)
Somavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಸೌರ ಶರದ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ ನವಮಿ ತಿಥಿಯ ಈ ದಿನ ಸೋಮವಾರ ಜ್ಯೇಷ್ಠ ನಕ್ಷತ್ರದಲ್ಲಿ ವಿಷ್ಕಂಭ ಯೋಗ, ಬಾಲವ ಕರಣ. ಇಂದಿನ ಎಲ್ಲಾ 12 ರಾಶಿಯವರ ಭವಿಷ್ಯ ಹೇಗಿದೆ ತಿಳಿಯಿರಿ.
ಮೇಷ ರಾಶಿಯವರ ಭವಿಷ್ಯ (Aries Horoscope):
ಇಂದು ಪ್ರಮುಖ ಕೆಲಸಗಾಲ್ಲಿ ನಿರ್ಲಕ್ಷ್ಯವನ್ನು ತಪ್ಪಿಸಿ. ಇಲ್ಲವೇ ಸಣ್ಣ ತಪ್ಪಿನಿಂದಲೂ ಭಾರೀ ನಷ್ಟವಾಗಬಹುದು. ಕೆಲಸದಲ್ಲಿ ಚಟುವಟಿಕೆಗಳು ಸಾಮಾನ್ಯವಾಗಿರುತ್ತವೆ. ವೈಯಕ್ತಿಕ ಕೆಲಸಗಳು ಪರಿಣಾಮಕಾರಿಯಾಗಿ ಪೂರ್ಣಗೊಳ್ಳಲಿವೆ. ವಿವೇಕದಿಂದ ಗುರಿಗಳ ಮೇಲೆ ಗಮನ ಕೇಂದ್ರೀಕರಿಸಿ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ಆರ್ಥಿಕ ವಿಷಯಗಳಲ್ಲಿ ಇಂದು ವೇಗ ಕಂಡು ಬರಲಿದೆ. ಉದ್ಯೋಗ ಸ್ಥಳದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತವೆ. ಸಾಮೂಹಿಕ ಮನೋಭಾವದಿಂದ ಮುಂದುವರೆಯುವುದರಿಂದ ಒಳ್ಳೆಯ ಫಲಗಳನ್ನು ಪಡೆಯುವಿರಿ. ವ್ಯವಹಾರ ಮತ್ತು ವ್ಯಾಪಾರದಲ್ಲಿ ಸುಧಾರಣೆ ಕಂಡು ಬರಲಿದೆ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ಇಂದು ವೃತ್ತಿ ಬದುಕಿನಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳು ನಿಯಮಿತತೆಗೆ ಒತ್ತು ನೀಡಿ. ಸೇವಾ ವಲಯದಲ್ಲಿರುವವರಿಗೆ ನಿರೀಕ್ಷೆಗಿಂತ ಉತ್ತಮ ಫಲಗಳು ದೊರೆಯಲಿವೆ.ಸಹೋದ್ಯೋಗಿಗಳಿಂದ ಬೆಂಬಲ ಸಹಕಾರ ದೊರೆಯ್ಲಿದೆ. ವೃತ್ತಿಪರ ಒಪ್ಪಂದಬಳಲ್ಲಿ ಆಸಕ್ತಿ ಹೆಚ್ಚಾಗಬಹುದು.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ಸ್ನೇಹಿತರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ. ಪರಿಚಯಸ್ಥರು ಮತ್ತು ಆಪ್ತರೊಂದಿಗೆ ಸಭೆ-ಸಮಾಲೋಚನೆಗಳು ಉತ್ತಮ ಪ್ರತಿಫಲವನ್ನು ನೀಡಲಿದೆ. ಸಂಬಂಧಿಕರಲ್ಲಿ ಸಹಕಾರದ ಮನೋಭಾವ ಮೇಲುಗೈ ಸಾಧಿಸಲಿದೆ. ಕ್ರಿಯಾಶೀಲ ಚಟುವಟಿಕೆಗಳಲ್ಲಿ ಬುದ್ದಿವಂತಿಕೆಯಿಂದ ಇರಿ.
ಸಿಂಹ ರಾಶಿಯವರ ಭವಿಷ್ಯ (Leo Horoscope):
ವೃತ್ತಿ ನಿರ್ವಹಣಾ ಕಾರ್ಯಗಳಲ್ಲಿ ಸುಧಾರಣೆ ಕಾಣುವಿರಿ. ವ್ಯವಹಾರದಲ್ಲಿ ಅಧಿಕ ಲಾಭವನ್ನು ಪಾಡಿವ ದಿನ ಇದಾಗಿದೆ. ಕೌಟುಂಬಿಕ ವಿಚಾರಗಳಲ್ಲಿ ಸಂತೋಷ ಹೆಚ್ಚಾಗಲಿದೆ. ಮನೆಯಲ್ಲಿ ಹಿರಿಯರೊಂದಿಗೆ ಬಾಂಧವ್ಯ ವೃದ್ಧಿಯಾಗಲಿದೆ. ವೃತ್ತಿಪರ ಪ್ರಯತ್ನಗಳು ಬಲಗೊಳ್ಳುತ್ತವೆ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ವ್ಯವಹಾರದಲ್ಲಿ ಒಳಗೊಳ್ಳುವಿಕೆ ಹೆಚ್ಚಾಗುತ್ತದೆ. ಸೃಜನಶೀಲ ಕೆಲಸಗಳಲ್ಲಿ ಜಯ ಸಾಧಿಸುವಿರಿ. ಪ್ರಮುಖ ಕೆಲಸಗಳಲ್ಲಿ ಒಡಹುಟ್ಟಿದವರ ಬೆಂಬಲ ದೊರೆಯಲಿದೆ. ವಾಣಿಜ್ಯ ಪ್ರಯತ್ನಗಳಲ್ಲಿ ವೇಗವನ್ನು ಪಡೆಯುವಿರಿ. ಸಾಮಾಜಿಕ ಉಪಕ್ರಮಗಳು ಆದ್ಯತೆಯಾಗಿ ಉಳಿಯುತ್ತವೆ.
ತುಲಾ ರಾಶಿಯವರ ಭವಿಷ್ಯ (Libra Horoscope):
ಇಂದು ಕೆಲಸದಲ್ಲಿ ಸಮಸ್ಯೆಗಳು ಉಂಟಾಗುತ್ತವೆ ಆದರೂ ಪಿತೂರು ಮಾಡುವವರ ವಿರುದ್ಧ ಜಯ ನಿಮ್ಮದಾಗಲಿದೆ. ಇದರಿಂದ ನಿಮ್ಮ ಗೌರವವೂ ಹೆಚ್ಚಾಗಲಿದೆ. ಕಷ್ಟದ ಸಂದರ್ಭಗಳು ನಿಮ್ಮನ್ನು ಇನ್ನೂ ಗಟ್ಟಿಗೊಳಿಸಲಿದ್ದು ಎಂತದ್ದೆ ಸಂದರ್ಭವನ್ನು ಧೈರ್ಯವಾಗಿ ಎದುರಿಸುವಿರಿ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ನೀವಿಂದು ಸೃಜನಶೀಲ ಪ್ರಯತ್ನಗಳಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುವುರಿ. ಪ್ರೀತಿಪಾತ್ರರೊಂದಿಗೆ ಸಂವಹನ ಕಾಪಾಡಿಕೊಳ್ಳಿ. ಕುಟುಂಬದಲ್ಲಿ ಸಂತೋಷ ತುಂಬಿರಲಿದೆ. ಉದ್ಯೋಗದಲ್ಲಿ ಬೆಳವಣಿಗೆಯನ್ನು ಕಾಣುವಿರಿ. ನಿಮ್ಮ ಕಲಾತ್ಮಕ ಕೌಶಲ್ಯವನ್ನು ಕಂಡು ಬೇರೆಯವರು ಪ್ರಭಾವಿತರಾಗುತ್ತದೆ. ಹೊಸ ಯೋಜನೆಯಗಳಲ್ಲಿ ಹೆಚ್ಚಿನ ಲಾಭ ಗಳಿಸುವಿರಿ.
ಧನು ರಾಶಿಯವರ ಭವಿಷ್ಯ (Sagittarius Horoscope):
ವ್ಯಾಪಾರ ವಿಸ್ತರಣೆಗಾಗಿ ಬಜೆಟ್ ಸಂಬಂಧಿತ ವಿಷಯಗಳತ್ತ ಗಮನ ಹರಿಸಬೇಕಾಗುತ್ತದೆ. ಹೂಡಿಕೆ ಸಂಬಂಧಿತ ಚಟುವಟಿಕೆಗಳು ಹೆಚ್ಚಾಗಲಿವೆ. ವ್ಯವಹಾರದಲ್ಲಿ ತಾಳ್ಮೆಯನ್ನು ಕಾಪಾಡಿಕೊಳ್ಳಿ. ಸಂಬಂಧಗಳಲ್ಲಿ ಮಾಧುರ್ಯತೆ ಹೆಚ್ಚಾಗುತ್ತದೆ. ಬಾಕಿ ಉಳಿದ ಕೆಲಸಗಳಲ್ಲಿ ವೇಗ ಕಾಣಲಿದೆ.
ಮಕರ ರಾಶಿಯವರ ಭವಿಷ್ಯ (Capricorn Horoscope):
ವೃತ್ತಿ ಮತ್ತು ವ್ಯವಹಾರದಲ್ಲಿ ನೀವಿಂದು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಬೇಕಾಗಬಹುದು. ಕೆಲಸದಲ್ಲಿ ಪರಿಸ್ಥಿತಿಗಳು ನಿಮಗೆ ಅನುಕೂಲಕರವಾಗಿ ಇರುತ್ತವೆ. ಇಂದು ಎಲ್ಲಾ ದಿಕ್ಕುಗಳಲ್ಲಿಯೂ ಅಪೇಕ್ಷಿತ ಫಲಿತಾಂಶ ದೊರೆಯಲಿದ್ದು ಸ್ನೇಹಿತರೊಂದಿಗೆ ಪ್ರವಾಸ ಯೋಜಿಸಬಹುದು.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ಈ ದಿನ ವ್ಯಾಪಾರ ಸಂಬಂಧಿತ ಸಭೆಗಳು ಬಂಪರ್ ಲಾಭವನ್ನು ನೀಡಲಿದೆ. ಉದ್ಯೋಗದಲ್ಲಿ ಪ್ರಗತಿಯ ಅವಕಾಶಗಳನ್ನು ಪಡೆಯ್ವಿರಿ. ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸುವಲ್ಲಿ ಪ್ರಯತ್ನಗಳು ಪರಿಣಾಮಕಾರಿಯಾಗಿ ಉಳಿಯುತ್ತವೆ. ನೆಟ್ವರ್ಕಿಂಗ್ ಕ್ಷೇತ್ರದಲ್ಲಿರುವವರು ಸಂಪರ್ಕ ಹೆಚ್ಚಿಸುವತ್ತ ಗಮನಹರಿಸಿ.
ಮೀನ ರಾಶಿಯವರ ಭವಿಷ್ಯ (Pisces Horoscope):
ಈ ರಾಶಿಯವರು ಇಂದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಿರಿ. ಹಣಕಾಸಿನ ವಿಷಯಗಳು ಅನುಕೂಲಕರವಾಗಿರುತ್ತವೆ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಬಹಳ ದಿನಗಳ ನಿಮ್ಮ ಕನಸೊಂದು ನನಸಾಗಲಿದ್ದು ಭಾರೀ ಪ್ರಯೋಜನವನ್ನು ಪಡೆಯುವಿರಿ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.