Sun Transit In April: ವೈದಿಕ ಜ್ಯೋತಿಷ್ಯದಲ್ಲಿ, ಗ್ರಹಗಳ ರಾಜ ಸೂರ್ಯ ದೇವನಿಗೆ ಮಹತ್ವದ ಸ್ಥಾನವಿದೆ. ಸೂರ್ಯ ದೇವನು ಪ್ರತಿ ತಿಂಗಳು ತನ್ನ ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಇನ್ನೆರಡು ವರಗಳಲ್ಲಿ ಗ್ರಹಗಳ ರಾಜ ಸೂರ್ಯ ಮಂಗಳನ ರಾಶಿಚಕ್ರ ಚಿಹ್ನೆಯಾದ ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಏಪ್ರಿಲ್ 14, 2023 ರಂದು ಸೂರ್ಯ ದೇವನು, ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ.
ಧಾರ್ಮಿಕ ನಂಬಿಕೆಗಳ ಪ್ರಕಾರ, ಸೂರ್ಯ ರಾಶಿ ಪರಿವರ್ತನೆಯು ಎಲ್ಲಾ 12 ರಾಶಿಗಳ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ. ಮೇಷ ರಾಶಿಗೆ ಪ್ರವೇಶಿಸಲಿರುವ ಸೂರ್ಯನು ದ್ವಾದಶ ರಾಶಿಗಳ ಮೇಲೆ ಶುಭ-ಅಶುಭ ಪರಿಣಾಮ ಬೀರುತ್ತದೆ. ಆದರೂ, ಈ ಸಮಯದಲ್ಲಿ ಕೆಲವು ರಾಶಿಯವರು ಬಂಪರ್ ಧನ ಲಾಭವನ್ನು ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
ಇನ್ನೆರಡು ವಾರಗಳಲ್ಲಿ ಮೇಷ ರಾಶಿಗೆ ಸೂರ್ಯದೇವನ ಪ್ರವೇಶ, ಈ ರಾಶಿಯವರಿಗೆ ಹಣದ ಸುರಿಮಳೆ:-
ಮೇಷ ರಾಶಿ:
ಮೇಷ ರಾಶಿಯಲ್ಲಿಯೇ ಸೂರ್ಯನ ಪ್ರವೇಶ ಆಗುತ್ತಿರುವುದರಿಂದ ಇದು ಈ ರಾಶಿಯವರ ಮೇಲೆ ಧನಾತ್ಮಕ ಪರಿಣಾಮವನ್ನು ಬೀರಲಿದೆ. ಈ ಸಮಯದಲ್ಲಿ ಮೇಷ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗಲಿದ್ದು, ನೀವು ಕೈ ಹಾಕಿದ ಪ್ರತಿ ಕೆಲಸದಲ್ಲಿಯೂ ಯಶಸ್ಸು ನಿಮ್ಮದಾಗಲಿದೆ. ಇದರಿಂದ ಹಣದ ಹರಿವೂ ಹೆಚ್ಚಾಗಲಿದೆ.
ಇದನ್ನೂ ಓದಿ- ರಾಮನವಮಿಯಂದೇ ರೂಪುಗೊಂಡಿದೆ 8 ಮಹಾಯೋಗಗಳು ! ಇಂದಿನಿಂದ ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ !
ಮಿಥುನ ರಾಶಿ:
ಸೂರ್ಯ ರಾಶಿ ಪರಿವರ್ತನೆಯು ಮಿಥುನ ರಾಶಿಯವರಿಗೆ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ನೀಡಲಿದೆ. ಈ ಸಮಯದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದ್ದು, ಆದಾಯವೂ ಹೆಚ್ಚಾಗಲಿದೆ.
ಸಿಂಹ ರಾಶಿ:
ಸಿಂಹ ರಾಶಿಯ ಅಧಿಪತಿಯಾಗಿರುವ ಸೂರ್ಯ ಸಂಚಾರವು ಈ ರಾಶಿಯವರಿಗೆ ಭಾಗ್ಯೋದಯವನ್ನು ಕರುಣಿಸಲಿದೆ. ಈ ಸಮಯದಲ್ಲಿ ವೃತ್ತಿ ರಂಗದಲ್ಲಿ ನಿರೀಕ್ಷಿತ ಯಶಸ್ಸು ನಿಮ್ಮದಾಗಲಿದೆ. ವಿದೇಶಕ್ಕೆ ತೆರಳಲು ಬಯಸುವವರಿಗೂ ಅವಕಾಶ ದೊರೆಯಲಿದೆ.
ಇದನ್ನೂ ಓದಿ- ಸಾಡೇಸಾತಿಯಲ್ಲೂ ಈ ರಾಶಿಯವರನ್ನು ಕಾಪಾಡುತ್ತಾನೆ ಶನಿದೇವ
ವೃಶ್ಚಿಕ ರಾಶಿ:
ಸೂರ್ಯ ರಾಶಿ ಪರಿವರ್ತನೆಯಿಂದ ವೃಶ್ಚಿಕ ರಾಶಿಯವರಿಗೂ ಇನ್ನೇರಡು ವಾರಗಳ ಬಳಿಕ ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿದ್ದು ಬಂಪರ್ ಧನವೃಷ್ಟಿಯನ್ನು ನೀಡಲಿದೆ. ಉದ್ಯೋಗ ರಂಗದಲ್ಲಿಯೂ ಪ್ರಗತಿಯಾಗಲಿದ್ದು, ಉನ್ನತ ಹುದ್ದೆಯನ್ನು ಅಲಂಕರಿಸುವಿರಿ. ಆರೋಗ್ಯ ಭಾಗ್ಯವೂ ಇದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.