿತ ಸಮಸ್ಯೆಗಳು ದೂರವಾಗಲಿವೆ. ನಿಮಗೆ ಕಂಕಣ ಭಾಗ್ಯವು ಕೂಡಿ ಬರಲಿದೆ.

ಕುಂಭ ರಾಶಿ: ಕುಂಭ ರಾಶಿಯ ಅಡಿಯಲ್ಲಿ ಜನಿಸಿದ ಜನರು ಈ ಅವಧಿಯಲ್ಲಿ ತೊಂದರೆಗಳಿಂದ ದೂರವಾಗುತ್ತಾರೆ. ಶನಿಯು ಹಿಮ್ಮುಖವಾಗಿರುವುದರಿಂದ ನಿಮ್ಮ ಕಠಿಣ ಪರಿಶ್ರಮದ ಅಪೇಕ್ಷಿತ ಫಲಿತಾಂಶಗಳನ್ನು ನೀವು ಪಡೆಯುವಿರಿ. ನಿಮ್ಮ ಕೆಲಸ ವಿಳಂಬವಾಗುವುದಿಲ್ಲ. ಹಳೆಯ ಸಂಬಂಧಗಳು ಮತ್ತು ವಿವಾದಗಳನ್ನು ಪರಿಹರಿಸುವಲ್ಲಿ ತೊಂದರೆ ಇರುವುದಿಲ್ಲ. ಆರೋಗ್ಯ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಜೀವನಶೈಲಿ ಮತ್ತು ಕಾರ್ಯಗಳಲ್ಲಿ ನೀವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ.

(ಗಮನಿಸಿರಿ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News