Rayara Vardanti Utsava: ಕಲಿಯುಗದ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮೀಜಿಗಳು ನೆಲೆಸಿರುವ ಪುಣ್ಯ ಭೂಮಿ ಮಂತ್ರಾಲಯದಲ್ಲಿ ಸಡಗರ ಸಂಭ್ರಮದಿಂದ ರಾಯರ 430 ನೇ ವರ್ಧಂತಿ ಮಹೋತ್ಸವ ಸಂಭ್ರಮ ಸಡಗರದಿಂದ ಜರುಗಿದೆ.
ಬೆಳಗ್ಗೆಯಿಂದಲೇ ಶ್ರೀಮಠದಲ್ಲಿ ರಾಘವೇಂದ್ರ ಸ್ವಾಮಿಗಳ ಮೂಲ ಬೃದಾಂವನಕ್ಕೆ ವಿಶೇಷ ಪೂಜೆ, ಪಂಚಾಮೃತಾಭಿಷೇಕ ಮಾಡಲಾಯಿತು. ವರ್ಧಂತೋತ್ಸವ(ಹುಟ್ಟುಹಬ್ಬ) ಮಠದ ಪೀಠಾಧಿಪತಿ ಬೃಂದಾವನಕ್ಕೆ ಅಭಿಷೇಕ ನಂತರ ವಿವಿಧ ಹೂ ಗಳಿಂದ ಅಲಂಕಾರ ಮಾಡಿದ್ದರು. ಮಠದ ಪ್ರಾಂಗಣದಲ್ಲಿ ಸ್ವರ್ಣ ರಥೋತ್ಸವ ನೆರವೇರಿಸಿದರು. ಶ್ರೀ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು, ಸ್ತೋತ್ರ ಪಠಣಗಳನ್ನು ಮಾಡುವ ಮೂಲಕ ಭಕ್ತರಿಗೆ ಆಶಿರ್ವದಿಸಿದರು.
ರಾಯರು ಸಂಗೀತ ಪ್ರಿಯರಾಗಿದ್ರು.. ರಾಯರ ವರ್ಧಂತಿ ಮಹೋತ್ಸವ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಸಹ ಚೆನ್ನೈ ಮೂಲದ ವಿವಿಧ ತಂಡಗಳ ಮೂಲಕ ನಾದಾಹಾರ ಕಾರ್ಯಕ್ರಮ ನಡೆಸಲಾಯಿತು.. ರಾಯರ ಸನ್ನಿಧಿಯಲ್ಲಿ ಕಳೆದ ಸುಮಾರು ವರ್ಷಗಳಿಂದ ಸಂಗೀತ ಸೇವೆ ಮಾಡಲು ನಮಗೆ ಅವಕಾಶ ಸಿಕ್ಕಿದೆ ಅಂತ ಸಂಗೀತಗಾರರು ಸಂತಸಪಟ್ಟರು.
150ಕ್ಕೂ ಹೆಚ್ಚು ಜನರು ಏಕಕಾಲಕ್ಕೆ ರಾಯರಿಗೆ ಹಾಡಿ ನಾದಹಾರ ಸಲ್ಲಿಸಿ ಹಳೆ ಸಂಪ್ರದಾಯಕ್ಕೆ ಹೊಸ ಮೆರುಗು ನೀಡಿದರು. ಶ್ರೀ ಮಠದಲ್ಲಿ ನಡೆದ ವಾದ್ಯ-ಮೇಳಗಳ ಮಾಧುರ್ಯಕ್ಕೆ ಭಕ್ತರ ದಂಡು ತಲೆದೂಗಿ ರಾಯರ ಜಪ ಮಾಡಿದರು. ಆರು ದಿನಗಳಿಂದ ನಡೆಯುತ್ತಿರೊ ಗುರು ವೈಭವೋತ್ಸವ ಸಂಭ್ರಮದಲ್ಲಿ ನಾಡಿನ ನಾನಾ ಕಡೆಗಳಿಂದ ಆಗಮಿಸಿ ರಾಯರ ಕೃಪೆಗೆ ಪಾತ್ರರಾದರು. ಕೊನೆಗೆ ರಾಮದೇವರ ಪೂಜೆ, ರಾಯರ ಮೂಲಬೃಂದಾವನಕ್ಕೆ ವಿವಿಧ ವಸ್ತುಗಳು, ಭಕ್ಷಗಳನ್ನ ಅರ್ಪಿಸುವ ಮೂಲಕ ಶ್ರೀಗಳು ವಿಶೇಷ ಪೂಜೆ ಕೈಂಕರ್ಯಗಳನ್ನ ನೆರವೇರಿಸಿದರು. ಈ ವೇಳೆ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ ರಾಯರ ದರ್ಶನ ಪಡೆದರು.
ಒಟ್ಟಿನಲ್ಲಿ ಭಕ್ತರ ಪಾಲಿನ ಕಾಮಧೇನು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ 6 ದಿನಗಳಿಂದ ನಡೆದ ಗುರು ವೈಭವೋತ್ಸವ, ರಾಯರ ಪಟ್ಟಾಭಿಷೇಕ ಹಾಗೂ ವರ್ಧಂತಿ ಮಹೋತ್ಸವಕ್ಕೆ ಇಂದು ತೆರೆ ಬಿದ್ದಿದೆ. ಸಹಸ್ರಾರು ಭಕ್ತರು ಪ್ರತಿವರ್ಷದಂತೆ ಈ ವರ್ಷವೂ ರಾಯರ ಉತ್ಸವದಲ್ಲಿ ಭಾಗಿಯಾಗಿ ಪುನೀತರಾಗಿದ್ದಂತು ಸುಳ್ಳಳ್ಳ ..
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.









