)
ನಾಗಸಂಪಿಗೆ ಸಸ್ಯಕ್ಕೆ ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದಲ್ಲಿ ಬಹಳ ಪ್ರಾಮುಖ್ಯತೆ ಇದೆ. ಈ ಹೂವುಗಳನ್ನು ಶಿವನಿಗೆ ಅರ್ಪಿಸಲಾಗುತ್ತದೆ. ಇದನ್ನು ಮನೆಯಲ್ಲಿ ನೆಡುವುದರಿಂದ ಜೀವನದ ಅನೇಕ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಆಯುರ್ವೇದದಲ್ಲಿಯೂ ಸಹ, ನಾಗಸಂಪಿಗೆಯನ್ನು ಪರಿಣಾಮಕಾರಿ ಔಷಧವೆಂದು ಕರೆಯಲಾಗುತ್ತದೆ. ಇದನ್ನು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸಲು ಬಳಸಲಾಗುತ್ತದೆ. ನಾಗಸಂಪಿಗೆಗೆ ಸಂಬಂಧಿಸಿದ ಕೆಲವು ವಿಶೇಷ ಕ್ರಮಗಳನ್ನು ಮಾಡುವುದರಿಂದ, ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿ ವೃದ್ದಿಯಾಗುತ್ತದೆ. ಸಂತೋಷ ಮತ್ತು ಶಾಂತಿಯ ವಾತಾವರಣ ನೆಲೆಯಾಗುತ್ತದೆ ಎಂದು ಹೇಳಲಾಗುತ್ತದೆ.
ರಾಹು-ಕೇತು ಮತ್ತು ಶನಿ ದೋಷ ನಿವಾರಣೆ :
ಜ್ಯೋತಿಷ್ಯದ ಪ್ರಕಾರ, ನಾಗಸಂಪಿಗೆ ಬಳಕೆಯು ರಾಹು, ಕೇತು ಮತ್ತು ಶನಿಯ ದೋಷಗಳನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಶನಿವಾರ, ಕೆಂಪು ಬಟ್ಟೆಯಲ್ಲಿ ಈ ಹೂವನ್ನು ಕಟ್ಟಿ ಅರಳಿ ಮರದ ಕೆಳಗೆ ಇರಿಸಿ ಅಲ್ಲಿ ದೀಪವನ್ನು ಬೆಳಗಿಸಬೇಕು.ಹೀಗೆ ಮಾಡುವುದರಿಂದ ಶನಿ ದೇವರ ಕೃಪಾ ದೃಷ್ಟಿ ನಮ್ಮ ಮೇಲೆ ಇರುತ್ತದೆ ಎನ್ನಲಾಗಿದೆ. ರಾಹು-ಕೇತು ದೋಷದಿಂದ ಮುಕ್ತಿ ಪಡೆಯಲು ಕೂಡಾ ಇದು ಸಹಾಯಕ.
ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು :
ಮನೆಯಲ್ಲಿ ಹಣದ ಕೊರತೆಯಿದ್ದರೆ, ನಾಗಸಂಪಿಗೆಯ ಈ ಪರಿಹಾರವು ಪ್ರಯೋಜನಕಾರಿಯಾಗಿದೆ. ಈ ಹೂವು, ಅರಿಶಿನದ ಕೊಂಬು ಮತ್ತು ಗೋಮತಿ ಚಕ್ರವನ್ನು ಬಿಳಿ ಬಟ್ಟೆಯಲ್ಲಿ ಇರಿಸಿ ತಿಜೋರಿ ಅಥವಾ ಹಣ ಇದುವ ಜಾಗದಲ್ಲಿ ಇರಿಸಬೇಕು. ಈ ಪರಿಹಾರ ಕಾರ್ಯ ಮಾಡುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ. ಜೊತೆಗೆ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.
ಮನೆಯಲ್ಲಿ ಸಂತೋಷ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳುವ ಮಾರ್ಗ:
ಬೆಳಿಗ್ಗೆ ಸ್ನಾನ ಮಾಡಿ ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ ಮತ್ತು ನಾಗಸಂಪಿಗೆ ಹೂವುಗಳು ಮತ್ತು ಬೀಜಗಳನ್ನು ಮನೆಯ ದೇವರ ಕೋಣೆಯಲ್ಲಿ ಇರಿಸಿ. ಕಾಲಕಾಲಕ್ಕೆ ಈ ಹೂವುಗಳನ್ನು ಬದಲಾಯಿಸುತ್ತಿರಿ. ಈ ಪ್ರಕ್ರಿಯೆಯು ಮನೆಯ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಿ, ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಕುಟುಂಬದಲ್ಲಿ ಸಾಮರಸ್ಯ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳುತ್ತದೆ.
ಬುಧ ಮತ್ತು ಗುರು ದೋಷದಿಂದ ಪರಿಹಾರ :
ಜಾತಕದಲ್ಲಿ ಬುಧ ಮತ್ತು ಗುರು ಗ್ರಹಗಳು ದುರ್ಬಲವಾಗಿದ್ದರೆ, ನಾಗಸಂಪಿಗೆಯನ್ನು ಬೆಳ್ಳಿಯ ಪೆಟ್ಟಿಗೆಯಲ್ಲಿ ತುಂಬಿಸಿ ಕುತ್ತಿಗೆಗೆ ಲಾಕೆಟ್ ಆಗಿ ಧರಿಸಿ. ಈ ಪರಿಹಾರವು ಗ್ರಹಗಳ ಅಶುಭ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವ್ಯವಹಾರ ಮತ್ತು ಜೀವನದಲ್ಲಿ ಯಶಸ್ಸನ್ನು ತರುತ್ತದೆ.
ನಕಾರಾತ್ಮಕ ಶಕ್ತಿಗಳನ್ನು ತೆಗೆದುಹಾಕುವ ಪರಿಹಾರ:
ಶನಿವಾರ, ನಾಗಸಂಪಿಗೆ, ಕರ್ಪೂರ ಮತ್ತು ಲವಂಗವನ್ನು ಬೆರೆಸಿ ಇಡೀ ಮನೆಯಲ್ಲಿ ಧೂಪವನ್ನು ಹಾಕಿ. ಈ ಪ್ರಕ್ರಿಯೆಯು ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಲು ಮತ್ತು ಮಾನಸಿಕ ಶಾಂತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಆಸೆಗಳನ್ನು ಈಡೇರಿಸಲು ವಿಶೇಷ ಪರಿಹಾರ :
ಭಗವಾನ್ ವಿಷ್ಣು, ಶ್ರೀ ರಾಮ ಮತ್ತು ಶಿವನಿಗೆ ನಾಗಸಂಪಿಗೆ ಹೂವುಗಳನ್ನು ಅರ್ಪಿಸುವುದು ಬಹಳ ಫಲಪ್ರದವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಜೀವನದಲ್ಲಿನ ಕಷ್ಟಗಳು ಕಡಿಮೆಯಾಗುತ್ತವೆ ಮತ್ತು ಮನಸ್ಸಿನ ಆಸೆಗಳು ಈಡೇರುತ್ತವೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ