Mangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಸೌರ ವಸಂತ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿ, ಮಂಗಳವಾರ, ಭರಣಿ ನಕ್ಷತ್ರ, ಐಂದ್ರ ಯೋಗ, ಕೌಲವ ಕರಣ. ಇಂದು ಯಾವ ರಾಶಿಯವರ ಭವಿಷ್ಯ ಹೇಗಿದೆ.
ಮೇಷ ರಾಶಿಯವರ ಭವಿಷ್ಯ (Aries Horoscope):
ಕೆಲಸ ವ್ಯವಹಾರದಲ್ಲಿ ಹೊಸ ಆರಂಭ ಸಾಧ್ಯತೆ. ಸೃಜನಶೀಲ ಪ್ರಯತ್ನಗಳು ಯಶಸ್ವಿಯಾಗಬಹುದು. ಜೀವನದಲ್ಲಿ ಸಕಾರಾತ್ಮಕತೆ ಹೆಚ್ಚಾಗಲಿದ್ದು ಉತ್ಸಾಹ ಇರಲಿದೆ. ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ಇಂದು ಅತಿಯಾದ ಖ್ರ್ಚು ನಿಮ್ಮ ಬಜೆಟ್ ಮೇಲೆ ಪರಿಣಾಮ ಬೀರ್ಬಹುದು. ತ್ಯಾಗ ಮತ್ತು ಸಹಕಾರದ ಮನೋಭಾವ ಹೆಚ್ಚಾಗುತ್ತದೆ. ಕೆಲಸಗಳು ನಿಧಾನವಾಗಿ ಸಾಗಬಹುದು. ಆದಾಗ್ಯೂ, ಕೆಲಸದಲ್ಲಿ ತಾಳ್ಮೆ ಇದ್ದರೆ ಉತ್ತಮ ಫಲ ಪಡೆಯಬಹುದು.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ಉದ್ಯೋಗ ರಂಗದಲ್ಲಿ ಇಂದು ಸಕಾರಾತ್ಮಕತೆ ಉಳಿಯುತ್ತದೆ. ಸ್ನೇಹಿತರು ನಿಮ್ಮ ಉತ್ಸಾಹವನ್ನೂ ಹೆಚ್ಚಿಸಬಹುದು. ವೃತ್ತಿ ವ್ಯವಹಾರದಲ್ಲಿ ಗಮನ ಕೇಂದ್ರೀಕರಿಸುವುದು ಲಾಭದಾಯಕವಾಗಿರುತ್ತದೆ. ತುರ್ತು ಕೆಲಸಗಳನ್ನು ವೇಗವಾಗಿ ಪೂರ್ಣಗೊಳಿಸುವಿರಿ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ನಿರ್ವಹಣಾ ಪ್ರಯತ್ನಗಳು ಫಲ ನೀಡುತ್ತವೆ. ಸರ್ಕಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ದೊಡ್ಡ ಸಾಧನೆ ಮಾಡಬಹುದು. ಕೆಲಸದ ಮೇಲೆ ಗಮನ ಹೆಚ್ಚಾಗುತ್ತದೆ. ಹಿಂದಿನ ಅನುಭವಗಳ ಲಾಭವನ್ನು ಪಡೆಯುವಿರಿ. ವೃತ್ತಿಪರರಿಗೆ ಬಯಸಿದ ಯಶಸ್ಸು ಪ್ರಾಪ್ತಿಯಾಗುತ್ತದೆ.
ಇದನ್ನೂ ಓದಿ- Chaturgrahi Yoga: ಮೀನ ರಾಶಿಯಲ್ಲಿ ಚತುರ್ಗ್ರಾಹಿ ಯೋಗದಿಂದ ಈ ರಾಶಿಯವರಿಗೆ ಮಣ್ಣೂ ಹೊನ್ನಾಗುವ ಸಮಯ
ಸಿಂಹ ರಾಶಿಯವರ ಭವಿಷ್ಯ (Leo Horoscope):
ವ್ಯವಹಾರದಲ್ಲಿ ನೀವು ಬಯಸಿದ ಯಶಸ್ಸು ಸಿಗಲಿದೆ. ಅದೃಷ್ಟದ ಬೆಂಬಲದಿಂದ ಕೆಲಸಗಳು ಸರಾಗವಾಗಿ ಜರುಗಳಿವೆ. ಸಮಾಜದಲ್ಲಿ ಕೀರ್ತಿ, ಗೌರವ ಹೆಚ್ಚಾಗುತ್ತದೆ. ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಇರಲಿದೆ. ಭೂ ವ್ಯವಹಾರಗಳು ಲಾಭದಾಯಕವಾಗಿರಲಿದೆ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಸಂಬಂಧಿಕರ ಸಹಾಯದಿಂದ ಕಾರ್ಯ ಸಾಧನೆ. ಕುಟುಂಬದ ಬೆಂಬಲವು ನಿಮ್ಮನ್ನು ಪ್ರೇರೇಪಿಸುತ್ತದೆ. ವೃತ್ತಿ ಬದುಕಿನಲ್ಲಿ ಯಶಸ್ಸನ್ನು ಕಾಣುವಿರಿ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಹಣಕಾಸಿನ ವಿಷಯಗಳಲ್ಲಿ ಗಮನಾರ್ಹ ಪ್ರಗತಿ ಕಂಡು ಬರುತ್ತದೆ.
ತುಲಾ ರಾಶಿಯವರ ಭವಿಷ್ಯ (Libra Horoscope):
ತಂಡದೊಂದಿಗೆ ಸೌಹಾರ್ದಯುತವಾಗಿ ನಡೆದುಕೊಳ್ಳಿ. ಇದೇ ನಿಮ್ಮ ತಂಡದ ಯಶಸ್ಸಿನ ಗುಟ್ಟು. ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು ಮುಂದುವರೆಯಿರಿ. ಪ್ರಮುಖ ಕೆಲಸಗಳಲ್ಲಿ ವೇಗ ಸಿಗಲಿದೆ. ವೈವಾಹಿಕ ಜೀವನದಲ್ಲಿ ಸಂತೋಷ ಸಮೃದ್ಧಿ ಇರಲಿದೆ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ನಿಮ್ಮ ಗುರಿಯತ್ತ ಸಮರ್ಪಿತರಾಗಿರಿ. ವೃತ್ತಿ-ವ್ಯವಹಾರಕ್ಕೆ ಸಂಬಂಧಿಸಿದಂತೆ ಸಾಮಾನ್ಯ ದಿನ. ಉದ್ಯೋಗಿಗಳು ಉತ್ತಮ ಕಾರ್ಯಕ್ಷಮತೆಯನ್ನು ಕಾಯ್ದುಕೊಳ್ಳುತ್ತಾರೆ. ಸಕಾರಾತ್ಮಕ ಚಿಂತನೆಯಿಂದ ಕೆಲಸ ಮಾಡುವುದು ಲಾಭಾಯಕ. ಕಠಿಣ ಪರಿಶ್ರಮದಿಂದ ಉನ್ನತ ಹುದ್ದೆಗೇರುವಿರಿ.
ಇದನ್ನೂ ಓದಿ- Weekly Horoscope: ಮಾರ್ಚ್ ಮೊದಲ ವಾರ ಗಜಕೇಸರಿ ರಾಜಯೋಗದಿಂದ ಈ ಜನರಿಗೆ ಖುಲಾಯಿಸಲಿದೆ ಅದೃಷ್ಟ, ಮನೆ ಖರೀದಿ ಯೋಗ
ಧನು ರಾಶಿಯವರ ಭವಿಷ್ಯ (Sagittarius Horoscope):
ವೈಯಕ್ತಿಕ ಬದುಕಿನಲ್ಲಿ ಸಕಾರಾತ್ಮಕತೆ ಹೆಚ್ಚಾಗುತ್ತದೆ. ಹಣಕಾಸಿನ ವಿಷಯಗಳೂ ನಿಮ್ಮ ಪರವಾಗಿರುತ್ತವೆ. ಆಪ್ತರನ್ನು ಭೇಟಿಯಾಗುವುದರಿಂದ ಮನಸ್ಸಿಗೆ ಸಂತೋಷವಾಗಲಿದೆ. ಮಕ್ಕಳಿಂದ ಶುಭ ಸುದ್ದಿಯನ್ನು ಕ್ಲಬಹುದು. ಹಿರಿಯರೊಂದಿಗೆ ವಿಧೇಯತೆಯಿಂದ ನಡೆದುಕೊಳ್ಳಿ.
ಮಕರ ರಾಶಿಯವರ ಭವಿಷ್ಯ (Capricorn Horoscope):
ರಕ್ತ ಸಂಬಂಧದಲ್ಲಿ ಮಾಧುರ್ಯ ಉಳಿಯುತ್ತದೆ. ಕೌಟುಂಬಿಕ ಸಂಬಂಧಗಳು ಬಲಗೊಳ್ಳುತ್ತವೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವನ್ನು ಅನುಭವಿಸುವಿರಿ. ಯಾವುದೇ ಕೆಲಸದಲ್ಲಿ ಅತಿಯಾದ ಉತ್ಸಾಹವನ್ನು ತಪ್ಪಿಸಿ. ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ಇಂದು ಸಾಮಾಜಿಕ ಚಟುವಟಿಕೆಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ. ಸಂದರ್ಭಗಳು ನಿಮಗೆ ಅನುಕೂಲಕರವಾಗಿರುತ್ತದೆ. ಹಿರಿಯರ ಬಗ್ಗೆ ಗೌರವದಿಂದ ನಡೆದುಕೊಳ್ಳಿ. ವ್ಯವಹಾರದಲ್ಲಿ ಗಮನವಹಿಸಿ ಮುಂದುವರೆಯುವುದರಿಂದ ಲಾಭ ಪಡೆಯುವಿರಿ.
ಮೀನ ರಾಶಿಯವರ ಭವಿಷ್ಯ (Pisces Horoscope):
ಕುಟುಂಬದಲ್ಲಿ ಶುಭ ಕಾರ್ಯಗಳನ್ನು ಯೋಜಿಸಬಹುದು. ಕುಟುಂಬ ಸದಸ್ಯರ ನಡುವೆ ಸಾಮರಸ್ಯ ಇರುತ್ತದೆ. ಆಕರ್ಷಕ ಕೊಡುಗೆಗಳು ನಿಮ್ಮ ದಿನವನ್ನು ಬೆಳಗಲಿದೆ. ಮನೆಗೆ ಅತಿಥಿಗಳ ಆಗಮನದಿಂದ ಸಂತೋಷವಾಗಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.









