ಅಕ್ಷಯ ತೃತೀಯದಂದು ಈ ಕೆಲಸಗಳನ್ನು ಮಾಡಿದರೆ ಏಳೇಳು ಜನ್ಮದವರೆಗೂ ಕಾಡುವುದು ಬಡತನ! ಗೊತ್ತಿಲ್ಲದೇ ಮಾಡುವ ತಪ್ಪಿಗೂ ಇಲ್ಲ ಪರಿಹಾರ

ಅಕ್ಷಯ ತೃತೀಯದಂದು ಕೆಲವು ಕೆಲಸಗಳನ್ನು ಮಾಡದಂತೆ ನೋಡಿಕೊಳ್ಳಬೇಕು. ಈ ತಪ್ಪುಗಳನ್ನು ತಿಳಿಯದೇ ಮಾಡಿದರೂ ಆ ತಪ್ಪಿಗೆ ಪರಿಹಾರ ಇಲ್ಲ. 

Written by - Ranjitha R K | Last Updated : Apr 26, 2025, 03:16 PM IST
  • ವೈರಲ್ ಆಗುತ್ತಿದೆ ನಟಿಯ ಬಾಲ್ಯದ ಫೋಟೋ
  • ಅಷ್ಟಕ್ಕೂ, ಈ ಟಾಪ್ ನಟಿ ಯಾರು?
  • 3200 ಕೋಟಿ ಗಳಿಸಿವೆ ಈ ನಟಿಯ ಸಿನಿಮಾ
ಅಕ್ಷಯ ತೃತೀಯದಂದು ಈ ಕೆಲಸಗಳನ್ನು ಮಾಡಿದರೆ ಏಳೇಳು ಜನ್ಮದವರೆಗೂ ಕಾಡುವುದು ಬಡತನ! ಗೊತ್ತಿಲ್ಲದೇ ಮಾಡುವ ತಪ್ಪಿಗೂ ಇಲ್ಲ ಪರಿಹಾರ

ಬೆಂಗಳೂರು : ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ವರ್ಷ ಅಕ್ಷಯ ತೃತೀಯ ಏಪ್ರಿಲ್ 30 ರಂದು ಬರುತ್ತದೆ. ಈ ದಿನದಂದು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುವುದರಿಂದ ಮನೆಯಲ್ಲಿ ಶಾಶ್ವತ ಸಂಪತ್ತು, ಸಮೃದ್ಧಿ ಮತ್ತು ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದ ನೆಲೆಸುತ್ತದೆ. ಆದರೆ, ಈ ದಿನದ ಮಹತ್ವ ಕೇವಲ ಅಮೂಲ್ಯ ವಸ್ತುಗಳನ್ನು ಮಾತ್ರ ಖರೀದಿಸುವುದಲ್ಲ. ಅಕ್ಷಯ ತೃತೀಯದಂದು ಕೆಲವು ಕೆಲಸಗಳನ್ನು ಕೂಡಾ ಮಾಡುವಂತಿಲ್ಲ. ಒಂದು ವೇಳೆ ಈ ತಪ್ಪುಗಳನ್ನು ಮಾಡಿದರೆ ಆರ್ಥಿಕ ಸಮೃದ್ಧಿ ಕುಗ್ಗುತ್ತದೆ. ಸಂತೋಷ ಮತ್ತು ಶಾಂತಿಯೂ ಮರೆಯಾಗುತ್ತದೆ. 

Add Zee News as a Preferred Source

ಭಿಕ್ಷುಕ, ಹಸು ಅಥವಾ ಪ್ರಾಣಿಯನ್ನು ಹಸಿವಿನಿಂದ ವಾಪಸ್ ಕಳುಹಿಸಬೇಡಿ :
ಅಕ್ಷಯ ತೃತೀಯ ದಿನದಂದು, ಭಿಕ್ಷುಕ, ಹಸು ಅಥವಾ ಯಾವುದೇ ಹಸಿದ ಜೀವಿ ಆಹಾರ ಕೇಳಿ ನಿಮ್ಮ ಮನೆ ಬಾಗಿಲಿಗೆ ಬಂದರೆ, ಅದನ್ನು ಖಾಲಿ ಕೈಯಲ್ಲಿ ವಾಪಸ್ ಕಳುಹಿಸುವುದು ಅತ್ಯಂತ ಅಶುಭ. ಮನೆ ಬಾಗಿಲಿಗೆ ಬಂದವರಿಗೆ  ಆಹಾರ ಅಥವಾ ನೀರನ್ನು ನೀಡದಿದ್ದರೆ, ಲಕ್ಷ್ಮೀ ದೇವಿ ಮುನಿಸಿಕೊಳ್ಳುತ್ತಾಳೆ.   ಭವಿಷ್ಯದಲ್ಲಿ ಬಡತನ ಆವರಿಸುವುದು. 

ಇದನ್ನೂ ಓದಿ : ಅಕ್ಷಯ ತೃತೀಯದಿಂದಲೇ ಈ ರಾಶಿಯವರಿಗೆ ಎರಡೆರಡು ರಾಜಯೋಗ ! ಉಕ್ಕಿ ಬರುವುದು ಧನ ಸಂಪತ್ತು !ಸಾಲದ ಸುಳಿಯಿಂದ ಸಂಪೂರ್ಣ ಹೊರ ಬರುವಿರಿ

ಸಾಲ ಪಡೆಯಬೇಡಿ : 
ಅಕ್ಷಯ ತೃತೀಯ ದಿನದಂದು, ಪ್ರತಿಯೊಬ್ಬ ವ್ಯಕ್ತಿಯು ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಶಾಪಿಂಗ್ ಮಾಡಬೇಕು. ಆದರೆ ಬೇರೆಯವರಿಂದ ಸಾಲ ಪಡೆದು ಚಿನ್ನ, ಬೆಳ್ಳಿ ಅಥವಾ ಇತರ ವಸ್ತುಗಳನ್ನು ಖರೀದಿಸಬಾರದು. ಸಾಲ ಮಾಡಿ ಮಾಡುವ ಒಳ್ಳೆಯ ಕೆಲಸ ಕೂಡಾ ಬಡತನ ಮತ್ತು  ಸಂಕಷ್ಟ ತಂದೊಡ್ಡಬಹುದು. ಅಕ್ಷಯ ತೃತೀಯದಂದು, ಸಾಮರ್ಥ್ಯಕ್ಕೆ ತಕ್ಕಂತೆ ದಾನ ಮಾಡುವುದು ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡುವುದು ವಿಶೇಷವಾಗಿ ಫಲ ನೀಡುತ್ತದೆ. 

ಸ್ನಾನ ಮಾಡಿ ದೇವರಿಗೆ ಆಹಾರ ಅರ್ಪಿಸಿ :
ಅಕ್ಷಯ ತೃತೀಯ ದಿನದಂದು ಬೆಳಿಗ್ಗೆ ಸ್ನಾನ ಮಾಡಿದ ನಂತರ, ವಿಷ್ಣು ಮತ್ತು ತಾಯಿ ಲಕ್ಷ್ಮೀಗೆ ಪ್ರಸಾದ ಅರ್ಪಿಸುವುದು ಕಡ್ಡಾಯವಾಗಿದೆ. ಶಾಸ್ತ್ರಗಳ ಪ್ರಕಾರ, ಆಹಾರ ಮತ್ತು ನೀರನ್ನು ಅರ್ಪಿಸದೆ ಸೇವಿಸುವುದು ಕಳ್ಳತನಕ್ಕೆ ಸಮಾನವೆಂದು ಪರಿಗಣಿಸಲಾಗುತ್ತದೆ.

ನಿಂದನೀಯ ಭಾಷೆಯನ್ನು ಬಳಸಬೇಡಿ ಅಥವಾ ಅನುಚಿತವಾಗಿ ವರ್ತಿಸಬೇಡಿ :
ಪ್ರತಿದಿನ ಇತರರೊಂದಿಗೆ ಒಳ್ಳೆಯ ರೀತಿಯಲ್ಲಿ ವರ್ತಿಸಬೇಕಾದರೂ, ಅಕ್ಷಯ ತೃತೀಯದಂದು ಇದರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಈ ದಿನ ಯಾರನ್ನಾದರೂ ನೋಯಿಸಿದರೆ ಅಥವಾ ನಿಂದನೀಯ ಭಾಷೆಯನ್ನು ಬಳಸಿದರೆ, ಒಳ್ಳೆಯ ಕರ್ಮ ಕಡಿಮೆಯಾಗುತ್ತದೆ ಮತ್ತು ಸಮೃದ್ಧಿಯ ಹಾದಿಯಲ್ಲಿ ಅಡೆತಡೆಗಳು ಉಂಟಾಗುತ್ತವೆ.

ಇದನ್ನೂ ಓದಿ : ರಾಜಯೋಗದಿಂದ ಮುಟ್ಟಿದ್ದೆಲ್ಲಾ ಚಿನ್ನವಾಗುವ ಕಾಲ !ಈ ರಾಶಿಯವರಿಗೆ ಸಿಗುವುದು ಅದೃಷ್ಟದ ಸಾಥ್ ! ಧನ ಧಾನ್ಯ ಲಕ್ಷ್ಮೀ ಒಲಿದು ಬರುವ ಯೋಗ

ಮಾಂಸ ಮತ್ತು ಮದ್ಯ ಸೇವಿಸಬೇಡಿ : 
ಅಕ್ಷಯ ತೃತೀಯ ದಿನದಂದು ಮಾಂಸಾಹಾರಿ ಆಹಾರ ಸೇವನೆ ಮತ್ತು ಮದ್ಯಪಾನ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಂತಹ ನಡವಳಿಕೆಯು ಒಂಬತ್ತು ಗ್ರಹಗಳ ಅನುಗ್ರಹವನ್ನು ದುರ್ಬಲಗೊಳಿಸುತ್ತದೆ.  ಅಕ್ಷಯ ತೃತೀಯ ದಿನದಂದು ಎಲ್ಲರೂ ಸಾತ್ವಿಕ ಆಹಾರವನ್ನು ಸೇವಿಸಬೇಕು. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢೀಕರಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News