)
Budhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಸೌರ ವರ್ಷಾ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿಯ ಈ ದಿನ ಬುಧವಾರ ಮೂಲಾ ನಕ್ಷತ್ರದಲ್ಲಿ ವೈಧೃತಿ ಯೋಗ, ಕೌಲವ ಕರಣ. ಇಂದು ಎಲ್ಲಾ 12 ರಾಶಿಯವರ ಭವಿಷ್ಯ ಹೇಗಿದೆ ತಿಳಿಯಿರಿ.
ಮೇಷ ರಾಶಿಯವರ ಭವಿಷ್ಯ (Aries Horoscope):
ಪೂರ್ವಜರ ಆಸ್ತಿಯಿಂದ ಲಾಭವಾಗಲಿದೆ. ಉನ್ನತ ಶಿಕ್ಷಣಕ್ಕಾಗಿ ದೂರದ ಪ್ರಯಾಣ ಸಾಧ್ಯತೆ ಇದೆ. ಬಾಕಿ ಇರುವ ಕೆಲಸಗಳು ವೇಗ ಪಡೆಯಲಿದ್ದು ವ್ಯವಹಾರದಲ್ಲಿ ಪ್ರಗತಿಯನ್ನು ಕಾಣುವಿರಿ. ಇಂದು ನಿಮ್ಮ ಗುರಿ ಸಾಧಿಸುವಲ್ಲಿ ಯಶಸ್ವಿಯಾಗುವಿರಿ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ಇಂದು ಹಿರಿಯರಿಂದ ಸಲಹೆ ಸೂಚನೆಗಳನ್ನು ಸ್ವೀಕರಿಸಿ ಮುಂದುವರೆಯುವುದು ಹೆಚ್ಚು ಪರಿಣಾಮಕಾರಿ ಆಗಿದೆ. ಭಾವನೆಗಳ ಮೇಲೆ ನಿಯಂತ್ರಣ ಕಾಪಾಡಿಕೊಳ್ಳಿ. ಅನಿರೀಕ್ಷಿತ ಲಾಭ ಸಾಧ್ಯತೆಗಳಿವೆ. ಆದಾಗ್ಯೂ, ವ್ಯವಹಾರದಲ್ಲಿ ಜಾಗರೂಕರಾಗಿರಿ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ಇಂದು ಕೈಗಾರಿಕಾ ಪ್ರಯತ್ನಗಳು ಧನಾತ್ಮಕ ವೇಗವನ್ನು ಪಡೆಯಲಿವೆ. ವ್ಯವಹಾರದಲ್ಲಿ ನಿಯಂತ್ರಣ ಬಲಗೊಳ್ಳಲಿದೆ. ಅದರಲ್ಲೂ ಜಂಟಿ ವ್ಯವಹಾರಗಳಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ವೃತ್ತಿ ಬದುಕಿಯಲ್ಲಿ ಪ್ರಮುಖ ಕೆಲಸಗಳಿಗೆ ಆದ್ಯತೆ ನೀಡಿ ಮುಂದುವರೆಯಿರಿ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ಸೇವಾ ಸಂಬಂಧಿತ ಕ್ಷೇತ್ರದಲ್ಲಿರುವವರಿಗೆ ಪ್ರಗತಿಯ ದಿನ. ಅಗತ್ಯ ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ಪ್ರಯತ್ನ ಮುಂದುವರೆಸಿ. ನಿಮ್ಮ ಕೆಲಸದಲ್ಲಿ ದುರಾಸೆ ಅಥವಾ ಪ್ರಲೋಭನೆಯನ್ನು ತಪ್ಪಿಸಿ. ಇಲ್ಲವೇ ಇದರಿಂದಲೇ ಸಮಸ್ಯೆಗಳು ಉಲ್ಬಣಿಸಬಹುದು.
ಸಿಂಹ ರಾಶಿಯವರ ಭವಿಷ್ಯ (Leo Horoscope):
ಈ ರಾಶಿಯವರಿಗೆ ವೃತ್ತಿಪರ ವಿಷಯಗಳು ವೇಗವನ್ನು ಪಡೆಯುಲಿವೆ. ಉದ್ಯೋಗದಲ್ಲಿ ನಿಮ್ಮ ಕಾರ್ಯಕ್ಷಮತೆ ಬಲಗೊಳ್ಳಲಿದ್ದು, ಸಮರ್ಪಣಾ ಭಾವದೊಂದಿಗೆ ಕೆಲಸ ಮಾಡುವುದರಿಂದ ಉತ್ತಮ ಫಲ ನಿರೀಕ್ಷಿಸಬಹುದು. ಜವಾಬ್ದಾರಿಯುತ ಕೆಲಸಗಳಲ್ಲಿ ನಿರ್ಲಕ್ಷ್ಯ ತಪ್ಪಿಸಿ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಈ ರಾಶಿಯವರು ಇಂದು ವೈಯಕ್ತಿಕ ವಿಷಯಗಳಲ್ಲಿ ಜಾಗರೂಕರಾಗಿರಬೇಕು. ಅತಿಯಾದ ಭಾವನಾತ್ಮಕತೆಯನ್ನು ತಪ್ಪಿಸಿ. ವೃತ್ತಿ ಬದುಕಿಗೆ ಸಂಬಂಧಿಸಿದಂತೆ ನಿಮ್ಮ ಪ್ರಯತ್ನಗಳನ್ನು ಮುಂದುವರೆಸಿ. ವಾದ-ವಿವಾದಗಳಲ್ಲಿ ತೊಡಕಿಕೊಳ್ಳಬೇಡಿ.
ತುಲಾ ರಾಶಿಯವರ ಭವಿಷ್ಯ (Libra Horoscope):
ಇಂದು ನೀವು ತ್ವರಿತವಾಗಿ ಕಾರ್ಯನಿರ್ವಹಿಸುವಿರಿ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ವಾಣಿಜ್ಯ ವಿಚಾರಗಳಲ್ಲಿ ಪ್ರಗತಿಯನ್ನು ಕಾಣಬಹುದು. ಸಮಾಜದಲ್ಲಿ ಘನತೆಯಿಂದ ವರ್ತಿಸಿ. ಹಿಂಜರಿಕೆಯಿಲ್ಲದೆ ಮುಂದುವರೆಯಿರಿ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ಇಂದು ಲಾಭದ ಅವಕಾಶಗಳು ಬಲಗೊಳ್ಳಲಿವೆ. ಮನೆಯಲ್ಲಿ ಸಂತೋಷ ಹೆಚ್ಚಾಗಲಿದೆ. ನಕಾರಾತ್ಮಕ ಜನರಿಂದ ಅಂತರ ಕಾಯ್ದುಕೊಳ್ಳುವುದು ಪರಿಣಾಮಕಾರಿ ಆಗಿರಲಿದೆ. ವೃತ್ತಿಪರರಿಗೆ ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಬೆಳೆಯಲಿದೆ. ಇಂದು ಹೆಜ್ಜೆ ಇಟ್ಟಲ್ಲೆಲ್ಲಾ ಅದೃಷ್ಟ ಕೈ ಹಿಡಿಯಲಿದೆ.
ಧನು ರಾಶಿಯವರ ಭವಿಷ್ಯ (Sagittarius Horoscope):
ಇಂದು ಸುತ್ತಲಿನ ವಾತಾವರಣ ಸಕಾರಾತ್ಮಕತೆಯಿಂದ ಕೂಡಿರಲಿದೆ. ಹೊಸ ಕಾರ್ಯಗಳಿಗೆ ಗಮನ ನೀಡುವುದರಿಂದ ಶುಭವಾಗಲಿದೆ. ಧೈರ್ಯ ಮತ್ತು ದೃಢಸಂಕಲ್ಪದಿಂದ, ಮಾಡುವ ಕೆಲಸಗಳಲ್ಲಿ ಯಶಸ್ಸನ್ನು ಗಳಿಸುವಿರಿ.
ಮಕರ ರಾಶಿಯವರ ಭವಿಷ್ಯ (Capricorn Horoscope):
ವ್ಯವಹಾರ ವಿಸ್ತರಣೆ ವೇಗ ಪಡೆಯಲಿದೆ. ಹಣಕಾಸಿನ ವ್ಯವಹಾರಗಳಲ್ಲಿ ಸ್ಪಷ್ಟತೆ ಕಾಪಾಡಿಕೊಳ್ಳಿ. ನಿರ್ವಹಣಾ ವಿಷಯಗಳಲ್ಲಿ ತಾಳ್ಮೆಯಿಂದ ವರ್ತಿಸುವುದು ಒಳ್ಳೆಯದು. ಕೆಲಸದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಿ. ಹೂಡಿಕೆಯಿಂದ ಲಾಭ ಗಳಿಸುವಿರಿ.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ಪ್ರಮುಖ ವ್ಯವಹಾರಗಳಲ್ಲಿ ಕುಟುಂಬ ಸದಸ್ಯರಿಂದ ಬೆಂಬಲ ಮತ್ತು ಸಹಕಾರ ಲಭ್ಯವಾಗಲಿದೆ. ಆಕರ್ಷಕ ಕೊಡುಗೆಗಳು ನಿಮ್ಮ ದಾರಿಗೆ ಬರಬಹುದು. ಬುದ್ಧಿವಂತಿಕೆ ಮತ್ತು ತಂತ್ರದೊಂದಿಗೆ ನಿಮ್ಮ ಗುರಿ ಸಾಧಿಸುವಲ್ಲಿ ಯಶಸ್ವಿಯಾಗುವಿರಿ.
ಮೀನ ರಾಶಿಯವರ ಭವಿಷ್ಯ (Pisces Horoscope):
ಇಂದು ಹಣಕಾಸಿನ ವಹಿವಾಟುಗಳನ್ನು ಸುಲಭವಾಗಿ ನಿರ್ವಹಿಸುವಿರಿ. ವೃತ್ತಿ ವ್ಯವಹಾರದಲ್ಲಿ ಅನುಕೂಲಕರ ಪರಿಸ್ಥಿತಿ ಇರುತ್ತದೆ. ಆಡಳಿತಕ್ಕೆ ಸಂಬಂಧಿಸಿದ ವಿಷಯಗಳು ಸುಧಾರಿಸುತ್ತವೆ. ಹೊಸ ಕೆಲಸಕ್ಕೆ ಕೈ ಹಾಕುವ ಮೊದಲು ಹಿರಿಯರಿಂದ ಸಲಹೆ ಪಡೆಯುವುದು ಸೂಕ್ತ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.