)
Shukraditya Rajyoga Effect: ವೈದಿಕ ಜ್ಯೋತಿಷ್ಯದ ಪ್ರಕಾರ, ಅಕ್ಟೋಬರ್ 09, 2025ರಂದು ಐಶ್ವರ್ಯಕಾರಕ ಶುಕ್ರ ಕನ್ಯಾ ರಾಶಿಗೆ ಪ್ರವೇಶಿಸಲಿದ್ದಾನೆ. ಇದರೊಂದಿಗೆ, ಈಗಾಗಲೇ ಇದೇ ರಾಶಿಯಲ್ಲಿ ಉಪಸ್ಥಿತನಿರುವ ಸೂರ್ಯನೊಟ್ಟಿಗೆ ಸಂಯೋಗ ಹೊಂದಲಿದ್ದಾನೆ. ಶುಕ್ರ ಸೂರ್ಯರ ಈ ವಿಶೇಷ ಸಂಯೋಗದೊಂದಿಗೆ ಶುಕ್ರಾದಿತ್ಯ ರಾಜಯೋಗ ನಿರ್ಮಾಣವಾಗಲಿದೆ. ಇದರ ಪ್ರಭಾವ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಕೆಲವು ರಾಶಿಯವರಿಗೆ ಇದು ಭಾಗ್ಯೋದಯದ ಸಮಯ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವೆಂದು ತಿಳಿಯೋಣ...
ಶುಕ್ರಾದಿತ್ಯ ರಾಜಯೋಗ ಮೇಷ ರಾಶಿಗೆ ಏನು ಫಲ:
ಶುಕ್ರ ಆದಿತ್ಯರ ಸಂಯೋಗದಿಂದ ಈ ರಾಶಿಯವರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭವಾಗಲಿವೆ. ದೀರ್ಘಕಾಲದಿಂದ ಕಾಡುತ್ತಿದ್ದ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ದೊರೆಯಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸುವರ್ಣ ಸಮಯ.
ಶುಕ್ರಾದಿತ್ಯ ರಾಜಯೋಗ ವೃಷಭ ರಾಶಿಗೆ ಏನು ಫಲ:
ಶುಕ್ರಾದಿತ್ಯ ರಾಜಯೋಗ ಫಲವಾಗಿ ಈ ರಾಶಿಯವರ ಜೀವನದಲ್ಲಿ ಸಕಾರಾತ್ಮಕತೆ ಹೆಚ್ಚಾಗಲಿದೆ. ಪ್ರೀತಿಯ ಜೀವನದಲ್ಲಿ ಮಧುರತೆ ಹೆಚ್ಚಾಗಲಿದೆ. ನಿಮ್ಮ ಮದುವೆಗೆ ಮನೆಯವರ ಸಮ್ಮತಿ ದೊರೆಯಲಿದೆ. ವೃತ್ತಿ ಬದುಕಿನಲ್ಲಿ ಕಠಿಣ ಪರಿಶ್ರಮದ ಸಂಪೂರ್ಣ ಫಲ ದೊರೆಯಲಿದೆ.
ಶುಕ್ರಾದಿತ್ಯ ರಾಜಯೋಗ ಮಿಥುನ ರಾಶಿಗೆ ಏನು ಫಲ:
ಶುಕ್ರ ಸೂರ್ಯರ ಸಂಯೋಗದಿಂದ ಈ ರಾಶಿಯವರ ಜೀವನದಲ್ಲಿ ಭಾಗ್ಯೋದಯವಾಗಲಿದೆ. ಕೌಟುಂಬಿಕ ಕಲಹಗಳಿಂದ ಪರಿಹಾರ ದೊರೆಯಲಿದೆ. ಮನೆಯಲ್ಲಿ ಸುಖ-ಸೌಕರ್ಯಗಳು ಹೆಚ್ಚಾಗಲಿವೆ. ಭೂಮಿ ವ್ಯವಹಾರದಲ್ಲಿ ಭರ್ಜರಿ ಲಾಭವಾಗಲಿದೆ.
ಶುಕ್ರಾದಿತ್ಯ ರಾಜಯೋಗ ಕಟಕ ರಾಶಿಗೆ ಏನು ಫಲ:
ಸೂರ್ಯನ ವಿಶೇಷ ಅನುಗ್ರಹದಿಂದ ಈ ರಾಶಿಯವರಿಗೆ ಸಂಬಂಧಗಳು ಸುಧಾರಿಸಲಿವೆ. ವ್ಯವಹಾರದಲ್ಲಿ ನಿಮ್ಮ ಆಲೋಚನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವುದರಿಂದ ಅಧಿಕ ಲಾಭವಾಗಲಿದೆ. ಕುಟುಂಬದೊಂದಿಗೆ ಪ್ರವಾಸ ಕೈಗೊಳ್ಳಲು ಸುಸಮಯ.
ಶುಕ್ರಾದಿತ್ಯ ರಾಜಯೋಗ ಸಿಂಹ ರಾಶಿಗೆ ಏನು ಫಲ:
ಶುಕ್ರಾದಿತ್ಯ ಯೋಗದ ಫಲವಾಗಿ ಈ ರಾಶಿಯವರಿಗೆ ಅದರಲ್ಲೂ ವಿಶೇಷವಾಗಿ ಸೃಜನಶೀಲ ಅಭಿವ್ಯಕ್ತಿ ಹೊಂದಿರುವವರಿಗೆ ಅಧಿಕ ಲಾಭವಾಗಲಿದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿದ್ದು ಆರ್ಥಿಕ ಸಮಸ್ಯೆಗಳಿಂದ ಹೊರಬರುವಿರಿ. ಅವಿವಾಹಿತರಿಗೆ ವಿವಾಹ ಯೋಗವಿದೆ.
ಶುಕ್ರಾದಿತ್ಯ ರಾಜಯೋಗ ಕನ್ಯಾ ರಾಶಿಗೆ ಏನು ಫಲ:
ಶುಕ್ರ ಸೂರ್ಯರ ಪ್ರಬಲ ಯುತಿಯಿಂದಾಗಿ ಈ ರಾಶಿಯವರಿಗೆ ಮನೆ ಕಟ್ಟುವ ಯೋಗವಿದೆ. ವೈಯಕ್ತಿಕ ಬದುಕಿನಲ್ಲಿ ಗೊಂದಲಗಳು ನಿವಾರಣೆ ಆಗಲಿವೆ. ಕೆಲಸಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ಆದಾಗ್ಯೂ, ಆರೋಗ್ಯದ ಬಗ್ಗೆ ಸ್ವಲ್ಪ ಜಾಗರೂಕರಾಗಿರಬೇಕು.
ಶುಕ್ರಾದಿತ್ಯ ರಾಜಯೋಗ ತುಲಾ ರಾಶಿಗೆ ಏನು ಫಲ:
ಶುಕ್ರಾದಿತ್ಯ ಯೋಗವು ಈ ರಾಶಿಯವರಿಗೆ ವಿಶೇಷ ಪ್ರಯೋಜನವನ್ನು ನೀಡಲಿದೆ. ಯಾವುದೇ ಕೆಲಸಕ್ಕೆ ಸಂಬಂಧಿಸಿದಂತೆ ಆತ್ಮಾವಲೋಕನಕ್ಕೆ ಇದು ಸರಿಯಾದ ಸಮಯ. ಹಣಕಾಸಿನ ಸ್ಥಿತಿಯನ್ನು ಸರಿಯಾಗಿ ನಿಭಾಯಿಸದಿದ್ದರೆ ಬಜೆಟ್ ಹಾಳಾಗಬಹುದು. ಆರ್ಥಿಕ ಮುಗ್ಗಟ್ಟು ಏರ್ಪಡಬಹುದು.
ಶುಕ್ರಾದಿತ್ಯ ರಾಜಯೋಗ ವೃಶ್ಚಿಕ ರಾಶಿಗೆ ಏನು ಫಲ:
ಶುಕ್ರಾದಿತ್ಯರ ಪ್ರಬಲ ಸಂಯೋಗ ರಾಜಯೋಗದಿಂದಾಗಿ ಈ ರಾಶಿಯವರಿಗೆ ಬಹುದಿನಗಳ ನಿಮ್ಮ ಕನಸ್ಸು ನನಸಾಗುವುದು. ವೃತ್ತಿ-ವ್ಯವಹಾರದಲ್ಲಿ ಸಿಗುವ ಹೊಸ ಹೊಸ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ. ವಿಶೇಷವಾಗಿ ನಿಮ್ಮ ನೆಟ್ವರ್ಕಿಂಗ್ ಕ್ಷೇತ್ರವನ್ನು ಬಲಪಡಿಸಿಕೊಳ್ಳುವುದರಿಂದ ಹೆಚ್ಚಿನ ಲಾಭವಾಗಲಿದೆ.
ಶುಕ್ರಾದಿತ್ಯ ರಾಜಯೋಗ ಧನು ರಾಶಿಗೆ ಏನು ಫಲ:
ಶುಕ್ರಾದಿತ್ಯ ರಾಜಯೋಗವು ಈ ರಾಶಿಯವರ ಬದುಕಿನಲ್ಲಿ ಅದೃಷ್ಟವನ್ನು ಹೊತ್ತು ತರಲಿದೆ. ನಿಮ್ಮ ವೃತ್ತಿ ಬದುಕಿನಲ್ಲಿ ತುಂಬಾ ಎತ್ತರಕ್ಕೆ ಬೆಳೆಯುವಿರಿ. ಕಠಿಣ ಪರಿಶ್ರಮದ ಸಂಪೂರ್ಣ ಫಲ ದೊರೆಯಲಿದೆ. ಹೊಸ ವ್ಯವಹಾರದಲ್ಲಿ ಶುಭ ಫಲಗಳನ್ನು ನಿರೀಕ್ಷಿಸಬಹುದು.
ಶುಕ್ರಾದಿತ್ಯ ರಾಜಯೋಗ ಮಕರ ರಾಶಿಗೆ ಏನು ಫಲ:
ಶುಕ್ರ ಸೂರ್ಯರ ವಿಶೇಷ ಯುತಿಯಿಂದಾಗಿ ಈ ರಾಶಿಯವರ ಬದುಕಿನಲ್ಲಿ ಅದೃಷ್ಟ ಕೈ ಹಿಡಿಯಲಿದೆ ವೃತ್ತಿ ಬದುಕಿನಲ್ಲಿ ಯಶಸ್ಸನ್ನು, ಹಣಕಾಸಿನ ವಿಷಯದಲ್ಲಿ ಉತ್ತಮ ಫಲಗಳನ್ನು ನಿರೀಕ್ಷಿಸಬಹುದು. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಬಗೆಯರಿಯಲಿವೆ.
ಶುಕ್ರಾದಿತ್ಯ ರಾಜಯೋಗ ಕುಂಭ ರಾಶಿಗೆ ಏನು ಫಲ:
ಶುಕ್ರಾದಿತ್ಯ ರಾಜಯೋಗವು ಈ ರಾಶಿಯವರ ಬದುಕಿನಲ್ಲಿ ಹಲವು ಆಯಾಮಗಳಲ್ಲಿ ಅದೃಷ್ಟವನ್ನು ತರಲಿದೆ. ಹಣಕಾಸಿನ ವಿಷಯದಲ್ಲಿ ಅತ್ಯದ್ಭುತ ಸಮಯ ಇದಾಗಿದ್ದು ಹೊಸ ಮನೆ, ವಾಹನ ಖರೀದಿಯ ಜೊತೆಗೆ ವಿದೇಶ ಪ್ರವಾಸ ಯೋಗವೂ ಇದೆ.
ಶುಕ್ರಾದಿತ್ಯ ರಾಜಯೋಗ ಮೀನ ರಾಶಿಗೆ ಏನು ಫಲ:
ಶುಕ್ರ ಸೂರ್ಯರ ಸಂಯೋಗವು ಈ ರಾಶಿಯವರಿಗೆ ಒಳ್ಳೆಯ ದಿನಗಳನ್ನು ಹೊತ್ತು ತರಲಿದೆ. ಸಂಗಾತಿಯೊಂದಿಗೆ ವಿದೇಶ ಪ್ರವಾಸ ಕೈಗೊಳ್ಳುವ ನಿಮ್ಮ ಕನಸು ನನಸಾಗಲಿದೆ. ವ್ಯಾಪಾರ ವ್ಯವಹಾರದಲ್ಲಿ ಲಾಭಾಂಶಗಳು ಹೆಚ್ಚಾಗಲಿವೆ. ಸಮಾಜದಲ್ಲಿ ನಿಮ್ಮ ಕೀರ್ತಿ, ಗೌರವವೂ ವೃದ್ಧಿಯಾಗಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.