ಜ್ಯೋತಿಷ್ಯದಲ್ಲಿ, ಶಿಕ್ಷೆ ನೀಡುವ ಮತ್ತು ನ್ಯಾಯದ ದೇವರು ಎಂದು ಪರಿಗಣಿಸಲಾದ ಶನಿ ದೇವರು, ವ್ಯಕ್ತಿಯ ಕರ್ಮಗಳಿಗೆ ಅನುಗುಣವಾಗಿ ಪ್ರತಿಫಲ ನೀಡುತ್ತಾರೆ. ಒಳ್ಳೆಯ ಕಾರ್ಯಗಳನ್ನು ಮಾಡುವವರಿಗೆ ರಾಜನಂಥಹ ಜೀವನ ಕರುಣಿಸಿದರೆ ಕೆಟ್ಟ ಕಾರ್ಯಗಳನ್ನು ಮಾಡುವವರಿಗೆ ನರಕ ದರ್ಶನ ಮಾಡಿ ಬಿಡುತ್ತಾರೆ. ಇದಲ್ಲದೆ, ಜಾತಕದಲ್ಲಿ ಶನಿಯ ಸ್ಥಾನವು ಜೀವನದ ಮೇಲೆ ಆಳವಾದ ಪರಿಣಾಮ ಬೀರುತ್ತದೆ.
ಶನಿಗ್ರಹವು ಪ್ರಸ್ತುತ ಮೀನ ರಾಶಿಯಲ್ಲಿದ್ದು, ಈ ರಾಶಿಯಲ್ಲಿ ಎರಡು ವರ್ಷಗಳಿಗೂ ಹೆಚ್ಚು ಕಾಲ ಸಂಚಾರ ನಡೆಸುತ್ತಾರೆ. ಮೀನ ರಾಶಿಯಲ್ಲಿ ಶನಿಯ ಉಪಸ್ಥಿತಿಯಿಂದಾಗಿ, ಮೀನ ಮತ್ತು ಅದರ ಮೊದಲು ಮತ್ತು ನಂತರದ ಒಂದು ರಾಶಿ ಸಾಡೇಸಾತಿಯ ಪ್ರಭಾವಕ್ಕೆ ಒಳಗಾಗಿವೆ. ಹೀಗಾಗಿ, ಮೀನ, ಕುಂಭ ಮತ್ತು ಮೇಷ ರಾಶಿಯವರಿಗೆ ಸಾಡೇಸಾತಿ ನಡೆಯುತ್ತಿದೆ. ಸಾಡೇಸಾತಿಯ ಸಮಯದಲ್ಲಿ ಆರ್ಥಿಕ ನಷ್ಟ ಉಂಟಾಗುತ್ತದೆ. ಅಪಘಾತ, ಗಾಯ ಮತ್ತು ಅನಾರೋಗ್ಯ ಸಮಸ್ಯೆಗಳು ಕಾಡುತ್ತವೆ. ಮಾಡುತ್ತಿರುವ ಕೆಲಸಕ್ಕೆ ಅಡ್ಡಿಯಾಗುವುದು. ಆದರೆ ಸಾಡೇಸಾತಿಯ ಸಮಯದಲ್ಲಿ ಜಾತಕದಲ್ಲಿ ಶನಿ ಶುಭ ಸ್ಥಾನದಲ್ಲಿರುವುದರಿಂದ ಶುಭ ಫಲಿತಾಂಶ ಸಿಗುತ್ತದೆ.
ಇದನ್ನೂ ಓದಿ: ಅಪ್ಪಿತಪ್ಪಿಯೂ ಕನ್ನಡಿಯನ್ನು ಈ ದಿಕ್ಕಿನಲ್ಲಿಟ್ಟು ಮುಖ ನೋಡಬೇಡಿ.. ದುರಾದೃಷ್ಟ ನಿಮ್ಮ ಬೆನ್ನು ಬಿಡದು.!
ಸಾಡೇಸಾತಿಯಿಂದ ಯಾವಾಗ ಪರಿಹಾರ ಸಿಗುತ್ತದೆ? :
ಪ್ರಸ್ತುತ, ಮೇಷ ರಾಶಿಯು ಶನಿಯ ಸಾಡೇಸಾತಿಯ ಮೊದಲ ಹಂತವನ್ನು ಅನುಭವಿಸುತ್ತಿದೆ. ಮೀನ ರಾಶಿಯು ಎರಡನೇ ಹಂತವನ್ನು ಅನುಭವಿಸುತ್ತಿದೆ. ಕುಂಭ ರಾಶಿಯು ಅಂತಿಮ ಹಂತವನ್ನು ಅನುಭವಿಸುತ್ತಿದೆ. ಕುಂಭ ರಾಶಿಯವರ ಸಾಡೇಸಾತಿ ೨೦೨೮ ರ ಆರಂಭದಲ್ಲಿ ಕೊನೆಗೊಳ್ಳುತ್ತದೆ. ಮೀನ ರಾಶಿಯವರು ೨೦೩೦ ರ ಮಧ್ಯಭಾಗದಲ್ಲಿ ಪರಿಹಾರ ಪಡೆಯುತ್ತಾರೆ. ಮೇಷ ರಾಶಿಯವರು ೨೦೩೩ ರ ವೇಳೆಗೆ ಪರಿಹಾರ ಪಡೆಯುತ್ತಾರೆ.
ಶನಿಯ ಸಾಡೇಸಾತಿಯಿಂದ ಪರಿಹಾರ ಪಡೆಯಲು, ಪ್ರತಿ ಶನಿವಾರ ಒಂದು ಅರಳಿ ಮರವನ್ನು ಪೂಜಿಸಿ ಅದಕ್ಕೆ ನೀರು ಅರ್ಪಿಸಿ. ಅಲ್ಲದೆ, ಶನಿದೇವನಿಗೆ ಎಳ್ಳೆಣ್ಣೆಯನ್ನು ಅರ್ಪಿಸಿ. ಯಾವತ್ತೂ ಶನಿ ದೇವರ ವಿಗ್ರಹದ ಮುಂದೆ ನೇರವಾಗಿ ನಿಲ್ಲಬಾರದು ಅಥವಾ ಅವರ ಕಣ್ಣುಗಳನ್ನು ನೋಡದಂತೆ ಎಚ್ಚರವಹಿಸಬೇಕು. ಕಂಚಿನ ಬಟ್ಟಲಿನಲ್ಲಿ ಎಳ್ಳೆಣ್ಣೆಯನ್ನು ತೆಗೆದುಕೊಂಡು, ಆ ಎಣ್ಣೆಯಲ್ಲಿ ನಿಮ್ಮ ಪ್ರತಿಬಿಂಬವನ್ನು ಗಮನಿಸಿ, ಮತ್ತು ನಂತರ ಬಟ್ಟಲಿನೊಂದಿಗೆ ಎಣ್ಣೆಯನ್ನು ದಾನ ಮಾಡಿ.
ಇದನ್ನೂ ಓದಿ: 2026 ರಲ್ಲಿ ಭೂಮಿಗೆ ಬರಲಿವೆ ಏಲಿಯನ್ಸ್!! ನಿಜವಾಗಲಿದೆಯೇ ಬಾಬಾ ವಂಗಾ ಭವಿಷ್ಯ..?









