)
Budhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಸೌರ ಗ್ರೀಷ್ಮ ಋತು, ಜ್ಯೇಷ್ಠ ನಕ್ಷತ್ರ ಶುಕ್ಲ ಪಕ್ಷ, ನವಮಿ ತಿಥಿಯ ಈ ದಿನ ಬುಧವಾರ ಉತ್ತರಾ ನಕ್ಷತ್ರ, ವಜ್ರ ಯೋಗ, ಬಾಲವ ಕರಣ. ಇಂದು ಯಾವ ರಾಶಿಯವರ ಫಲ ಹೇಗಿದೆ ತಿಳಿಯಿರಿ.
ಮೇಷ ರಾಶಿಯವರ ಭವಿಷ್ಯ (Aries Horoscope):
ಸ್ನೇಹಿತರ ಬೆಂಬಲದಿಂದ ಇಂದು ನಿಮ್ಮ ಉತ್ಸಾಹ ಹೆಚ್ಚಾಗಲಿದೆ. ಕೆಲಸದ ನಿರ್ವಹಣೆ ಸುಧಾರಿಸಲಿದೆ. ವೃತ್ತಿಪರ ವಿಷಯಗಳಲ್ಲಿ ಬುದ್ದಿವಂತಿಕೆಯಿಂದ ಕೆಲಸ ಮಾಡಿ. ತಾರ್ಕಿಕ ವಿಧಾನಗಳನ್ನು ಅಳವಡಿಸಿಕೊಳ್ಳಿ. ಇಂದು ಶುಭ ಸುದ್ದಿಯನ್ನು ಕೇಳುವಿರಿ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ಉದ್ಯೋಗ ರಂಗದಲ್ಲಿ ಪರಿಣಾಮಕಾರಿಯಾಗಿರುವಿರಿ. ಜೀವನದಲ್ಲಿ ಶಿಸ್ತು ಮತ್ತು ನೀತಿ ನಿಯಮಗಳನ್ನು ಪಾಲಿಸಿ. ವ್ಯವಸ್ಥಿತ ಮತ್ತು ರಚನಾತ್ಮಕ ಕಾರ್ಯಗಳ ಮೇಲೆ ಗಮನಹರಿಸಿ. ಕುಟುಂಬ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಪೂರ್ವಜರ ಆಸ್ತಿ ಸಂಬಂಧಿತ ಕೆಲಸಗಳಲ್ಲಿ ವೇಗವನ್ನು ಪಡೆಯುತ್ತೀರಿ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ಇಂದು ನಿಮ್ಮ ಆರ್ಥಿಕ ಸ್ಥಿತಿ ಸದೃಢವಾಗಿರುತ್ತದೆ. ಸಾಮಾಜಿಕವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುವಿರಿ. ಎಲ್ಲರೊಂದಿಗೆ ಸಂವಹನ ಮತ್ತು ಸಂಪರ್ಕಗಳು ಸುಧಾರಿಸುತ್ತವೆ. ವಾದ ವಿವಾದಗಳಿಂದ ದೂರವಿದ್ದರೆ ಒಳಿತು. ನಡವಳಿಕೆಯಲ್ಲಿ ಶಾಂತತೆಯನ್ನು ಕಾಪಾಡಿಕೊಳ್ಳಿ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ನಿಮ್ಮ ಪ್ರೀತಿಪಾತ್ರರ ಜೊತೆ ಉತ್ತಮ ಸಂವಹನ ಮತ್ತು ಸಾಮರಸ್ಯ ಕಾಪಾಡಿಕೊಳ್ಳುತ್ತೀರಿ. ಸಂಬಂಧಗಳಲ್ಲಿ ಸೂಕ್ಷ್ಮತೆ ಕಾಪಾಡಿಕೊಳ್ಳುವುದು ಹೆಚ್ಚು ಸೂಕ್ತ. ಸಂಭಾಷಣೆಯ ಸಮಯದಲ್ಲಿ ಜಾಗರೂಕರಾಗಿರಿ. ಕುಟುಂಬ ಸಂಬಂಧಗಳು ಬಲಗೊಳ್ಳಲಿವೆ.
ಸಿಂಹ ರಾಶಿಯವರ ಭವಿಷ್ಯ (Leo Horoscope):
ನಿಮ್ಮ ಸೃಜನಶೀಲ ಪ್ರಯತ್ನಗಳಲ್ಲಿ ಲಾಭವನ್ನು ಪಡೆಯುವಿರಿ. ಮಾತು ಮತ್ತು ನಡವಳಿಕೆಯಿಂದ ಎಲ್ಲರ ಮನಸ್ಸನ್ನು ಗೆಲ್ಲುವಿರಿ. ಪ್ರಮುಖ ವಿಷಯಗಳಲ್ಲಿ ಬೆಂಬಲ ಸಿಗಲಿದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಮನೆಯಲ್ಲಿ ಆಹ್ಲಾದಕರ ವಾತಾವರಣ ಇರುತ್ತದೆ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಇಂದು ನಿಮ್ಮ ಕೆಲಸ ಕಾರ್ಯಗಳಲ್ಲಿ ಎಚ್ಚರಿಕೆಯಿಂದ ಮುಂದುವರೆಯಿರಿ. ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು ಎಂಬಂತೆ ಯಾವುದೇ ವಿಚಾರದಲ್ಲಿ ಮೇಲ್ನೋಟಕ್ಕೆ ಕಾಣುವುದನ್ನೇ ಸತ್ಯ ಎಂದುಕೊಳ್ಳಬೇಡಿ. ಸಣ್ಣ ನಿರ್ಲಕ್ಷ್ಯವೂ ನಿಮ್ಮನ್ನು ತಪ್ಪು ದಾರಿಗೆ ಎಳೆಯಬಹುದು ಹುಷಾರಾಗಿರಿ.
ತುಲಾ ರಾಶಿಯವರ ಭವಿಷ್ಯ (Libra Horoscope):
ಧೈರ್ಯ ಮತ್ತು ದೃಢಸಂಕಲ್ಪದಿಂದ ವೃತ್ತಿಪರ ಕಾರ್ಯಗಳು ವೇಗವನ್ನು ಪಡೆಯುತ್ತವೆ. ಮನೆಯವರ ಬೆಂಬಲ ಸಹಕಾರ ಸ್ಥಿರವಾಗಿ ಉಳಿಯಲಿದೆ. ಆಕರ್ಷಕ ಪ್ರಸ್ತಾಪಗಳನ್ನು ಪಡೆಯುವಿರಿ. ವೃತ್ತಿ ಸಂಬಂಧಿತ ಉತ್ತಮ ಅವಕಾಶಗಳು ದೊರೆಯಲಿವೆ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ವೃತ್ತಿಪರ ಕ್ಷೇತ್ರದಲ್ಲಿ ನಿಮ್ಮ ಕಾರ್ಯಕ್ಷಮತೆ ಶ್ಲಾಘನೀಯವಾಗಿರುತ್ತದೆ. ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಯಲಿದ್ದು ಹಣಕಾಸು ಮತ್ತು ವಾಣಿಜ್ಯ ಪ್ರಸ್ತಾಪಗಳಿದೆ ಬೆಂಬಲ ದೊರೆಯಲಿದೆ. ನಿರ್ವಹಣಾ ಪ್ರಯತ್ನಗಳು ಸುಧಾರಿಸುತ್ತವೆ. ಆದಾಯ ಹೆಚ್ಚಾಗಲಿದೆ.
ಧನು ರಾಶಿಯವರ ಭವಿಷ್ಯ (Sagittarius Horoscope):
ಇಂದು ನಿಮ್ಮ ಭಾವನೆಗಳನ್ನ್ ವ್ಯಕ್ತಪಡಿಸುವಲ್ಲಿ ಉತ್ಸುಕರಾಗಿರುವಿರಿ. ವೃತ್ತಿಪರ ಪ್ರಯತ್ನಗಳಲ್ಲಿ ನಿರೀಕ್ಷೆಗೂ ಮೀರಿ ಉತ್ತಮ ಫಲಿತಾಂಶ ದೊರೆಯಲಿದೆ. ಮೇಲಾಧಿಕಾರಿಗಳು ಮತ್ತು ಜವಾಬ್ದಾರಿಯುತ ವ್ಯಕ್ತಿಗಳಿಂದ ಸಲಹೆ ಪಡೆಯುತ್ತೀರಿ. ನಿಮ್ಮ ಖ್ಯಾತಿ ಹೆಚ್ಚಾಗಲಿದೆ.
ಮಕರ ರಾಶಿಯವರ ಭವಿಷ್ಯ (Capricorn Horoscope):
ಇಂದು ನಿರಂತರವಾದ ಸವಾಲುಗಳು ಸುತ್ತುವರೆಯಬಹುದು. ವಾದಗಳು ಮತ್ತು ಸಂಘರ್ಷಗಳಿಂದ ಸಾಧ್ಯವಾದಷ್ಟು ದೂರವಿರಿ. ಕುಟುಂಬದ ಬೆಂಬಲ ಪಡೆಯುವಿರಿ. ನೀತಿ ನಿಯಮಗಳನ್ನು ಶ್ರದ್ಧೆಯಿಂದ ಅನುಸರಿಸಿ. ವಿಶಾಲ ದೃಷ್ಟಿಕೋನವನ್ನು ಕಾಪಾಡಿಕೊಳ್ಳಿ.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ನಿಮ್ಮ ಕೆಲಸದಲ್ಲಿ ನೀತಿ ನಿಯಮಗಳನ್ನು ಅನುಸರಿಸಿ. ಹಿರಿಯರ ಮಾರ್ಗದರ್ಶನದಿಂದ ಮುಂದುವರೆದರೆ ವ್ಯವಹಾರದಲ್ಲಿ ಯಶಸ್ಸು. ವೃತ್ತಿಪರ ಪ್ರಯತ್ನಗಳಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಿ. ನಿರ್ವಹಣಾ ಕೌಶಲ್ಯ ಸುಧಾರಿಸುತ್ತದೆ.
ಮೀನ ರಾಶಿಯವರ ಭವಿಷ್ಯ (Pisces Horoscope):
ವೃತ್ತಿ ವ್ಯವಹಾರದ ವಿಷಯಗಳಲ್ಲಿ ಸಮಸ್ಯೆಗಳು ತಲೆದೂರಬಹುದು. ಕುತಂತ್ರಿ ವ್ಯಕ್ತಿಗಳ ಪ್ರಭಾವಕ್ಕೆ ಒಳಗಾಗಬಹುದು ಎಚ್ಚರವಾಗಿರಿ. ಹೊಸಬರೊಂದಿಗೆ ಅಂತರ ಕಾಯ್ದುಕೊಳ್ಳುವುರು ಒಳ್ಳೆಯದು. ಕೆಲಸದ ಸ್ಥಳದಲ್ಲಿ ಯಾವುದೇ ಪ್ರಮುಖ ಕೆಲಸಗಳಲ್ಲಿ ನಿರ್ಲಕ್ಷ್ಯವನ್ನು ತಪ್ಪಿಸಿ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.