ಬೆಂಗಳೂರು : Which Things Should not be kept near Tulsi Plant : ಸನಾತನ ಧರ್ಮದಲ್ಲಿ ತುಳಸಿ ಗಿಡವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ತುಳಸಿಯಲ್ಲಿ ಲಕ್ಷ್ಮಿ ದೇವಿ ನೆಲೆಸಿರುತ್ತಾಳೆ ಎಂದು ಹೇಳಲಾಗುತ್ತದೆ. ತುಳಸಿ ಗಿಡವನ್ನು ಪ್ರತಿದಿನ ಪೂಜಿಸುವುದರಿಂದ ಲಕ್ಷ್ಮಿ ದೇವಿಯ ಮತ್ತು ವಿಷ್ಣುವಿನ ಆಶೀರ್ವಾದ ಸಿಗುತ್ತದೆ. ಆದರೆ ಮನೆಯಲ್ಲಿ ತುಳಸಿ ಗಿಡವಿದ್ದರೆ, 4 ವಸ್ತುಗಳನ್ನು ಅದರ ಹತ್ತಿರ ಇಡಲೇಬಾರದು. ಒಂದು ವೇಳೆ ಈ ವಸ್ತುಗಳನ್ನು ತುಳಸಿ ಪಕ್ಕದಲ್ಲಿ ಇಟ್ಟರೆ ತುಳಸಿ ಪೂಜೆಯ ಸರಿಯಾದ ಪ್ರಯೋಜನಗಳು ಸಿಗುವುದಿಲ್ಲ. ಬದಲಾಗಿ ಲಕ್ಷ್ಮೀ ದೇವಿಯ ಕೋಪಕ್ಕೆ ಗುರಿಯಾಗಬೇಕಾಗಬಹುದು.
ತುಳಸಿ ಬಳಿ ಯಾವ ವಸ್ತುಗಳನ್ನು ಇಡಬಾರದು :
ಕಸದ ಬುಟ್ಟಿ : ಶಾಸ್ತ್ರಗಳ ಪ್ರಕಾರ, ತುಳಸಿ ಒಂದು ಪವಿತ್ರ ಸಸ್ಯ. ಹಾಗಾಗಿ ತುಳಸಿ ಹತ್ತಿರ ಎಂದಿಗೂ ಕಸದ ಬುಟ್ಟಿ ಇಡಬಾರದು. ಒಂದು ವೇಳೆ ತುಳಸಿ ಪಕ್ಕದಲ್ಲಿ ಕಸದ ಬುಟ್ಟಿ ಇಟ್ಟರೆ ತುಳಸಿ ಒಣಗುತ್ತಾ ಹೋಗುತ್ತದೆ. ಇದರಿಂದಾಗಿ ನಿಮ್ಮ ಮನೆಯಲ್ಲಿ ಹರಡಿರುವ ಸಕಾರಾತ್ಮಕ ಶಕ್ತಿಯೂ ನಿಧಾನವಾಗಿ ಮಸುಕಾಗುತ್ತದೆ.
ಇದನ್ನೂ ಓದಿ : ಯುಗಾದಿ ಭವಿಷ್ಯ 2025: ಬೇವು-ಬೆಲ್ಲದ ಹಬ್ಬ ದ್ವಾದಶ ರಾಶಿಗಳಿಗೆ ಏನು ಫಲ ನೀಡಲಿದೆ... ಯಾರಿಗೆ ಸಿಹಿ-ಯಾರಿಗೆ ಕಹಿ
ಮುಳ್ಳಿನ ಸಸ್ಯಗಳು :
ತುಳಸಿ ಗಿಡದ ಬಳಿ ನಿಂಬೆ, ಗುಲಾಬಿ, ಕಳ್ಳಿ ಮುಂತಾದ ಯಾವುದೇ ಮುಳ್ಳಿನ ಗಿಡಗಳನ್ನು ನೆಡಬಾರದು. ಈ ಸಸ್ಯಗಳು ನಕಾರಾತ್ಮಕತೆಯ ಸಂಕೇತಗಳಾಗಿದ್ದು, ನಮ್ಮ ಜೀವನದಲ್ಲಿ ಮುಳ್ಳುಗಳನ್ನೇ ಬಿತ್ತುತ್ತವೆ ಎನ್ನುವುದು ನಂಬಿಕೆ. ಹಾಗಾಗಿ ತುಳಸಿಯ ಬಳಿ ಈ ಗಿಡಗಳನ್ನು ನೆಡುವುದರಿಂದ ಮನೆ ಯಜಮಾನನ ಜೀವಕ್ಕೆ ಅಪಾಯ ಎದುರಾಗಬಹುದು ಎನ್ನಲಾಗುತ್ತದೆ.
ಪಾದರಕ್ಷೆಗಳು :
ತುಳಸಿ ಗಿಡದ ಬಳಿ ಎಂದಿಗೂ ಶೂ ಮತ್ತು ಚಪ್ಪಲಿಗಳನ್ನು ಇಡಬಾರದು. ಯಾಕೆಂದರೆ ಎಲ್ಲೆಂದರಲ್ಲಿ ನಡೆಯುವ ನಾವು ಪಾದರಕ್ಷೆಗಳ ಅಡಿಭಾಗಕ್ಕೆ ವಿವಿಧ ರೀತಿಯ ಕೊಳಕು ಮತ್ತು ಬ್ಯಾಕ್ಟೀರಿಯಾಗಳನ್ನು ಅಂಟಿಸಿಕೊಂಡಿರುತ್ತೇವೆ. ಇದು ನಕಾರಾತ್ಮಕ ಶಕ್ತಿಯನ್ನು ಹರಡುತ್ತದೆ. ಅಲ್ಲದೆ ಪಾದರಕ್ಷೆಯನ್ನು ತುಳಸಿ ಪಕ್ಕದಲ್ಲಿ ಇಡುವುದು ಎಂದರೆ ಲಕ್ಷ್ಮೀ ದೇವಿಗೆ ಅವಮಾನ ಮಾಡುವುದು ಎಂದರ್ಥ.
ಶಿವಲಿಂಗ :
ಪೌರಾಣಿಕ ನಂಬಿಕೆಗಳ ಪ್ರಕಾರ, ತುಳಸಿ ಸಸ್ಯವು ಲಕ್ಷ್ಮೀಯ ಸಂಕೇತವಾಗಿದೆ. ಲಕ್ಷ್ಮೀ ವಿಷ್ಣುವಿನ ಪತ್ನಿ. ಅಂತಹ ಪರಿಸ್ಥಿತಿಯಲ್ಲಿ, ತುಳಸಿಯ ಬಳಿ ಶಿವಲಿಂಗವನ್ನು ಅಪ್ಪಿ ತಪ್ಪಿಯೂ ಇಡುವಂತಿಲ್ಲ. ಒಂದು ವೇಳೆ ತುಳಸಿ ಪಕ್ಕ ಶಿವಲಿಂಗ ಇಟ್ಟರೆ ವಿರುದ್ಧ ಫಲಿತಾಂಶಗಳು ದೊರೆಯುತ್ತವೆ. ಇದರ ಬದಲು ತುಳಸಿ ಬಳಿ ಶಾಲಿಗ್ರಾಮ ಇಟ್ಟುಕೊಳ್ಳಬಹುದು.
(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢೀಕರಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
IO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.