)
Deepavali zodiac signs: ಗ್ರಹಗಳಲ್ಲಿ ಗುರುವಿನ ಮಹತ್ವ ಬೇರೆಯೇ ಇದೆ. ಏಕೆಂದರೆ ಗುರು ವರ್ಷಕ್ಕೊಮ್ಮೆ ಮಾತ್ರ ಸಂಚಾರ ಮಾಡುತ್ತಾನೆ. ಆದರೆ ಈ ಗ್ರಹವು 2025ರಲ್ಲಿ ಮೂರು ಬಾರಿ ಸಂಚಾರ ಮಾಡಲಿದೆ. ಇದರಿಂದ ಎಲ್ಲಾ 12 ರಾಶಿಯ ಜನರು ವಿವಿಧ ರೀತಿಯಲ್ಲಿ ಪ್ರಯೋಜನಗಳನ್ನ ಪಡೆಯುತ್ತಾರೆ, ಆದರೆ ಕೆಲವರು ತೊಂದರೆಗಳನ್ನ ಎದುರಿಸಬೇಕಾಗುತ್ತದೆ. ಆದರೆ ದೀಪಾವಳಿಗೆ ಮೊದಲು ಗುರುವಿನ ಪ್ರಭಾವದಿಂದ ಯಾವ ರಾಶಿಯವರಿಗೆ ಅದೃಷ್ಟ ಸಿಗುತ್ತದೆ ಎಂಬುದರ ಬಗ್ಗೆ ತಿಳಿಯಿರಿ...
ಮೀನ ರಾಶಿ: ಗುರುವಿನ ಪ್ರಭಾವದಿಂದ ಮೀನ ರಾಶಿಯ ಜನರು ಹೊಂದಿರುವ ಎಲ್ಲವೂ ಚಿನ್ನವಾಗಿರುತ್ತದೆ. ಈ ರಾಶಿಯು ಅನೇಕ ಆರ್ಥಿಕ ಪ್ರಯೋಜನಗಳನ್ನ ಪಡೆಯುತ್ತದೆ. ವಿದ್ಯಾರ್ಥಿಗಳು ಉತ್ತಮ ಶ್ರೇಣಿಗಳನ್ನ ಪಡೆಯುತ್ತಾರೆ. ಮನೆಯಲ್ಲಿ ಮತ್ತು ಹೊರಗೆ ಸಂತೋಷದ ವಾತಾವರಣವಿರುತ್ತದೆ. ಈ ರಾಶಿಯು ದೀಪಾವಳಿಗೆ ಮೊದಲು ಆದಾಯದಲ್ಲಿ ಹೆಚ್ಚಳ ಕಾಣಲಿದೆ. ಇದರೊಂದಿಗೆ ಅವರು ತಮ್ಮ ಕುಟುಂಬದೊಂದಿಗೆ ಹಬ್ಬವನ್ನ ಸಂತೋಷದಿಂದ ಆಚರಿಸುತ್ತಾರೆ.
ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯವರು ಆರ್ಥಿಕವಾಗಿ ಯಶಸ್ವಿಯಾಗುತ್ತಾರೆ. ಕೆಲಸದಲ್ಲಿನ ಅಡೆತಡೆಗಳು ದೂರವಾಗುತ್ತವೆ. ವಿದೇಶ ಪ್ರಯಾಣಕ್ಕಾಗಿ ವಿದ್ಯಾರ್ಥಿಗಳ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಉದ್ಯಮಿಗಳು ಉತ್ತಮ ಲಾಭ ಗಳಿಸುತ್ತಾರೆ. ದೀಪಾವಳಿ ಹಬ್ಬದ ಮೊದಲೇ ಅವರ ಜೀವನ ಸಂತೋಷವಾಗಿರುತ್ತದೆ.
ಧನು ರಾಶಿ: ಧನು ರಾಶಿಯವರಿಗೆ ಇರುವ ಎಲ್ಲವೂ ಬಂಗಾರವಾಗಲಿದೆ. ಆರ್ಥಿಕವಾಗಿ ಮತ್ತು ಆರೋಗ್ಯದ ದೃಷ್ಟಿಯಿಂದ ಎಲ್ಲವೂ ಚೆನ್ನಾಗಿ ನಡೆಯುತ್ತದೆ. ವಿದ್ಯಾರ್ಥಿಗಳು ಉತ್ತಮ ಶ್ರೇಣಿಗಳನ್ನ ಪಡೆಯುತ್ತಾರೆ. ನಿಮ್ಮ ಆದಾಯ ಮತ್ತಷ್ಟು ಹೆಚ್ಚಾಗುತ್ತದೆ. ಅನಿರೀಕ್ಷಿತ ರೀತಿಯಲ್ಲಿ ಹಣ ಬರುತ್ತದೆ. ಸಮಾಜದಲ್ಲಿ ಗೌರವ ಮತ್ತು ಶಿಷ್ಟಾಚಾರ ಹೆಚ್ಚಾಗುತ್ತದೆ.
ಧನು ರಾಶಿ: ಧನು ರಾಶಿಯವರ ಜೀವನದಲ್ಲಿ ದೀಪಾವಳಿ ಹೊಸಬೆಳಕು ತರಲಿದೆ. ಈ ರಾಶಿಯವರ ವೈವಾಹಿಕ ಸಂಬಂಧವೂ ಅದ್ಭುತವಾಗಿರುತ್ತದೆ. ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಘರ್ಷಣೆಗಳು ದೂರವಾಗುತ್ತವೆ. ಈ ರಾಶಿಯವರು ತಮ್ಮ ಕುಟುಂಬ ಸದಸ್ಯರೊಂದಿಗೆ ಸಂತೋಷದಿಂದ ಬದುಕುತ್ತಾರೆ. ಅದೃಷ್ಟದ ಬೆಂಬಲದಿಂದ ನಿಮಗೆ ಅಪಾರ ಸುಖ-ಸಂಪತ್ತು ಸಿಗಲಿದೆ.
(ಗಮನಿಸಿರಿ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)