ಕಠಿಣ ಶ್ರಮ ಬುದ್ದಿವಂತಿಕೆಯಿಂದ ತಮ್ಮ ಅದೃಷ್ಟವನ್ನೇ ಬದಲಿಸುವ ಶಕ್ತಿಯುಳ್ಳವರು ಈ ರಾಶಿಯವರು ! ಯಶಸ್ಸಿಗೆ ಇನ್ನೊಂದು ಹೆಸರೇ ಇವರು

ಇವರು ತಮ್ಮ ಕಠಿಣ ಪರಿಶ್ರಮದಿಂದ  ಅದೃಷ್ಟವನ್ನೇ ಬದಲಿಸುತ್ತಾರೆ. ತಾವು ಬಯಸಿದ ಸ್ಥಾನವನ್ನು ಪಡೆದೆ ತೀರುತ್ತಾರೆ.   

Written by - Ranjitha R K | Last Updated : Mar 5, 2025, 06:25 PM IST
  • ಈ ರಾಶಿಯವರು ಸವಾಲುಗಳಿಗೆ ಹೆದರುವುದಿಲ್ಲ
  • ಕಠಿಣ ಪರಿಶ್ರಮದಿಂದ ಅದೃಷ್ಟವನ್ನೇ ಬದಲಿಸುತ್ತಾರೆ
  • ತಾವು ಬಯಸಿದ ಸ್ಥಾನವನ್ನು ಪಡೆದೆ ತೀರುತ್ತಾರೆ
ಕಠಿಣ ಶ್ರಮ ಬುದ್ದಿವಂತಿಕೆಯಿಂದ ತಮ್ಮ ಅದೃಷ್ಟವನ್ನೇ ಬದಲಿಸುವ ಶಕ್ತಿಯುಳ್ಳವರು ಈ ರಾಶಿಯವರು ! ಯಶಸ್ಸಿಗೆ ಇನ್ನೊಂದು ಹೆಸರೇ ಇವರು

ಬೆಂಗಳೂರು : ಕಠಿಣ ಪರಿಶ್ರಮ ಮತ್ತು ಧೈರ್ಯದಿಂದ ವ್ಯಕ್ತಿ ತನ್ನ ಭವಿಷ್ಯವನ್ನೇ ಬದಲಾಯಿಸಬಹುದು ಎನ್ನುವ ಮಾತಿದೆ. ಜ್ಯೋತಿಷ್ಯಶಾಸ್ತ್ರದ  ಪ್ರಕಾರ, ಕೆಲವು ರಾಶಿಯವರು ಜೀವನದಲ್ಲಿ ಎದುರಾಗುವ ಯಾವುದೇ ಸವಾಲುಗಳಿಗೆ ಹೆದರುವುದಿಲ್ಲ. ಇವರು ತಮ್ಮ ಕಠಿಣ ಪರಿಶ್ರಮದಿಂದ  ಅದೃಷ್ಟವನ್ನೇ ಬದಲಿಸುತ್ತಾರೆ. ತಾವು ಬಯಸಿದ ಸ್ಥಾನವನ್ನು ಪಡೆದೆ ತೀರುತ್ತಾರೆ. 

Add Zee News as a Preferred Source

ಮೇಷ ರಾಶಿ :
ಮೇಷ ರಾಶಿಯವರು ತುಂಬಾ ಶ್ರಮಜೀವಿಗಳು. ಇವರು ದಣಿಯುವುದು ಬಹಳ ಕಡಿಮೆ. ಹಠಮಾರಿ ಸ್ವಭಾವದವರು. ತಾವು ಏನು ಮಾಡಬೇಕೆಂದು ಬಯಸುತ್ತಾರೆಯೋ, ಆ ಕಾರ್ಯವನ್ನು ಮಾಡಿಯೇ ಮುಗಿಸುತ್ತಾರೆ. 

ಇದನ್ನೂ ಓದಿ : ಇಂದಿನಿಂದ ಈ ರಾಶಿಯಲ್ಲಿ ಗಜ ಕೇಸರಿ ಯೋಗ! ಸ್ವಂತ ಮನೆ, ವಾಹನ ಖರೀದಿ ಭಾಗ್ಯ! ಜೊತೆ ನಿಂತು ಹರಸುವಳು ಅದೃಷ್ಟ ಲಕ್ಷ್ಮೀ !ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಮಯ!

ವೃಷಭ ರಾಶಿ :
ವೃಷಭ ರಾಶಿಯವರು ಕಠಿಣ ಪರಿಶ್ರಮದಿಂದ ಯಶಸ್ಸು ಪಡೆಯುತ್ತಾರೆ. ಜೀವನದಲ್ಲಿ ಏನೇ ಸವಾಲುಗಳು ಎದುರಾದರೂ ಇಟ್ಟ ಹೆಜ್ಜೆ ಹಿಂದೆ ತೆಗೆಯುವುದಿಲ್ಲ. ತಮ್ಮ ಗುರಿಯನ್ನು ಸಾಧಿಸುವುದರಿಂದ ಹಿಂದೆ ಸರಿಯುವುದಿಲ್ಲ.

ಸಿಂಹ ರಾಶಿ : 
ಸಿಂಹ ರಾಶಿಯವರು ಜೀವನೋತ್ಸಾಹದಿಂದ ಕೂಡಿರುತ್ತಾರೆ. ಇವರಿಗೆ ಜೀವನದಲ್ಲಿ ಯಶಸ್ಸು ಸಿಕ್ಕರೂ, ಸಿಗದಿದ್ದರೂ ಎದೆಗುಂದುವುದಿಲ್ಲ. ತಾವು ಕೈಗೆತ್ತಿಕೊಂಡ ಕೆಲಸದಲ್ಲಿ ಗೆಲುವು ಸಾಧಿಸಿದ ನಂತರವೇ ನಿಟ್ಟುಸಿರು ಬಿಡುತ್ತಾರೆ.  

ವೃಶ್ಚಿಕ ರಾಶಿ :
ವೃಶ್ಚಿಕ ರಾಶಿಯವರು ಕಠಿಣ ಪರಿಶ್ರಮ ಹಾಗೂ ಬುದ್ಧಿವಂತಿಕೆಯಿಂದ ಎಲ್ಲವನ್ನೂ ಪಡೆಯುತ್ತಾರೆ. ಅವರಲ್ಲಿ ಗೆಲ್ಲುವ ಉತ್ಸಾಹವಿರುತ್ತದೆ. ವೃಶ್ಚಿಕ ರಾಶಿಯವರು ತಮ್ಮ ಅದೃಷ್ಟವನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿರುತ್ತಾರೆ.  

ಇದನ್ನೂ ಓದಿ : ಮೀನ ರಾಶಿಯಲ್ಲಿ ಸೂರ್ಯ ಮತ್ತು ಶುಕ್ರನ ಸಂಯೋಗ; ಮಾರ್ಚ್ 14ರಿಂದ ಈ 3 ರಾಶಿಯವರ ಖಜಾನೆಯಲ್ಲಿ ಸಂಪತ್ತು ಹೆಚ್ಚಾಗುತ್ತೆ!!

ಮಕರ ರಾಶಿ  : 
ಶನಿಯು ಮಕರ ರಾಶಿಯ ಅಧಿಪತಿಯಾಗಿದ್ದು, ಈ ರಾಶಿಯವರು ಹುಟ್ಟಿನಿಂದಲೇ ಶ್ರಮಜೀವಿಗಳು. ಅವರು ಅದೃಷ್ಟಕ್ಕಿಂತ ಹೆಚ್ಚಾಗಿ ಕಾರ್ಯಗಳನ್ನು ಮಾಡಿ ಮುಗಿಸುವುದರಲ್ಲಿ ನಂಬಿಕೆಯಿಟ್ಟಿರುತ್ತಾರೆ.   ಯಾವಾಗಲೂ ಕಷ್ಟಪಟ್ಟು ಕೆಲಸ ಮಾಡುತ್ತಾರೆ. 

(ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News