shukra gochar effects: ದೀಪಾವಳಿಯ ಸಮಯದಲ್ಲಿ ಶುಕ್ರನು ಕನ್ಯಾ ರಾಶಿಯಲ್ಲಿ ಇರುತ್ತಾನೆ. ಪರಿಣಾಮವಾಗಿ ಕೆಲವು ರಾಶಿಗಳ ಅದೃಷ್ಟವು ಹೊಳೆಯಬಹುದು. ಸಂಪತ್ತು ಅಪಾರವಾಗಿ ಹೆಚ್ಚಾಗಬಹುದು. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸುವವರಿಗೆ ಇದು ಒಳ್ಳೆಯ ಸಮಯವಾಗಿರುತ್ತದೆ.
ಮೇಷ ರಾಶಿ - ಆತ್ಮವಿಶ್ವಾಸ ಹೆಚ್ಚುತ್ತದೆ. ಆದಾಯದ ದುಪ್ಪಟ್ಟಾಗುವುದು. ಆರ್ಥಿಕ ಸಮಸ್ಯೆ ದೂರವಾಗುವುದು. ಕೆಲಸದಲ್ಲಿ ಬಡ್ತಿ ದೊರೆಯಬಹುದು.
ಮಿಥುನ ರಾಶಿ - ತಾಳ್ಮೆ ಹೆಚ್ಚಾಗುತ್ತದೆ. ಆದಾಯ ಹೆಚ್ಚಾಗುವ ಉತ್ತಮ ಸಮಯ. ಉದ್ಯೋಗಸ್ಥರಿಗೆ ಬಡ್ತಿ ಜೊತೆಗೆ ಸಂಬಳ ಹೆಚ್ಚಾಗಬಹುದು. ವ್ಯಾಪಾರದಲ್ಲಿ ಭಾರೀ ಲಾಭ.
ಕರ್ಕ ರಾಶಿ - ಸಾಲಬಾಧೆಯಿಂದ ಮುಕ್ತಿ. ಹಣದ ಹರಿವು ಹೆಚ್ಚಾಗಲಿದೆ. ಸಿರಿವಂತರಾಗುವಿರಿ. ಉದ್ಯೋಗದಲ್ಲಿ ಬಡ್ತಿ. ವ್ಯವಹಾರದಲ್ಲಿ ಅಭಿವೃದ್ಧಿ ಕಾಣುವಿರಿ.
ಸಿಂಹ ರಾಶಿ - ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಬಡ್ತಿ ಸಿಗಬಹುದು. ವ್ಯಾಪಾರದಲ್ಲಿ ಅಭಿವೃದ್ಧಿ ಕಾಣುವಿರಿ. ಪ್ರತಿ ಕೆಲಸದಲ್ಲಿಯೂ ಯಶಸ್ಸು ಕಾಣುವಿರಿ.
ವೃಶ್ಚಿಕ ರಾಶಿ - ಉದ್ಯೋಗದಲ್ಲಿ ಬಡ್ತಿ, ಆಕಸ್ಮಿಕ ಧನಲಾಭ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಆದಾಯದ ಹೊಸ ಮೂಲಗಳು ಹುಟ್ಟಿಕೊಳ್ಳಲಿವೆ. ಮನೆಯಲ್ಲಿ ಸಂತೋಷ ನೆಲೆಸಲಿದೆ.
ಧನು ರಾಶಿ - ಹಣ ಕಾಸಿನ ಕೊರತೆ ದೂರವಾಗಲಿದೆ. ವಾಹನ ಖರೀದಿ ಯೋಗ. ತಾಳ್ಮೆ ಹೆಚ್ಚುತ್ತದೆ. ಕಷ್ಟವೆಲ್ಲ ದೂರವಾಗಲಿದೆ. ಮನೆ ಖರೀದಿಸುವ ಕನಸು ನನಸಾಗಲಿದೆ.
ಕುಂಭ ರಾಶಿ - ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ವೃತ್ತಿಯಲ್ಲಿ ಅಭಿವೃದ್ಧಿ. ಇಷ್ಟಾರ್ಥಗಳರಲ್ಲವೂ ಈಡೇರಲಿವೆ. ವ್ಯವಹಾರದಲ್ಲಿ ಲಾಭ ಗಳಿಸುವಿರಿ.
(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
ಇದನ್ನೂ ಓದಿ: ಆಮೆ ಉಂಗುರ ಧರಿಸಿದರೆ ಈ ರಾಶಿಯವರಿಗೆ ಒಲಿಯುವುದು ಅದೃಷ್ಟ.. ಧನ ಸಂಪತ್ತು ಪ್ರಾಪ್ತಿಯಾಗಿ, ತೊಲಗುವುದು ಕಷ್ಟ!
ಇದನ್ನೂ ಓದಿ: 500 ವರ್ಷದ ಬಳಿಕ ಈ ರಾಶಿಗಳಿಗೆ ನವ ಪಂಚಮ ರಾಜಯೋಗ... ಅಪಾರ ಸಿರಿ ಸಂಪತ್ತಿನ ಮಳೆ, ಶ್ರೀಮಂತರಾಗುವ ಸಮಯ ದೂರವಿಲ್ಲ!









