)
ವರ್ಷದ ಕೊನೆಯ ಚಂದ್ರಗ್ರಹಣ ಸೆಪ್ಟೆಂಬರ್ 7 ರಂದು ಸಂಭವಿಸಿದ್ದು, ಈಗ ವರ್ಷದ ಕೊನೆಯ ಸೂರ್ಯಗ್ರಹಣದ ಸರದಿ ಬಂದಿದೆ. 2025ರ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ.
ಸೆಪ್ಟೆಂಬರ್ ತಿಂಗಳಲ್ಲಿ 15 ದಿನಗಳಲ್ಲಿ 2 ಗ್ರಹಣಗಳು ಸಂಭವಿಸುತ್ತವೆ. ಸೆಪ್ಟೆಂಬರ್ 7 ರ ಚಂದ್ರಗ್ರಹಣ ಈಗಾಗಲೇ ಗೋಚರಿಸಿಯಾಗಿದೆ. ಇದರ ಬೆನ್ನಲ್ಲೇ ಸೆಪ್ಟೆಂಬರ್ 21 ರಂದು, ಕನ್ಯಾರಾಶಿಯಲ್ಲಿ ಸೂರ್ಯಗ್ರಹಣ ಸಂಭವಿಸಲಿದೆ.
ಇದನ್ನೂ ಓದಿ : ಚಂದ್ರಗ್ರಹಣ ಪ್ರಯುಕ್ತ ಮಹಾಕೂಟದ ಪುಷ್ಕರಣಿಯಲ್ಲಿ ಧ್ಯಾನ
ವರ್ಷದ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣ ಸೆಪ್ಟೆಂಬರ್ 21 ರ ಸರ್ವಪಿತೃ ಅಮಾವಾಸ್ಯೆಯಂದು ಸಂಭವಿಸಲಿದೆ. ಇದು ಭಾಗಶಃ ಸೂರ್ಯಗ್ರಹಣವಾಗಿದ್ದು, ಭಾರತದಲ್ಲಿ ಇದು 11 ಗಂಟೆಗೆ ಪ್ರಾರಂಭವಾಗಿ ಸೆಪ್ಟೆಂಬರ್ 22 ರ ಬೆಳಗಿನ ಜಾವ 3.24ಕ್ಕೆ ಕೊನೆಗೊಳ್ಳುತ್ತದೆ.
ಜ್ಯೋತಿಷ್ಯದ ಪ್ರಕಾರ, ಈ ಸೂರ್ಯಗ್ರಹಣವು ಕೆಲವು ರಾಶಿಯವರ ಮೇಲೆ ವಿಶೇಷ ಪರಿಣಾಮ ಬೀರಬಹುದು. ಕೆಲವು ರಾಶಿಯವರಿಗೆಅದ್ಭುತ ಪ್ರಯೋಜನ ನೀಡಿದರೆ ಇನ್ನು ಕೆಲವರಿಗೆ ಅಶುಭ ಫಲಿತಾಂಶ ನೀಡುತ್ತದೆ.
ಪಿತೃಪಕ್ಷದ ಕೊನೆಯ ದಿನದಂದು ಸಂಭವಿಸುವ ಈ ಸೂರ್ಯಗ್ರಹಣವು ಕನ್ಯಾ ರಾಶಿ ಮತ್ತು ಉತ್ತರ ಫಲ್ಗುಣಿ ನಕ್ಷತ್ರದಲ್ಲಿ ಗೋಚರಿಸಲಿದೆ. ಇದು ಎಲ್ಲಾ 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಈ ಸೂರ್ಯಗ್ರಹಣವು ಮಿಥುನ, ಕನ್ಯಾ ಮತ್ತು ಮೀನ ರಾಶಿಯವರಿಗೆ ಅಶುಭ ಪರಿಣಾಮವನ್ನು ಬೀರಬಹುದು. ಈ ಜನರು ವೃತ್ತಿ, ವೈಯಕ್ತಿಕ ಜೀವನ, ಸಂಪತ್ತು, ಆರೋಗ್ಯ ಮತ್ತು ಸಂಬಂಧಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರಬಹುದು. ಇವರು ವಾದಗಳಲ್ಲಿ ಭಾಗಿಯಾಗುವುದನ್ನು ತಪ್ಪಿಸಬೇಕು.
ಆದರೆ ಈ ಸೂರ್ಯಗ್ರಹಣವು ವೃಷಭ ಮತ್ತು ತುಲಾ ರಾಶಿಯವರಿಗೆ ಶುಭವಾಗಿ ಇರುವುದು. ಇವರು ತಮ್ಮ ವೃತ್ತಿಜೀವನದಲ್ಲಿ ಹಣ ಮತ್ತು ಪ್ರಗತಿಯನ್ನು ಪಡೆಯುವ ಸಾಧ್ಯತೆಗಳಿವೆ.
(ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ .)