ದಿನಭವಿಷ್ಯ 04-04-2025: ಶುಕ್ರವಾರದಂದು ಆರ್ದ್ರಾ ನಕ್ಷತ್ರ ಶೋಭನ ಯೋಗ, ಈ ರಾಶಿಯವರಿಗೆ ಸಾಕ್ಷಾತ್ ಲಕ್ಷ್ಮಿ ದಯೆ

Today Horoscope 04th April 2025: ಶುಕ್ರವಾರದ ಈ ದಿನ ಆರ್ದ್ರಾ ನಕ್ಷತ್ರ ಶೋಭನ ಯೋಗ, ಗರಜ ಕರಣ. ಇಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Apr 4, 2025, 08:12 AM IST
  • ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಸೌರ ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ
  • ಶುಕ್ರವಾರದ ಈ ದಿನ ಆರ್ದ್ರಾ ನಕ್ಷತ್ರ ಶೋಭನ ಯೋಗ, ಗರಜ ಕರಣ.
  • ಇಂದು ಮೇಷದಿಂದ ಮೀನ ರಾಶಿಯವರೆಗೆ ಯಾವ ರಾಶಿಯವರಿಗೆ ಹೇಗಿದೆ ತಿಳಿಯಿರಿ.
ದಿನಭವಿಷ್ಯ 04-04-2025: ಶುಕ್ರವಾರದಂದು ಆರ್ದ್ರಾ ನಕ್ಷತ್ರ ಶೋಭನ ಯೋಗ, ಈ ರಾಶಿಯವರಿಗೆ ಸಾಕ್ಷಾತ್ ಲಕ್ಷ್ಮಿ ದಯೆ

Shukravara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಸೌರ ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಶುಕ್ರವಾರದ ಈ ದಿನ ಆರ್ದ್ರಾ ನಕ್ಷತ್ರ ಶೋಭನ ಯೋಗ, ಗರಜ ಕರಣ. ಇಂದು ಮೇಷದಿಂದ ಮೀನ ರಾಶಿಯವರೆಗೆ ಯಾವ ರಾಶಿಯವರಿಗೆ ಹೇಗಿದೆ ತಿಳಿಯಿರಿ.  

Add Zee News as a Preferred Source

ಮೇಷ ರಾಶಿಯವರ ಭವಿಷ್ಯ (Aries Horoscope):  
ಇಂದು ಭಾವನಾತ್ಮಕ ವಿಷಯಗಳಲ್ಲಿ ಸಂಯಮದಿಂದಿರಿ. ಧೈರ್ಯ ಮತ್ತು ಶೌರ್ಯ ಹೆಚ್ಚಾಗ್ಲೈದೆ. ಒಡಹುಟ್ಟಿದವರೊಂದಿಗೆ ನಿಕಟತೆ ಬೆಳೆಯುತ್ತದೆ. ಸೋಮಾರಿತನವನ್ನು ತಪ್ಪಿಸಿ. ವೃತ್ತಿಯಲ್ಲಿ ಬಡ್ತಿ ಸಂಭವವಿದೆ. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ಕುಟುಂಬದಲ್ಲಿ ಸಾಮರಸ್ಯ ಮತ್ತು ಸಮತೋಲನವನ್ನು ಕಾಪಾಡಿಕೊಳ್ಳಿ. ನಿಮ್ಮ ಮಾತು ಮತ್ತು ನಡವಳಿಕೆ ಪ್ರಭಾವಶಾಲಿಯಾಗಿರುತ್ತದೆ. ಸಂಪತ್ತು ಮತ್ತು ಆಸ್ತಿ ವೃದ್ಧಿಯಾಗಲಿದೆ. ವ್ಯವಹಾರದಲ್ಲಿ ಲಾಭದ ಅವಕಾಶಗಳಿವೆ. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಇಂದು ನಾವೀನ್ಯತೆಗೆ ಒತ್ತು ನೀಡುವುದು ಲಾಭದಾಯಕವಾಗಿದೆ. ನಮ್ರತೆ ಮತ್ತು ವಿಧೇಯತೆಯಿಂದ ಇರುವುದು ಪ್ರಯೋಜನಕಾರಿ ಆಗಿದೆ. ಪ್ರೀತಿಪಾತ್ರರೊಂದಿಗೆ ಸಂತೋಷದ ಸಮಯವನ್ನು ಆನಂದಿಸುವಿರಿ. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಈ ದಿನ ಹಣಕಾಸಿನ ವಹಿವಾಟುಗಳಲ್ಲಿ ಎಚ್ಚರಿಕೆಯನ್ನು ಕಾಯ್ದುಕೊಳ್ಳಿ. ವೆಚ್ಚಗಳು ಮತ್ತು ಹೂಡಿಕೆಗಳ ವಿಷಯದಲ್ಲಿ ತಾಳ್ಮೆಯನ್ನು ಕಾಯ್ದುಕೊಳ್ಳಿ. ವ್ಯವಹಾರದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಿ. 

ಇದನ್ನೂ ಓದಿ- ಮಾರ್ಗಿ ಶುಕ್ರನಿಂದ ಈ ರಾಶಿಯವರ ಅದೃಷ್ಟವೇ ಬದಲು, ಶುಕ್ರ ದೆಸೆಯಿಂದ ರಾಜವೈಭೋಗದ ಜೀವನ..! ಸ್ವಂತ ಮನೆ ಖರೀದಿ ಯೋಗ... 

ಸಿಂಹ ರಾಶಿಯವರ ಭವಿಷ್ಯ (Leo Horoscope):  
ನಿಮ್ಮ ವೃತ್ತಿ ಬದುಕಿನಲ್ಲಿ ಪ್ರಗತಿಯನ್ನು ಕಾಯ್ಗುಕೊಳ್ಳಲು ಇದು ಸುಸಮಯ. ವ್ಯವಹಾರದಲ್ಲಿ ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ ದೊರೆಯಲಿದೆ. ಸಹಕಾರಿ ಮನಸ್ಥಿತಿ ಕಾಪಾಡಿಕೊಳ್ಳಿ. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಕೆಲಸದಲ್ಲಿ ದಕ್ಷತೆಯನ್ನು ಕಾಯ್ದುಕೊಳ್ಳಲು ಸ್ಪಷ್ಟತೆಯಿಂದ ಮುಂದುವರೆಯಿರಿ. ನಿರ್ವಹಣಾ ವಿಷಯಗಳು ಸಕಾರಾತ್ಮಕವಾಗಿರುತ್ತದೆ. ಜವಾಬ್ದಾರಿಯುತ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿರುವುದು ಲಾಭದಾಯಕವಾಗಿದೆ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ಇಂದು ಅದೃಷ್ಟದ ಬೆಂಬಲದಿಂದ ವ್ಯವಹಾರ ವೃದ್ಧಿಯಾಗಲಿದೆ. ಕೆಲಸದಲ್ಲಿ ನಿರೀಕ್ಷೆಗಿಂತ ಉತ್ತಮ ಫಲಿತಾಂಶ ಪಡೆಯುವಿರಿ. ವೃತ್ತಿಪರ ವಿಷಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಿರಿ. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಪ್ರೀತಿಪಾತ್ರರೊಂದಿಗೆ ಸಾಮರಸ್ಯವನ್ನು ಕಾಪಾಡಿಕೊಳ್ಳಿ. ಹಿರಿಯರ ಮಾರ್ಗದರ್ಶನ, ಸಲಹೆಯನ್ನು ಗೌರವಿಸಿ. ನಿಮ್ಮ ಭಾವನೆಗಳನ್ನೂ ನಿಯಂತ್ರಿಸಿ. ಅಗತ್ಯ ಕೆಲಸಗಳಲ್ಲಿ ಶಿಸ್ತಿನಿಂದ ಮುಂದುವರೆಯಿರಿ. ಹಣಕಾಸಿನ ವಹಿವಾಟಿನಲ್ಲಿ ಸ್ಪಷ್ಟತೆ ಇರಲಿ. 

ಇದನ್ನೂ ಓದಿ- ತಿರುಪತಿ ತಿಮ್ಮಪ್ಪನ ಭಕ್ತರಿಗೆ ಸಿಹಿ ಸುದ್ದಿ: ದರ್ಶನಕ್ಕೆ ಇನ್ಮುಂದೆ ದಿನವಿಡೀ ಕಾಯಬೇಕಿಲ್ಲ...

ಧನು ರಾಶಿಯವರ ಭವಿಷ್ಯ (Sagittarius Horoscope):  
ವೈಯಕ್ತಿಕ ಜೀವನದಲ್ಲಿ ಸಂತೋಷ ಇರಲಿದೆ. ಸಹಕಾರ ಮತ್ತು ಸಮನ್ವಯದಿಂದ ಮುಂದುವರೆಯಿರಿ. ಆಪ್ತರೊಂದಿಗೆ ಸಂಬಂಧಗಳು ಸಕಾರಾತ್ಮಕವಾಗಿರುತ್ತವೆ. ಭೂಮಿ ಮತ್ತು ಆಸ್ತಿ ಸಂಬಂಧಿತ ಯೋಜನೆಗಳಲ್ಲಿ ಲಕ್ಷ್ಮಿ ದಯೆ ಇರಲಿದೆ. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ಸಾಮರಸ್ಯದಿಂದ ವರ್ತಿಸುವುದರಿಂದ ಕೆಲಸದಲ್ಲಿ ಸಂಬಂಧಗಳು ಬಲಗೊಳ್ಳುತ್ತವೆ. ವ್ಯಾಪಾರ ವಿಷಯಗಳು ವೇಗವನ್ನು ಪಡೆಯಲಿವೆ. ನಿಯಮಗಳು ಮತ್ತು ಶಿಸ್ತಿನ ಮೇಲೆ ವಿಶೇಷ ಗಮನವಹಿಸುವುದು ಅವಶ್ಯಕ. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಇಂದು ಪ್ರಮುಖ ಕೆಲಸಗಳಲ್ಲಿ ತಾಳ್ಮೆ, ಶಿಸ್ತನ್ನು ಕಾಪಾಡಿಕೊಳ್ಳಿ. ವ್ಯವಹಾರದಲ್ಲಿ ವಿಶೇಷ ಪ್ರಸ್ತಾಪಗಳನ್ನು ಪಡೆಯಬಹುದು ವೃತ್ತಿಪರ ವಿಷಯಗಳಲ್ಲಿ ಎಚ್ಚರಿಕೆಯಿಂದ ಇರಿ. ಬುದ್ದಿವಂತಿಕೆಯಿಂದ ಕೆಲಸ ಮಾಡಿ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ಇಂದು ಕುಟುಂಬದೊಂದಿಗೆ ಆತ್ಮೀಯತೆ ಹೆಚ್ಚಾಗುತ್ತದೆ. ವೈಯಕ್ತಿಕ ವಿಷಯಗಳತ್ತ ಹೆಚ್ಚಿನ ಗಮನಹರಿಸಿ. ವ್ಯವಹಾರದಲ್ಲಿ ಆತುರತೆಯನ್ನು ತಪ್ಪಿಸಿ. ಜೀವನದಲ್ಲಿ ಸುಖ-ಸೌಕರ್ಯಗಳು ಹೆಚ್ಚಾಗಲಿವೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News