ದಿನಭವಿಷ್ಯ 01-04-2025: ಮಂಗಳವಾರದಂದು ಭರಣಿ ನಕ್ಷತ್ರ ವಿಷ್ಕಂಭ ಯೋಗ, ಈ ರಾಶಿಯವರಿಗೆ ವೃತ್ತಿಯಲ್ಲಿ ಯಶಸ್ಸು, ತುಂಬಾ ಶುಭ

Today Horoscope 01st April 2025: ಮಂಗಳವಾರದ ದಿನ ಭರಣಿ ನಕ್ಷತ್ರ ವಿಷ್ಕಂಭ ಯೋಗ, ವಣಿಜ ಕರಣ. ಇಂದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.   

Written by - Yashaswini V | Last Updated : Apr 1, 2025, 08:09 AM IST
  • ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಸೌರ ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ಚತುರ್ಥಿ ತಿಥಿ
  • ಮಂಗಳವಾರದ ದಿನ ಭರಣಿ ನಕ್ಷತ್ರ ವಿಷ್ಕಂಭ ಯೋಗ, ವಣಿಜ ಕರಣ.
  • ಇಂದಿನ ದ್ವಾದಶ ರಾಶಿಗಳ ಫಲ ಹೇಗಿದೆ ತಿಳಿಯಿರಿ.
ದಿನಭವಿಷ್ಯ 01-04-2025: ಮಂಗಳವಾರದಂದು ಭರಣಿ ನಕ್ಷತ್ರ ವಿಷ್ಕಂಭ ಯೋಗ, ಈ ರಾಶಿಯವರಿಗೆ ವೃತ್ತಿಯಲ್ಲಿ ಯಶಸ್ಸು, ತುಂಬಾ ಶುಭ

Mangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಸೌರ ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ಚತುರ್ಥಿ ತಿಥಿ, ಮಂಗಳವಾರದ ದಿನ ಭರಣಿ ನಕ್ಷತ್ರ ವಿಷ್ಕಂಭ ಯೋಗ, ವಣಿಜ ಕರಣ. ಇಂದಿನ ದ್ವಾದಶ ರಾಶಿಗಳ ಫಲ ಹೇಗಿದೆ ತಿಳಿಯಿರಿ. 

Add Zee News as a Preferred Source

ಮೇಷ ರಾಶಿಯವರ ಭವಿಷ್ಯ (Aries Horoscope):  
ಆಧುನಿಕ ಮತ್ತು ಸೃಜನಶೀಲ ಪ್ರಯತ್ನಗಳಲ್ಲಿ ಜಯ ಸಾಧಿಸುವಿರಿ. ನಿಮ್ಮ ಸರಳ, ಸೌಮ್ಯ ವ್ಯಕ್ತಿತ್ವವು ಲಾಭದಾಯಕವಾಗಿದೆ. ಕುಟುಂಬ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಸಕಾರಾತ್ಮಕ ಚಿಂತನೆಯಿಂದ ಪ್ರಗತಿ ಸಾಧಿಸುವಿರಿ. ಇಂದು ನಿಮ್ಮ ಸ್ಮರಣೆ ಬಲಗೊಳ್ಳುತ್ತದೆ. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ಇಂದು ಬಜೆಟ್ ಬಗ್ಗೆ ನಿಗಾವಹಿಸಿ. ಯೋಜನೆಗಳ ಪ್ರಕಾರ ಬುದ್ದಿವಂತಿಕೆಯಿಂದ ಮುಂದುವರೆಯಿರಿ. ಸಂಬಂಧಗಳನ್ನು ಕಾಪಾಡಿಕೊಳ್ಳಲು ತಾಳ್ಮೆ ಅಗತ್ಯವಾಗಿದೆ. ಅಗತ್ಯ ಕೆಲಸಗಳಲ್ಲಿ ವೇಗವನ್ನು ಕಾಯ್ದುಕೊಳ್ಳಿ. ಚರ್ಚೆಗಳು ಮತ್ತು ವಿವಾದಗಳಿಂದ ದೂರವಿರಿ. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಆರ್ಥಿಕ ಸಾಧನೆಗಳತ್ತ ಗಮನಹರಿಸಿ. ವೃತ್ತಿಪರ ವಲಯಗಳಲ್ಲಿ ಸಕಾರಾತ್ಮಕ ಚಿಂತನೆಯಿಂದ ಮುಂದುವರೆಯುವುದು ಲಾಭದಾಯಕ. ಶಿಸ್ತಿನಿಂದ ಕೆಲಸ ಮಾಡಿದರೆ ಅಪೇಕ್ಷಿತ ಫಲಿತಾಂಶಗಳು ಸಿಗಲಿವೆ. ಸ್ಪರ್ಧೆಗಳಲ್ಲಿ ಜಯ ಸಾಧಿಸುವಿರಿ. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ವೃತ್ತಿಪರ ಸಾಮರ್ಥ್ಯಗಳು ಸುಧಾರಿಸಲಿದ್ದು  ನಿರ್ವಹಣಾ ಕಾರ್ಯಗಳು ಬಲಗೊಳ್ಳಲಿವೆ. ಆದಾಯದ ಮೂಲಗಳು ಹೆಚ್ಚಾಗ್ಲೈವೆ. ಹಿರಿಯರು ಮತ್ತು ಜವಾಬ್ದಾರಿಯುತ ವ್ಯಕ್ತಿಗಳಿಂದ ಬೆಂಬಲ ಲಭ್ಯವಿದೆ. ಸಮಾಜದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ. 

ಇದನ್ನೂ ಓದಿ- ಶನಿ ಉದಯ: ಈ ರಾಶಿಯವರಿಗೆ ಮಲಗಿರುವ ಅದೃಷ್ಟ ಜಾಗೃತಗೊಳ್ಳುವ ಕಾಲ, ಶನಿ ಮಹಾತ್ಮನಿಂದಲೇ ಸರ್ವ ಸುಖ ಪ್ರಾಪ್ತಿ 

ಸಿಂಹ ರಾಶಿಯವರ ಭವಿಷ್ಯ (Leo Horoscope):  
ಇಂದು ಅದೃಷ್ಟದ ಬಲ, ಹಿರಿಯರ ಆಶೀರ್ವಾದ ಎರಡೂ ನಿಮ್ಮೊಂದಿಗಿದೆ. ಎಲ್ಲಾ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ ಕಂಡು ಬರಲಿದೆ. ವಿವಾಹ ಸಂಬಂಧಿತ ಶುಭ ಸುದ್ದಿಯನ್ನು ಕೇಳಬಹುದು. ವ್ಯಾಪಾರ ಚಟುವಟಿಕೆಗಳು ವೇಗವನ್ನು ಪಡೆಯಲಿವೆ. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಇಂದು ಯಾವುದೇ ವಿಚಾರದಲ್ಲಿ ಅತಿಯಾದ ಉತ್ಸಾಹವನ್ನು ತಪ್ಪಿಸಿ. ಇಲ್ಲವೇ, ಅನಗತ್ಯ ಅಪಾಯಗಳು ಹೆಗಲೇರಬಹುದು. ನಮ್ರತೆಯ ಮೂಲಕ ಯಶಸ್ಸು ಸಾಧಿಸುವಿರಿ. ಇತರರ ಮಾತುಗಳಿಗೆ ಮಾರು ಹೋದರೆ ಹಣ ಕಳೆದುಕೊಳ್ಳುವ ಸಂಭವವಿದೆ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ನಿಮ್ಮ ಗುರಿಗಳನ್ನು ಸಾಧಿಸಲು ಸಹಕಾರ ಮತ್ತು ಪಾಲುದಾರಿಕೆ ಅಗತ್ಯವಿದೆ. ವೃತ್ತಿಪರ ಪರಿಸ್ಥಿತಿಗಳು ಸುಧಾರಿಸುತ್ತವೆ. ಸಹೋದ್ಯೋಗಿಗಳು ಪಾಲುದಾರರಿಂದ ಬೆಂಬಲವನ್ನು ಪಡೆಯಲಿದ್ದಾರೆ. ಸಾಮೂಹಿಕ ಕಾರ್ಯಕ್ರಮಗಳಲ್ಲಿ ಉತ್ತಮ ಸ್ಥಾನವನ್ನು ಪಡೆಯುತ್ತೀರಿ. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ವೃತ್ತಿಪರ ಪ್ರಯತ್ನಗಳಲ್ಲಿ ಮುನ್ನಡೆ ಸಾಧಿಸುವಿರಿ. ಕಠಿಣ ಪರಿಶ್ರಮ ಮತ್ತು ಕರ್ತ್ಯವ್ಯ ನಿಷ್ಠೆಯ ಬಗ್ಗೆ ನಂಬಿಕೆ ಇಟ್ಟು ಮುಂದುವರೆಯಿರಿ, ಯಾರಿಗೂ ನಿಮ್ಮನ್ನು ತಡೆಯಲು ಸಾಧ್ಯವಿಲ್ಲ. ಇಂದು ಹಣವನ್ನು ಎರವಲು ಪಡೆಯುವುದು ಅಥವಾ ಸಾಲ ನೀಡುವುದನ್ನು ತಪ್ಪಿಸಿ. 

ಇದನ್ನೂ ಓದಿ- Weekly Horoscope: ವಿಶ್ವಾವಸು ನಾಮ ಸಂವತ್ಸರದ ಮೊದಲ ವಾರವೇ ದುರ್ಧವ ಯೋಗ, ಈ ರಾಶಿಯವರಿಗೆ ಕೈ ಹಿಡಿಯಲಿದೆ ಅದೃಷ್ಟ 

ಧನು ರಾಶಿಯವರ ಭವಿಷ್ಯ (Sagittarius Horoscope):  
ಇಂದು ಸ್ನೇಹಿತರ ಬೆಂಬಲ ದೊರೆಯುತ್ತದೆ. ಧೈರ್ಯ ಮತ್ತು ಕ್ರಿಯಾಶೀಲತೆಯು ನಿಮ್ಮ ಲಾಭಗಳನ್ನು ಹೆಚ್ಚಿಸುತ್ತದೆ. ಎಲ್ಲಾ ದಿಕ್ಕುಗಳಲ್ಲಿಯೂ ಅಪೇಕ್ಷಿತ ಯಶಸ್ಸು ಸಾಧಿಸುವಿರಿ. ಸ್ನೇಹಿತರೊಂದಿಗೆ ಸ್ಮರಣೀಯ ಕ್ಷಣಗಳನ್ನು ಕಳೆಯುವಿರಿ. 
ಮನರಂಜನಾ ಅವಕಾಶಗಳು ದೊರೆಯುತ್ತವೆ. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ನಿಮ್ಮ ಕುಟುಂಬದೊಂದಿಗೆ ಪ್ರೀತಿ, ವಿಶ್ವಾಸ, ನಿಕಟತೆ ಬಲಗೊಳ್ಳಲಿದೆ. ಕೆಲಸದ ನಿರ್ವಹಣೆ ವೇಗವನ್ನು ಪಡೆಯಲಿದೆ. ಸಂಭಾಷಣೆ ಮತ್ತು ಸಭೆಗಳಲ್ಲಿ ಜಾಗರೂಕರಾಗಿರಿ. ನಿಮ್ಮ ಮಾತಿನ ಬಗ್ಗೆ ವಿಶೇಷ ಗಮನವಿರಲಿ. ವೈಯಕ್ತಿಕ ವಿಷಯಗಳ ಮೇಲೆ ಗಮನಹರಿಸಿ. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಇಂದು ಲಾಭದಾಯಕ ದಿನ. ಸಾಮಾಜಿಕ ಸಂಬಂಧಗಳು ಸುಗಮವಾಗಿರುತ್ತವೆ. ನಿಮ್ಮ ನಾಯಕತ್ವದ ಸಾಮರ್ಥ್ಯ ಸುಧಾರಿಸಲಿದೆ. ಸಹೋದ್ಯೋಗಿಗಳು ಮತ್ತು ಗೆಳೆಯರ ಬೆಂಬಲದಿಂದ ಕಠಿಣ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳಲಿವೆ. ಪ್ರಮುಖ ಕೆಲಸಗಳಲಿ ತಾಳ್ಮೆಯನ್ನು ಕಾಪಾಡಿಕೊಳ್ಳಿ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ಇಂದು ಕೆಲಸಕ್ಕೆ ಸಂಬಂಧಿಸಿದಂತೆ ಶುಭ ಸುದ್ದಿಯನ್ನು ಕೇಳುವಿರಿ. ಕುಟುಂಬದಲ್ಲಿ ನಿಮ್ಮ ಕೆಲಸಕ್ಕೆ ಸಂಪೂರ್ಣ ಬೆಂಬಲ ದೊರೆಯಲಿದೆ. ದೀರ್ಘಕಾಲದ ಗುರಿಗಳಲ್ಲಿ ಪ್ರಗತಿ ಕಂಡು ಬರುತ್ತದೆ. ಕುಟುಂಬದೊಂದಿಗೆ ಸಂತೋಷದ ಕ್ಷಣವನ್ನು ಆನಂದಿಸುವಿರಿ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News