)
Somavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಸೌರ ವರ್ಷಾ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ದಶಮಿ ತಿಥಿ, ಸೋಮವಾರದ ಈ ದಿನ ಅನುರಾಧಾ ನಕ್ಷತ್ರ ಬ್ರಹ್ಮ ಯೋಗ ವಣಿಜ ಕರಣ. ಇಂದು ಎಲ್ಲಾ 12 ರಾಶಿಯವರ ಭವಿಷ್ಯ ಹೇಗಿದೆ ತಿಳಿಯಿರಿ.
ಮೇಷ ರಾಶಿಯವರ ಭವಿಷ್ಯ (Aries Horoscope):
ಇಂದು ಹಣಕಾಸು ಮತ್ತು ವ್ಯವಹಾರ ವಿಷಯಗಳಲ್ಲಿ ಪರಸ್ಪರ ಸಹಕಾರವನ್ನು ಕಾಯ್ದುಕೊಳ್ಳುವುದು ಲಾಭದಾಯಕವಾಗಿದೆ. ಪ್ರಮುಖ ವ್ಯವಹಾರಗಳಲ್ಲಿ ಹಿರಿಯರ ಬೆಂಬಲ, ಮಾರ್ಗದರ್ಶನ ನಿಮ್ಮನ್ನು ಪ್ರೇರೇಪಿಸಲಿದೆ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ಇಂದು ಕೆಲಸ-ಕಾರ್ಯಗಳಲ್ಲಿ ಜಾಗರೂಕರಾಗಿರುವುದರಿಂದ ನಿರ್ವಹಣಾ ವಿಷಯಗಳನ್ನು ಬಳಪಡಿಸುವಿರಿ. ವ್ಯವಹಾರದಲ್ಲಿ ಅನುಕೂಲಕರ ಪರಿಸ್ಥಿತಿಗಳು ಇರಲಿದ್ದು ಲಾಭದಾಯಕ ಯೋಜನೆಗಳನ್ನು ಮುನ್ನಡೆಸುತ್ತೀರಿ. ಕುಟುಂಬದ ಸಹಕಾರ ಇರುತ್ತದೆ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ಇಂದು ನಿಮ್ಮ ಸಮಯ ನಿರ್ವಹಣೆ ಬಲವಾಗಿರುತ್ತದೆ. ಕಲಾತ್ಮಕ ಮತ್ತು ಕೌಶಲ್ಯಪೂರ್ಣ ಚಟುವಟಿಕೆಗಳಲ್ಲಿರುವವರಿಗೆ ಪ್ರಗತಿಯ ದಿನ. ಯಾವುದೇ ವಿಚಾರದಲ್ಲಿ ಹಠಮಾರಿತಾಣವನ್ನು ತಪ್ಪಿಸಿ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿಯಾಗುವ ಸಾಧ್ಯತೆ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ಈ ದಿನ . ಪ್ರೀತಿ, ವಾತ್ಸಲ್ಯ ಮತ್ತು ಸ್ನೇಹವನ್ನು ಬಲಪಡಿಸುವತ್ತ ಗಮನ ಹರಿಸುತ್ತೀರಿ. ಪ್ರೀತಿಪಾತ್ರರೊಂದಿಗೆ ಆಂತರಿಕ ಆಲೋಚನೆಗಳನ್ನು ಹಂಚಿಕೊಳ್ಳಲು ಉತ್ತಮ ಸಮಯ. ಮಕ್ಕಳಿಂದ ಆಹ್ಲಾದಕರ ಸುದ್ದಿ ಕೇಳುವಿರಿ. ಸಮಾಜದಲ್ಲಿ ನಿಮ್ಮ ಕೀರ್ತಿ, ಗೌರವ ಹೆಚ್ಚಾಗಲಿದೆ.
ಸಿಂಹ ರಾಶಿಯವರ ಭವಿಷ್ಯ (Leo Horoscope):
ವೃತ್ತಿ ಮತ್ತು ವ್ಯವಹಾರದಲ್ಲಿ ನಿಮ್ಮ ಗುರಿಗಳನ್ನು ಸಾಧಿಸಲು ಸಂಪೂರ್ಣ ಶ್ರಮ ಹಾಕುವಿರಿ. ಕುಟುಂಬ ಸದಸ್ಯರೊಂದಿಗೆ ಪ್ರೀತಿ ಮತ್ತು ವಿಶ್ವಾಸ ಬಲಗೊಳ್ಳಲಿದೆ. ವಿವಿಧ ಕೆಲಸಗಳಲ್ಲಿ ಆತುರವನ್ನು ತಪ್ಪಿಸಿ ಮುಂದುವರೆಯುವುದು ಲಾಭದಾಯಕವಾಗಿದೆ. ಹಣಕಾಸಿನ ವಿಷಯಗಳಲ್ಲಿ ಬುದ್ದಿವಂತಿಕೆಯಿಂದ ವರ್ತಿಸಿ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಈ ದಿನ ನಿಮ್ಮ ಧೈರ್ಯದಿಂದಲೇ ವೃತ್ತಿ ಮತ್ತು ವ್ಯವಹಾರದಲ್ಲಿ ಧನಾತ್ಮಕತೆಯನ್ನು ಕಾಣುವಿರಿ. ವ್ಯವಹಾರವು ಆರಾಮದಾಯಕವಾಗಿರುತ್ತದೆ. ಇಂದು ಅದೃಷ್ಟದ ಸಂಪೂರ್ಣ ಬೆಂಬಲ ಇರಲಿದ್ದು, ವೃತ್ತಿಯಲ್ಲಿ ಅಧಿಕಾರಿಗಳಿಂದ ಬೆಂಬಲ ದೊರೆಯಲಿದೆ.
ತುಲಾ ರಾಶಿಯವರ ಭವಿಷ್ಯ (Libra Horoscope):
ಈ ರಾಶಿಯವರಿಗೆ ಇಂದು ಕುಟುಂಬದಲ್ಲಿ ಸಾಮರಸ್ಯ ಮತ್ತು ಸಂತೋಷ ಮೇಲುಗೈ ಸಾಧಿಸಲಿದೆ. ರಕ್ತಸಂಬಂಧಿಗಳೊಂದಿಗೆ ಬಾಂಧವ್ಯ ಬಲಗೊಳ್ಳುತ್ತದೆ. ಇಂದು ವೈಯಕ್ತಿಕ ವಿಚಾರಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಸಾಂಪ್ರದಾಯಿಕ ವ್ಯವಹಾರಗಳಲ್ಲಿ ಪ್ರಗತಿ ಕಂಡು ಬರಲಿದೆ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ಇಂದು ನಿಮ್ಮ ಪ್ರೀತಿಪಾತ್ರರೊಂದಿಗೆ ಆಹ್ಲಾದಕರ ಕ್ಷಣಗಳನ್ನು ಆನಂದಿಸುತ್ತೀರಿ. ಸೃಜನಶೀಲ ಅವಕಾಶಗಳಿಂದ ನೀವು ಪ್ರಯೋಜನ ಪಡೆಉತ್ತೀರಿ. ನಿಮ್ಮ ಅಭಿಪ್ರಾಯಗಳನ್ನು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಲು ಉತ್ತಮ ದಿನ. ವ್ಯವಹಾರದಲ್ಲಿ ಏಳ್ಗೆಯ ದಿನ.
ಧನು ರಾಶಿಯವರ ಭವಿಷ್ಯ (Sagittarius Horoscope):
ಇಂದು ಆಡಂಬರ ಮತ್ತು ಬಡಾಯಿ ಕೊಚ್ಚಿಕೊಳ್ಳುವ ನಡವಳಿಕೆಯನ್ನು ತಪ್ಪಿಸಿ. ವಿರೋಧಿಗಳ ಬಗ್ಗೆ ತುಂಬಾ ಜಾಗರೂಕರಾಗಿರಿ. ಇಂದು ಬಜೆಟ್ ಗೆ ಅನುಗುಣವಾಗಿ ನಿಮ್ಮ ಖರ್ಚುಗಳನ್ನು ನಿಯಂತ್ರಿಸಿ. ಇಲ್ಲವೇ ಭವಿಷ್ಯದಲ್ಲಿ ಹಣಕಾಸಿನ ಬಿಕ್ಕಟ್ಟು ಎದುರಾಗಬಹುದು. ಸಂಘಟಿತ ವಲಯದಲ್ಲಿ ಪ್ರಗತಿ.
ಮಕರ ರಾಶಿಯವರ ಭವಿಷ್ಯ (Capricorn Horoscope):
ಇಂದು ಉದ್ಯೋಗದಲ್ಲಿ ವಾತಾವರಣ ಧನಾತ್ಮಕವಾಗಿರುತ್ತದೆ. ವೃತ್ತಿಪರ ಕ್ಷೇತ್ರದಲ್ಲಿ ಸಹಕಾರದ ಭಾವನೆ ಬೆಳೆಯಲಿದೆ. ಸ್ನೇಹಿತರಲ್ಲಿ ಸಾಮರಸ್ಯ ಹೆಚ್ಚಾಗುತ್ತದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಹಣಕಾಸಿನ ಪ್ರಯತ್ನಗಳು ಯಶಸ್ವಿಯಾಗುತ್ತವೆ.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ಇಂದು ವ್ಯಾಪಾರ ಚಟುವಟಿಕೆಗಳು ವೇಗ ಪಡೆಯಲಿವೆ. ವೃತ್ತಿಪರ ಕ್ಷೇತ್ರದಲ್ಲಿ ಯಶಸ್ಸು ಗಳಿಸುವಿರಿ. ಸಂವಹನ ಮತ್ತು ನೆಟ್ವರ್ಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಫಲಪ್ರದವಾದ ದಿನ. ಹಣಕಾಸಿನ ವಿಷಯಗಳು ಸಕಾರಾತ್ಮಕವಾಗಿ ಉಳಿಯಲಿವೆ.
ಮೀನ ರಾಶಿಯವರ ಭವಿಷ್ಯ (Pisces Horoscope):
ಇಂದು ಹೆಚ್ಚಿನ ವಿಷಯಗಳಲ್ಲಿ ನೀವು ಬಯಸಿದ ಯಶಸ್ಸನ್ನು ಪಡೆಯುವಿರಿ. ವಿಶೇಷವಾಗಿ ಕಲಾತ್ಮಕ ಮತ್ತು ಸೃಜನಶೀಲ ಕೌಶಲ್ಯಗಳಲ್ಲಿ ಪ್ರಗತಿಯನ್ನು ಕಾಣುವಿರಿ. ಅದೃಷ್ಟದ ಬೆಂಬಲದಿಂದ ಜೀವನದಲ್ಲಿ ಸಕಾರಾತ್ಮಕತೆ ಹೆಚ್ಚಾಗಲಿದೆ. ಯಾವುದೇ ಕೆಲಸಕ್ಕೆ ಹೊರಹೋಗುವಾಗ ಮನೆಯಲ್ಲಿ ಹಿರಿಯರ ಆಶೀರ್ವಾದ ಪಡೆದು ಹೊರಟರೆ ಕೆಲಸ ಕೈಗೂಡಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.