ದಿನಭವಿಷ್ಯ 05-06-2025: ಗುರುವಾರ ಹಸ್ತ ನಕ್ಷತ್ರದಲ್ಲಿ ಸಿದ್ಧಿ ಯೋಗ: ಈ ರಾಶಿಯವರಿಗೆ ಹೆಚ್ಚಾಗಲಿದೆ ಬ್ಯಾಂಕ್ ಬ್ಯಾಲೆನ್ಸ್

Today Horoscope 05th June 2025: ಗುರುವಾರದಂದು ದಶಮಿ ತಿಥಿ ಹಸ್ತ ಪೂರ್ಣ ನಕ್ಷತ್ರ. ಇಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Jun 5, 2025, 08:05 AM IST
  • ಜ್ಯೇಷ್ಠ ಮಾಸದ ಈ ದಿನ ದಶಮಿ ತಿಥಿ
  • ಗುರುವಾರದ ದಿನ ಹಸ್ತ ಪೂರ್ಣ ನಕ್ಷತ್ರ, ಸಿದ್ಧಿ ಯೋಗ ಇರಲಿದೆ.
  • ಇಂದು ಮೇಷದಿಂದ ಮೀನ ರಾಶಿಯವರೆಗೆ ಯಾವ ರಾಶಿಯವರಿಗೆ ಅದೃಷ್ಟ ತಿಳಿಯಿರಿ.
ದಿನಭವಿಷ್ಯ 05-06-2025: ಗುರುವಾರ ಹಸ್ತ ನಕ್ಷತ್ರದಲ್ಲಿ ಸಿದ್ಧಿ ಯೋಗ: ಈ ರಾಶಿಯವರಿಗೆ ಹೆಚ್ಚಾಗಲಿದೆ ಬ್ಯಾಂಕ್ ಬ್ಯಾಲೆನ್ಸ್

Guruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಸೌರ ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ದಶಮಿ ತಿಥಿ, ಗುರುವಾರ, ಹಸ್ತ ಪೂರ್ಣ ನಕ್ಷತ್ರ, ಸಿದ್ಧಿ ಯೋಗ, ತೈತಿಲ ಕರಣ. ಇಂದಿನ ಎಲ್ಲಾ 12 ರಾಶಿಯವರ ಭವಿಷ್ಯ ಹೇಗಿದೆ ತಿಳಿಯಿರಿ. 

Add Zee News as a Preferred Source

ಮೇಷ ರಾಶಿಯವರ ಭವಿಷ್ಯ (Aries Horoscope):  
ಕಠಿಣ ಪರಿಶ್ರಮದಿಂದ ಇಂದು ಹೆಚ್ಚಿನ ವಿಷಯಗಳು ನಿಮ್ಮ ಪರವಾಗಿ ಇರಲಿವೆ. ಕೆಲಸದಲ್ಲಿ ಜಾಗರೂಕರಾಗಿದ್ದರೆ ಯಶಸ್ಸು ಪ್ರಾಪ್ತಿ. ಮನೆಯಲ್ಲಿ ನಿಮ್ಮ ಹೊಸ ಪ್ರಯತ್ನಗಳಿಗೆ ಸಹಕಾರ ದೊರೆಯಲಿದೆ. ನಿಮ್ಮ ಸಂಬಂಧಗಳಲ್ಲಿ ಮಧುರತೆಯನ್ನು ಕಾಪಾಡಿಕೊಳ್ಳಿ. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ಇಂದು ಪ್ರೇಮ ಸಂಬಂಧಗಳಲ್ಲಿ ಮಾಧುರ್ಯತೆ ಬೆಳೆಯುತ್ತದೆ. ಪ್ರೀತಿಪಾತ್ರರ ಜೊತೆಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ. ನಿಮ್ಮ ಬುದ್ದಿವಂತಿಕೆಯಿಂದ ಕಾರ್ಯಗಳನ್ನು ಸಾಧಿಸುವಿರಿ. ಸಂಪ್ರದಾಯಗಳು ಸಾಂಸ್ಕೃತಿಕ ಮೌಲ್ಯಗಳು ವೇಗವನ್ನು ಪಡೆಯುತ್ತವೆ. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಆಡಳಿತಕ್ಕೆ ಸಂಬಂಧಿಸಿದ ವಿಷಯಗಳು ಸಕಾರಾತ್ಮಕವಾಗಿ ಇರಲಿವೆ. ಕೆಲಸ ಮತ್ತು ವ್ಯವಹಾರಗಳಲ್ಲಿ ವೇಗ ಕಾಯ್ದುಕೊಳ್ಳುವಿರಿ. ನಿಮ್ಮ ವೈಯಕ್ತಿಕ ಜೀವನದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಮನೆಯಲ್ಲಿ ಸಂತಸದ ವಾತಾವರಣ ಇರಲಿದ್ದು, ಸುಖ ಸೌಕರ್ಯಗಳು ಹೆಚ್ಚಾಗಲಿವೆ. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ವ್ಯವಹಾರ ನಿಮಿತ್ತ ಇಂದು ದಿಢೀರ್ ಪ್ರವಾಸ ಕೈಗೊಳ್ಳಬೇಕಾಗಬಹುದು. ಪ್ರವಾಸವು ಆಹ್ಲಾದಕರ ಮತ್ತು ಲಾಭದಾಯಕವಾಗಿರುತ್ತವೆ. ಇಂದು ನಿಮ್ಮ ಧೈರ್ಯ ಮತ್ತು ಆತ್ಮವಿಶ್ವಾಸ ಉನ್ನತಮಟ್ಟದಲ್ಲಿ ಇರುತ್ತದೆ. ಸಂಬಂಧಿಕರಿಂದ ಬೆಂಬಲ ಪಡೆಯುವಿರಿ. 

ಇದನ್ನೂ ಓದಿ- ತಿಂಗಳಾಂತ್ಯದಲ್ಲಿ ನಾಲ್ಕು ರಾಶಿಯವರಿಗೆ ಶುಕ್ರ ದೆಸೆ: ಶ್ರೀಮಂತರಾಗುವ ಭಾಗ್ಯ, ಕಂಡ ಕನಸೆಲ್ಲಾ ನನಸಾಗುವ ಪರ್ವಕಾಲ 

ಸಿಂಹ ರಾಶಿಯವರ ಭವಿಷ್ಯ (Leo Horoscope):  
ಇಂದು ಮನೆಯಲ್ಲಿ ಸಂತೋಷದಾಯಕ, ಹರ್ಷಚಿತ್ತದ ವಾತಾವರಣ ಇರಲಿದೆ. ಸಂಪತ್ತು ಮತ್ತು ಸಂಪನ್ಮೂಲಗಳಿಗೆ ಸಂಬಂಧಿಸಿದ ವಿಷಯಗಳು ಅನುಕೂಲಕರವಾಗಿರುತ್ತವೆ. ಆತ್ಮೀಯರೊಂದಿಗೆ ಆಹ್ಲಾದಕರ ಸಮಯವನ್ನು ಕಳೆಯುವಿರಿ. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಇಂದು ಯಾವುದೇ ಪ್ರಮುಖ ಕೆಲಸಗಳಲ್ಲಿ ನಿಕಟವರ್ತಿಗಳಿಂದ ಬೆಂಬಲ ವ್ಯಕ್ತವಾಗಲಿದೆ. ನಡವಳಿಕೆಯಲ್ಲಿ ಸಿಹಿ, ಮಾತಿನಲ್ಲಿ ಮಧುರತೆ ಕಾಪಾಡಿಕೊಂಡರೆ ಸಾಕಷ್ಟು ಕೆಲಸಗಳಲ್ಲಿ ಧನಾತ್ಮಕ ಫಲಗಳನ್ನು ಪಡೆಯುವಿರಿ. ವೈಯಕ್ತಿಕ ಕಾರ್ಯಕ್ಷಮತೆ ಸುಧಾರಿಸುತ್ತದೆ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ಇಂದು ಹಣಕಾಸಿನ ವಹಿವಾಟುಗಳಲ್ಲಿ ತಾಳ್ಮೆಯನ್ನು ಕಾಪಾಡಿಕೊಳ್ಳಿ. ಸಂಬಂಧಗಳು ಮತ್ತು ವೈಯಕ್ತಿಕ ಸಂಪರ್ಕಗಳನ್ನು ಸದುಪಯೋಗಪಡಿಸಿಕೊಳ್ಳಿ. ಯಾವುದೇ ವಿಚಾರದಲ್ಲಿ ಆತುರತೆ, ಅಹಂಕಾರದಿಂದ ದೂರವಿದ್ದರೆ ಒಳಿತು. ಜವಾಬ್ದಾರಿಗಳನ್ನು ಪೂರೈಸುವಲ್ಲಿ ಮುಂದಾಳತ್ವ ವಹಿಸುವಿರಿ. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಇಂದು ಕೆಲಸದಲ್ಲಿ ನಿಮ್ಮ ಕಾರ್ಯಕ್ಷಮತೆ ಅತ್ಯುತ್ತಮವಾಗಿರುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಲಾಭಗಳು ಹೆಚ್ಚಾಗಲಿವೆ. ಜವಾಬ್ದಾರಿಗಳನ್ನು ಸುಲಭವಾಗಿ ಪೂರೈಸುವಿರಿ. ಜೀವಂದಲ್ಲಿ ಸಕಾರಾತ್ಮಕತೆ ಹೆಚ್ಚಾಗಲಿದೆ. ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಅವಕಾಶವಿದೆ. 

ಇದನ್ನೂ ಓದಿ- 300 ವರ್ಷ ಬಳಿಕ 3 ರಾಜಯೋಗ.. ಈ ರಾಶಿಗಳಿಗೆ ಬಂಪರ್‌ ಲಾಟರಿ, ಧನ ಕನಕ ಸಂಪತ್ತಿನ ಹೊಳೆ.. ಶನಿಯಿಂದ ಅಪಾರ ಲಾಭ, ಶ್ರೀಮಂತಿಕ ಬರುವ ಪುಣ್ಯಕಾಲ!

ಧನು ರಾಶಿಯವರ ಭವಿಷ್ಯ (Sagittarius Horoscope):  
ಆಡಳಿತ ಮತ್ತು ಅಧಿಕಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಪ್ರಗತಿ ಕಂಡು ಬರಲಿದೆ. ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸುವತ್ತ ಗಮನಹರಿಸಿ. ಎಲ್ಲರಿಂದಲೂ ಸೂಕ್ತ ಬೆಂಬಲ, ಸಹಕಾರ ದೊರೆಯಲಿದೆ. ನಿರ್ವಹಣಾ ಪ್ರಯತ್ನಗಳು ಫಲಪ್ರಧವಾಗಿರುತ್ತವೆ. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ಇಂದು ಅದೃಷ್ಟದ ಬೆಂಬಲದಿಂದ ವಾಣಿಜ್ಯ ವ್ಯವಹಾರಗಳಲ್ಲಿ ಅನುಕೂಲಕರ ಫಲಿತಾಂಶಗಳು ದೊರೆಯಲಿವೆ. ಹಣಕಾಸಿನ ಸ್ಥಿತಿ ಉತ್ತಮವಾಗಿದ್ದು ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ವಿವಿಧ ವಿಷಯಗಳಲ್ಲಿ ಅನುಕೂಲಕರ ಪರಿಸ್ಥಿತಿ ಇರಲಿದೆ. ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಇಂದು ನಿಮ್ಮ ಜೀವನದಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಬೇಕಾಗಬಹುದು. ಆದಾಗ್ಯೂ, ಎಂತದ್ದೆ ಸಂದರ್ಭದಲ್ಲಿ ಆತುರತೆಯನ್ನು ತಪ್ಪಿಸಿ. ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ವೈಯಕ್ತಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ವೃತ್ತಿ ವ್ಯವಹಾರಗಳಲ್ಲಿ ನಿರೀಕ್ಷಿತ ಫಲಿತಾಂಶಗಳನ್ನು ಪಡೆಯುವಿರಿ. ಕೆಲಸದ ವೇಳಾಪಟ್ಟಿಗೆ ಅನುಸಾರವಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಿ. ತಂಡವನ್ನು ಸಂಘಟಿಸುವ ನಿಮ್ಮ ಕಾರ್ಯಕ್ಷಮತೆ ಮೇಲಾಧಿಕಾರಿಗಳನ್ನು ಆಕರ್ಷಿಸಲಿದೆ. ಪ್ರಯಾಣ ಸಂಭವವಿದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ. 

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News