)
Guruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಸೌರ ಶರದ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿಯ ಈ ದಿನ ಗುರುವಾರ, ಉ.ಷಾ. ನಕ್ಷತ್ರ, ಸೌಭಾಗ್ಯ ಯೋಗ, ಬವ ಕರಣ. ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
ಮೇಷ ರಾಶಿಯವರ ಭವಿಷ್ಯ (Aries Horoscope):
ನಿರ್ವಹಣಾ ವಿಷಯಗಳು ಇಂದು ನಿಮಗೆ ಅನುಕೂಲಕರವಾಗಿರುತ್ತವೆ. ಆಪ್ತರೊಂದಿಗೆ ಸಾಮರಸ್ಯ ಹೆಚ್ಚಾಗಲಿದೆ. ಪೂರ್ವಿಕರ ಆಸ್ತಿಗೆ ಸಂಬಂಧಿಸಿದಂತೆ ಶುಭ ಸುದ್ದಿಗಳನ್ನು ಕೇಳುವಿರಿ. ವ್ಯವಹಾರದಲ್ಲಿ ಚರ್ಚೆ ಧನಾತ್ಮಕವಾಗಿರಲಿದೆ. ವೈಯಕ್ತಿಕ ಸಂಬಂಧಗಳಿಗೆ ಸಂಬಂಧಿಸಿದಂತೆ ಅನುಕೂಲಕರವಾದ ದಿನ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ಅದೃಷ್ಟದ ಬೆಂಬಲದಿಂದ ವೃತ್ತಿಜೀವನದಲ್ಲಿ ಹೊಸ ಅವಕಾಶಗಳನ್ನು ಪಡೆಯುವಿರಿ. ವ್ಯಾಪಾರ ವಹಿವಾಟುಗಳಲ್ಲಿ ಭರ್ಜರಿ ಲಾಭಾವಾಗಲಿದೆ. ಹೊಸ ಯೋಜನೆಗಳಲ್ಲಿ ಆತ್ಮವಿಶ್ವಾಸದಿಂದ ಮುಂದುವರೆಯುವುದರಿಂದ ಯಶಸ್ಸು ಬೆನ್ನತ್ತಲಿದೆ. ಪ್ರಮುಖ ಕೆಲಸಗಳಲ್ಲಿ ಹಿರಿಯರಿಂದ ಬೆಂಬಲವನ್ನು ಪಡೆಯುತ್ತೀರಿ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ಇಂದು ನಿಮ್ಮ ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯವನ್ನು ತಪ್ಪಿಸಿ. ದೈಹಿಕ ಚಿಹ್ನೆಗಳನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬೇಡಿ. ವಿಷಯಗಳನ್ನು ಸಂಘಟಿಸಲು ಪ್ರಯತ್ನಿಸಿ ಜವಾಬ್ದಾರಿಗಳನ್ನು ಪೂರ್ಣಗೊಳಿಸಲು ಶ್ರಮಿಸಿ. ಉದ್ಯೋಗದಲ್ಲಿ ಮಧ್ಯಮ ಫಲಪ್ರದವಾದ ದಿನ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ಈ ರಾಶಿಯವರಿಗೆ ಇಂದು ಪರಸ್ಪರ ಸಹಕಾರ, ಬೆಂಬಲ ಇರಲಿದೆ. ಪ್ರಮುಖ ಕಾರ್ಯಗಳಲ್ಲಿ ವೇಗವನ್ನು ಪಡೆಯುವಿರಿ. ಕುಟುಂಬದೊಂದಿಗೆ ಸಿಹಿ ಸಂಬಂಧಗಳನ್ನು ಕಾಪಾಡಿಕೊಳ್ಳುತ್ತೀರಿ. ಕೆಲಸದಲ್ಲಿ ತಾಳ್ಮೆಯಿಂದ ಇರುವುದರಿಂದ ಸಣ್ಣಪುಟ್ಟ ಸಮಸ್ಯೆಗಳನ್ನು ಸುಲಭವಾಗಿ ನಿಭಾಯಿಸುವಿರಿ.
ಸಿಂಹ ರಾಶಿಯವರ ಭವಿಷ್ಯ (Leo Horoscope):
ಉದ್ಯೋಗ ರಂಗದಲ್ಲಿ ಇಂದು ನಿಮ್ಮ ಸಂವಹನ ಮತ್ತು ಸಂಪರ್ಕ ಸುಧಾರಿಸುತ್ತದೆ. ಕೆಲಸದಲ್ಲಿ ನಿಮ್ಮ ಯೋಜನೆಗಳನ್ನು ಪೂರೈಸುವಲ್ಲಿ ಒತ್ತಡವನ್ನು ಅನುಭವಿಸುವಿರಿ. ಯಾವುದೇ ಕೆಲಸಗಳನ್ನು ಬಾಕಿ ಇಡುವ ನಿಮ್ಮ ದುರಭ್ಯಾಸಕ್ಕೆ ಕಡಿವಾಣ ಹಾಕದಿದ್ದರೆ ಸಮಸ್ಯೆ ಉಂಟಾಗಬಹುದು.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಸಹೋದ್ಯೋಗಿಗಳು ಮತ್ತು ವೃತ್ತಿಪರರೊಂದಿಗೆ ಸಾಮರಸ್ಯ ಸುಧಾರಿಸಲಿದೆ. ಸ್ನೇಹಿತರೊಂದಿಗೆ ಆಹ್ಲಾದಕರ ಸಮಯ ಕಳೆಯುವಿರಿ. ಕೆಲಸದಲ್ಲಿ ದಕ್ಷತೆ ಹೆಚ್ಚಾಗಲಿದೆ. ಪ್ರೀತಿಪಾತ್ರರೊಂದಿಗೆ ಸಂತೋಷದ ಕ್ಷಣಗಳನ್ನು ಆನಂದಿಸುವಿರಿ. ವ್ಯವಹಾರದಲ್ಲಿ ಪ್ರಗತಿಯನ್ನು ಕಾಣುವಿರಿ.
ತುಲಾ ರಾಶಿಯವರ ಭವಿಷ್ಯ (Libra Horoscope):
ಇಂದು ವೃತ್ತಿ ರಂಗದಲ್ಲಿ ಸಕಾರಾತ್ಮಕತೆ ಹೆಚ್ಚಾಗಲಿದೆ. ಚಿಂತನಾಶೀಲವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಲಾಭದ ಅವಕಾಶಗಳು ಹೆಚ್ಚಾಗಲಿದೆ. ಪ್ರೀತಿಪಾತ್ರರ ಸಲಹೆಯಂತೆ ವರ್ತಿಸಲು ಪ್ರಯತ್ನಿಸಿ. ವೈಯಕ್ತಿಕ ಪ್ರಯತ್ನಗಳಲ್ಲಿ ವೇಗ ಕಾಯ್ದುಕೊಳ್ಳುವಿರಿ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ಇಂದು ವಾಣಿಜ್ಯ ವ್ಯವಹಾರಗಳಲ್ಲಿ ಬಲವಾದ ಕಾರ್ಯಕ್ಷಮತೆಯನ್ನು ಕಾಯ್ದುಕೊಳ್ಳುತ್ತೀರಿ. ನಿಮ್ಮ ಸಂವಹನ ಕೌಶಲ್ಯವು ಪರಿಣಾಮಕಾರಿಯಾಗಿರುತ್ತದೆ. ನೆಟ್ವರ್ಕಿಂಗ್ ಕ್ಷೇತ್ರದಲ್ಲಿ ಇರುವವರಿಗೆ ಧನಾತ್ಮಕ ದಿನ. ಪ್ರಮುಖ ವಿಷಯಗಳು ಸಕಾರಾತ್ಮಕವಾಗಿರುತ್ತವೆ. ಶುಭ ವಾರ್ತೆ ಕೇಳುವಿರಿ.
ಧನು ರಾಶಿಯವರ ಭವಿಷ್ಯ (Sagittarius Horoscope):
ವೈಯಕ್ತಿಕ ಸಂಬಂಧಗಳಲ್ಲಿ ನಿಮ್ಮ ಪ್ರಭಾವ ಹೆಚ್ಚಾಗುತ್ತದೆ. ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನೀವು ಯಶಸ್ವಿಯಾಗುವಿರಿ. ಆಪ್ತರು ಮತ್ತು ಸಹೋದ್ಯೋಗಿಗಳೊಂದಿಗೆ ಉತ್ತಮ ಸಂವಹನ ಸಾಧಿಸುವಿರಿ. ಪ್ರೀತಿಪಾತ್ರರ ಬೆಂಬಲವು ಆತ್ಮವಿಶ್ವಾಸ ಮತ್ತು ನೈತಿಕತೆಯನ್ನು ಹೆಚ್ಚಿಸುತ್ತದೆ.
ಮಕರ ರಾಶಿಯವರ ಭವಿಷ್ಯ (Capricorn Horoscope):
ಇಂದು ವೃತ್ತಿ ಮತ್ತು ವ್ಯವಹಾರದಲ್ಲಿ ಯಶಸ್ಸು ದೊರೆಯಲಿದೆ. ಸೃಜನಶೀಲ ಪ್ರಯತ್ನಗಳಲ್ಲಿ ಸರಾಗವಾಗಿ ಪ್ರಗತಿ ಸಾಧಿಸುವಿರಿ. . ವೈಯಕ್ತಿಕ ಸಂವಹನದತ್ತ ಗಮನಹರಿಸಿದರೆ ಶುಭ ಫಲಗಳು ನಿಮ್ಮ ದಾರಿಗೆ ಬರಲಿವೆ. ವ್ಯವಹಾರದಲ್ಲಿ ಲಾಭದ ಶೇಕಡಾವಾರು ಹೆಚ್ಚಾಗಿರುತ್ತದೆ.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ಈ ರಾಶಿಯವರಿಗೆ ಇಂದು ಒತ್ತಡಭರಿತವಾದ ದಿನ. ಯಾವುದೇ ವಿಚಾರದಲ್ಲಿ ಆತುರಾತುರವಾಗಿ ನಿರ್ಧಾರ ಕೈಗೊಳ್ಳುವುದನ್ನು ತಪ್ಪಿಸಿ. ವೃತ್ತಿಪರರು ಎಚ್ಚರಿಕೆಯಿಂದ ವರ್ತಿಸಿದರೆ ಮಾತ್ರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತದೆ. ಕಾನೂನು ವಿಷಯಗಳಲ್ಲಿ ತಾಳ್ಮೆ ಕಾಪಾಡಿಕೊಳ್ಳಿ.
ಮೀನ ರಾಶಿಯವರ ಭವಿಷ್ಯ (Pisces Horoscope):
ಈ ದಿನ ಹಣಕಾಸಿಗೆ ಸಂಬಂಧಿಸಿದ ತಂತ್ರಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುತ್ತೀರಿ. ವಾಣಿಜ್ಯ ವಿಷಯಗಳು ಅನುಕೂಲಕರವಾಗಿರುತ್ತವೆ. ವೃತ್ತಿಜೀವನವು ವೇಗವಾಗಿ ಮುನ್ನಡೆಯುತ್ತದೆ. ನಿರ್ವಹಣಾ ವಿಷಯಗಳಲ್ಲಿ ಸ್ಥಿರತೆಯನ್ನು ಕಾಣುವಿರಿ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.