ಶನಿ ದೇವನ ನಕ್ಷತ್ರಕ್ಕೆ ಶುಕ್ರನ ಪ್ರವೇಶವಾಗುತ್ತಿದ್ದ ಹಾಗೆ ಈ ರಾಶಿಯವರ ಸುವರ್ಣ ಯುಗ ಆರಂಭ !

Shukra Nakshatra Parivartan 2025:ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಏಪ್ರಿಲ್ 26, 2025 ರಂದು, ಸಂಪತ್ತು ಮತ್ತು ಸಮೃದ್ಧಿಯ ಅಂಶವಾದ ಶುಕ್ರನು ತನ್ನ ಚಲನೆಯನ್ನು ಬದಲಾಯಿಸುತ್ತಾನೆ. ಈ ದಿನ ಶುಕ್ರ ದೇವ ಉತ್ತರಭಾದ್ರ ನಕ್ಷತ್ರವನ್ನು ಪ್ರವೇಶಿಸುತ್ತಾರೆ.

Written by - Ranjitha R K | Last Updated : Feb 28, 2025, 01:53 PM IST
  • ಗ್ರಹಗಳು ಮತ್ತು ನಕ್ಷತ್ರಗಳು ಕಾಲಕಾಲಕ್ಕೆ ತಮ್ಮ ಚಲನೆಯನ್ನು ಬದಲಾಯಿಸುತ್ತಲೇ ಇರುತ್ತವೆ.
  • ಸಂಪತ್ತು ಮತ್ತು ಸಮೃದ್ಧಿಯ ಅಂಶವಾದ ಶುಕ್ರನು ತನ್ನ ಚಲನೆಯನ್ನು ಬದಲಾಯಿಸುತ್ತಾನೆ.
  • ಮೂರು ರಾಶಿಯವರ ಅದೃಷ್ಟ ಇದ್ದಕ್ಕಿದ್ದಂತೆ ಬದಲಾಗಬಹುದು.
ಶನಿ ದೇವನ ನಕ್ಷತ್ರಕ್ಕೆ ಶುಕ್ರನ ಪ್ರವೇಶವಾಗುತ್ತಿದ್ದ ಹಾಗೆ ಈ ರಾಶಿಯವರ ಸುವರ್ಣ ಯುಗ ಆರಂಭ !

Shukra Nakshatra Parivartan 2025 : ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳು ಮತ್ತು ನಕ್ಷತ್ರಗಳು ಕಾಲಕಾಲಕ್ಕೆ ತಮ್ಮ ಚಲನೆಯನ್ನು ಬದಲಾಯಿಸುತ್ತಲೇ ಇರುತ್ತವೆ. ಗ್ರಹಗಳು ಮತ್ತು ನಕ್ಷತ್ರಗಳ ಸಂಚಾರದ ವ್ಯಾಪಕ ಪ್ರಭಾವವು ಎಲ್ಲಾ ರಾಶಿಯವರ  ಮೇಲೆ ಗೋಚರಿಸುತ್ತದೆ. ನಕ್ಷತ್ರಪುಂಜದಲ್ಲಿನ ಬದಲಾವಣೆಯಾಗಿರಲಿ ಅಥವಾ ಗ್ರಹಗಳ ಸಂಚಾರವಾಗಿರಲಿ, ಅದರ ಪರಿಣಾಮವು ಕೆಲವು ರಾಶಿಯವರಿಗೆ  ಶುಭವಾಗಿದ್ದರೆ, ಇನ್ನು ಕೆಲವರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. 

Add Zee News as a Preferred Source

ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಏಪ್ರಿಲ್ 26, 2025 ರಂದು, ಸಂಪತ್ತು ಮತ್ತು ಸಮೃದ್ಧಿಯ ಅಂಶವಾದ ಶುಕ್ರನು ತನ್ನ ಚಲನೆಯನ್ನು ಬದಲಾಯಿಸುತ್ತಾನೆ. ಈ ದಿನ ಶುಕ್ರ ದೇವ ಉತ್ತರಭಾದ್ರ ನಕ್ಷತ್ರವನ್ನು ಪ್ರವೇಶಿಸುತ್ತಾರೆ. ಈ ನಕ್ಷತ್ರದ ಅಧಿಪತಿ  ಶನಿದೇವ. ಹೀಗಾಗಿ ಶುಕ್ರನು ಶನಿಯ ನಕ್ಷತ್ರವನ್ನು ಪ್ರವೇಶಿಸಿದ ನಂತರ ಮೂರು ರಾಶಿಯವರ ಅದೃಷ್ಟ ಇದ್ದಕ್ಕಿದ್ದಂತೆ ಬದಲಾಗಬಹುದು. 

ಇದನ್ನೂ ಓದಿ :  100 ವರ್ಷಗಳ ನಂತರ ಸೂರ್ಯಗ್ರಹಣದಂದೇ ಶನಿ ಸಂಚಾರ !ಈ ರಾಶಿಯವರಿಗೆ ಮನೆ, ಆಸ್ತಿ ಖರೀದಿ ಭಾಗ್ಯ!ಹಣಕಾಸಿನ ತೊಂದರೆ ನೀಗಿ ಸರ್ವ ಸುಖ ಅನುಭವಿಸುವ ಪರ್ವ ಕಾಲ

ವೃಷಭ ರಾಶಿ : ಭೂಮಿ, ಕಟ್ಟಡ ಅಥವಾ ಐಷಾರಾಮಿ ವಾಹನವನ್ನು ಖರೀದಿಸಬಹುದು. ಈ ಅವಧಿಯಲ್ಲಿ, ಉದ್ಯಮಿಗಳು ಹೂಡಿಕೆಗಳಿಂದ ಭಾರೀ  ಲಾಭವನ್ನು ಪಡೆಯುತ್ತಾರೆ. ಆರ್ಥಿಕ ಯೋಜನೆಗಳು ಯಶಸ್ವಿಯಾಗುತ್ತವೆ. ಸರ್ಕಾರಿ ಯೋಜನೆಯ ಲಾಭವನ್ನು ಪಡೆಯಬಹುದು. ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಉದ್ಯೋಗದಲ್ಲಿರುವವರು ದೊಡ್ಡ ಸಾಧನೆ ಮಾಡಬಹುದು. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. 

ತುಲಾ ರಾಶಿ : ಈ ಅವಧಿಯಲ್ಲಿ, ತುಲಾ ರಾಶಿಯವರ ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ. ಉದ್ಯೋಗದ ಹುಡುಕಾಟದಲ್ಲಿ ಇರುವವರಿಗೆ ಯಶಸ್ಸು ಸಿಗಬಹುದು. ಕುಟುಂಬದೊಂದಿಗೆ ದೀರ್ಘ ಪ್ರವಾಸಕ್ಕೆ ಹೋಗಬಹುದು. 

ಇದನ್ನೂ ಓದಿ : ಲಕ್ಷ್ಮಿ ನಾರಾಯಣ ರಾಜಯೋಗ: ಈ ರಾಶಿಯವರಿಗೆ ಭಾರೀ ಅದೃಷ್ಟ, ಸಕಲೈಶ್ವರ್ಯ ಪ್ರಾಪ್ತಿ

ವೃಶ್ಚಿಕ ರಾಶಿ : ಅದೃಷ್ದ ಬೆಂಬಲ ಸಿಗುವುದು. ಆರ್ಥಿಕ ಪ್ರಗತಿಗೆ ಹಲವು ಅವಕಾಶಗಳು ದೊರೆಯಲಿವೆ. ಆದಾಯದಲ್ಲಿ ಭಾರೀ ಏರಿಕೆಯಾಗಬಹುದು. ವ್ಯವಹಾರದಲ್ಲಿ ಹಣಕಾಸು ಹೂಡಿಕೆಯಿಂದ ಲಾಭವಾಗುತ್ತದೆ. ದೊಡ್ಡ ಮಟ್ಟದ ಆಸ್ತಿ ವ್ಯವಹಾರ ಮಾಡಬಹುದು. ಉದ್ಯೋಗದಲ್ಲಿರುವವರಿಗೆ ಬಡ್ತಿಯ ಲಾಭ ಸಿಗುತ್ತದೆ.

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢೀಕರಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News