)
Budhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಸೌರ ಹೇಮಂತ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷ, ಹುಣ್ಣಿಮೆ ತಿಥಿ, ಬುಧವಾರದ ಈ ದಿನ ಅಶ್ವಿನಿ ನಕ್ಷತ್ರ, ಸಿದ್ಧಿ ಯೋಗ, ವಿಷ್ಟಿ ಕರಣ ಇರಲಿದೆ. ಇಂದು ಯಾವ ರಾಶಿಯವರಿಗೆ ಏನು ಫಲ ತಿಳಿಯಿರಿ.
ಮೇಷ ರಾಶಿಯವರ ಭವಿಷ್ಯ (Aries Horoscope):
ಕಾರ್ತಿಕ ಹುಣ್ಣಿಮೆಯಂದು ಸಿದ್ಧಿ ಯೋಗವು ಈ ರಾಶಿಯವರಿಗೆ ಧನಾತ್ಮಕ ಫಲಗಳನ್ನು ನೀಡಲಿದೆ. ಹೊಸ ಉದ್ಯಮದ ಬಗ್ಗೆ ಯೋಚಿಸುತ್ತಿರುವವರಿಗೆ ಉತ್ತಮವಾದ ದಿನ. ಪ್ರೀತಿಪಾತ್ರರೊಂದಿಗೆ ಸಂತೋಷದ ಕ್ಷಣಗಳನ್ನು ಅನುಭವಿಸುವಿರಿ. ಉದ್ಯೋಗಿಗಳಿಗೆ ಉತ್ಸಾಹ ಹೆಚ್ಚಾಗಲಿದೆ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ಈ ರಾಶಿಯವರು ಹೂಡಿಕೆಯಿಂದ ಹೆಚ್ಚಿನ ಲಾಭವನ್ನು ಗಳಿಸುವರು. ವೃತ್ತಿಯಲ್ಲಿ ಉತ್ತಮ ಅವಕಾಶಗಳು ಲಭ್ಯವಾಗಲಿವೆ. ಕುಟುಂಬಸ್ಥರ ನಡುವೆ ಬಾಂಧವ್ಯ ಹೆಚ್ಚಾಗಲಿದೆ. ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತಾಳ್ಮೆಯಿಂದ ವರ್ತಿಸಿ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ಇಂದು ಪ್ರಮುಖ ಕೆಲಸಗಳಲ್ಲಿ ವೇಗ ಹೆಚ್ಚಾಗಲಿದೆ. ವ್ಯಾಪಾರ ಯೋಜನೆಗಳಲ್ಲಿ ಯಶಸ್ಸನ್ನು ಗಳಿಸುವಿರಿ. ವೃತ್ತಿ ರಂಗದಲ್ಲಿ ಮೇಲಾಧಿಕಾರಿಗಳಿಂದ ಶುಭ ವಾರ್ತೆ ಕೇಳುವಿರಿ. ಹಣಕಾಸಿನ ಸ್ಥಿತಿ ಮೊದಲಿಗಿಂತ ಉತ್ತಮಗೊಳ್ಳಲಿದೆ. ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ವೃತ್ತಿ-ವ್ಯವಹಾರದಲ್ಲಿ ಇಂದು ಸ್ಥಿರ ಪ್ರಗತಿಯನ್ನು ಕಾಣುವಿರಿ. ವ್ಯವಹಾರದಲ್ಲಿ ಬೆಳವಣಿಗೆ ಕಾಣುವಿರಿ. ನಿರ್ವಹಣಾ ಕ್ಷೇತ್ರದಲ್ಲಿರುವವರಿಗೆ ಆತ್ಮವಿಶ್ವಾಸ ಹೆಚ್ಚಾಗಲಿದೆ. ಕೆಲಸದಲ್ಲಿ ನಿಮ್ಮ ದಕ್ಷತೆ ಹೆಚ್ಚಾಗಲಿದೆ. ಭಾವನಾತ್ಮಕವಾಗಿ ಉತ್ತಮ ಸಮಯ.
ಸಿಂಹ ರಾಶಿಯವರ ಭವಿಷ್ಯ (Leo Horoscope):
ಇಂದು ಅದೃಷ್ಟ ನಿಮ್ಮ ಪರವಾಗಿ ಇರುತ್ತದೆ. ಪ್ರಯಾಣವು ಲಾಭದಾಯಕ ಅವಕಾಶಗಳನ್ನು ತರಬಹುದು. ಕೌಟುಂಬಿಕ ಸುಖ ಹೆಚ್ಚಾಗಲಿದೆ. ವೃತ್ತಿಪರರಿಗೆ ಸಕಾರಾತ್ಮಕ ಫಲಗಳು ಹೆಚ್ಚಾಗಲಿವೆ. ಆರ್ಥಿಕ ಸ್ಥಿರತೆ ಕಂಡು ಬರಲಿದೆ. ಭಾವನಾತ್ಮಕವಾಗಿ ಉತ್ತಮ ದಿನ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಇಂದು ಪ್ರಮುಖ ವಿಷಯಗಳಲ್ಲಿ ತಾಳ್ಮೆಯನ್ನು ಕಾಪಾಡಿಕೊಳ್ಳುವಿರಿ. ಆಹಾರದ ಬಗ್ಗೆ ನಿಗಾವಹಿಸಿ. ಇಲ್ಲವೇ, ಅರೋಗ್ಯ ಹದಗೆಡಬಹುದು. ಜೀವನದಲ್ಲಿ ಸಂಭವಿಸಬಹುದಾದ ಹಠಾತ್ ಬದಲಾವಣೆಗಳಿಗೆ ಮಾನಸಿಕವಾಗಿ ಸಿದ್ದರಾಗಿರಿ. ಅನಿರೀಕ್ಷಿತ ಲಾಭಗಳು ನಿಮ್ಮ ದಿನವನ್ನು ಉಜ್ವಲಿಸಲಿದೆ.
ತುಲಾ ರಾಶಿಯವರ ಭವಿಷ್ಯ (Libra Horoscope):
ಪಾಲುದಾರಿಕೆ ವ್ಯವಹಾರಗಳು ಬಲಗೊಳ್ಳುತ್ತವೆ. ಪ್ರಮುಖ ಯೋಜನೆಗಳು ವೇಗ ಪಡೆಯಲಿವೆ. ಪ್ರಣಯ ಜೀವನ ಗಾಢಗೊಳ್ಳಲಿದೆ. ವೃತ್ತಿ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುವಿರಿ. ಕೆಲಸದಲ್ಲಿ ಟೀಮ್ ವರ್ಕ್ ಹೆಚ್ಚು ಲಾಭದಾಯಕ ಎಂದು ಸಾಬೀತುಪಡಿಸಲಿದೆ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ಕೆಲಸದಲ್ಲಿ ಶಿಸ್ತನ್ನು ಅನುಸರಿಸಿದರೆ ಹೆಚ್ಚಿನ ಲಾಭವಾಗಲಿದೆ. ವಹಿವಾಟುಗಳಲ್ಲಿ ಸ್ಪಷ್ಟತೆ ಕಾಪಾಡಿಕೊಳ್ಳಿ. ಹಣಕಾಸಿನ ಹರಿವು ಹೆಚ್ಚಾಗಲಿದ್ದು ಆರ್ಥಿಕ ಸ್ಥಿರತೆ ಇರಲಿದೆ. ಸಂಘಟಿತ ವ್ಯವಹಾರಗಳಲ್ಲಿ ಉತ್ಸಾಹಭರಿತವಾದ ದಿನ. ಸಮಾಜದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗಲಿದೆ.
ಧನು ರಾಶಿಯವರ ಭವಿಷ್ಯ (Sagittarius Horoscope):
ಇದು ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಪ್ರಗತಿಯನ್ನು ಕಾಣುವಿರಿ. ಸಂಬಂಧಗಳಲ್ಲಿ ಮಧುರತೆ ಹೆಚ್ಚಾಗಲಿದ್ದು ಸಂತೋಷದಾಯಕವಾಗಿರಲಿದೆ. ಸ್ಪರ್ಧೆಗಳಲ್ಲಿ ಜಯ ಸಾಧಿಸುವಿರಿ. ನಾಯಕತ್ವದ ಗುಣ ಹೆಚ್ಚಾಗಲಿದೆ. ಆದಾಯದ ಹೊಸ ಅವಕಾಶಗಳು ಬರಲಿವೆ.
ಮಕರ ರಾಶಿಯವರ ಭವಿಷ್ಯ (Capricorn Horoscope):
ಇಂದು ವೃತ್ತಿಪರ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುವಿರಿ. ಆರ್ಥಿಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತಾಳ್ಮೆಯಿಂದ ವರ್ತಿಸಿ. ಭೌತಿಕ ಸೌಕರ್ಯಗಳು ಹೆಚ್ಚಾಗಲಿವೆ. ಅನಾವಶ್ಯಕ ವಾದಗಳನ್ನು ತಪ್ಪಿಸಿ. ವ್ಯವಹಾರದಲ್ಲಿ ಪ್ರಗತಿ ಕಂಡು ಬರಲಿದೆ.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ಇಂದು ನಿಗದಿತ ಗಡುವಿಗಿಂತ ಬೇಗ ಕೆಲಸಗಳನ್ನು ಮುಗಿಸುವಿರಿ. ಆರ್ಥಿಕ ಸಮತೋಲನ ಕಂಡು ಬರಲಿದೆ.. ಕೆಲಸಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ವ್ಯವಹಾರದಲ್ಲಿ ಸಹಿ ಹಾಕುವಾಗ ಆತುರತೆಯನ್ನು ತಪ್ಪಿಸಿ. ಸಾಮಾಜಿಕವಾಗಿ ಉತ್ತಮ ಸಂಬಂಧ ಕಾಪಾಡಿಕೊಳ್ಳುವಿರಿ.
ಮೀನ ರಾಶಿಯವರ ಭವಿಷ್ಯ (Pisces Horoscope):
ಇಂದು ಈ ರಾಶಿಯವರು ಮನೆಯಲ್ಲಿ ಮಂಗಳ ಕಾರ್ಯಗಳ ಬಗ್ಗೆ ಯೋಚಿಸಬಹುದು. ವೃತ್ತಿ ರಂಗದಲ್ಲಿ ತೃಪ್ತಿಕರ ಫಲಿತಾಂಶಗಳು ಕಂಡು ಬರಲಿವೆ. ದೀರ್ಘಾವಧಿಯ ಯೋಜನೆಗಳಲ್ಲಿ ಪ್ರಗತಿ ಕಾಣುವಿರಿ. ಭಾವನಾತ್ಮಕ ವಿಚಾರದಲ್ಲಿ ಮೋಸ ಹೋಗದಿರಿ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.