)
Shukra Gochar: ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರೀತಿ, ಸುಖ-ಸಂತೋಷ, ಆಕರ್ಷಣೆ, ಐಶ್ವರ್ಯ, ಐಶಾರಾಮಿ ಜೀವನವನ್ನು ಕರುಣಿಸುವ ಗ್ರಹ ಎಂದು ಬಣ್ಣಿಸಲಾಗುವ ಶುಕ್ರ ನವೆಂಬರ್ 07, 2025ರಂದು ಸ್ವಾತಿ ನಕ್ಷತ್ರಕ್ಕೆ ಪರ್ಯಟನೆ ಮಾಡಲಿದ್ದಾನೆ.
ರಾಹುವಿನ ನಕ್ಷತ್ರಪುಂಜವಾಗಿರುವ ಸ್ವಾತಿ ನಕ್ಷತ್ರದಲ್ಲಿ ಶುಕ್ರನ ನಕ್ಷತ್ರ ಪಲ್ಲಟವು ಎಲ್ಲಾ 12 ರಾಶಿಯವರ ಮೇಲೂ ಪ್ರಭಾವ ಬೀರುತ್ತದೆ. ಆದಾಗ್ಯೂ, ಈ ಸಮಯವು ಮೂರು ರಾಶಿಯವರ ಬದುಕಿನಲ್ಲಿ ಬಂಗಾರದ ಸಮಯ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳ ಬಗ್ಗೆ ತಿಳಿಯೋಣ...
ಮೇಷ ರಾಶಿ:
ರಾಹು ನಕ್ಷತ್ರದಲ್ಲಿ ಶುಕ್ರ ಸಂಚಾರವು ಈ ರಾಶಿಯವರಿಗೆ ಶುಭ ದಿನಗಳನ್ನು ತರಲಿದೆ. ವೃತ್ತಿ ಬದುಕಿನಲ್ಲಿ ಹೊಸ ಹೊಸ ಅವಕಾಶಗಳು ದೊರೆಯಲಿವೆ. ಉದ್ಯಮಿಗಳಿಗೆ ಬಂಪರ್ ಆದಾಯ ಹರಿದುಬರಲಿದ್ದು, ಸಮಾಜದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗಲಿದೆ. ವ್ಯವಹಾರದಲ್ಲಿ ಹೊಸ ಒಪ್ಪಂದಗಳಿಗೆ ಸಹಿ ಹಾಕುವ ಸಂಭವವಿದೆ.
ಮಿಥುನ ರಾಶಿ:
ಶುಕ್ರ ನಕ್ಷತ್ರ ಪರಿವರ್ತನೆಯಿಂದ ಈ ರಾಶಿಯವರಿಗೆ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಅಷ್ಟ ದಿಕ್ಕುಗಳಿಂದಲೂ ಹಣದ ಹರಿವು ಹೆಚ್ಚಾಗಲಿದ್ದು ನಿಮ್ಮ ಕನಸಿನ ಮನೆ ಕೊಳ್ಳುವ ಸಾಧ್ಯತೆಯೂ ಇದೆ. ಕೆಲಸದಲ್ಲಿ ಉನ್ನತ ಹುದ್ದೆ ಅಲಂಕರಿಸುವಿರಿ. ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ಅನುಭವಿಸುವ ಸಮಯ ಇದಾಗಿದೆ.
ಸಿಂಹ ರಾಶಿ:
ಕಾರ್ತಿಕ ಮಾಸದಲ್ಲಿ ರಾಹು ನಕ್ಷತ್ರಕ್ಕೆ ಪ್ರವೇಶಿಸಲಿರುವ ಶುಕ್ರನು ಈ ರಾಶಿಯವರ ಜಾತಕದಲ್ಲಿ ಮದುವೆ ಯೋಗವನ್ನು ನೀಡಲಿದ್ದಾನೆ. ಉದ್ಯೋಗದಲ್ಲಿ ಸುವರ್ಣಾವಕಾಶಗಳು ದೊರೆಯಲಿದ್ದು ಇವುಗಳನ್ನು ಸದುಪಯೋಗ ಪಡಿಸಿಕೊಂಡರೆ ಜೀವನದಲ್ಲಿ ಅಪಾರ ಯಶಸ್ಸನ್ನು ಗಳಿಸುವಿರಿ. ಆರ್ಥಿಕವಾಗಿಯೂ ಅದೃಷ್ಟದ ಸಮಯ ಇದಾಗಿದ್ದು ಶ್ರೀಮಂತರಾಗುವ ಯೋಗವೂ ಇದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.