ಬೆಂಗಳೂರು : ಜೀವನದಲ್ಲಿ ಸಂತೋಷ, ಸಮೃದ್ಧಿ, ಶಾಂತಿ ಮತ್ತು ನೆಮ್ಮದಿಗಾಗಿ ದೇವರಿಗೆ ಪೂಜೆ ಸಲ್ಲಿಸುವುದು ಪದ್ಧತಿ. ವಾರದ ಒಂದೊಂದು ದಿನವೂ ಒಂದೊಂದು ದೇವರಿಗೆ ಮೀಸಲು ಎನ್ನುವ ನಂಬಿಕೆಯ ಆಧಾರದ ಮೇಲೆ ಪ್ರತಿ ನಿತ್ಯ ದೇವಾಲಯಕ್ಕೆ ಭೇಟಿ ನೀಡುವವರೂ ಇದ್ದಾರೆ. ದೇವಸ್ಥಾನಕ್ಕೆ ಹೋಗಿ ಪೂಜೆ ಅರ್ಚನೆ ಮಾಡಿಸುವುದರಿಂದ ನಮ್ಮ ಜೀವನದಲ್ಲಿ ಸಕಾರಾತ್ಮಕತೆಯನ್ನು ನೆಲೆಯಾಗುತ್ತದೆ. ಆದರೆ ದೇವಸ್ಥಾನದಿಂದ ಹಿಂತಿರುಗುವಾಗ, ನಾವು ಕೆಲವೊಂದು ತಪ್ಪುಗಳನ್ನು ಮಾಡುತ್ತೇವೆ. ಇದರಿಂದ ದೇವಸ್ಥಾನಕ್ಕೆ ಹೋಗುವುದರಿಂದ ಸಿಗುವ ಎಲ್ಲಾ ಪ್ರಯೋಜನಗಳು ವ್ಯರ್ಥವಾಗುತ್ತವೆ.ಈ ತಪ್ಪುಗಳು ಜೀವನದಲ್ಲಿ ಅನೇಕ ತೊಂದರೆಗಳನ್ನು ಕೂಡಾ ತಂದೊದ್ದುತ್ತವೆ. ನಾವು ಮಾಡುವ ಪೂಜೆಯ ಫಲವೂ ಸಿಗುವುದಿಲ್ಲ ಅಥವಾ ದೇವರ ಅನುಗ್ರಹವೂ ನಮ್ಮ ಮೇಲೆ ಇರುವುದಿಲ್ಲ. ಈ ಬಗ್ಗೆ ಗರುಡ ಪುರಾಣ, ಮನುಸ್ಮೃತಿ ಮತ್ತು ವಿಷ್ಣು ಧರ್ಮಸೂತ್ರದಂತಹ ಗ್ರಂಥಗಳಲ್ಲಿ ವಿವರವಾಗಿ ಹೇಳಲಾಗಿದೆ.
ಖಾಲಿ ಚೊಂಬು : ಶಿವ ಸೇರಿದಂತೆ ಅನೇಕ ದೇವರು ಮತ್ತು ದೇವತೆಗಳಿಗೆ ನೀರನ್ನು ಅರ್ಪಿಸಲಾಗುತ್ತದೆ. ಇದಕ್ಕಾಗಿ ಜನರು ಮನೆಯಿಂದ ಪೂಜಾ ಸಾಮಗ್ರಿ, ಪ್ರಸಾದದ ಜೊತೆಗೆ ನೀರು ಅರ್ಪಿಸಲು ಚೊಂಬನ್ನು ತೆಗೆದುಕೊಂಡು ಹೋಗುತ್ತಾರೆ. ಆದರೆ ದೇವಸ್ಥಾನದಿಂದ ಹಿಂತಿರುಗುವಾಗ ಖಾಲಿ ಚೊಂಬನ್ನು ತರುತ್ತಾರೆ. ಇದು ತಪ್ಪು. ದೇವಸ್ಥಾನಕ್ಕೆ ನೀರು ತೆಗೆದುಕೊಂಡಿರುವ ಚೊಂಬಿನಲ್ಲಿ ಸ್ವಲ್ಪ ನೀರು, ಹೂವುಗಳು ಮತ್ತು ಅಕ್ಕಿ ಕಾಳುಗಳನ್ನು ಹಾಕಿ ತರಬೇಕು. ಇದು ಮನೆಯಲ್ಲಿ ಸಕಾರಾತ್ಮಕತೆ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಇಲ್ಲವಾದರೆ ಮನೆಯಲ್ಲಿ ಬಡತನ, ದರಿದ್ರ ವಕ್ಕರಿಸುತ್ತದೆ.
ಇದನ್ನೂ ಓದಿ : ಶನಿ ಅಮಾವಾಸ್ಯೆಯಂದು ಸೂರ್ಯ ಗ್ರಹಣ; ಈ ಐದು ರಾಶಿಯ ಜನರಿಗೆ ಸುವರ್ಣ ಸಮಯ ಪ್ರಾರಂಭ!!
ಮಾಂಸ ಮತ್ತು ಮದ್ಯ ಸೇವನೆ: ಬಹುತೇಕ ಮಂದಿ ದೇವಸ್ಥಾನಕ್ಕೆ ತೆರಲು ಮುನ್ನ ಮೀನು ಮಾಂಸ ತಿನ್ನುವುದಿಲ್ಲ. ಆದರೆ ದೇವಸ್ಥಾನದಿಂದ ಹಿಂದಿರುಗಿದ ಮೇಲೆ ಮಾಂಸ ಮತ್ತು ಮದ್ಯ ಸೇವಿಸಿದರೆ ಯಾವುದೇ ಸಮಸ್ಯೆ ಇಲ್ಲ ಎನ್ನುವ ಭಾವನೆ ಹೊಂದಿರುತ್ತಾರೆ. ಹೀಗೆ ಮಾಡುವುದರಿಂದ ದೇವರು-ದೇವತೆಗಳು ಕೋಪಗೊಳ್ಳಬಹುದು ಮತ್ತು ಕುಟುಂಬಕ್ಕೆ ತೊಂದರೆ ತರಬಹುದು.
ಪ್ರಸಾದ ಮತ್ತು ಹೂವುಗಳು: ನೀವು ದೇವಸ್ಥಾನದಿಂದ ಪ್ರಸಾದ ಅಥವಾ ಹೂವುಗಳನ್ನು ತಂದ ತಕ್ಷಣ, ಅವುಗಳನ್ನು ಪವಿತ್ರ ಸ್ಥಳದಲ್ಲಿ ಇರಿಸಿ. ಪ್ರಸಾದವನ್ನು ಎಲ್ಲರಿಗೂ ಹಂಚಿ, ನೀವೂ ತಿನ್ನಿರಿ. ಹೂವುಗಳನ್ನು ಹರಿಯುವ ನೀರಿನಲ್ಲಿ ಬಿಡಿ ಅಥವಾ ಯಾರ ಕಾಲ ಅಡಿಗೂ ಸಿಲುಕದಂತೆ ತೆಂಗಿನ ಮರದ ಬುಡಕ್ಕೆ ಹಾಕಿ.
ಪಾದಗಳನ್ನು ತೊಳೆಯುವುದು: ಕೆಲವರಿಗೆ ಹೊರಗಿನಿಂದ ಬಂದ ತಕ್ಷಣ ಕಾಲಿಗೆ ನೀರು ಹಾಕುವ ಅಭ್ಯಾಸವಿರುತ್ತದೆ. ಹಾಗೆಯೇ ದೇವಾಲಯದಿಂದ ಬಂದ ತಕ್ಷಣ ಕೂಡಾ ಪಾದಗಳಿಗೆ ನೀರು ಹಾಕಿಕೊಳ್ಳುತ್ತಾರೆ. ಅಥವಾ ತಕ್ಷಣ ವಾಶ್‌ರೂಮ್‌ಗೆ ಹೋಗುತ್ತಾರೆ. ಇದರಿಂದಾಗಿ ದೇವಾಲಯದಿಂದ ಪಡೆಯುವ ಸಕಾರಾತ್ಮಕ ಶಕ್ತಿಯು ನಾಶವಾಗುತ್ತದೆ. ಶಾಂತಿ ಮತ್ತು ನೆಮ್ಮದಿ ಕೊನೆಗೊಳ್ಳುತ್ತದೆ.
(ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯ ಆಧಾರದ ಮೇಲೆ ಬರೆಯಲಾಗಿದೆ. ಜೀ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









