Shukra Gochar Phala: ವೈದಿಕ ಜ್ಯೋತಿಷ್ಯದ ಪ್ರಕಾರ, ಅಕ್ಟೋಬರ್ 09, 2025ರಂದು ಸಂಪತ್ತು, ಐಶ್ವರ್ಯ ಕರುಣಿಸುವ ಶುಕ್ರ ತನ್ನ ನೀಚ ರಾಶಿಯಾದ ಕನ್ಯಾ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಇದರ ಶುಭ ಅಶುಭ ಪರಿಣಾಮ ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ. ದೀಪಾವಳಿಗೂ ಮುನ್ನ ಶುಕ್ರ ರಾಶಿ ಬದಲಾವಣೆಯಿಂದ ಕೆಲವರ ಬಾಳಲ್ಲಿ ನವ ಚೈತನ್ಯ ಹೊಮ್ಮಿದರೆ, ಇನ್ನೂ ಕೆಲವು ರಾಶಿಯವರ ಬದುಕಿನಲ್ಲಿ ಸಂಕಷ್ಟಗಳು ಹೆಚ್ಚಾಗಲಿವೆ ಎನ್ನಲಾಗುತ್ತಿದೆ.
ಶುಕ್ರ ಗೋಚಾರ ಫಲ ದ್ವಾದಶ ರಾಶಿಗಳಿಗೆ ಏನು ಫಲ ನೀಡಲಿದೆ ತಿಳಿಯೋಣ...
ಮೇಷ ರಾಶಿ:
ಶುಕ್ರ ಸಂಚಾರದಿಂದ ಈ ರಾಶಿಯವರು ವೃತ್ತಿ ಬದುಕಿನಲ್ಲಿ ಹೊಸ ಎತ್ತರಕ್ಕೆ ಏರುವರು. ವೈಯಕ್ತಿಕ ಬದುಕಿನಲ್ಲಿ ಕಷ್ಟಗಳು ಕೊನೆಗೊಂಡು ಅದೃಷ್ಟ ಕೈ ಹಿಡಿಯಲಿದೆ. ಹೆಜ್ಜೆ ಇಟ್ಟಲ್ಲೆಲ್ಲಾ ಕೀರ್ತಿ, ಯಶಸ್ಸು ಹಿಂಬಾಲಿಸಲಿದೆ.
ವೃಷಭ ರಾಶಿ:
ಶುಕ್ರ ಗೋಚಾರ ಫಲವು ಈ ರಾಶಿಯವರಿಗೆ ಕಷ್ಟದ ಸಮಯವನ್ನು ತರಲಿದೆ. ಕೌಟುಂಬಿಕ ಒತ್ತಡಗಳು ನಿಮ್ಮ ಮಾನಸಿಕ ನೆಮ್ಮದಿಯನ್ನು ಹಾಳುಮಾಡುವ ಸಂಭವವಿದೆ. ಹಣಕಾಸಿನ ವಿಚಾರದಲ್ಲಿ ಯಾರನ್ನೂ ನಂಬಬೇಡಿ.
ಮಿಥುನ ರಾಶಿ:
ನೀಚ ರಾಶಿಚಕ್ರ ಚಿಹ್ನೆಯಲ್ಲಿ ಶುಕ್ರ ಸಂಚಾರವು ಈ ರಾಶಿಯವರಿಗೆ ಅಷ್ಟು ಉತ್ತಮವಾಗಿಲ್ಲ. ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಕೆಲಸದ ಸ್ಥಳದಲ್ಲಿ ಹಿತಶತ್ರುಗಳ ಬಗ್ಗೆ ತುಂಬಾ ಎಚ್ಚರಿಕೆ ಅಗತ್ಯವಾಗಿದೆ.
ಕಟಕ ರಾಶಿ:
ಶುಕ್ರ ಸಂಚಾರದಿಂದ ಈ ರಾಶಿಯವರಿಗೆ ವೃತ್ತಿ-ವ್ಯವಹಾರದಲ್ಲಿ ಬಂಪರ್ ಲಾಭವಾಗಲಿದೆ. ಸಮಾಜದಲ್ಲಿ ನಿಮ್ಮ ಕೀರ್ತಿ, ಪ್ರತಿಷ್ಠೆ ಹೆಚ್ಚಾಗಲಿದ್ದು, ಹಣಕಾಸಿನ ವಿಚಾರವಾಗಿಯೂ ಅತ್ಯುತ್ತಮ ಸಮಯ ಇದಾಗಿದೆ.
ಇದನ್ನೂ ಓದಿ- ದೀಪಾವಳಿಗೂ ಮುನ್ನ ಬುಧಾದಿತ್ಯ ರಾಜಯೋಗ: ಐದು ರಾಶಿಯವರ ಬದುಕಿನಲ್ಲಿ ಭರ್ಜರಿ ಲಾಭ, ಕೈ ಇಟ್ಟಲ್ಲೆಲ್ಲಾ ಬರೀ ಯಶಸ್ಸೇ
ಸಿಂಹ ರಾಶಿ:
ಸಿಂಹ ರಾಶಿಯನ್ನು ತೊರೆದು ನೀಚ ರಾಶಿಗೆ ಪ್ರವೇಶಿಸುತ್ತಿರುವ ಶುಕ್ರನು ಈ ರಾಶಿಯವರಿಗೆ ಎಲ್ಲಾ ಕ್ಷೇತ್ರದಲ್ಲೂ ಮಿಶ್ರ ಫಲಿತಾಂಶವನ್ನು ನೀಡಲಿದ್ದಾನೆ. ವೃತ್ತಿಯಲ್ಲಿ ಬಂಪರ್ ಲಾಭ ಸೂಚನೆಗಳಿವೆ. ಆದರೆ, ಈ ಸಮಯದಲ್ಲಿ ನಿಮ್ಮ ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯವನ್ನು ತಪ್ಪಿಸಿ.
ಕನ್ಯಾ ರಾಶಿ:
ಸ್ವ ರಾಶಿಗೆ ಪದಾರ್ಪಣೆ ಮಾಡಲಿರುವ ಶುಕ್ರನು ಈ ರಾಶಿಯವರಿಗೆ ವೈಯಕ್ತಿಕ ಬದುಕಿನಲ್ಲಿ ಸಮಸ್ಯೆಗಳನ್ನು ಹೆಚ್ಚಿಸಲಿದ್ದಾನೆ. ವ್ಯವಹಾರದಲ್ಲಿ ಅನಿರೀಕ್ಷಿತ ಘಟನೆಗಳು ಸಂಭವಿಸಬಹುದು. ವ್ಯಾಪಾರದಲ್ಲಿ ನಷ್ಟ ಸಾಧ್ಯತೆಯೂ ಇದೆ.
ತುಲಾ ರಾಶಿ:
ಶುಕ್ರ ರಾಶಿ ಪರಿವರ್ತನೆಯು ಈ ರಾಶಿಯವರ ಬದುಕಿನಲ್ಲಿ ಮುರಿದು ಹೋಗಿದ್ದ ಸಂಬಂಧಗಳನ್ನು ಹತ್ತಿರ ತರಲಿದೆ. ಕೌಟುಂಬಿಕ ಸುಖ-ನೆಮ್ಮದಿ ಮರಳಲಿದೆ. ಆಧ್ಯಾತ್ಮಿಕ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಮಕ್ಕಳಿಂದ ಶುಭ ವಾರ್ತೆ ದೊರೆಯಲಿದೆ.
ವೃಶ್ಚಿಕ ರಾಶಿ:
ನಾಳೆಯಿಂದ ಈ ರಾಶಿಯವರ ಅದೃಷ್ಟವೇ ಬದಲಾಗಲಿದೆ. ಕೆಲಸದಲ್ಲಿ ಏಳ್ಗೆ, ಪ್ರಗತಿಯನ್ನು ಕಾಣುವಿರಿ. ವೃತ್ತಿ ಬದುಕಿನಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಾಗಲಿದೆ. ಸಮಾಜಿಕ ಬದುಕಿನಲ್ಲಿರುವಾರಿಗೆ ಕೀರ್ತಿ ಮನ್ನಣೆ ಸಿಗಲಿದೆ. ಆದಾಯದಲ್ಲಿ ಬಂಪರ್ ಹೆಚ್ಚಳವನ್ನು ಕಾಣಬಹುದು.
ಇದನ್ನೂ ಓದಿ- ಗುರು ವಕ್ರಿ: ನವೆಂಬರ್‌ನಲ್ಲಿ ಈ ರಾಶಿಯವರಿಗೆ ಬೃಹಸ್ಪತಿ ವಿಶೇಷ ಆಶೀರ್ವಾದ, ಮಣ್ಣೂ ಹೊನ್ನಾಗುವ ಪರ್ವಕಾಲ
ಧನು ರಾಶಿ:
ಶುಕ್ರ ಸಂಚಾರ ಈ ರಾಶಿಯವರಿಗೆ ಅಷ್ಟು ಶುಭ ಫಲಗಳನ್ನು ನೀಡುವುದಿಲ್ಲ. ಅದರಲ್ಲೂ, ಆರ್ಥಿಕ ವಿಚಾರಕ್ಕೆ ಸಂಬಂಧಿಸಿದಂತೆ ಇದು ಸಂಕಷ್ಟದ ಸಮಯ ಎಂತಲೇ ಹೇಳಬಹುದು. ಈ ವೇಳೆ ನಿಮ್ಮ ಮನಸ್ಥಿತಿಯನ್ನು ಆರೋಗ್ಯಕರವಾಗಿರಿಸಲು ಧ್ಯಾನ ಮಾಡುವುದು ಸೂಕ್ತ.
ಮಕರ ರಾಶಿ:
ಶುಕ್ರ ಸಂಚಾರದಿಂದ ಈ ರಾಶಿಯವರಿಗೆ ದೀರ್ಘ ಸಮಯದಿಂದ ಬಾಕಿ ಉಳಿದಿದ್ದ ಹಣ ಕೈ ಸೇರಲಿದೆ. ವಿದೇಶ ವ್ಯವಹಾರದಿಂದ ಭರ್ಜರಿ ಲಾಭವಾಗಲಿದೆ. ಹಿಂದೆ ಮಾಡಿರುವ ಹೂಡಿಕೆಯಿಂದ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ.
ಕುಂಭ ರಾಶಿ:
ಶುಕ್ರ ಸಂಚಾರವು ಈ ರಾಶಿಯವರಿಗೆ ಮಿಶ್ರ ಫಲಿತಾಂಶವನ್ನು ನೀಡಲಿದೆ. ಈ ಸಮಯದಲ್ಲಿ ವೈಯಕ್ತಿಕ ಬದುಕಿನಲ್ಲಿ ಶುಭ ಫಲಗಳು ಹೆಚ್ಚಾಗಿದ್ದರೆ, ವೃತ್ತಿ ಜೀವನದಲ್ಲಿ ಅಡೆತಡೆಗಳು ಎದುರಾಗಬಹುದು. ಉತ್ತಮ ಆರೋಗ್ಯಕ್ಕಾಗಿ ಧ್ಯಾನದ ಮೊರೆ ಹೋಗಿ.
ಮೀನ ರಾಶಿ:
ಶುಕ್ರ ರಾಶಿ ಪರಿವರ್ತನೆಯಿಂದ ಈ ರಾಶಿಯವರ ಲಕ್ ಬದಲಾಗಲಿದೆ. ಈ ವೇಳೆ ಹಣದ ಹರಿವು ಉತ್ತಮವಾಗಿರಲಿದ್ದು ಮನಸ್ಸಿನ ನೆಮ್ಮದಿ ಹೆಚ್ಚಾಗಲಿದೆ. ಕುಟುಂಬದಲ್ಲಿ ಶುಭ ಕಾರ್ಯಗಳನ್ನು ಮಾಡಲು ಯೋಚಿಸುತ್ತಿದ್ದರೆ ಇದು ಒಳ್ಳೆಯ ಕಾಲ. ವ್ಯವಹಾರದಲ್ಲಿ ಅಭಿವೃದ್ದಿ ಕಂಡುಬರಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.









